ಈ 5 ರಾಶಿಯವರು ತಪ್ಪನ್ನು ಒಪ್ಪಿಕೊಳ್ಳೋದಿಲ್ಲ!

ಮನುಷ್ಯ ಎಂದಮೇಲೆ ತಪ್ಪು ಖಂಡಿತ ಆಗುತ್ತದೆ. ಕೆಲವೊಂದು ಸಲ ನಾವು ಮಾಡಿದ ತಪ್ಪುಗಳು ನಮ್ಮ ಬದುಕಿಗೆ ಪಾಠವಾಗುತ್ತದೆ. ನಿಜ ಹೇಳಬೇಕಂದ್ರೆ ನಾವು ಮಾಡಿದ ತಪ್ಪಿನಿಂದ ಕಲಿಯೋದು ಸಾಕಷ್ಟಿರುತ್ತದೆ. ಆದರೆ ಕೆಲವು ಜನ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳೋದಕ್ಕೆ ರೆಡಿ ಇರೋದಿಲ್ಲ.

ಬದಲಾಗಿ ತಾವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಾರೆ. ಕೆಲವು ರಾಶಿಯವರಲ್ಲಿ ಈ ಗುಣ ಹೆಚ್ಚಾಗಿ ಇರುತ್ತಂತೆ. ಅಷ್ಟಕ್ಕು ಯಾವ 5 ರಾಶಿಯವರು ತಾವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುತ್ತಾರೆ ಅನ್ನೋದನ್ನು ತಿಳಿಯೋಣ.

These Zodiac Signs Who Always Blame Others for Their Mistakes in Kannada

ಮೇಷ ರಾಶಿ

ಮೇಷ ರಾಶಿಯವರು ಯಾವಾಗಲೂ ಎನರ್ಜಿಟಿಕ್ ಆಗಿ ಇರುತ್ತಾರೆ. ಇವರು ತುಂಬಾನೇ ಹಠಮಾರಿಗಳು ಹಾಗೂ ಮೊಂಡುತನವನ್ನು ಹೊಂದಿರುತ್ತಾರೆ. ಇವರು ಯೋಜಿಸಿದಂತೆ ವಿಷಯಗಳು ನಡೆಯದಿದ್ದಾಗ ಮೇಷ ರಾಶಿಯವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ತಯಾರಿರೋದಿಲ್ಲ. ಬದಲಾಗಿ ಬೇರೆಯವರ ಮೇಲೆ ಬೆರಳು ಮಾಡಿ ತೋರಿಸುತ್ತಾರೆ. ಇವರು ಅಸಹನೆಯನ್ನು ಹೊಂದಿರುತ್ತಾರೆ. ಇವರು ಯಾವಾಗಲೂ ತಮ್ಮನ್ನು ತಾವು ಬಚಾವ್ ಮಾಡೋದಕ್ಕೆ ಪ್ರಯತ್ನಿಸುತ್ತಾರೆ.

ಮಿಥುನ ರಾಶಿ

ಮಿಥುನ ರಾಶಿಯವರು ತಮ್ಮ ಅತ್ಯುತ್ತಮ ಸಂವಹನ ಕೌಶಲ್ಯ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ. ಕೆಲವೊಂದು ಸಲ ಇವರು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಬುದ್ಧಿವಂತಿಕೆಯಿಂದ ಹೆಜ್ಜೆ ಇಡುತ್ತಾರೆ. ಮಿಥುನ ರಾಶಿಯವರ ಬೌದಿಕ ಪರಾಕ್ರಮವು ಇತರರನ್ನು ಮೀರಿಸುತ್ತದೆ. ತಮ್ಮನ್ನು ಉಳಿಸಿಕೊಳ್ಳೋದಕ್ಕೆ ಎಷ್ಟು ದೊಡ್ಡ ಹೋರಾಟ ಮಾಡೋದಕ್ಕೂ ಇವರು ಸಿದ್ಧವಾಗಿರುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರು ವರ್ಚಸ್ಸು ಹಾಗೂ ಆತ್ಮ ವಿಶ್ವಾಸ ಹೊಂದಿರುವ ವ್ಯಕ್ತಿಗಳು. ಇವರು ಯಾವಾಗಲೂ ಪ್ರಚಾರದಲ್ಲಿರಲು ಇಷ್ಟ ಪಡುತ್ತಾರೆ. ಇವರು ಗುಂಪಿನಲ್ಲಿ ಯಾವುದಾದರೂ ಕೆಲಸ ಮಾಡಿದರೂ ಅಲ್ಲಿ ತಪ್ಪಾದಾಗ ಅವರ ಜವಾಬ್ದಾರಿ ತೆಗೆದುಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳೋದಿಲ್ಲ. ಬದಲಾಗಿ ಬೇರೆಯವರ ಮೇಲೆ ತಪ್ಪು ಹೊರಿಸೋದಕ್ಕೆ ಪ್ರಯತ್ನಿಸಬಹುದು.

ತುಲಾ ರಾಶಿ

ತುಲಾ ರಾಶಿಯವರು ಸಂಘರ್ಷವನ್ನು ದ್ವೇಷಿಸುವ ಶಾಂತಿ-ಪ್ರೀತಿಯ ವ್ಯಕ್ತಿಗಳು. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಬೇರೆಯವರ ಕಡೆ ಬೆರಳು ಮಾಡಿ ತೋರಿಸುವ ಚಾಣಾಕ್ಷ್ಯತನವನ್ನು ತೋರುತ್ತಾರೆ. ಇವರು ಒಂದು ತಂಡವನ್ನು ನಡೆಸುತ್ತಿದ್ದರೂ ಕೂಡ ಅಲ್ಲಿ ತಪ್ಪಾದಾಗ ಆ ಜವಾಬ್ದಾರಿಯನ್ನು ತಮ್ಮ ಮೇಲೆ ಹೊರಿಸಿಕೊಳ್ಳೋದಿಲ್ಲ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಭಾವೋದ್ರಿಕ್ತರಾಗಿರುತ್ತಾರೆ. ಈ ರಾಶಿಯವರಿಗೆ ತಮ್ಮ ತಪ್ಪನ್ನು ಮನವರಿಕೆ ಮಾಡುವುದು ತುಂಬಾನೇ ಕಷ್ಟದ ಕೆಲಸ. ಇವರ ತಪ್ಪಿಗೆ ಇವರು ಜವಾಬ್ದಾರರಾಗುವ ಬದಲು ತಮ್ಮ ಬೆರಳನ್ನು ಬೇರೆಯವರತ್ತ ತೋರಿಸಿ ಇವರು ತಪ್ಪಿಸಿಕೊಳ್ಳುತ್ತಾರೆ. ಈ ರಾಶಿಯವರು ತಮ್ಮ ದೋಷಗಳನ್ನು ಒಪ್ಪಿಕೊಳ್ಳದಿರೋದ್ರಿಂದ ಕೆಲವೊಂದು ಸಲ ಇವರು ಬೇರೆಯವರ ಮುಂದೆ ದುರ್ಬಲರಾಗಿ ಕಾಣುತ್ತಾರೆ.

English summary

These Zodiac Signs Who Always Blame Others for Their Mistakes in Kannada

These Zodiac Signs Who Always Blame Others for Their Mistakes. Read more.
Story first published: Thursday, August 3, 2023, 8:00 [IST]
X
Desktop Bottom Promotion