Latest Updates
-
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ?
ಪ್ರತಿಯೊಬ್ಬರೂ ಈ 6 ರಾಶಿಯವರ ಸ್ನೇಹವನ್ನು ಬಯಸುತ್ತಾರಂತೆ!
ಪ್ರತಿಯೊಬ್ಬರ ಬಾಳಿನಲ್ಲೂ ಸ್ನೇಹಿತರು ತುಂಬಾನೇ ಮುಖ್ಯ ಪಾತ್ರ ವಹಿಸುತ್ತಾನೆ. ಮನೆಯವರ ಬಳಿ ಹೇಳೋದಕ್ಕೆ ಆಗದ ಎಷ್ಟೋ ವಿಚಾರಗಳನ್ನು ನಾವು ನಮ್ಮ ಸ್ನೇಹಿತರ ಬಳಿ ಮುಕ್ತವಾಗಿ ಹಂಚಿಕೊಳ್ಳಬಹುದು. ಹಾಗಂತ ಸ್ನೇಹಿತರನ್ನು ಸಂಪಾದಿಸೋದು ಸುಲಭದ ಮಾತಲ್ಲ. ಕೆಲವರು ಸ್ನೇಹಿತರನ್ನು ಆಯ್ಕೆ ಮಾಡೋದ್ರಲ್ಲಿ ತುಂಬಾನೇ ಚೂಸಿ ಆಗಿರ್ತಾರೆ.
ಆದ್ರೆ ಇನ್ನೂ ಕೆಲವರಿಗೆ ಹೋದಲೆಲ್ಲಾ ಸ್ನೇಹಿತರ ಬಳಗವೇ ಇರುತ್ತದೆ. ಸ್ನೇಹಿತರನ್ನು ಸಂಪಾದಿಸೋದು ಕೂಡ ಒಂದು ಕಲೆ. ಆ ಕಲೆ ಎಲ್ಲರಲ್ಲೂ ಇರೋದಿಲ್ಲ. ಅಷ್ಟಕ್ಕು ಯಾವ ರಾಶಿಯವರಿಗೆ ಸ್ನೇಹಿತರನ್ನು ಸಂಪಾದಿಸೋ ಕಲೆ ಇದೆ ಅನ್ನೋದನ್ನು ತಿಳಿಯೋಣ.

ಮಿಥುನ ರಾಶಿ
ಮಿಥುನ ರಾಶಿಯವರು ಯಾರೊಂದಿಗೆ ಬೇಕಾದರೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಹೀಗಾಗಿ ಇವರಿಗೆ ಹೆಚ್ಚು ಮಂದಿ ಸ್ನೇಹಿತರು ಇರುತ್ತಾರೆ. ಹಾಗೂ ಇವರ ಸಂವಹನ ಕೌಶಲ್ಯ ಉತ್ತಮವಾಗಿರೋದ್ರಿಂದ ಅಪರಿಚಿತರೊಂದಿಗೆ ಬಹಳ ಬೇಗ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಮತ್ತು ಮಿಥುನ ರಾಶಿಯವರು ಇದ್ದರೆ ಜೊತೆಗಿದ್ದವರು ತುಂಬಾನೇ ಎಂಜಾಯ್ ಮಾಡುತ್ತಾರಂತೆ.
ತುಲಾ ರಾಶಿ
ತುಲಾ ರಾಶಿಯವರ ಸ್ನೇಹವನ್ನು ಎಲ್ಲರೂ ಬಯಸುತ್ತಾರೆ. ಯಾಕಂದ್ರೆ ಇವರ ಗುಣ ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಇವರು ಬೇರೆಯವರ ಮಾತು ಹಾಗೂ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಈ ರಾಶಿಯವರು ಸಾಮಾಜಿಕವಾಗಿ ಅತ್ಯಂತ ಸುಲಭವಾಗಿ ಬೆರೆಯುತ್ತಾರೆ. ಇವರು ತಮ್ಮ ಗುಣದಿಂದಲೇ ಜನರನ್ನು ತಮ್ಮತ್ತ ಸೆಳೆಯುವ ಆಕರ್ಷಕ ಗುಣ ಹೊಂದಿದ್ದಾರೆ. ಹೀಗಾಗಿ ಈ ರಾಶಿಯವರಿಗೆ ಸ್ನೇಹಿತರು ಹೆಚ್ಚು.
ಸಿಂಹ ರಾಶಿ
ಸಿಂಹ ರಾಶಿಯವರು ಆಯಸ್ಕಾಂತೀಯ ಗುಣ ಹೊಂದಿದ್ದಾರೆ. ಏಕೆಂದರೆ ಇವರು ಯಾರನ್ನೂ ಬೇಕಾದರೂ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇವರು ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಯಾವುದೇ ವಿಚಾರಕ್ಕಾದರೂ ಹಿಂಜರಿಯೋದಿಲ್ಲ. ಹೀಗಾಗಿ ಇತರರು ಇವರನ್ನು ಸುಲಭಾಗಿ ಸಂಪರ್ಕಿಸೋದಕ್ಕೆ ಸಾಧ್ಯವಾಗುತ್ತದೆ. ಇವರು ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದರೆ ಅದರ ನಾಯಕತ್ವ ವಹಿಸುತ್ತಾರೆ. ಹೀಗಾಗಿ ಎಲ್ಲರೂ ಇವರನ್ನು ಇಷ್ಟ ಪಟ್ಟು ಇವರೊಂದಿಗೆ ಸ್ನೇಹ ಬೆಳೆಸುತ್ತಾರೆ.
ಧನು ರಾಶಿ
ಧನು ರಾಶಿಯವರು ಸಾಹಸಮಯ ಮತ್ತು ಮುಕ್ತ ಮನಸ್ಸಿನ ವ್ಯಕ್ತಿಗಳು. ಈ ರಾಶಿಯವರು ಹೊಸ ಜನರನ್ನು ಭೇಟಿಯಾಗಲು ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಅನ್ವೇಷಿಸಲು ಖುಷಿ ಪಡುತ್ತಾರೆ. ಇವರು ಉತ್ಸಾಹ ಮತ್ತು ಆಶಾವಾದಿ ಸ್ವಭಾವವು ಇತರರನ್ನು ಉತ್ತೇಜಿಸುತ್ತದೆ. ಜೊತೆಗೆ ಎಲ್ಲ ವರ್ಗದವರ ಜೊತೆ ಸ್ನೇಹ ಮಾಡಿಕೊಳ್ಳುವ ಜಾಣ್ಮೆ ಅವರಲ್ಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ಎಲ್ಲರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗುವ ಗುಣ ಹೊಂದಿದ್ದಾರೆ. ಈ ರಾಶಿಯವರು ಸ್ನೇಹ ಜೀವಿಗಳು. ಹಾಗೂ ಇವರು ಯಾರ ಜೊತೆಗಾದರೂ ಸುಲಭವಾಗಿ ಸ್ನೇಹ ಸಂಪಾದನೆ ಮಾಡುತ್ತಾರೆ. ಇವರು ಸಮಾನ ಮನಸ್ಸಿನ ವ್ಯಕ್ತಿಗಳು ಇವರ ಗುಣ ಎಂತರನ್ನೂ ಬೇಕಾದರೂ ಆಕರ್ಷಿಸುತ್ತದೆ. ಇವರು ಸ್ನೇಹಿತರಲ್ಲಿ ಎಂದಿಗೂ ಭೇದ-ಭಾವ ಮಾಡೋದಿಲ್ಲ.
ಮೀನ ರಾಶಿ
ಈ ರಾಶಿಯವರು ಎಲ್ಲರ ಮನಸ್ಸನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿ ಇವರಿಗೆ ಸ್ನೇಹಿತರು ಹೆಚ್ಚು. ಈ ರಾಶಿಯವರು ಸ್ನೇಹಿತರ ಜೊತೆಗೆ ಉತ್ತಮ ಬಾಂಧವ್ಯ ಹೊದಿರುತ್ತಾರೆ. ಎಂತಹ ವ್ಯಕ್ತಿತ್ವ ಹೊಂದಿರುವ ಜೊತೆಗೆ ಬೇಕಾದರೂ ಇವರು ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಮೀನ ರಾಶಿಯವರಲ್ಲಿ ಸಂವಹನ ಕೌಶಲ್ಯ ಉತ್ತಮವಾಗಿದೆ.



Click it and Unblock the Notifications