Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಈ 5 ರಾಶಿಯವರಿಗೆ ಶ್ರೀಮಂತರಾಗುವ ಯೋಗ, ಅದೃಷ್ಟದ ಬಲವಿದೆ
ಶ್ರೀಮಂತರಾಗಬೇಕೆಂದರೆ ಕಷ್ಟಪಟ್ಟು ದುಡಿಯಬೇಕು, ಬರೀ ಕಷ್ಟಪಟ್ಟು ದುಡಿದರೆ ಸಾಲದು ಅದರ ಜೊತೆಗೆ ಲಕ್ ಕೂಡ ಬೇಕಾಗುತ್ತದೆ. ಅವನ ಲಕ್ ಚೆನ್ನಾಗಿದೆ ಹಾಗಾಗಿ ಅವನು ತುಂಬಾ ಎತ್ತರಕ್ಕೆ ಬೆಳೆದಿದ್ದಾನೆ ಎಂದು ಹೇಳುವುದನ್ನು ಕೇಳಿರಬಹುದು. ಆದ್ದರಿಂದ ನಾವು ಶ್ರೀಮಂತರಾಗಬೇಕೆಂದರೆ ಅದೃಷ್ಟದ ಬೆಂಬಲ ಇರಬೇಕು, ಜ್ಯೋತಿಷ್ಯವು ಕೆಲವೊಂದು ರಾಶಿಯವರಿಗೆ ಆ ರೀತಿಯ ಅದೃಷ್ಟದ ಬೆಂಬಲ ಅಧಿಕನೇ ಇರುತ್ತದೆ ಎಂದು ಹೇಳುತ್ತದೆ. ಆ ರಾಶಿಗಳು ಯಾವುದೆಂದರೆ

ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. ಇವರು ಆರ್ಥಿಕವಾಗಿ ತುಂಬಾ ಚೆನ್ನಾಗಿರುತ್ತಾರೆ. ವೃಷಭ ರಾಶಿಯವರು ತುಂಬಾನೇ ಶ್ರಮ ಜೀವಿಗಳು, ಅಲ್ಲದೆ ಹಣ ಉಳಿತಾಯ ಮಾಡುವಲ್ಲಿ ಎತ್ತಿದ ಕೈ. ಇವರು ತಮ್ಮ ಗುರಿಯನ್ನು ಮುಟ್ಟುವಲ್ಲಿ ತುಂಬಾನೇ ಹಠವಾದಿಗಳು. ಅವರ ಈ ಸ್ವಭಾವವೇ ಯಶಸ್ವಿಗೆ ಕಾರಣ, ಇವರು ಕಲೆ, ಫ್ಯಾಷನ್, ಡಿಸೈನ್ ವರ್ಕ್‌ನಲ್ಲಿದ್ದರೆ ತುಂಬಾನೇ ಹೆಸರುಗಳಿಸುತ್ತಾರೆ.
ಮಕರ ರಾಶಿ
ಮಕರ ರಾಶಿಯವರ ಅಧಿಪತಿ ಶನಿ. ಇವರು ತುಂಬಾ ಶಿಸ್ತಿನ ವ್ಯಕ್ತಿಗು ಅಲ್ಲದೆ ಕೆಲಸದಲ್ಲಿ ತುಂಬಾನೇ ಶ್ರದ್ಧೆವಹಿಸಬೇಕು. ಇವರು ತುಂಬಾ ಪರಿಶ್ರಮದಿಂದ ಯಶಸ್ವಿನ ಒಂದೊಂದೇ ಮೆಟ್ಟಿಲು ಹತ್ತುತ್ತಾರೆ.
ತುಂಬಾ ಚಿಕ್ಕ ಪ್ರಾಯದಿಂದಲೇ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಇವರಿಗೆ ಅದೃಷ್ಟದ ಬೆಂಬಲ ಕೂಡ ಇರುವುದರಿಂದ ಆರ್ಥಿಕವಾಗಿ ತುಂಬಾನೇ ಸಬಲ ವ್ಯಕ್ತಿಗಳಾಗುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಸಿಂಹ ರಾಶಿಯವರು ಆಕರ್ಷಕ ವ್ಯಕ್ತಿತ್ವದವರು ಅಲ್ಲದೆ ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವವರು. ಹೀಗಾಗಿ ಇವರು ಆರ್ಥಿಕವಾಗಿ ತುಂಬಾನೇ ಬೆಳೆಯುತ್ತಾರೆ. ಅಲ್ಲದೆ ಇವರಿಗೆ ನಾಯಕತ್ವದ ಗುಣ ತುಂಬಾನೇ ಚೆನ್ನಾಗಿರುತ್ತದೆ. ಇವರು ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ. ಇವರು ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳುತ್ತಾರೆ, ಅಲ್ಲದೆ ಆರ್ಥಿಕವಾಗಿ ಬೆಳೆಯುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ. ಇವರು ಆರ್ಥಿಕ ಯೋಜನೆ ರೂಪಿಸುವುದರಲ್ಲಿ ತುಂಬಾನೇ ಎಕ್ಸ್‌ಪರ್ಟ್. ಇವರು ಅಕೌಂಟಿಂಗ್, ಫೈನಾನ್ಸ್, ಡಾಟಾ ಅನಾಲಿಸಸ್ ಈ ಕ್ಷೇತ್ರದಲ್ಲಿ ಇದ್ದರಂತೂ ಆರ್ಥಿಕವಾಗಿ ತುಂಬಾನೇ ಚೆನ್ನಾಗಿ ಬೆಳೆಯುತ್ತಾರೆ. ಇನ್ನು ಕನ್ಯಾರಾಶಿಯವರು ತುಂಬಾನೇ ಪರ್ಫೆಕ್ಷನಿಸ್ಟ್. ಯಾವುದೇ ಕೆಲಸ ಮಾಡಲಿ ಒಂದಿಷ್ಟು ತಪ್ಪಾಗದಂತೆ ಎಚ್ಚರವಹಿಸುತ್ತಾರೆ. ಹಾಗಾಗಿ ಇವರು ತಮ್ಮ ಕೆಲಸದಲ್ಲಿ ಗುರುತಿಸಿಕೊಳ್ಳುತ್ತಾರೆ, ಆರ್ಥಿಕವಾಗಿ ಬೆಳೆಯುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಅಧಿಪತಿ ಫ್ಲುಟೋ, ಬೇರೆಯವರು ಬೇಡ ಎಂದು ಬಿಟ್ಟ ಕೆಲಸವನ್ನು ವಹಿಸಿಕೊಂಡು ಅದರಲ್ಲಿ ಬೆಳೆಯುವ ಚಾಕಚಕ್ಯತೆ ಇವರಲ್ಲಿ ಇರುತ್ತದೆ. ಇವರ ಈ ಗುಣದಿಂದಾಗಿ ಇವರು ತಮ್ಮ ವೃತ್ತಿ ಜೀವನದಲ್ಲಿ ಬೆಳೆಯುತ್ತಾರೆ.



Click it and Unblock the Notifications











