Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರನ್ನು ಮದುವೆಯಾದ್ರೆ ಸಂಸಾರ ಹಾಲು-ಜೇನಿನಂತಿರುತ್ತದೆ
ಅದೆಷ್ಟೋ ವರ್ಷ ಪ್ರೀತಿಸಿದ ಜೋಡಿಗಳು ಕೊನೆಗಳಿಗೆಯಲ್ಲಿ ಯಾರನ್ನೋ ಮದುವೆಯಾಗುತ್ತಾರೆ. ನಮ್ಮ ಜೀವನದಲ್ಲಿ ನಾವು ನಿರ್ಧರಿಸಿದ ಹಾಗೇ ಯಾವುದು ಕೂಡ ನಡೆಯೋದಿಲ್ಲ. ಹೀಗಾಗಿ ನಾವು ಪ್ರೀತಿಸಿದವರನ್ನೇ ಮದುವೆಯಾಗುತ್ತೇವೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವೊಂದು ಜೋಡಿಗಳು ಜೀವನದಲ್ಲಿ ತುಂಬಾನೇ ಅದ್ಭುತವಾಗಿ ಸಂಸಾರ ನಡೆಸುತ್ತಾರಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ರಾಶಿ ಹೊಂದಾಣಿಕೆ ಆದ್ರೆ ಸಂಸಾರ ಸುಖಕರವಾಗಿರುತ್ತಂತೆ. ಹಾಗಾದ್ರೆ ಯಾವ ರಾಶಿಯವರನ್ನು ಮದುವೆಯಾದ್ರೆ ಒಳ್ಳೆಯದು ಅನ್ನೋದನ್ನು ತಿಳಿಯೋಣ.
1. ಮೇಷ ರಾಶಿ ಮತ್ತು ಕುಂಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿ ಮತ್ತು ಕುಂಭ ರಾಶಿ ಒಬ್ಬರಿಗೊಬ್ಬರು ಅತ್ಯುತ್ತಮ ಜೋಡಿಯಾಗುತ್ತಾರಂತೆ. ಈ ಎರಡು ರಾಶಿಯವರಿಗೆ ಹೊಸತನ್ನು ಕಂಡುಕೊಳ್ಳುವ ಆಸಕ್ತಿ ಹೆಚ್ಚಾಗಿರುತ್ತದೆ. ಇವರು ಅಡ್ವೆಂಚರಸ್ ಚಟುವಟಿಕೆಗಳನ್ನು ಮಾಡೋದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ. ಇವರಿಬ್ಬರು ಗಂಡ-ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಸ್ನೇಹಿತರಂತೆ ಇರುತ್ತಾರೆ.

2. ಮಿಥುನ ರಾಶಿ ಮತ್ತು ತುಲಾ ರಾಶಿ
ಈ ಎರಡು ರಾಶಿಯವರು ಮದುವೆಯಾದರೆ ತುಂಬಾನೇ ಖುಷಿಯಾಗಿರುತ್ತಾರಂತೆ. ಮಿಥುನ ರಾಶಿ ಮತ್ತು ತುಲಾ ರಾಶಿಯವರ ಭಾವನೆಗಳು, ಮಾನಸಿಕ ಸ್ಥಿತಿ ಎಲ್ಲವೂ ಸರಿ ಹೊಂದುತ್ತದೆ. ಈ ಜೋಡಿಯ ಮಧ್ಯೆ ತುಂಬಾ ಒಳ್ಳೆಯ ಸಂವಹನ ಇರುತ್ತದೆ. ಇವರ ಲೈಂಗಿಕ ಜೀವನವು ಸುಖಕರವಾಗಿರುತ್ತದೆ. ಇವರಿಬ್ಬರ ಗುರಿ ಒಂದೇ ಆಗಿರುತ್ತದೆ. ಯಾವುದೇ ವಿಚಾರವಾದರೂ ಅದನ್ನು ಮಾತನಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಹೀಗಾಗಿ ಇವರಿಬ್ಬರ ಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ.
3. ವೃಶ್ಚಿಕ ರಾಶಿ ಮತ್ತು ಮೀನ ರಾಶಿ
ಈ ಎರಡು ರಾಶಿಯವರು ಮದುವೆಯಾದರೆ ಅತ್ಯತ್ತಮ ಜೋಡಿ ಎನಿಸಿಕೊಳ್ಳುತ್ತಾರೆ. ಇವರು ತಮಗಿಂತ ಹೆಚ್ಚಾಗಿ ತಮ್ಮ ಸಂಗಾತಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಸಂಗಾತಿಯ ಇಷ್ಟ-ಕಷ್ಟಗಳಿಗೆ ಇವರು ಕಿವಿಗೊಡುತ್ತಾರೆ. ಇವರು ಒಬ್ಬರಿಗೊಬ್ಬರು ಗೌರವ ನೀಡುತ್ತಾರೆ. ಹಾಗೂ ಸಂಗಾತಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಕೆಲವೊಂದು ಸಲ ವೃಶ್ಚಿಕ ರಾಶಿಯವರ ಪೊಸೇಸಿವ್‌ನೆಸ್ ಸ್ವಭಾವದಿಂದಾಗಿ ಸಣ್ಣಪುಟ್ಟ ಮನಸ್ಥಾಪ ಏರ್ಪಟ್ಟರೂ ಕೂಡ, ನಂತರ ಎಲ್ಲಾ ಸರಿಯಾಗುತ್ತದೆ. ಹಾಗಾಗಿ ಇವರ ಜೀವನ ತುಂಬಾ ಸುಂದರವಾಗಿರುತ್ತದೆ.
4. ಕನ್ಯಾ ರಾಶಿ ಮತ್ತು ವೃಷಭ ರಾಶಿ
ಈ ಎರಡು ರಾಶಿಯವರು ಮದುವೆಯಾದ್ರೆ ಜೀವನದಲ್ಲಿ ತುಂಬಾನೇ ಚೆನ್ನಾಗಿರುತ್ತಾರೆ. ಇವರಿಬ್ಬರು ಶಾಂತ ಸ್ವಭಾವದವರಾಗಿರುತ್ತಾರೆ. ಹೀಗಾಗಿ ಯಾವುದೇ
ಸಮಸ್ಯೆಗಳು ಏರ್ಪಡೋದಿಲ್ಲ. ಇವರಿಬ್ಬರ ಅನೇಕ ಗುಣಗಳು ಹೊಂದಾಣಿಕೆ ಆಗೋದ್ರಿಂದ ಸಂಸಾರದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗೋದಿಲ್ಲ. ಇಬ್ಬರ ಇಷ್ಟ ಕಷ್ಟಗಳ ಬಗ್ಗೆ ದಂಪತಿಗಳು ಬೇಗನೆ ತಿಳಿದುಕೊಳ್ಳುತ್ತಾರೆ.
5. ಸಿಂಹ ರಾಶಿ ಮತ್ತು ಧನು ರಾಶಿ
ಈ ಎರಡು ರಾಶಿಯವರು ಕೂಡ ದೈರ್ಯವಂತರು ಹಾಗೂ ಅಡ್ವೆಂಚರ್ ಚಟುವಟಿಕೆಗಳನ್ನು ಇವರು ತುಂಬಾನೇ ಇಷ್ಟ ಪಡುತ್ತಾರೆ. ಒಬ್ಬರಿಗೊಬ್ಬರು ತುಂಬಾನೇ ಕೇರ್ ಮಾಡುತ್ತಾರೆ. ಇವರಿಬ್ಬರಿಗೂ ಜೀವನದಲ್ಲಿ ಸಂತೋಷವನ್ನು ಕಾಣೋದು ಹೇಗೆ ಅನ್ನೋದು ಗೊತ್ತಿರುತ್ತದೆ. ಸಿಂಹ ರಾಶಿಯವರಿಗೆ ಹಸಿವು ಹೆಚ್ಚು ಹಾಗೂ ಧನು ರಾಶಿಯವರು ಅವರಿಗೆ ಬೇಕಾದನ್ನು ತಯಾರಿಸಿ ಕೊಡುತ್ತಾರೆ. ಇವರ ಸಂಬಂಧದಲ್ಲಿ ಕಿತ್ತಾಟ ತುಂಬಾನೇ ಕಡಿಮೆ. ಒಬ್ಬರ ಸಾಧನೆಗೆ ಇನ್ನೊಬ್ಬರು ಪ್ರೋತ್ಸಾಹ ನೀಡುತ್ತಾರೆ.
6. ಮೀನ ರಾಶಿ ಮತ್ತು ಕರ್ಕಾಟಕ ರಾಶಿ
ಈ ಎರಡು ರಾಶಿಯವರು ತುಂಬಾನೇ ಸೂಕ್ಷ್ಮ ಸ್ವಭಾವ ಹಾಗೂ ಭಾವುಕ ಜೀವಿಗಳು. ಆದರೆ ಇಬ್ಬರೂ ಕೂಡ ಇನ್ನೊಬ್ಬರ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇಬ್ಬರ ಗುಣ ನಡೆತೆಗಳು ಒಂದೇ ಆಗಿರೋದ್ರಿಂದ ಹೊಂದಾಣಿಕೆ ಚೆನ್ನಾಗಿರುತ್ತದೆ. ಹೀಗಾಗಿ ಮದುವೆಯಾದ್ರೆ ಮೀನ ಮತ್ತು ಕರ್ಕಾಟಕ ರಾಶಿಯವರು ಅತ್ಯತ್ತಮ ಜೋಡಿಯಾಗೋದ್ರಲ್ಲಿ ಎರಡು ಮಾತಿಲ್ಲ.
7. ಕರ್ಕಾಟಕ ರಾಶಿ ಹಾಗೂ ವೃಶ್ಚಿಕ ರಾಶಿ
ಕರ್ಕಾಟಕ ರಾಶಿಯವರು ತುಂಬಾನೇ ಭಾವುಕ ಜೀವಿಗಳು. ಇವರು ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟರೆ ಅವರನ್ನು ತುಂಬಾನೇ ಹಚ್ಚಿಕೊಳ್ಳುತ್ತಾರೆ. ಈ ಎರಡು ರಾಶಿಯವರು ಒಟ್ಟಾದ್ರೆ ಜೀವನ ಚೆನ್ನಾಗಿರುತ್ತದೆ. ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯನ್ನು ರಕ್ಷಣೆ ಮಾಡುತ್ತಾರೆ. ಈ ರಾಶಿಯವರು ತಮ್ಮನ್ನು ಪ್ರೀತಿಸುವವರಿಗಾಗಿ ಏನು ಮಾಡೋದಕ್ಕೆ ಸಿದ್ಧರಿರುತ್ತಾರೆ. ಈ ಎರಡು ರಾಶಿಯವರ ಕೆಮಿಸ್ಟ್ರಿ ಚೆನ್ನಾಗಿರುತ್ತದೆ.
8. ಧನು ರಾಶಿ ಹಾಗೂ ಮೇಷ ರಾಶಿ
ಈ ಎರಡು ರಾಶಿಯವರು ಏನನ್ನಾದರೂ ಬಯಸಿದರೆ ಅದನ್ನು ಪಡೆಯುವವರೆಗೂ ಬಿಡೋದಿಲ್ಲ. ಇವರಿಬ್ಬರು ಒಟ್ಟಾಗಿ ಅಡ್ವೆಂಚರಸ್ ಚಟುವಟಿಕೆಗಳನ್ನು ಮಾಡುತ್ತಾರೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಇನ್ನೂ ಈ ರಾಶಿಯವರು ಚೆನ್ನಾಗಿ ರೆಡಿಯಾಗೋದಕ್ಕೆ ಇಷ್ಟ ಒಡುತ್ತಾರೆ. ಹಾಗೂ ಹೊರಗಡೆ ಹೋಗುವಾಗ ಉತ್ತಮವಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಾರೆ.
9. ತುಲಾ ರಾಶಿ ಮತ್ತು ಮೀನ ರಾಶಿ
ಈ ಎರಡು ರಾಶಿಯವರು ಅತ್ಯತ್ತಮ ಜೋಡಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಈ ಎರಡು ರಾಶಿಯವರಲ್ಲಿರುವ ಸಾಮಾನ್ಯ ಗುಣವೆಂದರೆ ಇವರಿಬ್ಬರು ನಿರ್ದಿಷ್ಟ ಗುರಿ ಹೊಂದಿದ್ದಾರೆ ಹಾಗೂ ಇಬ್ಬರು ಕೂಡ ಬುದ್ಧಿವಂತರಾಗಿರುತ್ತಾರೆ. ಮೀನ ರಾಶಿಯವರು ಅಂತರ್ಮುಖಿಗಳಾಗಿರುತ್ತಾರೆ. ಅವರು ಯಾರ ಜೊತೆಗೂ ಹೆಚ್ಚು ಮಾತಾಡೋದಿಲ್ಲ. ಆದರೆ ದೊಡ್ಡ ಗುರಿ ಹೊಂದಿರುತ್ತಾರೆ. ತುಲಾ ರಾಶಿಯವರು ಯೋಜನೆಯನ್ನು ರೂಪಿಸುವ ಗುಣ ಹೊಂದಿರುತ್ತಾರೆ. ಹೀಗಾಗಿ ಇಬ್ಬರೂ ಒಟ್ಟಾದರೆ ಖಂಡಿತ ಗುರಿ ಮುಟ್ಟಬಹುದು.
10. ಕನ್ಯಾ ರಾಶಿ ಮತ್ತು ವೃಷಭ ರಾಶಿ
ವೃಷಭ ರಾಶಿಯವರು ತುಂಬಾನೇ ಪ್ರಾಕ್ಟಿಕಲ್ ಆಗಿ ಯೋಚಿಸುವವರು ಆದರೆ ಜೀವನದ ಬಗ್ಗೆ ತುಂಬಾನೇ ಗಂಭೀರವಾಗಿರುತ್ತಾರೆ. ಹಾಗೆಯೇ ಕನ್ಯಾ ರಾಶಿಯವರು ಯಾವುದೇ ಪರಿಸ್ಥಿತಿಯನ್ನು ಪ್ರಾಯೋಗಿಕವಾಗಿ ಮೌಲ್ಯಮಾಪನ ಮಾಡುವ ತರ್ಕಬದ್ಧ ಗುಣದವರು. ಇವರಿಬ್ಬರು ಒಟ್ಟಾದರೆ ತುಂಬಾನೇ ಒಳ್ಳೆಯದು. ಸಾಧಾರಣ ವಾಗಿ ಇಬ್ಬರದ್ದೂ ಒಂದೇ ಗುಣ ಆಗಿರೋದ್ರಿಂದ ಇವರು ಅತ್ಯತ್ತಮ ಜೋಡಿ ಎನಿಸಿಕೊಳ್ಳುತ್ತಾರೆ.



Click it and Unblock the Notifications
