Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 1ರಿಂದ UPI ನಿಯಮ ಬದಲಾವಣೆ: ಏನೆಲ್ಲಾ ಹೊಸ ನಿಯಮ ಬಂದಿದೆ ಗೊತ್ತಾ?
ಪ್ರತಿ ತಿಂಗಳ ಆರಂಭ ಹೊಸ ಹೊಸ ರೀತಿಯ ನಿಯಮಗಳು ಬದಲಾಗುವುದು ನೋಡಬಹುದು. ಹಾಗೆ ಈಗ ಬ್ಯಾಂಕಿಂಗ್ ವಲಯದಲ್ಲೂ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಈಗ ನಿಮ್ಮ ನಿತ್ಯದ ಯುಪಿಐ ಪೇಮೆಂಟ್ ವಿಚಾರದಲ್ಲಿಯೂ ನಿಯಮಗಳು ಬದಲಾವಣೆ ಆಗುತ್ತಿರುವುದು ನೋಡಬಹುದು.
ಯುಪಿಐ ಏಕೀಕೃತ ಪಾವತಿ ಇಂಟರ್‌ಫೇಸ್ ಭಾರತದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಡಿಜಿಟಲ್ ಪಾವತಿಯ ಕೆಲವು ನಿಯಮ ಬದಲಾಗುವುದು ನೋಡಬಹುದು. ಪ್ರತಿದಿನವು ಲಕ್ಷಾಂತರ ಮಂದಿ ಈ ಯುಪಿಐ ಬಳಸುತ್ತಾರೆ. ಹಾಗೆ ಇದು ಈಗ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬಳಕೆಯಲ್ಲಿದೆ. ಬಿಲ್ ಪಾವತಿಗೆ, ರಿಚಾರ್ಜ್ ಮಾಡಲು, ಬ್ಯಾಲೆನ್ಸ್ ಪರಿಶೀಲನೆ, ಚಂದಾದಾರಿಕೆ, ಪವರ್ ಬಿಲ್‌ಗಳ ಪಾವತಿ, ಗ್ಯಾಸ್ ಬುಕ್ಕಿಂಗ್ ಹೀಗೆ ಹಲವು ಕೆಲಸಗಳಲ್ಲಿ ಬಳಕೆಯಾಗುತ್ತಿದೆ.

ಆದರೆ ಈ ಆಗಸ್ಟ್ 1 ರಿಂದ, UPI ಬಳಕೆದಾರರಿಗೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತ, ಸುವ್ಯವಸ್ಥಿತ ಮತ್ತು ಪರಿಣಾಮಕಾರಿಯಾಗಿ ಮಾಡಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಈ ಬದಲಾವಣೆಗಳ ತರುತ್ತಿರುವುದಾಗಿ ಹೇಳಿಕೊಂಡಿದೆ.
ಹಾಗಾದ್ರೆ ಆಗಸ್ಟ್ 1ರಿಂದ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆ ನೋಡಬಹುದು. ನಿಮ್ಮ ಯುಪಿಐ ಪಾವತಿಗೆ ಏನೆಲ್ಲಾ ಹೊಸ ನಿಯಮ ಜಾರಿಯಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬ್ಯಾಲೆನ್ಸ್ ಪರಿಶೀಲಿಸಲು ಮಿತಿ ನಿಗದಿ
ನೀವು PhonePe, Google Pay, Paytm ಅಥವಾ BHIM ಅಪ್ಲಿಕೇಶನ್‌ನಂತಹ UPI ಅಪ್ಲಿಕೇಶನ್‌ಗಳ ಮೂಲಕ ದಿನಕ್ಕೆ ಹಲವಾರು ಬಾರಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲನೆ ಮಾಡುತ್ತಿದ್ರಿ. ಆದ್ರೆ ಈಗ ಈ ನಿಯಮದಲ್ಲಿ ಬದಲಾವಣೆಯಾಗುತ್ತಿದೆ. ಹೊಸ ನಿಯಮದ ಪ್ರಕಾರ ಯುಪಿಐ ಬಳಕೆದಾರರು ದಿನವೊಂದಕ್ಕೆ 50 ಬರಿ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು. ಕೆಲವು ಬಳಕೆದಾರರು ಬ್ಯಾಲೆನ್ಸ್ ಅನ್ನು ಪದೇ ಪದೇ ಪರಿಶೀಲಿಸುತ್ತಾರೆ, ಇದು ನೆಟ್‌ವರ್ಕ್‌ನಲ್ಲಿ ಹೆಚ್ಚಿನ ಹೊರೆ ಉಂಟು ಮಾಡಲಿದೆ. ಕೆಲವೊಮ್ಮ ಯುಪಿಐ ಸರ್ವರ್ ನಿಧಾನವಾಗಿ ಕೆಲಸ ಮಾಡಲು ಗ್ರಾಹಕರು ಪದೇ ಪದೇ ಬ್ಯಾಲೆನ್ಸ್ ಪರಿಶೀಲಿಸುವುದು ಕೂಡ ಒಂದು ಕಾರಣವಾಗಿದೆ. ಹೀಗಾಗಿ ಸಾಮಾನ್ಯರಿಗೂ ಸಾಕಾಗುವಷ್ಟು ಮಿತಿ ಹೇರಲಾಗಿದೆ.
ಆಟೋ ಪೇಗಳಿಗೆ ಸಮಯ ನಿಗದಿ
ನೀವು ಯುಪಿಐ ಮೂಲಕ ನಿಮ್ಮ ಇಎಂಐಗಳ ಪಾವತಿಸುತ್ತಿದ್ದರೆ ಈ ನಿಯಮ ಅನ್ವಯವಾಗಲಿದೆ. ಕ್ರೆಡಿಟ್ ಕಾರ್ಡ್ ಬಿಲ್, ವಿದ್ಯುತ್ ಬಿಲ್, ಮನೆ ಬಾಡಿಗೆ ಹೀಗೆ ಯಾವೆಲ್ಲಾ ಆಟೋ ಪೇ ಮೂಲಕ ಪಾವತಿಸುತ್ತಿರೋ ಅವು ಇನ್ನು ಮುಂದೆ ನಿಗದಿತ ಸಮಯ ಸ್ಲಾಟ್‌ಗಳಲ್ಲಿ ಮಾತ್ರ ಮಾಡಲಾಗುತ್ತದೆ. ಇದರಿಂದ ಸಿಸ್ಟಮ್ ಲೋಡ್, ವಹಿವಾಟು ಪ್ರಕ್ರಿಯೆ ವಿಳಂಬದಂತಹ ಸಮಸ್ಯೆ ಕಡಿಮೆಯಾಗಲಿದೆ.
2000 ಕ್ಕಿಂತ ಹೆಚ್ಚಿನ UPI ವಹಿವಾಟುಗಳಿಗೆ GST ಇಲ್ಲ
ಕೆಲವು ಸಮಯದಿಂದ ಸರ್ಕಾರವು 2000 ರೂಗಿಂತ ಹೆಚ್ಚಿನ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸಲಿದೆ ಎಂಬ ಊಹಾಪೂಹವಿತ್ತು. ಆದ್ರೆ ಈ ರೀತಿಯ ಶುಲ್ಕ ಹಾಕುವುದಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ.
ಇದಿಷ್ಟು ಹೊರತುಪಡಿಸಿ, ಉಳಿದಂತೆ ನೀವು ಎಷ್ಟು ಭಾರಿ ಬೇಕಾದರೂ ಹಣ ಪಾವತಿ ಮಾಡಬಹುದು. ಆದ್ರೆ ಆಯಾ ಬ್ಯಾಂಕ್‌ಗಳು ಯುಪಿಐ ಪಾವತಿಯ ಮೇಲೆ ಮಿತಿ ವಿಧಿಸಿರುತ್ತವೆ. ಅದನ್ನು ಹೊರತುಪಡಿಸಿ ಯುಪಿಐ ವತಿಯಿಂದ ಯಾವುದೇ ವಹಿವಾಟಿನ ಮಿತಿಯನ್ನು ಸಹ ನಿಗಧಿ ಮಾಡಲಾಗಿಲ್ಲ. ಇನ್ನು ಭಾರತದಲ್ಲಿ ಪ್ರತಿ ತಿಂಗಳು 1200 ಕೋಟಿಗೂ ಹೆಚ್ಚು ವಹಿವಾಟುಗಳು UPI ಮೂಲಕ ನಡೆಯುತ್ತಿವೆ ಎಂದು ದತ್ತಾಂಶಗಳು ಹೇಳಿವೆ. ಆದ್ರೆ ಇತ್ತೀಚಿಗೆ ಆನ್‌ಲೈನ್ ವಹಿವಾಟು ನಡೆಸಿದ್ದ ವರ್ಗಕರಿಗೆ ತೆರಿಗೆ ಇಲಾಖೆ ನೋಟಿಸ್ ನೀಡಿದ್ದ ಪ್ರಕರಣ ಬಹಳ ಸುದ್ದಿಯಾಗಿತ್ತು.



Click it and Unblock the Notifications