Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರ ನಡವಳಿಕೆ ಇತರರಿಗೆ ತುಂಬಾನೇ ಹಿಂಸೆ ಅನ್ನಿಸುತ್ತೆ!
ಈ ಜಗತ್ತಿನಲ್ಲಿ ಎಲ್ಲರೂ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರ ನಡವಳಿಕೆ ಒಂದೊಂದು ರೀತಿಯಲ್ಲಿ ಇರುತ್ತೆ. ಕೆಲವರ ನಡವಳಿಕೆಯಿಂದ ಅಕ್ಕ-ಪಕ್ಕದಲ್ಲಿ ಇದ್ದವರಿಗೆ ಹಿಂಸೆ ಅನ್ನಿಸೋದಕ್ಕೆ ಶುರುವಾಗುತ್ತೆ. ಜೋರಾಗಿ ಮಾತನಾಡುವುದು, ಕಿರಿಚಾಡುವುದು, ಊಟ ಮಾಡುವಾಗ ಶಬ್ಧ ಮಾತನಾಡುವುದು, ಎಲ್ಲರನ್ನೂ ಏಕವಚನದಿಂದ ಮಾತನಾಡಿಸೋದು ಇತ್ಯಾದಿ. ಮನುಷ್ಯನ ನಡವಳಿಕೆಗೂ ಹಾಗೂ ಆತನ ರಾಶಿಗೂ ಏನಾದರೂ ಸಂಬಂಧ ಇದ್ಯಾ? ಅಷ್ಟಕ್ಕು ಅಕ್ಕ-ಪಕ್ಕದವರಿಗೆ ಕಿರಿಕಿರಿ ಅನ್ನಿಸುವ ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿದುಕೊಳ್ಳೋಣ.
1.ಕನ್ಯಾ ರಾಶಿ
ಬೇರೆಯವರಿಗೆ ಕಿರಿಕಿರಿ ಮಾಡೋದ್ರಲ್ಲಿ ಇವರು ಯಾವಾಗ್ಲೂ ಒಂದು ಕೈ ಮೇಲಿರುತ್ತಾರೆ. ಕನ್ಯಾ ರಾಶಿಯ ಕೆಲವು ನಡವಳಿಕೆ ಇತರರಿಗೆ ಹಿಂಸೆ ಅನ್ನಿಸಬಹುದು. ಅಫಿಸ್ ನಲ್ಲಿ ಸಹೋದ್ಯೋಗಿಗಳಿಗೆ, ಮನೆಯವರಿಗೆ, ರೂಂ ನಲ್ಲಿ ಸ್ನೇಹಿತರಿಗೆ ಹೀಗೆ ಇವರಿದ್ದ ಕಡೆ ಇತರರಿಗೆ ಕಿರಿಕಿರಿ ತಪ್ಪಿದ್ದಲ್ಲ. ಈ ರಾಶಿಯವರಿಗೆ ಪ್ರತಿಯೊಂದು ವಿಚಾರದಲ್ಲೂ ಕುತೂಹಲ ಹೆಚ್ಚಾಗಿರುತ್ತದೆ. ಇವರು ತೋರಿಸೋ ಬಾರಿ ಕುತೂಹಲ ಇತರರನ್ನು ಬೇಸರಗೊಳಿಸೋದ್ರಲ್ಲಿ ಕೊನೆಗೊಳ್ಳುತ್ತದೆ.

2. ವೃಷಭ ರಾಶಿ
ವೃಷಭ ರಾಶಿಯವರು ಪದೇ ಪದೇ ತಪ್ಪುಗಳನ್ನು ಮಾಡುತ್ತಾ ತಮ್ಮ ಮನೆಯವರು ಮತ್ತು ಸ್ನೇಹಿತರನ್ನು ಪೀಡಿಸುತ್ತಾರೆ. ಈ ರಾಶಿಯವರು ಶಾಂತಿಯುತವಾಗಿ ಇರುತ್ತಾರೆ. ಆದರೆ ಇವರು ಬೇರೆ ಯಾರ ಬಗ್ಗೆಯೂ ಕಾಳಜಿ ಮಾಡೋದಿಲ್ಲ. ಆದರೆ ಬೇಕಾದ ಸಮಯದಲ್ಲಿ ತಮಗೇನೂ ಇಷ್ಟವೋ ಅದನ್ನೇ ಮಾಡುತ್ತಾರೆ. ಇದರಿಂದ ಅವರ ಹತ್ತಿರ ಇದ್ದವರಿಗೆ ತೊಂದರೆ ಉಂಟಾಗುತ್ತದೆ. ಇವರನ್ನು ಪ್ರೀತಿಸುವವರು ತಮ್ಮ ಕಾಳಜಿ ಮಾಡಲಿ ಅಂತ ಬಯಸುತ್ತಾರೆ. ಆದರೆ ಇವರು ಕಾಳಜಿ ಮಾಡೋದನ್ನು ಬಿಟ್ಟು ಹೆಚ್ಚು ತೊಂದರೆಯನ್ನೇ ಮಾಡುತ್ತಾರೆ.
3. ಮೇಷ ರಾಶಿ
ಮೇಷ ರಾಶಿಯವರ ಗುಣ ಹೇಗೆಂದರೆ ಇವರು ಉತ್ಸುಕರಾಗಿರುತ್ತಾರೆ, ಚುರುಕಾಗಿರುತ್ತಾರೆ ಮತ್ತು ಧೈರ್ಯಶಾಲಿಗಳಾಗಿರುತ್ತಾರೆ. ಕೆಲವೊಂದು ಸಲ ಇವರು ಮಾಡುವ ಕೆಲಸಗಳು ಇತರರಿಗೆ ಇಷ್ಟ ಆಗೋದಿಲ್ಲ. ಇದರಿಂದ ಅವರು ನೋವನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಇವರನ್ನು ಜಾಣ್ಮೆಯಿಂದ ದೂರ ಇಡೋದು ಒಳ್ಳೆಯದು. ಇವರ ಮುಂದೆ ಏನೇ ಘಟನೆ ನಡೆದರೂ ಕೂಡ ಅದಕ್ಕೆ ಇವರು ಪ್ರತಿಕ್ರಿಯೆ ನೀಡದೇ ಇರೋದಿಲ್ಲ.
4. ಸಿಂಹ ರಾಶಿ
ಜ್ಯೋತಿಷ್ಯ ಪ್ರಕಾರ ಸಿಂಹ ರಾಶಿಯವರಿಗೆ ಅಹಂಕಾರದ ಸ್ವಭಾವ ಸ್ವಲ್ಪ ಅಧಿಕವಂತೆ. ಇವರು ನೇರ ಮಾತಿನ ಸ್ವಭಾವದವರು, ಆದ್ದರಿಂದ ಇವರ ಸ್ವಭಾವ ಬೇರೆಯರಿಗೆ ಇಷ್ಟವಾಗುವುದಿಲ್ಲ, ಇವರಲ್ಲಿ ಹಾಸ್ಯ ಪ್ರಜ್ಞೆಯೂ ಇರುತ್ತದೆ, ಆದರೆ ಕೆಲವೊಮ್ಮೆ ಇವರು ಹಾಸ್ಯ ಬೇರೆಯವರಿಗೆ ನೋಯಿಸಬಹುದು. ಅಲ್ಲದೆ ಇವರಿಗೆ ನಾನೇ ಸರಿ ಎಂಬ ಮನೋಭಾವ ಅಧಿಕವಿರುತ್ತದೆಯಂತೆ, ಇವರು ನಾನೇ ಗ್ರೇಟ್ ಎಂದು ಭಾವಿಸುವ ಸ್ವಭಾವದವರು, ಆದ್ದರಿಂದ ಇವರ ಈ ಸ್ವಭಾವ ಇತರರಿಗೆ ಇಷ್ಟವಾಗುವುದಿಲ್ಲ
5. ಮಿಥುನ ರಾಶಿ
ಮಿಥುನ ರಾಶಿಯವರು ಯಾವಾಗಲೂ ಎಂಜಾಯ್ ಮಾಡೋ ಮೂಡ್ ನಲ್ಲಿ ಇರುತ್ತಾರೆ. ಕೆಲವೊಂದು ಸಲ ಇವರ ನಡವಳಿಕೆಯಿಂದ ಇತರರೂ ಬೇಸತ್ತು ಹೋಗುತ್ತಾರೆ. ಇವರ ಮಾತಿನ ಮೂಲಕವೇ ಕುಟುಬಸ್ಥರು, ಸ್ನೇಹಿತರು ಹಾಗೂ ಆಪ್ತರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಯಾವುದೇ ವಿಚಾರವಾದರೂ ಅದನ್ನು ಮೆತ್ತಗೆ ಹೇಳೋದಿಲ್ಲ. ಎಲ್ಲರ ಮೇಲೆ ಕೂಗಾಡಿ ಮಾತನಾಡುತ್ತಾರೆ. ಇವರಿಗೆ ತಾಳ್ಮೆ ಕಡಿಮೆ.



Click it and Unblock the Notifications