Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಿಗ್ರಿ ಇಲ್ಲ ಅಂದ್ರು ಲಕ್ಷ ಲಕ್ಷ ವೇತನವಿರುದ ಕೆಲಸಗಳಿವು..! ಭಾರತದಲ್ಲೇ ಅತ್ಯಧಿಕ ವೇತನ ಪಡೆಯಬಹುದು!
ಅತೀ ಹೆಚ್ಚು ಸಂಬಳ ಬರುವ ಕೆಲಸ ಯಾವುದು ಅಂದ್ರ ಎಲ್ಲರು ಡಾಕ್ಟರ್, ಇಂಜಿನಿಯರ್, ಸರ್ಕಾರಿ ಹುದ್ದೆ ಎನ್ನುತ್ತಾರೆ. ಅದು ನಿಜವೂ ಹೌದು. ಡಾಕ್ಟರ್, ಇಂಜಿನಿಯರಿಂಗ್ ಕೋರ್ಸ್ ಮುಗಿಸಬೇಕು ಅಂದ್ರೆ ಲಕ್ಷ ಕೋಟಿ ಖರ್ಚು ಮಾಡಬೇಕು ಅದರ ಜೊತೆಗೆ ವೇತನವೂ ಅಷ್ಟೇ ಇರಲಿದೆ.
ಹೀಗಾಗಿ ಇಂದು ಅತೀ ಹೆಚ್ಚು ವೇತನ ನೀಡುವ ಕೆಲಸಗಳಿಗೆ ಬೇಡಿಕೆ ಇದೆ. ಆ ಕ್ಷೇತ್ರದಲ್ಲಿ ಸ್ಪರ್ಧೆಯೂ ಜೋರಾಗಿದೆ. ಕಡಿಮೆ ಹುದ್ದೆಗಳಿಗೆ ಹೆಚ್ಚು ಹೆಚ್ಚು ಮಂದಿ ಹೋರಾಡುತ್ತಾರೆ. ಈ ಕೆಲಸ ಪಡೆಯಬೇಕು ಅಂತ ಹಗಲು ರಾತ್ರಿ ಶ್ರಮ ಹಾಕುತ್ತಾರೆ.

ಇದೀಗ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಹಲವಾರು ವಿದ್ಯಾರ್ಥಿಗಳು ತಮ್ಮ ಅಪೇಕ್ಷಿತ ವಿಷಯಗಳನ್ನು ಮುಂದುವರಿಸಲು ಕಾಲೇಜುಗಳನ್ನು ಹುಡುಕುತ್ತಿದ್ದಾರೆ. ಆದರೆ ಭಾರತದಲ್ಲಿ ಅತೀ ಹೆಚ್ಚು ವೇತನ ನೀಡುವಂತಹ ಕೆಲಸಗಳು ಯಾವುದು? ಯಾವ ಕ್ಷೇತ್ರ ಈಗ ಅತೀ ಹೆಚ್ಚು ವೃತನ ನೀಡುತ್ತಿದೆ ಎಂಬ ವಿಚಾರ ನಿಮಗೆ ಗೊತ್ತಾ?
ಹಾಗಾದ್ರೆ ಪದವಿಯ ಬಳಿಕ ಅತೀ ಹೆಚ್ಚು ವೇತನ ನೀಡುವ ಕೆಲಸಗಳು ಯಾವುದು ಅಂತ ನೋಡೋಣ.
ವಾಣಿಜ್ಯ ಪೈಲಟ್
ವಾಣಿಜ್ಯ ಪೈಲಟ್‌ಗಳು ವಿಮಾನಯಾನ ಸಂಸ್ಥೆಗಳು, ಚಾರ್ಟರ್ ಕಂಪನಿಗಳು ಅಥವಾ ಕಾರ್ಗೋ ಕ್ಯಾರಿಯರ್‌ಗಳಿಗೆ ಪ್ರಯಾಣಿಕರು ಅಥವಾ ಸರಕುಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಾಗಿಸಲು ವಿಮಾನವನ್ನು ನಿರ್ವಹಿಸುತ್ತಾರೆ.
ವಾಣಿಜ್ಯ ಪೈಲಟ್ ಆಗಲು, ವಿದ್ಯಾರ್ಥಿಗಳು ತಮ್ಮ ಪರವಾನಗಿಯನ್ನು ಪಡೆಯಲು ಪೈಲಟ್ ತರಬೇತಿ ಪ್ರಮಾಣಪತ್ರಗಳನ್ನು ಪಡೆಯಬೇಕಾಗುತ್ತದೆ. ರಾಜೀವ್ ಗಾಂಧಿ ಏವಿಯೇಷನ್ ಅಕಾಡೆಮಿ, ದಿ ಬಾಂಬೆ ಫ್ಲೈಯಿಂಗ್ ಕ್ಲಬ್ ಮತ್ತು ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್‌ನಂತಹ ಸಂಸ್ಥೆಗಳಲ್ಲಿ ತರಬೇತಿ ಕೋರ್ಸ್‌ಗಳು ಲಭ್ಯವಿದ್ದು, ಇದರ ವೆಚ್ಚವು ರೂ 1.59 ಲಕ್ಷದಿಂದ ರೂ 20 ಲಕ್ಷಗಳವರೆಗೆ ಇರುತ್ತದೆ.
ಈ ತರಬೇತಿ ಪಡೆದವರಿಗೆ ಆರಂಭದಲ್ಲಿ ಅತ್ಯುತ್ತಮ ವೇತನ ನೀಡಲಾಗುತ್ತದೆ. ಕಡಿಮೆ ಅಂದರೂ 20 ಲಕ್ಷದಿಂದ 25 ಲಕ್ಷ ವಾರ್ಷಿಕ ಪ್ಯಾಕೇಜ್ ದೊರೆಯಲಿದೆ.
ಎಥಿಕಲ್ ಹ್ಯಾಕರ್
ಎಥಿಕಲ್ ಅಥವಾ ನೈತಿಕ ಹ್ಯಾಕಿಂಗ್ ಈಗ ಸೈಬರ್ ಸೆಕ್ಯೂರಿಟಿಯಲ್ಲಿ ಬಹಳಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಅಪರಾಧಗಳು ಹೆಚ್ಚಾಗುತ್ತಿದ್ದು, ಈ ಪ್ರಕರಣಗಳ ತಡೆಯಲು ಈ ಎಥಿಕಲ್ ಹ್ಯಾಕಿಂಗ್ ಸೇರಿದಂತೆ, ಕಂಪ್ಯೂಟರ್ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಅಥವಾ ಅಪ್ಲಿಕೇಶನ್‌ಗಳಲ್ಲಿ ಭದ್ರತಾ ದೋಷಗಳನ್ನು ಕಾನೂನುಬದ್ಧವಾಗಿ ಬಳಸಿಕೊಳ್ಳುತ್ತಾರೆ.
ಭಾರತದಲ್ಲಿ ಎಥಿಕಲ್ ಹ್ಯಾಕಿಂಗ್ ಕೇವಲ 6 ತಿಂಗಳಲ್ಲಿ ಕಲಿಯಬಹುದು. ಜೊತೆಗೆ ಒಂದಿಷ್ಟು ಯುನಿವರ್ಸಿಟಿಗಳು ಈಗ ಎಥಿಕಲ್ ಹ್ಯಾಕಿಂಗ್ ವಿಷಯ ಕಲಿಸಲು ಮುಂದಾಗಿದೆ. ಸದ್ಯ ಈ ಎಥಿಕಲ್ ಹ್ಯಾಕಿಂಗ್‌ನಲ್ಲಿ ವಾರ್ಷಿಕವಾಗಿ 38 ಲಕ್ಷ ರೂಪಾಯಿ ವರೆಗೂ ವೇತನ ಪಡೆಯಬಹುದು.
ಹೂಡಿಕೆ ಸಲಹೆಗಾರ
ಹೂಡಿಕೆ ಸಲಹೆಗಾರರು ಹೂಡಿಕೆಗಳನ್ನು ನಿರ್ವಹಿಸುವ ಮತ್ತು ಹಣಕಾಸು ವ್ಯವಹಾರ ಸಲಹೆ, ಸೂಚನೆ ನೀಡುವವರಾಗಿರುತ್ತಾರೆ. ಸೆಬಿಯ ನಿಯಮಗಳು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯಗೊಳಿಸಲಾಗಿದ್ದು, ಹಣಕಾಸು, ವಾಣಿಜ್ಯ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ. ಭಾರತದಲ್ಲಿ ಹೂಡಿಕೆ ಸಲಹೆಗಾರರು ಪದವಿ ಇಲ್ಲದೆ ಗಣನೀಯ ಸಂಬಳವನ್ನು ಗಳಿಸಬಹುದು. ಇವರು ವಾರ್ಷಿಕವಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಗಳಿಸುತ್ತಾರೆ ಎಂದು ವರದಿಯಾಗಿದೆ.
ಫ್ಲೈಟ್ ಅಟೆಂಡೆಂಟ್
ಫ್ಲೈಟ್ ಅಟೆಂಡೆಂಟ್‌ಗಳು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸುತ್ತಾರೆ. ಈ ಕೆಲಸಕ್ಕೆ ಕೇವಲ 12ನೇ ತರಗತಿ ಬೋರ್ಡ್ ಪರೀಕ್ಷೆ ಉತ್ತೀರ್ಣರಾಗಿದ್ದರೆ ಸಾಕು. ಆದರೆ ಕೆಲವು ಬಾರಿ ಇದಕ್ಕೆಂದೆ ಪ್ರತ್ಯೇಕವಾಗಿರುವ ಕೋರ್ಸ್‌ಗಳು ಸಹ ಇವೆ. ಭಾರತದಲ್ಲಿ, ಫ್ಲೈಟ್ ಅಟೆಂಡೆಂಟ್‌ಗಳು ವಾರ್ಷಿಕವಾಗಿ ರೂ 19.2 ಲಕ್ಷಗಳವರೆಗೆ ಗಳಿಸಬಹುದು.
ಹೆಡ್‌ಕುಕ್
ಐಷಾರಾಮಿ ಹೋಟೆಲ್‌ಗಳಲ್ಲಿ ಹೆಡ್ ಕುಕ್‌ಗಳಿಗೆ ಅತ್ಯಧಿಕ ಬೇಡಿಕೆ ಇದೆ. ಅವರ ವೇತನ ಸಹ ಕಡಿಮೆ ಏನಿಲ್ಲ. ಆದರೆ ಇದಕ್ಕೆಂದೆ ಪ್ರತ್ಯೇಕ ಕೋರ್ಸ್‌ಗಳಿವೆ ಆದರೆ ಭಾರತದ ಐಷಾರಾಮಿ ಹೋಟೆಲ್‌ಗಳಲ್ಲಿ ಹೆಚ್‌ಕುಕ್‌ಗಳಿಗೆ ಬರೋಬ್ಬರಿ 30ರಿಂದ 35 ಲಕ್ಷ ರೂಪಾಯಿ ವಾರ್ಷಿಕ ವೇತನವಿದೆ. ಅದರಲ್ಲೂ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಕ್‌ಗಳಿರುತ್ತಾರೆ.



Click it and Unblock the Notifications