Latest Updates
-
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ!
ಈ ದೇಶಗಳಲ್ಲಿ ಭಾರತೀಯ ರೂಪಾಯಿಯೇ ಕಿಂಗ್.!! ಯಾವ ದೇಶಗಳು ಗೊತ್ತಾ?
ನಾವು ಯಾವುದೇ ವ್ಯವಹಾರ ಮಾಡುವುದಿದ್ದರೂ ಹಣದ ಮೂಲಕ ಮಾಡುತ್ತೇವೆ. ನಿತ್ಯದ ಪ್ರತಿಯೊಂದು ಕೆಲಸದಲ್ಲೂ ಹಣ ಬಳಕೆಗೆ ಬರುತ್ತದೆ. ಇನ್ನು ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಭಾರತೀಯ ನೋಟುಗಳನ್ನು ಡಾಲರ್‌ಗೆ ಪರಿವರ್ತಿಸಿ ವ್ಯವಹಾರ ನಡೆಸಲಾಗುತ್ತದೆ. ಏಕೆಂದರೆ ಡಾಲರ್ ಮೌಲ್ಯ ರೂಪಾಯಿಗಿಂತಲೂ ಹೆಚ್ಚಿರುವ ಕಾರಣ ಡಾಲರ್ ಬಲಶಾಲಿಯಾಗಿರುವುದರಿಂದ ಈ ರೀತಿಯ ವ್ಯವಹಾರ ಮಾಡಲಾಗುತ್ತೆ.
ಹಾಗೆ ಭಾರತೀಯ ರೂಪಾಯಿ ಈಗ ಡಾಲರ್ ಎದುರು ಕುಸಿಯುತ್ತಿರುವುದು ನೋಡಿದ್ದೇವೆ. ದಶಕಗಳಿಂದಲೂ ರೂಪಾಯಿ ಮೌಲ್ಯ ಇಳಿಯುತ್ತಲೇ ಇದೆ. ಹೀಗಾಗಿ ನಾವು ಇಂದು ಹಲವು ದೇಶದ ಜೊತಗೆ ವ್ಯಾಪಾರ ವ್ಯವಹಾರ ಮಾಡುವಾಗ ಅದರಲ್ಲೂ ಆಮದು ಹೆಚ್ಚಾದಾಗ ಭಾರತೀಯ ಹಣ ಹೆಚ್ಚಾಗಿ ನೀಡಬೇಕಾಗುತ್ತದೆ. ಇದನ್ನೇ ರೂಪಾಯಿ ಅಮೌಲ್ಯೀಕರಣ ಎನ್ನಲಾಗುತ್ತದೆ.

ಆದರೆ ಕೆಲವೊಂದು ದೇಶದ ಹಣಕ್ಕೆ ಹೋಲಿಸಿದರೆ ಭಾರತೀಯ ರೂಪಾಯಿಯೇ ಹೆಚ್ಚು ಮೌಲ್ಯ ಹೊಂದಿರುತ್ತದೆ. ಈ ವೇಳೆ ನಮಗೆ ಲಾಭವಾಗುತ್ತದೆ. ಕೆಲವು ದೇಶದಲ್ಲಿ ಭಾರತೀಯ ರೂಪಾಯಿಯೇ ರಾಜನಂತೆ ಮೆರೆಯುತ್ತದೆ. ಏಕೆಂದರೆ ಡಾಲರ್‌ಗೆ ಹೋಲಿಸಿದಾಗ ಆ ದೇಶದ ಹಣದ ಮೌಲ್ಯ ಪಾಥಾಳ ಸೇರಿರುತ್ತದೆ. ಹಾಗೆ ಭಾರತದ ರೂಪಾಯಿಗೆ ಹೋಲಿಸಿದಾಗಲು ಅವರ ದೇಶದ ಹಣದ ಮೌಲ್ಯ ಕಡಿಮೆಯಾಗಿರುತ್ತದೆ.
ಕೇವಲ 100 ರೂಪಾಯಿಯಲ್ಲಿ ನೀವು ಭಾರತದಲ್ಲಿ ಒಂದು ಒಳ್ಳೆಯ ಊಟ ಮಾಡಬಹುದು. ಹಾಗೆ ಆದ್ರೆ ಕೆಲವೊಂದು ದೇಶದಲ್ಲಿ ನಮ್ಮ ಈ 100 ರೂಪಾಯಿಯಿಂದ ಬಹಳಷ್ಟು ಕೆಲಸ ಮಾಡಬಹುದು. ಈ ದೇಶದಲ್ಲಿ ನಮ್ಮ ರೂಪಾಯಿಯೇ ಕಿಂಗ್. ಹಾಗಾದ್ರೆ ಅಂತಹ ದೇಶಗಳು ಯಾವುದು? ಯಾವ ದೇಶದಲ್ಲಿ ನಮ್ಮ ರೂಪಾಯಿಗೆ ರಾಜ ಮರ್ಯಾದೆ ಇದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇರಾನ್
ಇರಾನ್‌ನಲ್ಲಿ ಭಾರತೀಯ ರೂಪಾಯಿಯು ಗಮನಾರ್ಹವಾಗಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ, ಭಾರತದ 1 ರೂಪಾಯಿ ಅಲ್ಲಿ ಸರಿ ಸುಮಾರು 500.61 ಇರಾನ್ ರಿಯಾಲ್ ಆಗಿದೆ. ಹೀಗಾಗಿ ಅಲ್ಲಿ ನಮ್ಮ ರೂಪಾಯಿ ಬಹಳ ಕೆಲಸ ಮಾಡುತ್ತದೆ. ಇರಾನಿನ ರಿಯಾಲ್‌ನ ಕಡಿಮೆ ಮೌಲ್ಯವು ಪ್ರಾಥಮಿಕವಾಗಿ ಆರ್ಥಿಕ ನಿರ್ಬಂಧಗಳು ಮತ್ತು ಹಣದುಬ್ಬರಕ್ಕೆ ಕಾರಣವಾಗಿದೆ. ನೀವು 100 ರೂಪಾಯಿಂದ ಸುಮಾರು 50,061 IRR ಅನ್ನು ಪಡೆಯಬಹುದು. ಈ ಹಣದಲ್ಲಿ ನೀವು ಬಹುತೇಕ ಶಾಪಿಂಗ್ ಮುಗಿಸಬಹುದು. ಊಟ, ಬಟ್ಟೆಗೆ ಈ ಹಣ ಸಾಕಾಗುತ್ತದೆ.
ಇರಾನ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಪ್ರಯಾಣ ಬೆಳೆಸಹುದು. ಭಾರತದ 3 ಸಾವಿರ ರೂಪಾಯಿ ಇದ್ದರೆ ಹೋಟೆಲ್, ಊಟ, ಸಾರ್ವಜನಿಕ ಸಾರಿಗೆಯಂತಹ ಎಲ್ಲಾ ಸೌಲಭ್ಯ ಪಡೆಯಬಹುದು.
ವಿಯೆಟ್ನಾಂ
ಭಾರತೀಯ ರೂಪಾಯಿ ವಿಯೆಟ್ನಾಮ್ ಡಾಂಗ್ (VND) ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಅಲ್ಲಿ ದಾಖಲೆ ಪ್ರಮಾಣದ ಹಣದುಬ್ಬರ ನೋಡಬಹುದು. ಹೀಗಾಗಿ ಭಾರತದ 1 ರೂಪಾಯಿ ಅಲ್ಲಿನ 299.3 VND ಗೆ ಸಮನಾಗಿರುತ್ತದೆ. ಡಾಂಗ್ ಅನ್ನು ಜಾಗತಿಕವಾಗಿ ಕಡಿಮೆ ಬೆಲೆಬಾಳುವ ಕರೆನ್ಸಿಗಳಲ್ಲಿ ಒಂದಾಗಿದೆ. 100 ರೂಪಾಯಿಗೆ ಸುಮಾರು 29,930 VND ವಸ್ತುಗಳನ್ನು ಖರೀದಿಸಬಹುದು. ಇದು ವಿಯೆಟ್ನಾಂನಲ್ಲಿ ಬಹುತೇಕ ಎಲ್ಲಾ ನಿಮ್ಮ ಬೇಡಿಕೆಗಳ ಇಡೇರಿಸಲಿದೆ.
ಇಂಡೋನೇಷ್ಯಾ
ಇಂಡೋನೇಷ್ಯಾದಲ್ಲಿ ಇಂಡೋನೇಷಿಯನ್ ರುಪಿಯಾ (IDR) ಗಿಂತ ರೂಪಾಯಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಭಾರತೀಯ 1 ರೂಪಾಯಿ ಅಲ್ಲಿನ 200 IDR ಗೆ ಸಮನಾಗಿರುತ್ತದೆ.
ಪಾಕಿಸ್ತಾನ
ಪಾಕಿಸ್ತಾನದಲ್ಲಿ ವಿನಿಮಯ ದರವು ಸರಿಸುಮಾರು ಅಲ್ಲಿನ 1 ರೂಪಾಯಿ ನಮ್ಮ 0.29ಗೆ ಸಮನಾಗಿದೆ. ಹೀಗಾಗಿ ಭಾರತೀಯ ರೂಪಾಯಿ ಬಲಶಾಲಿಯಾಗಿದ್ದು, ಹೀಗಾಗಿ ಪಾಕಿಸ್ತಾನದಲ್ಲಿ 100 ರೂಪಾಯಿಗೆ ಬಹಳಷ್ಟು ವಸ್ತು ಖರೀದಿಸಬಹುದು.
ಬಾಂಗ್ಲಾದೇಶ
ಬಾಂಗ್ಲಾದೇಶದಲ್ಲಿ ಭಾರತೀಯ ರೂಪಾಯಿ ಗಮನಾರ್ಹ ಮೌಲ್ಯವನ್ನು ಹೊಂದಿದೆ 1 BDTಗೆ ಸರಿಯಾಗಿ 0.75 ರೂಪಾಯಿ ಆಗಿದೆ. ಬಾಂಗ್ಲಾದೇಶದ ಟಕಾದ ಕಡಿಮೆ ಮೌಲ್ಯವು ಆರ್ಥಿಕ ಸವಾಲುಗಳು ಮತ್ತು ಹಣದುಬ್ಬರದ ಒತ್ತಡಗಳಿಂದಾಗಿ. ಈ ದೇಶಗಳಲ್ಲಿ ಭಾರತೀಯ ರೂಪಾಯಿಯ ಮೂಲಕವೇ ನಾವು ವ್ಯಹಹಾರ ಮಾಡಬಹುದಾಗಿದೆ.
ಕಾಂಬೋಡಿಯಾ
ಕಾಂಬೋಡಿಯಾದಲ್ಲಿ ಭಾರತೀಯ ರೂಪಾಯಿಯು ಕಾಂಬೋಡಿಯನ್ ರಿಯಲ್ (KHR) ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ದೇಶವು ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಂದಾಗಿ ರಿಯಲ್‌ನ ಈ ಕಡಿಮೆ ಮೌಲ್ಯಮಾಪನವಾಗಿದೆ. 100 ರೂಪಾಯಿಯಿಂದ ನೀವು 5,000 KHR ಪಡೆಯಬಹುದು.
ಶ್ರೀಲಂಕಾ
ಭಾರತೀಯ ರೂಪಾಯಿಯು ಶ್ರೀಲಂಕಾದಲ್ಲಿ ಸುಮಾರು 1 LKR = 0.25 INR ನಲ್ಲಿ ಸಿಗುತ್ತದೆ ಹಾಗೆ ನೇಪಾಳದಲ್ಲಿಯೂ 1 NPR = 1.6 INR ಮೌಲ್ಯದಲ್ಲಿ ವ್ಯವಹಾರ ಮಾಡಲಾಗುತ್ತದೆ.



Click it and Unblock the Notifications











