Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ 5 ರಾಶಿಯವರು ಆಹಾರದ ವಿಚಾರದಲ್ಲಿ ತುಂಬಾನೇ ಚ್ಯೂಸಿ!
ಹೆಚ್ಚಿನವರಿಗೆ ಫುಡ್ ಕ್ರೇಜ್ ಇದ್ದೇ ಇರುತ್ತೆ. ತರಹೇವಾರಿ ಆಹಾರಗಳನ್ನು ಟೇಸ್ಟ್ ಮಾಡೋದಕ್ಕೆ ಇಷ್ಟ ಪಡ್ತಾರೆ. ಕೆಲವರಿಗೆ ಸಿಹಿ ಅಂದ್ರೆ ಇಷ್ಟ. ಇನ್ನೂ ಕೆಲವರಿಗೆ ಖಾರ ಖಾರವಾಗಿ ಆಹಾರಗಳನ್ನು ತುಂಬಾನೇ ಇಷ್ಟ ಪಟ್ಟು ತಿನ್ನುತ್ತಾರೆ. ಆದ್ರೆ ಸ್ವಲ್ಪ ಮಂದಿಗೆ ಯಾವ ಆಹಾರಗಳು ಇಷ್ಟ ಆಗೋದಿಲ್ಲ.
ಆಹಾರದ ವಿಚಾರದಲ್ಲಿ ಅವರು ತುಂಬಾನೇ ಚ್ಯೂಸಿಯಾಗಿರ್ತಾರೆ. ಸಿಕ್ಕ ಸಿಕ್ಕ ಆಹಾರಗಳನ್ನು ಅವರು ತಿನ್ನೋದಿಲ್ಲ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರು ಆಹಾರದ ವಿಚಾರದಲ್ಲಿ ತುಂಬಾನೇ ಚ್ಯೂಸಿಯಾಗಿರ್ತಾರೆ ಅನ್ನೋದನ್ನು ತಿಳಿಯೋಣ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಪ್ರತಿಯೊಂದು ವಿಚಾರದಲ್ಲಿ ತುಂಬಾನೇ ಸೂಕ್ಷ್ಮ. ಅವರು ಸಣ್ಣ-ಪುಟ್ಟ ವಿಚಾರಗಳಿಗೂ ತುಂಬಾನೇ ಆಧ್ಯತೆ ನೀಡುತ್ತಾರೆ. ಈ ರಾಶಿಯವರು ಆಹಾರದಲ್ಲಿ ಶುಚಿತ್ವ, ತಾಜಾತನ ಮತ್ತು ಸಮತೋಲಿತ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆರೋಗ್ಯಕರ ಆಹಾರಗಳೇ ಇವರ ಮೊದಲ ಆಯ್ಕೆಯಾಗಿರುತ್ತದೆ. ಪದಾರ್ಥಗಳ ಗುಣಮಟ್ಟಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಆಹಾರ ವಿಚಾರದಲ್ಲಿ ಇವರು ಕಂಪ್ರೊಮೈಸ್ ಮಾಡಿಕೊಳ್ಳೋದಿಲ್ಲ. ಉನ್ನತ ಗುಣಮಟ್ಟವನ್ನು ಪೂರೈಸಲು ವಿಫಲವಾದಲ್ಲಿ ಇವರು ಆಹಾರವನ್ನು ಸೇವಿಸದೇ ಅರ್ಧದಲ್ಲೇ ಎದ್ದು ಹೋಗುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ಆಹಾರ ಪ್ರಿಯರು ಎಂಬ ಖ್ಯಾತಿಯನ್ನು ಪಡೆದಿರುತ್ತಾರೆ. ಆದರೆ ಅವರು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಅವರು ಸಾಕಷ್ಟು ಕಾಳಜಿವಹಿಸುತ್ತಾರೆ. ಅವರು ಉತ್ತಮ ಗುಣಮಟ್ಟದ ಊಟವನ್ನು ಮೆಚ್ಚುತ್ತಾರೆ. ಆಹಾರದ ರುಚಿ ಹಾಗೂ ಗುಣ ಮಟ್ಟದ ವಿಚಾರದಲ್ಲಿ ಇವರು ಕಾಂಪ್ರಮೈಸ್ ಆಗೋದಿಲ್ಲ.ವೃಷಭ ರಾಶಿಯವರು ಉತ್ತಮ ಗುಣಮಟ್ಟದ ಆಹಾರವನ್ನು ಮಾತ್ರ ಮೆಚ್ಚುತ್ತಾರೆ. ಎಷ್ಟೇ ಹಸಿವಾದರೂ ಕೂಡ ಅಶುದ್ಧವಾಗಿ ಕಾಣುವ ಆಹಾರಗಳನ್ನು ಸೇವನೆ ಮಾಡೋದಿಲ್ಲ. ತಮಗೆ ಇಷ್ಟವಾದ ಆಹಾರಕ್ಕೆ ಮಾತ್ರ ಇವರು ಮೊದಲ ಆಧ್ಯತೆ ನೀಡುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಆಹಾರದ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಇವರು ಹೊಸ ಹೊಸ ಆಹಾರಗಳನ್ನು ಟೇಸ್ಟ್ ಮಾಡೋದಕ್ಕೆ ಇಷ್ಟ ಪಡೋದಿಲ್ಲ. ತಮಗಿಷ್ಟವಾದ ನಿರ್ದಿಷ್ಟ ಆಹಾರವನ್ನು ಮಾತ್ರ ಪ್ರತಿ ಸಾರಿ ತಿನ್ನುತ್ತಾರೆ. ಶುಚಿ ಹಾಗೂ ರುಚಿಗೆ ಇವರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕರ್ಕಾಟಕ ರಾಶಿಯವರು ಕೂಡ ಆಹಾರದ ಗುಣಮಟ್ಟದ ವಿಚಾರದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳೋದಿಲ್ಲ. ಇಷ್ಟ ಆಗದೇ ಇದ್ರೆ ಆಹಾರವನ್ನು ಸೇವಿಸೋದಿಲ್ಲ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಆಹಾರದ ಆಯ್ಕೆಗಳನ್ನು ಒಳಗೊಂಡಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಗೌರವಿಸುತ್ತಾರೆ. ಅವರು ತಮ್ಮ ಊಟದ ವಿಶೇಷ ಕಾಳಜಿ ಹಾಗೂ ವಿವೇಚನೆಯನ್ನು ಹೊಂದಿದ್ದಾರೆ. ಇಷ್ಟವಾಗುವ ಆಹಾರವನ್ನು ಮಾತ್ರ ಸೇವನೆ ಮಾಡುತ್ತಾರೆ. ಯಾರದೋ ಒತ್ತಾಯಕ್ಕಾಗಿ ಊಟದ ವಿಚಾರಕ್ಕೆ ಕಾಂಪ್ರಮೈಸ್ ಮಾಡಿಕೊಳ್ಳೋದಿಲ್ಲ. ನಾಲಗೆಗೆ ರುಚಿಸಬೇಕು ಹಾಗೂ ಶುಚಿಯಾಗಿರೋ ಆಹರ ಮಾತ್ರ ಇವರಿಗೆ ಇಷ್ಟ ಆಗುತ್ತದೆ. ನೈರ್ಮಲ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಆಹಾರ ಸೇರಿದಂತೆ ಜೀವನದ ಪ್ರತಿಯೊಂದು ವಿಚಾರದಲ್ಲೂ ತುಂಬಾನೇ ಚ್ಯೂಸಿಯಾಗಿರ್ತಾರೆ. ಎಲ್ಲಂದರಲ್ಲಿ ಹೋಗಿ ಊಟ ಸೇವನೆ ಮಾಡಿ ಬರುವವರಲ್ಲ ಇವರು. ತಮಗೆ ಇಷ್ಟ ಆಗೋ ಜಾಗದಲ್ಲಿ ಮಾತ್ರ ತಿನ್ನುತ್ತಾರೆ. ಇನ್ನೂ ದುಬಾರಿ ಊಟದ ಕಡೆಗೆ ಇವರು ಒಲವು ತೋರೋದಿಲ್ಲ. ಒಟ್ಟಿನಲ್ಲಿ ಉತ್ತಮ ಆಹಾರ ಸಿಗಬೇಕು ಅಂತ ಮಾತ್ರ ಇವರು ಬಯಸುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಫುಡ್ ಕ್ರೇಜ್ ತುಂಬಾನೇ ಇದೆ. ಆದರೆ ತಿನ್ನೋ ವಿಚಾರದಲ್ಲಿ ಇವರು ತುಂಬಾನೇ ಚ್ಯೂಸಿ. ಆಹಾರದಲ್ಲಿ ಕೊಂಚ ದೋಷವಿದ್ದರೂ ಕೂಡ ಇವರು ಒಪ್ಪಿಕೊಳ್ಳೋದಕ್ಕೆ ಸಿದ್ಧರಿರೋದಿಲ್ಲ. ಶುಚಿತ್ವ ಹಾಗೂ ಗುಣಮಟ್ಟದ ಆಹಾರ ಸೇವನೆಗೆ ಮೊದಲ ಆಧ್ಯತೆ ನೀಡುತ್ತಾರೆ.



Click it and Unblock the Notifications

