Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ವೈಯಕ್ತಿಕ ಜೀವನದಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಾರೆ!
ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನ ಅನ್ನೋದು ಇದ್ದೇ ಇರುತ್ತೆ. ಅದರೊಳಗಡೆ ಯಾರಿಗೂ ಎಂಟ್ರಿ ಇರೋದಿಲ್ಲ. ಮನೆಯವರಾಗಲಿ ಅಥವಾ ಬಾಳ ಸಂಗಾತಿಗಾಗಲಿ ಅದರಿಂದ ದೂರ ಇರಲೇಬೇಕು. ಎಷ್ಟೋ ಸಲ ಒಂಟಿಯಾಗಿ ಇದ್ದು ಬಿಡೋಣ ಅನ್ನಿಸಿಬಿಡುತ್ತೆ. ಆಗ ಸಮಯದಲ್ಲಿ ನಾವು ಏನನ್ನಾದರೂ ಯೋಚಿಸುತ್ತಾ ಇರುತ್ತೇವೆ. ಅಥವಾ ನಮ್ಮ ಸಮಯವನ್ನು ಆರಾಮಾಗಿ ಕಳೆಯುತ್ತೇವೆ. ಕೆಲ ರಾಶಿಯವರಂತೂ ಈ ವೈಯಕ್ತಿಕ ಜೀವನವನ್ನು ಹೆಚ್ಚು ಬಯಸುತ್ತಾರಂತೆ. ಅಷ್ಟಕ್ಕು ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅವರು ತಮ್ಮ ಜೀವನದ ಪ್ರತಿಯೊಂದು ವಿಚಾರವನ್ನು ಗೌಪ್ಯವಾಗಿ ಇಡುತ್ತಾರೆ. ಇವರು ತುಂಬಾ ಶಾಂತ ಸ್ವಭಾವದವರು. ಹಾಗೂ ಪ್ರತಿಯೊಂದು ವಿಚಾರದಲ್ಲೂ ಗೌಪ್ಯತೆ ಕಾಯ್ದುಕೊಳ್ಳೋದಕ್ಕೆ ಬಯಸುತ್ತಾರೆ. ಇವರ ವೈಯಕ್ತಿಕ ಜೀವನದ ಒಳಗಡೆ ಅಷ್ಟು ಸುಲಭವಾಗಿ ಯಾರಿಗೂ ಪ್ರವೇಶ ಇರೋದಿಲ್ಲ. ಯಾವುದೇ ವಿಚಾರವನ್ನಾಗಲಿ ಇವರು ಮುಕ್ತವಾಗಿ ಹಂಚಿಕೊಳ್ಳೋದಿಲ್ಲ.

ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ವೈಯಕ್ತಿಕ ಜೀವನದಲ್ಲಿ ಖಾಸಗಿತನವನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಸಮಸ್ಯೆಗಳನ್ನು ಬೇರೆಯವರ ಬಳಿ ಹಂಚಿಕೊಳ್ಳೋದಿಲ್ಲ. ಬದಲಾಗಿ ಆ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ. ಈ ರಾಶಿಯವರು ಸುಲಭವಾಗಿ ಯಾರನ್ನೂ ನಂಬೋದಿಲ್ಲ. ಬೇರೆಯವರ ನಡೆತೆಯಲ್ಲಾಗುವ ಸೂಕ್ಷ್ಮ ವ್ಯತ್ಯಾಸಗಳನ್ನು ಇವರು ಗಮನಿಸುತ್ತಾರೆ. ತಮ್ಮ ಖಾಸಗಿತನವನ್ನು ಗೌರವಿಸದ ಜನರನ್ನು ಇವರು ಸಹಿಸಲಾರರು.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ವೈಯಕ್ತಿಕ ಜೀವನದಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಾರೆ. ಇವರು ಒಂಟಿಯಾಗಿ ಕೆಲಸ ಮಾಡೋದ್ರಲ್ಲಿ ಸುಖವನ್ನು ಕಾಣುತ್ತಾರೆ. ಅದ್ರಲ್ಲೇ ಸಂತೋಷ ಪಡುತ್ತಾರೆ. ಬೇರೆಯವರು ತಮ್ಮ ಕೆಲಸವನ್ನು ಮಾಡಿಕೊಡಲಿ ಎಂದು ಇವರು ಬಯಸೋದಿಲ್ಲ. ಕನ್ಯಾ ರಾಶಿಯವರು ತಮ್ಮ ಜೀವನದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.
ಮೀನ ರಾಶಿ
ಮೀನ ರಾಶಿಯವರು ತುಂಬಾ ಜನರೊಂದಿಗೆ ಬರೆಯೋದಕ್ಕೆ ಇಷ್ಟ ಪಡೋದಿಲ್ಲ. ಅಪರಿಚಿತರನ್ನು ಹತ್ತಿರಕ್ಕೂ ಸೇರಿಸೋದಿಲ್ಲ. ಇವರು ತಮಗೆ ಸ್ನೇಹಿತರು ಇದ್ದರೂ ಕೂಡ ಎಲ್ಲಾ ವಿಚಾರವನ್ನು ಅವರ ಬಳಿ ಶೇರ್ ಮಾಡಿಕೊಳ್ಳೋದಿಲ್ಲ. ಹೀಗಾಗಿ ತಮ್ಮ ಕೆಲಸವನ್ನು ತಾವೇ ಮುಗಿಸಿ ಅದ್ರಲ್ಲೇ ಖುಷಿಯನ್ನು ಕಂಡುಕೊಳ್ಳುತ್ತಾರೆ. ಜನರನ್ನು ಅಷ್ಟು ಸುಲಭವಾಗಿ ನಂಬೋದಿಲ್ಲ. ಹೀಗಾಗಿ ಹೆಚ್ಚು ಜನರನ್ನು ತಮ್ಮ ಹತ್ತಿರಕ್ಕೆ ಸೇರಿಸಿಕೊಳ್ಳೋದಿಲ್ಲ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಒಂಟಿಯಾಗಿರೋದಕ್ಕೆ ಇಷ್ಟ ಪಡುತ್ತಾರೆ. ತಮಗಾಗಿ ಸಮಯವನ್ನು ಮೀಸಲಿಡುತ್ತಾರೆ. ಇವರು ಒಬ್ಬರೇ ಇದ್ದರೂ ಕೂಡ ಸಮಸ್ಯೆಗಳನ್ನು ದೈರ್ಯದಿಂದ ಎದುರಿಸುತ್ತಾರೆ. ಹೆಚ್ಚು ಜನರ ಸಂಘ ಇವರಿಗೆ ಇಷ್ಟ ಆಗೋದಿಲ್ಲ. ಹೀಗಾಗಿ ಕೆಲವೇ ಕೆಲವು ಸ್ನೇಹಿತರು ಮಾತ್ರ ಇವರಿಗೆ ಇರುತ್ತಾರೆ. ಇನ್ನೂ ವೈಯಕ್ತಿಕ ವಿಚಾರಕ್ಕೆ ಬಂದಾಗ ಆಪ್ತ ಸ್ನೇಹಿತರ ಜೊತೆಗೂ ಕೂಡ ಯಾವುದೇ ವಿಚಾರವನ್ನು ಇವರು ಹಂಚಿಕೊಳ್ಳೋದಿಲ್ಲ.



Click it and Unblock the Notifications