Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 18ರಿಂದ ಉಚ್ಛಭಾವದಲ್ಲಿ ಶನಿ ಸಂಚಾರ: ಈ ರಾಶಿಗಳಿಗೆ ತುಂಬಾನೇ ಅದೃಷ್ಟ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಚಲನೆಗಳು ಕೆಲವು ರಾಶಿಯವರಿಗೆ ಅನುಕೂಲಕರವಾಗಿಯೂ ಮತ್ತೂ ಕೆಲವು ರಾಶಿಗಳಿಗೆ ಅನಾನುಕೂಲಕರವಾಗಿಯೂ ಇರುತ್ತದೆ.
ಮಾರ್ಚ್ 18 ರಂದು ಕರ್ಮಫಲಧಾತ ಶನಿಯು ತನ್ನ ಸ್ವಂತ ರಾಶಿಯಾದ ಕುಂಭರಾಶಿಯಲ್ಲಿ ಉಚ್ಛಭಾವದಲ್ಲಿ ಸಂಚಾರ ಆರಂಭಿಸಲಿದ್ದಾನೆ.

ಹೌದು, ಮಾರ್ಚ್ 18 ರಂದು ಶನಿಯು ತನ್ನ ರಾಶಿಚಕ್ರಕ್ಕೆ ಅಸಾಧಾರಣವಾಗಿ ಚಲಿಸಲು ಆರಂಭಿಸಿರುವುದರಿಂದ ಇದರ ಪ್ರಭಾವ ಪ್ರತಿಯೊಂದು ರಾಶಿ ಚಕ್ರದ ಮೇಲೆ ಇರಲಿದೆ. ಆದರೆ ವಿಶೇಷವಾಗಿ ಈ ನಾಲ್ಕು ರಾಶಿಯವರು ಶನಿ ದೇವನ ಚಲನೆಯಿಂದ ಹೆಚ್ಚು ಲಾಭನ್ನು ಪಡೆಯಲಿದ್ದಾರೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುದು? ಆ ನಾಲ್ಕು ರಾಶಿಯವರಿಗೆ ಶನಿದೇವ ಯಾವ ರೀತಿ ಅದೃಷ್ಟ ಹಾಗೂ ಸಂಪತ್ತನ್ನು ಹೊತ್ತು ತರಲಿದ್ದಾನೆ ಅನ್ನೋದನ್ನ ನೋಡೋಣ.

ಕುಂಭ ರಾಶಿ
ಶನಿಯು ಅಸಾಧಾರಣ ರೂಪವನ್ನು ಪಡೆಯುತ್ತಿರುವುದರಿಂದ ಕುಂಭ ರಾಶಿಯವರಿಗೆ ತುಂಬಾನೇ ಅನುಕೂಲಕರ ಕಾಲವಾಗಿದೆ. ಶನಿ ದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಶಶ ಮತ್ತು ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಇದರಿಂದಾಗಿ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ. ಕಮಿಷನ್ ಏಜೆಂಟ್ ಅಥವಾ ಸಲಹೆಗಾರರಾಗಿ ಕೆಲಸ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಪ್ರತಿಫಲವನ್ನು ನಿರೀಕ್ಷಿಸಬಹುದು. ಆದರೆ ನಿಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು. ಅವಿವಾಹಿತರಿಗೆ ಮದುವೆಯ ಪ್ರಸ್ತಾಪವಾಗುವ ಸಾಧ್ಯತೆಗಳಿದೆ.

ವೃಷಭ ರಾಶಿ
ಶನಿಯ ಈ ಪ್ರಬಲ ಪಾತ್ರವು ವೃಷಭ ರಾಶಿಯವರಿಗೆ ಖಂಡಿತ ಶುಭ ಫಲವನ್ನು ಹೊತ್ತುತರುತ್ತದೆ. ಶನಿಯು ನಿಮ್ಮ ಸಂಕ್ರಮಣ ಮನೆಯಲ್ಲಿ ಶಶಾ ಮತ್ತು ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸಿರುವುದರಿಂದ ನೀವು ನಿಮ್ಮ ತಂದೆಯ ವಾತ್ಸಲ್ಯವನ್ನು ಪಡೆಯುತ್ತೀರಿ. ಇನ್ನು ಮುಂದೆ ನಿಮ್ಮ ಸಂಪಾದನೆ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ಗಣತೆ ಇನ್ನೂ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ಲಾಭ ದೊರೆಯುತ್ತದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಇನ್ನೂ ವಿದೇಶಿ ಪ್ರವಾಸ ಯೋಗವಿದೆ. ಹಾಗೂ ಸರ್ಕಾರದಿಂದ ಪ್ರಯೋಜನವನ್ನು ಪಡೆಯುವ ಸಾಧ್ಯತೆಗಳು ವೃಷಭ ರಾಶಿಯವರಿಗೆ ಇದೆ.

ತುಲಾ ರಾಶಿ
ಶನಿಯ ಪ್ರಭಾವಿ ರೂಪವು ತುಲಾ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಶನಿಯು ನಿಮ್ಮ ಸಂಕ್ರಮಣ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಯಾರೆಲ್ಲಾ ಸಂಶೋಧನೆ, ಆಧ್ಯಾತ್ಮಿಕತೆ, ತತ್ವಶಾಸ್ತ್ರ ವಿಜ್ಞಾನ ಮತ್ತು ವೈದ್ಯಕೀಯದಲ್ಲಿ ತೊಡಗಿದ್ದಾರೋ ಅವರಿಗೆಲ್ಲಾ ಇದು ಶುಭಕಾಲ. ಇನ್ನೂ ಶೇರುಮಾರುಕಟ್ಟೆ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಅನುಕೂಲಕರ ಸಮಯವಾಗಿದೆ. ಪ್ರೀತಿಯ ವಿಚಾರದಲ್ಲಿ ಯಾವುದೇ ಅಡೆತಡೆಗಳು ಎದುರಾಗೋದಿಲ್ಲ ಯಶಸ್ವಿಯಾಗುತ್ತೀರಿ. ಮಕ್ಕಳನ್ನು ಹೊಂದಲು ಬಯಸುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ.

ಮಕರ ಸಂಕ್ರಾಂತಿ
ಶನಿಯು ಪ್ರಭಾವಶಾಲಿಯಾಗುವುದರಿಂದ ಮಕರ ರಾಶಿಯವರಿಗೆ ಅನೇಕ ಶುಭ ಫಲಗಳಿದೆ. ಶನಿಯ ಅನುಗ್ರಹದಿಂದಾಗಿ ನಿಮಗೆ ಆರ್ಥಿಕ ನೆರವು ಸಿಗಲಿದೆ. ಹೀಗಾಗಿ ನಿಮ್ಮೆಲ್ಲಾ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿದೆ. ನೀವು ಒತ್ತಡದಿಂದ ಮುಕ್ತರಾಗುತ್ತೀರಿ ಹಾಗೂ ನಿಮ್ಮಲ್ಲಿನ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಈ ಬಾರಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಹೂಡಿಕೆಗಳೆಲ್ಲಾ ಯಶಸ್ವಿಯಾಗಿ ಲಾಭ ತರಲಿದೆ. ಯಾರೆಲ್ಲಾ ಪೆಟ್ರೋಲಿಯಂ, ಕಬ್ಬಿಣ ಮತ್ತು ತೈಲ ವ್ಯಾಪಾರ ಮಾಡುತ್ತಿದ್ದಾರೋ ಅವರ ವ್ಯಾಪಾರ ಖಂಡಿತ ಏಳಿಗೆಯಾಗುತ್ತದೆ. ನಿಮಗೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಒಟ್ಟಿನಲ್ಲಿ ಮುಂದಿನ ಮೂರು ತಿಂಗಳು ಬಹಳ ಮಂಗಳಕರವಾಗಿರುತ್ತದೆ.



Click it and Unblock the Notifications