Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಇಂಗ್ಲೀಷ್ ವರ್ಣಮಾಲೆಯಲ್ಲಿ ಇರೋದು 26 ಅಲ್ಲ 27 ಅಕ್ಷರ: ಈ ಸತ್ಯ ನಿಮಗೆ ಗೊತ್ತಾ?
ಇಂಗ್ಲೀಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಈ ಪ್ರಶ್ನೆಯನ್ನ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಕೇಳಿದ್ರು ಸುಲಭವಾಗಿ 26 ಎಂಬ ಉತ್ತರ ಹೇಳುತ್ತವೆ. ಇದನ್ನೇ ನಾವು ಸಹ ತಿಳಿದಿದ್ದೇವೆ. ಅಲ್ಲರು ಇಂಗ್ಲೀಷ್‌ನಲ್ಲಿ ಓದಿರೋದು 26 ಅಕ್ಷರಗಳು ಮಾತ್ರ. ಆದ್ರೆ ನಾವಿಂದು ಹೇಳುತ್ತೇವೆ ಕೇಳಿ. ಇಂಗ್ಲೀಷ್‌ನಲ್ಲಿ ಇರೋದು 26 ಅಕ್ಷರಗಳಲ್ಲ ಬದಲಿಗೆ 27 ಅಕ್ಷರಗಳು.
ಹೌದು ನಿಮಗೆ ಅಚ್ಚರಿಯಾಗಬಹುದು. ಇಂಗ್ಲೀಷ್ ವರ್ಣಮಾಲೆಯಲ್ಲಿ 27 ಅಕ್ಷಗಳಿದ್ದವು. ಆದರೆ ನಾವಿಂದು ಬರಿ 26 ಅಕ್ಷರಗಳ ಓದುತ್ತೇವೆ. ಹಾಗಾದ್ರೆ ಮರೆಯಾದ ಆ ಅಕ್ಷರ ಯಾವುದು? ವರ್ಣಮಾಲೆಯಿಂದ ಆ ಅಕ್ಷರ ಮಾಯವಾಗಿದ್ದು ಏಕೆ?, ಆ ಅಕ್ಷರ ಯಾವುದು? ಏಕೆ ಅದನ್ನು ವರ್ಣ ಮಾಲೆಯಲ್ಲಿ ಬಳಸಲಿಲ್ಲ ಎಂಬ ಅದ್ಭುತ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.

ನೀವು ಹಲವು ಬಾರಿ ಇಂಗ್ಲೀಷ್ ಹಾಗೂ ಕನ್ನಡ ಅಕ್ಷರಗಳ ಬರೆಯುವಾಗ & ಈ ರೀತಿಯ ಪದ ಅಥವಾ ಚಿಹ್ನೆಯನ್ನು ಉಪಯೋಗಿಸಿರುತ್ತೀರಿ, ಇದು ಮತ್ತು ಎಂಬ ಪದ ಅಥವಾ ಇಂಗ್ಲೀಷ್‌ನಲ್ಲಿ 'And' ಎಂದು ಬರೆಯುವ ಪರ್ಯಾಯವಾಗಿ ಬಳಸುತ್ತೇವೆ. ಆದರೆ ಈ ಅಕ್ಷರವೇ ಇಂಗ್ಲೀಷ್ ವರ್ಣಮಾಲೆಯ 27ನೇ ಪದವಾಗಿತ್ತು.
ಈ ಚಿಹ್ನೆಯನ್ನು ಇಂಗ್ಲೀಷ್‌ನಲ್ಲಿ 'ಆಂಪರ್ಸಂಡ್ 27 ನೇ ಅಕ್ಷರ' ಎಂದು ಕರೆಯಲಾಗಿತ್ತು. ಈ ಅಕ್ಷರವು ಇಂಗ್ಲೀಷ್‌ನ Z ಅಕ್ಷರದ ಬಳಿಕ ಬಳಕೆಯಲ್ಲಿತ್ತು. ಆದರೆ ವರ್ಣಮಾಲೆಯನ್ನು ಓದುವಾಘ Z ಅಕ್ಷರದ ಬಳಿಕ ಈ ಪದ ಓದುವ ಅಗತ್ಯವಿರಲಿಲ್ಲ ಏಕೆಂದರೆ Z ಬಳಿಕ ಕೊನೆಯದಾಗಿ ಈ ಪದ ಹೇಳಬೇಕಿತ್ತು. ಆದರೆ ಉದ್ದವಾದ ಹೆಸರಿನಿಂದ ಈ ಅಕ್ಷರ ಕರೆಯಲ್ಪಡುತ್ತಿತ್ತು.
ಆದರೆ ವರ್ಣಮಾಲೆಯನ್ನು ಪಠಿಸುವಾಗ, ವಿದ್ಯಾರ್ಥಿಗಳಿಗೆ Z ನಂತರ 'ಮತ್ತು' ಎಂದು ಹೇಳಲು ಅವಕಾಶವಿರಲಿಲ್ಲ. ಬದಲಿಗೆ, 'ಪರ್ ಸೆ' ಎಂದು ಹೇಳುವ ಮೂಲಕ ಚಿಹ್ನೆಯನ್ನು ಪ್ರತ್ಯೇಕಿಸಲು ಅವರಿಗೆ ಕಲಿಸಲಾಯಿತು ಅದು ಈ ರೀತಿಯ ಧ್ವನಿಯನ್ನು ಕೇಳುತ್ತದೆ Q R S T U V W X Y Z &. ಮತ್ತು 'ಪರ್ ಸೆ &' ಆಂಪರ್ಸಂಡ್ ಎಂದು ಹೇಳಬೇಕಿತ್ತು.
ಆದರೆ 19ನೇ ಶತಮಾನದಲ್ಲಿ ಈ ಪದ ಬಳಕೆ ಕಡಿಮೆಯಾಗಿತ್ತು. ಆದರೆ ಆಂಪರ್ಸಂಡ್ ಎಂಬ ಪದವು ಮೊದಲ ಬಾರಿಗೆ ಇಂಗ್ಲಿಷ್ ಭಾಷೆಯಲ್ಲಿ 1835 ರಲ್ಲಿ ಕಾಣಿಸಿಕೊಂಡಿತು ಮತ್ತು ಅದನ್ನು ತನ್ನದೇ ಆದ ಅಕ್ಷರವಾಗಿ ಬಳಸಲಾಯಿತು. ಅದನ್ನು 19 ನೇ ಶತಮಾನದ ಬ್ರಿಟಿಷ್ ವಿದ್ಯಾರ್ಥಿಗಳಿಗೆ z ನಂತರ ವರ್ಣಮಾಲೆಯ 27 ನೇ ಅಕ್ಷರವಾಗಿ ಕಲಿಸಲಾಯಿತು.
ಆದರೆ 1835ರಲ್ಲಿ ಇಂಗ್ಲೀಷ್ ವರ್ಣಮಾಲೆಗೆ ಹೊಸ ರೂಪ ನೀಡಲಾಗಿತ್ತು. ಈ ವೇಳೆ ಕೊನೆಯ ಅಕ್ಷರವಾಗಿದ್ದ & ಯನ್ನು ಕೈಬಿಡಲಾಗಿತ್ತು. ಈ ಅಕ್ಷರ ವರ್ಣಮಾಲೆಯಿಂದ ಕೈಬಿಟ್ಟು ಸಾಂಪ್ರದಾಯಿಕವಾಗಿ ವಾಕ್ಯ ರಚನೆಯಲ್ಲಿ ಮಾತ್ರ ಬಳಸಲು ನಿರ್ಧರಿಸಲಾಗಿತ್ತು. ಇದಾದ ಬಳಿಕ ದಶಕಗಳು ಕಳೆದಂತೆ ಈ ಅಕ್ಷರವು ಚಿಹ್ನೆಯಾಗಿ ಮಾರ್ಪಟ್ಟಿತು. ಮತ್ತು ಎಂದು ಸೇರಿಸುವ ಕಡೆಗಳಲ್ಲಿ ಈ ಚಿಹ್ನೆ ಬಳಕೆ ಮಾಡಲಾಗುತ್ತಿತ್ತು.
ಆದರೆ ಮುಂದಿನ ದಿನದಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲೂ ಸಹ ಈ ಚಿಹ್ನೆ ಬಳಕೆ ಆರಂಭಾಗಿತ್ತು, ಆದರೆ ಕಾಲ ನಂತರ ಈ ಚಿಹ್ನೆಯ ಬಳಕೆಯು ಕಡಿಮೆಯಾಗಿದೆ. ಇಂಗ್ಲೀಷ್‌ನಿಂದ ಈ ಚಿಹ್ನೆ ಮರೆಯಾಗಿದ್ದು, ಈಗ ಈ ಚಿಹ್ನೆಗೆ ಅಷ್ಟೊಂದು ಮಹತ್ವವಿಲ್ಲ. ಆದರೆ ಇಂಗ್ಲೀಷ್ ವರ್ಣಮಾಲೆಯಲ್ಲಿ 27ನೇ ಅಕ್ಷರವಾಗಿ ಈ ಚಿಹ್ನೆ ಬಳಕೆಯಲ್ಲಿತ್ತು ಎಂಬುದು ಹಲವರಿಗೆ ತಿಳಿದಿಲ್ಲದ ಅಚ್ಚರಿಯಾಗಿತ್ತು.



Click it and Unblock the Notifications

