Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಇದು ವಿಶ್ವದ ಅತ್ಯಂತ ಹಿರಿಯ ಮೊಸಳೆ: 6 ಮಂದಿ ಪತ್ನಿಯರು 1,000 ಮಕ್ಕಳು..!!
ಪ್ರಾಣಿಗಳ ಪ್ರಪಂಚದಲ್ಲಿ ಎಷ್ಟೊಂದು ವಿಚಿತ್ರ, ವಿಭಿನ್ನ, ವಿಶೇಷ ಘಟನೆಗಳು ನಡೆಯುತ್ತವೆ ಅನ್ನೋದನ್ನ ನಾವು ಊಹಿಸೋದು ಸಹ ಕಷ್ಟವಾಗಿರುತ್ತೆ. ಏಕಂದ್ರೆ ಅಲ್ಲಿ ಸಾವಿರಾರು ಕೋಟಿ ಜೀವರಾಶಿಗಳ ನೆಲೆಯಾಗಿರುತ್ತೆ. ಇನ್ನು ವಿಶ್ವದಲ್ಲಿ ಅತ್ಯಂತ ಸುದೀರ್ಘ ವರ್ಷ ಬದುಕುವ ಪ್ರಾಣಿ ಎಂದರೆ ಅದು ಆಮೆ ಎಂದು ನೀವು ಹೇಳಬಹುದು. ಆದ್ರೆ ಸಮುದ್ರದಲ್ಲಿ ಸಿಗುವಂತಹ ಕಪ್ಪೆ ಚಿಪ್ಪಿನೊಳಗಿರುವ ಆ ಪುಟ್ಟ ಜೀವಿ ಸುಮಾರು 500 ವರ್ಷಗಳ ಕಾಲ ಬದುಕುತ್ತಂತೆ.
ಆದ್ರೆ ಭೂಮಿ ಮೇಲಿನ ಇಲ್ಲೊಂದು ಮೊಸಳೆ ಈಗ ದೀರ್ಘಕಾಲ ಬದುಕಿರುವ ಪ್ರಾಣಿ ಎಂಬ ಬಿರುದು ಪಡೆದುಕೊಂಡಿದೆ. ಸುಮಾರು 700 ಕೆ.ಜಿ ತೂಗುವ ಈ ಬೃಹತ್ ಮೊಸಳೆ 123 ವರ್ಷ ಕಳೆದಿದೆ. ಇದು 16 ಅಡಿ ಉದ್ದವಿದ್ದು ನರಭಕ್ಷಕ ಎಂದು ಕುಖ್ಯಾತಿ ಸಹ ಈ ಮೊಸಳೆಗಿದೆ. ಹೆನ್ರಿ ಎಂದು ಕರೆಯಲಾಗುವ ಈ ಮೊಸಳೆಯ ಕಥೆಯನ್ನ ನೀವು ನೋಡಿ.

ಈ ಮೊಸಳೆ ನದಿ ತೀರವಾಗಿರುವ ಹಾಗೂ ಯುನೆಸ್ಕೋ ಪಾರಂಪರಿಕ ಪಟ್ಟಿಗಳ ತಾಣವಾಗಿರುವ ಬೋಟ್ಸ್ವಾನಾದ ಒಕಾವಾಂಗೋ ಡೆಲ್ಟಾ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದು ಡಿಸೆಂಬರ್ 16 1900ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಂದ ಈ ಮೊಸಳೆಯನ್ನು ತರಲಾಗಿತ್ತು. ಈಗ ಅತ್ಯಂತ ದೊಡ್ಡ ಕೋರೆ ಹಲ್ಲು ಹಾಗೂ ಉದ್ದದ ಬಾಲ ಹೊಂದಿರುವ ಏಕೈಕ ಮೊಸಳೆ ಇದು.
ಸದ್ಯ ಈ ಮೊಸಳೆಗೆ ಬರೊಬ್ಬರಿ 6 ಮಡದಿಯರಿದ್ದು 10 ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು ಹೊಂದಿದೆ. 1900 ರ ದಶಕದ ಆರಂಭದಲ್ಲಿ, ಬೋಟ್ಸ್ವಾನಾದ ಸ್ಥಳೀಯ ಬುಡಕಟ್ಟು ಜನಾಂಗದವರಲ್ಲಿ ಹೆನ್ರಿ ಕುಖ್ಯಾತಿ ಗಳಿಸಿತ್ತು. ಬುಡಕಟ್ಟು ಜನರು ಊಟಕ್ಕಾಗಿ ಅಲೆದಾಡುವಾಗ ಹಾಗೂ ನೀರಿನ ಮೂಲ ಹುಡುಕುವಾಗ ಈ ಮೊಸಳೆ ಆ ಬುಡಕಟ್ಟಿನ ಹಲವು ಜನರನ್ನು ತಿಂದುಬಿಟ್ಟಿತ್ತು. ಹೀಗಾಗಿ ಈ ಮೊಸಳೆಯನ್ನ ನರಭಕ್ಷಕ ರಾಕ್ಷಸ ಅಂತಲೇ ಕರೆಯುತ್ತಿದ್ದರು.
ಹೀಗಾಗಿ ಈ ಮೊಸಳೆ ಹಿಡಿಯಬೇಕು ಎಂದು ತಜ್ಞರ ತಂಡ ಯೋಚಿಸಿತ್ತು. ಹೀಗಾಗಿ ಪ್ರಸಿದ್ಧ ಬೇಟೆಗಾರ ಸರ್ ಹೆನ್ರಿ ನ್ಯೂಮನ್ ಅವರ ಸಹಾಯ ಕೋರಲಾಗಿತ್ತು. ಮೊದಲಿಗೆ ಈ ಮೊಸಳೆಯನ್ನ ಗುಂಡಿಟ್ಟು ಕೊಲ್ಲಲು ನಿರ್ಧರಿಸಲಾಗಿತ್ತು. ಆದ್ರೆ ಹೆನ್ರಿ ಅವರ ಪ್ರಕಾರ ಈ ಮೊಸಳೆಯನ್ನು ಹಿಡಿದು ರಕ್ಷಿಸಿದರೆ ಮುಂದೆ ದೊಡ್ಡ ಆಕರ್ಷಣೆಯಾಗಲಿದೆ ಎಂಬ ಸೂಚನೆ ನೀಡಿದರು ಅವರ ಸೂಚನೆಯ ಮೇರೆಗೆ ಈ ಮೊಸಳೆಯನ್ನು ಸೆರೆಹಿಡಿಯಲಾಗಿತ್ತು. ಹಾಗೆ ಈ ಮೊಸಳೆಗೆ ಅವರ ಹೆಸರನ್ನೇ ಇಡಲಾಗಿತ್ತು.
ಕಳೆದ ಮೂರು ದಶಕಗಳಿಂದ, ಹೆನ್ರಿ ದಕ್ಷಿಣ ಆಫ್ರಿಕಾದ ಸ್ಕಾಟ್‌ಬರ್ಗ್‌ನಲ್ಲಿರುವ ಕ್ರೋಕ್‌ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ನೆಲೆಸಿದೆ. ಆದ್ರೆ ಹಿಂದೆ ನರಭಕ್ಷಕನಾಗಿದ್ದ ಹೆನ್ರಿ ಈಗ ಸಂಪೂರ್ಣ ಬದಲಾಗಿದೆ, ಇಲ್ಲಿ ಆತನ ಸಂರಕ್ಷಕರು ಹೇಳಿದ್ದಂತೆ ಕೇಳಿಕೊಂಡಿದೆ. ಅಲ್ಲದೆ ಉಳಿದ ಮೊಸಳೆಗಳ ಮೇಲೂ ದಾಳಿ ಮಾಡದೆ ಹೊಂದಿಕೊಂಡಿದೆ. ಹೀಗಾಗಿ ಇದು ಇಲ್ಲಿನ ಸಿಬ್ಬಂದಿಯ ಅಚ್ಚುಮೆಚ್ಚಿನ ಮೊಸಳೆಯಾಗಿ ಬದಲಾಗಿದೆ.
ಇದು ನೈಲ್ ಮೊಸಳೆಗಳ ಜಾತಿಗೆ ಸೇರಿದೆ. ಸಾಮಾನ್ಯ ಈ ಜಾತಿಯ ಮೊಸಳೆಗಳು ಅದರಲ್ಲೂ ಗಂಡು ಮೊಸಳೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಆಫ್ರಿಕಾದ ಸುಮಾರು 26 ದೇಶಗಳಲ್ಲಿ ಈ ಮೊಸಳೆ ಕಂಡುಬರುತ್ತದೆ. ಅದರಲ್ಲೂ ಇವು ಉತ್ತಮ ಉಗ್ರ ರೂಪಕ್ಕೆ ಹೆಸರಾಗಿವೆ, ಆಫ್ರಿಕಾದಲ್ಲಿ ಪ್ರತಿ ವರ್ಷ ನೂರಾರು ಮಂದಿ ಸಾವಿಗೆ ಈ ನೈಲ್ ಮೊಸಳೆಗಳು ಕಾರಣವಾಗಿವೆ.
ಹೆನ್ರಿ ಅತ್ಯಂತ ಹಳೆಯ ಮೊಸಳೆಯಾಗಿದ್ದರೆ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕ್ಯಾಸಿಯಸ್ ಎಂಬ ಮೊಸಳೆ ಅತ್ಯಂತ ದೊಡ್ಡ ಮೊಸಳೆಯಾಗಿದೆ. ಇದು 16 ಅಡಿ ಉದ್ದದ ಉಪ್ಪು ನೀರಿನ ಮೊಸಳೆಯಾಗಿದೆ. ಇದನ್ನು 1984ರಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಕರಾವಳಿಯ ಗ್ರೀನ್ ಐಲ್ಯಾಂಡ್‌ನಲ್ಲಿರುವ ಮರೈನ್ ಲ್ಯಾಂಡ್ ಮೊಸಳೆ ಕೇಂದ್ರದ ಪ್ರಮುಖ ಆಕರ್ಷಣೀಯ ಪ್ರಾಣಿ ಇದಾಗಿದೆ.



Click it and Unblock the Notifications
