Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
60ನೇ ಮೊಟ್ಟೆ ಇಟ್ಟ ವಿಶ್ವದ ಅತ್ಯಂತ ಹಿರಿಯ ಪಕ್ಷಿ..! ಈ ವಿಸ್ಡಮ್ ಹಕ್ಕಿ ಬಗ್ಗೆ ನಿಮಗೆ ಗೊತ್ತಾ?
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಯಾರು ಎಂದು ಕೇಳಿದ್ರೆ ಹಲವರು ಜಪಾನ್‌ನ ಟೊಮಿಕೊ ಇಟೂಕಾ ಹೆಸರು ಹೇಳುತ್ತೇವೆ. ಆತನಿಗೆ ಬರೋಬ್ಬರಿ 116 ವರ್ಷ. ಇದಕ್ಕಿಂತ ಹೆಚ್ಚು ವರ್ಷ ಬದುಕಿದರು ಕೂಡ ನಮ್ಮ ನಡುವೆ ಇರಬಹುದು. ಇನ್ನು ಅತೀ ಹೆಚ್ಚು ಬದುಕಿರುವ ಪಕ್ಷಿ ಯಾವುದು ಅಂದ್ರೆ ನಿಮಗೆ ಗೊತ್ತಾ?
ಹೌದು ವಿಶ್ವದಲ್ಲೇ ಅತ್ಯಂತ ಹಿರಿಯ ಪಕ್ಷಿ ಅಂದ್ರೆ ವಿಸ್ಡಂಮ್ ಎಂಬ ಪಕ್ಷಿ. ಕಡಲು ಕೋಳಿ ಜಾತಿಗೆ ಸೇರಿರುವ ಈ ವಿಸ್ಡಮ್ ಪಕ್ಷಿ ವಿಶ್ವದ ಅತ್ಯಂತ ಹಿರಿಯ ಪಕ್ಷಿಯಾಗಿದೆ. ಈ ಪಕ್ಷಿಗೆ ಈಗ ಬರೋಬ್ಬಿ 74 ವರ್ಷ. ಹೌದು 74 ವರ್ಷದ ಅತ್ಯಂತ ಹಿರಿಯ ಪಕ್ಷಿ ಇದು. ಈ ಪಕ್ಷಿ ಯಾವುದೇ ಝೂನಲ್ಲಿ ಇಲ್ಲ ಬದಲಿಗೆ ಕಾಡಿನಲ್ಲಿ ಇಂದಿಗೂ ಬದುಕಿದೆ.

ಅದಕ್ಕೂ ಅಚ್ಚರಿ ಎಂದರೆ ಈ ಪಕ್ಷಿ ಈಗ ತನ್ನ 74ನೇ ವಯಸ್ಸಿನಲ್ಲಿ 60ನೇ ಮೊಟ್ಟೆ ಇಟ್ಟಿದೆ. ಈ ಪಕ್ಷಿ ತನ್ನ ಜೀವಿತಾವಧಿಯಲ್ಲಿ ಈಗ 60ನೇ ಮೊಟ್ಟೆ ಇಟ್ಟಿದೆ ಎಂದು ವರದಿಯಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೊಟ್ಟೆ ಇಟ್ಟಿದೆ ಎಂದು ಯುಎಸ್ ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಸ್ಡಮ್ ಎಂಬ ಹೆಸರಿನ ಉದ್ದನೆಯ ರೆಕ್ಕೆಯ ಕಡಲ ಹಕ್ಕಿಯು ಹವಾಯಿಯನ್ ದ್ವೀಪಸಮೂಹದ ವಾಯುವ್ಯ ಅಂಚಿನಲ್ಲಿರುವ ಮಿಡ್‌ವೇ ಅಟಾಲ್ ರಾಷ್ಟ್ರೀಯ ವನ್ಯಜೀವಿ ಆಶ್ರಯದಲ್ಲಿ ನೆಲೆಸಿದೆ. ಒಂದು ಅಂದಾಜಿನ ಪ್ರಕಾರವಾಗಿ ಇದು ಈಗ ತನ್ನ 60ನೇ ಮೊಟ್ಟೆ ಇಟ್ಟಿದೆ. ಈ ಕುರಿತು ಯುಎಸ್ ಮೀನು ಮತ್ತು ವನ್ಯಜೀವಿ ಸೇವೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ.
2006 ರಿಂದ ವಿಸ್ಡಮ್ ಮತ್ತು ಅದರ ಸಂಗಾತಿಯಾದ ಅಕೆಕಮೈ, ಪೆಸಿಫಿಕ್ ಮಹಾಸಾಗರದ ಅಟಾಲ್‌ಗೆ ಮೊಟ್ಟೆಗಳನ್ನು ಇಡಲು ಮತ್ತು ಮರಿ ಮಾಡಲು ಹಿಂದಿರುಗಿದ್ದವು. ಈ ಜಾತಿಯ ಪಕ್ಷಿ ವರ್ಷಕ್ಕೆ ಒಂದು ಬಾರಿ ಮಾತ್ರ ಮೊಟ್ಟೆ ಇಡುತ್ತವೆ. ಆದರೆ ವಿಸ್ಡಮ್ ಪಕ್ಷಿಯ ಜೊತೆಗಾರ ಅಕೆಕಮೈ ಹಲವಾರು ವರ್ಷಗಳಿಂದ ಕಾಣಿಸುತ್ತಿರಲಿಲ್ಲ. ಹೀಗಾಗಿ ಅಕೆಕಮೈ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿತ್ತು. ಹೀಗಾಗಿ 4 ವರ್ಷಗಳಿಂದ ಈ ವಿಸ್ಡಮ್ ಮೊಟ್ಟೆಯನ್ನೇ ಇಟ್ಟಿರಲಿಲ್ಲ.
ಹೀಗಾಗಿ ವಿಸ್ಡಮ್ ಪಕ್ಷಿ ಇನ್ನು ಮುಂದೆ ಮೊಟ್ಟೆ ಇಡುವುದಿಲ್ಲ ಎಂದೇ ತಜ್ಞರು ಹೇಳಿದ್ದರು. ಅದು ಹೊಸ ಜೊತೆಗಾರನ ಹುಡುಕಿಯೂ ಇರಲಿಲ್ಲವಂತೆ. ಹೀಗೆ 74 ವರ್ಷದಲ್ಲಿ ಈಗ ಮತ್ತೆ ತನ್ನ 60ನೇ ಮೊಟ್ಟೆ ಇಟ್ಟಿದೆ. ಸದ್ಯ ಈ ಮೊಟ್ಟೆಯಿಂದ ಮರಿಯಾಗುವ ನಿರೀಕ್ಷೆ ಇಡಲಾಗಿದೆ. ಈ ವಿಸ್ಡಮ್ ಇಟ್ಟಿದ್ದ 59 ಮೊಟ್ಟೆಗಳಲ್ಲಿ ಬಹುತೇಕ ಉಳಿದು ಮರಿಯಾಗಿ ದೊಡ್ಡದಾಗಿವೆಯಂತೆ. ಇದೊಂದೇ ಪಕ್ಷಿ ತನ್ನ ಜಾತಿಯ ಪಕ್ಷಿ ಉಳಿವಿಗೆ ಅನನ್ಯ ಕೊಡುಗೆ ನೀಡಿದೆ.
ಈಗ ಇಟ್ಟಿರುವ ಮೊಟ್ಟೆ ಮರಿಯಾಗಬೇಕಾದರೆ ಬರೋಬ್ಬರಿ 2 ತಿಂಗಳ ಕಾಲ ಕಾಯಬೇಕಾಗುತ್ತದೆ. ಮೊಟ್ಟೆಯೊಡೆದು ಮರಿಗಳು ಹೊರಬಂದ ಸುಮಾರು 6 ತಿಂಗಳ ಬಳಿಕ ಅವು ಸಮುದ್ರದಲ್ಲಿ ತಮ್ಮ ಜೀವನ ನಡೆಸಲು ಹಾರಾಡುತ್ತವೆ. ಅಲ್ಲಿಯವರೆಗೂ ತಾಯಿಯೇ ಆಹಾರ ನೀಡಬೆಕಾಗುತ್ತದೆ. ಪ್ರತಿ ವರ್ಷ ಅವು ಮೊದಲೇ ನಿರ್ಧರಿತ ಆಗಿದ್ದ ಸ್ಥಳಕ್ಕೆ ಬಂದು ಗೂಡು ಕಟ್ಟಿ ಅಲ್ಲಿಯೇ ಮೊಟ್ಟೆ ಇಟ್ಟು ನಂತರ ಮತ್ತೆ ತಮ್ಮ ಸ್ಥಳಕ್ಕೆ ಹೋಗುತ್ತವೆ. ಹೆಚ್ಚಿನದಾಗಿ ಇವು ಮುಕ್ತವಾದ ಸಮುದ್ರ ತೀರವನ್ನು ಮೊಟ್ಟೆ ಇಡಲು ಆಯ್ಕೆ ಮಾಡಿಕೊಳ್ಳುತ್ತವೆ. ಈ ವಿಸ್ಡಮ್ ಪಕ್ಷಿಯ 30ಕ್ಕೂ ಹೆಚ್ಚು ಮರಿಗಳನ್ನು ಈಗಲೂ ಗುರುತಿಸಲಾಗುತ್ತಿದೆ ಎಂದು ತಿಳಿದುಬಂದಿದೆ.



Click it and Unblock the Notifications
