Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಟೈಟಾನಿಕ್ ದುರಂತದ ಬಳಿಕ ಸಿಕ್ಕ ಗಡಿಯಾರ ಹರಾಜು..! ಖರೀದಿಸಿದ ಮೊತ್ತ ಎಷ್ಟು ಗೊತ್ತಾ?
ನಿಮಗೆ ಟೈಟಾನಿಕ್ ಹಡಗಿನ ಬಗ್ಗೆ ಖಂಡಿತ ಗೊತ್ತಿರುತ್ತೆ. ಅತ್ಯಂತ ಐಷಾರಾಮಿ ಹಾಗೂ ವಿಶಾಲವಾದ ಹಡಗು ನೀಲಿ ಸಮುದ್ರದಲ್ಲಿ ಮುಳುಗಿದ ದುರಂತವದು. ಸಾವಿರಾರು ಮಂದಿ ಸಾವಿಗೆ ಕಾರಣವಾದ ಹಡಗು ಈಗ ಇತಿಹಾಸ ಪುಟ ಸೇರಿಕೊಂಡಿದೆ. ಆದರೆ ಆ ಹಡಗಿನ ನೆನಪುಗಳು ಮಾತ್ರ ಆಗಾಗ ಕಾಡುತ್ತಲೇ ಇರುತ್ತವೆ.
ಈ ದುರಂತವನ್ನ ಆಧರಿಸಿ ಸಿನಿಮಾ ಕೂಡ ಹಾಲಿವುಡ್‌ನಲ್ಲಿ ತೆರೆಕಂಡು ದಾಖಲೆ ಬರೆದಿತ್ತು. ಈ ಸಿನಿಮಾ ಬಂದ ಮೇಲೆ ಟೈಟಾನಿಕ್ ಮತ್ತಷ್ಟು ಫೇಮಸ್ ಸಹ ಆಗಿತ್ತು. ಆದ್ರೆ ಇದಾಗ ದಶಕಗಳು ಕಳೆದ ಮೇಲೂ ಟೈಟಾನಿಕ್ ಮುಳುಗಿದ್ದ ಜಾಗದಿಂದ ಇಂದಿಗೂ ಅವಶೇಷಗಳ ಹೊರತೆಗೆಯಲಾಗುತ್ತದೆ.

ಇನ್ನು ಈಗಾಗಲೇ ಟೈಟಾನಿಕ್ ದುರಂತದಲ್ಲಿ ಮಡಿದವರು ಧರಿಸಿದ್ದ ಎಲ್ಲಾ ವಸ್ತುಗಳು ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸಮುದ್ರದಿಂದ ಹೊರೆತೆಗೆಯಲಾಗಿದೆ. ಜೊತೆಗೆ ಅಂತಹ ವಸ್ತುಗಳ ಹರಾಜು ಸಹ ಮಾಡಲಾಗಿದೆ. ಇದೀಗ ಟೈಟಾನಿಕ್ ಪ್ರಯಾಣಿಕರ ಮತ್ತೊಂದು ವಸ್ತು ದಾಖಲೆಯ ಮೊತ್ತಕ್ಕೆ ಹರಾಜಾಗಿದೆ.
ಚಿನ್ನದ ವಾಚ್ ಧರಿಸಿದ್ದ ವ್ಯಕ್ತಿ ಟೈಟಾನಿಕ್ ದುರಂತದಲ್ಲಿ ಮೃತಪಟ್ಟಿದ್ದು, ಆತ ಧರಿಸಿದ್ದ ಆ ಗಡಿಯಾರವನ್ನು ಈಗ ಹರಾಜು ಹಾಕಲಾಗಿದೆ. ಇಂಗ್ಲೆಂಡ್‌ನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದ್ದು, ಬರೋಬ್ಬರಿ 1.46 ಮಿಲಿಯನ್ ಡಾಲರ್‌ಗೆ (12 ಕೋಟಿ 17 ಲಕ್ಷ) ಖರೀದಿಯಾಗಿದೆ. ಈ ಸಣ್ಣ ಗಡಿಯಾರವು ಅಮೆರಿಕ ಮೂಲದ ಚಿನ್ನದ ವ್ಯಾಪಾರಿಯಾಗಿದ್ದ ಜಾನ್ ಜಾಕೋಬ್ ಆಸ್ಟರ್‌ಗೆ ಸೇರಿದ್ದಾಗಿದೆ.
ಆತ ಟೈಟಾನಿಕ್‌ನ ಎ ಗ್ರೇಡ್‌ನಲ್ಲಿ ಪ್ರಯಾಣಿಸುತ್ತಿದ್ದ. ಆದರೆ ದುರಂತದಲ್ಲಿ ಬದುಕುಳಿಯಲಿಲ್ಲ ಎಂದು ತಿಳಿದುಬಂದಿದೆ. ಏಪ್ರಿಲ 15 1912ರಲ್ಲಿ ಟೈಟಾನಿಕ್ ಮುಳುಗಿದ್ದಾಗ ಆಸ್ಟರ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವರಲ್ಲಿ ಒಬ್ಬರಾಗಿದ್ದರು. ಆತ ಅಮೆರಿಕನ್ ಚಿನ್ನದ ವ್ಯಾಪಾರದಲ್ಲಿ ಹೆಸರು ಗಳಿಸಿದ್ದ ಸಾವಿರಾರು ಕೋಟಿ ಆಸ್ತಿ ಅವನದ್ದಾಗಿತ್ತು, ಆತ ನ್ಯೂಯಾರ್ಕ್‌ಗೆ ಪ್ರಯಾಣಿಸುವ ಟೈಟಾನಿಕ್ ಹಡಗಿನಲ್ಲಿ ಎ ಗ್ರೇಡ್ ಪ್ರಯಾಣ ಆನಂದಿಸುತ್ತಿದ್ದ. ಆತ ಹಡಗು ದುರಂತದಲ್ಲಿ ಸಾಯುವಾಗ 47 ವರ್ಷವಾಗಿತ್ತು.
ಆತನ ಜೊತೆ ಪತ್ನಿ ಮೆಡೆಲೀನ್ ಸಹ ಪ್ರಯಾಣಿಸುತ್ತಿದ್ದಳು, ಆದರೆ ಮೊದಲು ಮಹಿಳೆಯರು ಲೈಫ್ ಜಾಕೆಟ್ ಧರಿಸಿ ಬೋಟ್‌ನಲ್ಲಿ ಸಾಗಬೇಕಾಗಿತ್ತು, ಹೀಗಾಗಿ ಆತನ ಪತ್ನಿ ಈ ದುರಂತದಲ್ಲಿ ಪಾರಾಗಿ ಉಳಿದಳು. ಈ ಗಡಿಯಾರವನ್ನು ಮೊದಲು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಬಳಿಕ ಆತನ ಮಗ ಅದನ್ನು ಧರಿಸಿದ್ದ, ಬಳಿಕ ಅದನ್ನು ಮತ್ತೆ ರಿಪೇರಿ ಮಾಡಲಾಗಿತ್ತು, ಬಳಿಕ ಈಗ ಹರಾಜು ಪ್ರಕ್ರಿಯೆ ನೆರವೇರಿಸಲಾಗಿದೆ.
ಇದಕ್ಕೂ ಮೊದಲು ಟೈಟಾನಿಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಧರಿಸಿದ್ದ ವಜ್ರದ ಉಂಗುರವನ್ನು ಸಹ ಹರಾಜು ಹಾಕಲಾಗಿತ್ತು. ಆಕೆಯ ಉಂಗುರದಲ್ಲಿ ಒಂದೇ ಒಂದು ಡೈಮಂಡ್ ಇತ್ತು. ಇದಿಷ್ಟೇ ಅಲ್ಲ ಟೈಟಾನಿಕ್ ಹಡಗಿನಲ್ಲಿದ್ದ ಪ್ರತಿಯೊಂದು ವಸ್ತುವನ್ನು ಹರಾಜು ಹಾಕಲಾಗುತ್ತಿದೆ. ಅವುಗಳನ್ನು ದಾಖಲೆಯ ಮಟ್ಟದ ಹಣ ನೀಡಿ ಖರೀದಿಸಲಾಗುತ್ತಿದೆ.
ಟೈಟಾನಿಕ್ ಮುಳುಗುವ ಹಿಂದಿನ ದಿನ ರಾತ್ರಿ ಏನಾಗಿತ್ತು?
1912ರಲ್ಲಿ ಉತ್ತರ ಅಟ್ಲಾಂಟಿಕ ಸಾಗರದಲ್ಲಿ ಟೈಟಾನಿಕ್ ಹಡಗು ಮುಳುಗಿತ್ತು. ಏಪ್ರಿಲ್ 10ರಂದು ನ್ಯೂಯಾರ್ಕ್ ಕಡೆಗೆ ಪ್ರಯಾಣ ಬೆಳೆಸಿದ್ದ ಟೈಟಾನಿಕ್ ಕೇವಲ 4 ದಿನದಲ್ಲಿ ಮಂಜುಗಡ್ಡೆಗೆ ಡಿಕ್ಕಿಯಾಗಿ ಸಂಪೂರ್ಣ ಮುಳುಗಿತ್ತು. ಆದರೆ ಹಡಗು ಮುಳುಗುವ ಮುನ್ನ ದಿನ ರಾತ್ರಿ ಹಡಗಿನಲ್ಲಿ ಭರ್ಜರಿ ಭೋಜನಕೂಟ ಏರ್ಪಡಿಸಲಾಗಿತ್ತು. ದುರಂತ ನಡೆಯುವ ಕೆಲವೇ ಗಂಟೆಗಳ ಮುನ್ನ ಹಡಗಿನಲ್ಲಿ ಭೋಜನ ಹಾಗೂ ಹಾಡು ನೃತ್ಯ ಮನರಂಜನ ಕಾರ್ಯಕ್ರಮಗಳು ನಡೆದಿದ್ದವು. ಇದಾದ ಬಳಿಕ ಟೈಟಾನಿಕ್ ಹಡಗು ಮುಳುಗಿತ್ತು. ಈ ಅಪಘಾತದಲ್ಲಿ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟರು.
ಟೈಟಾನಿಕ್ ಮುಳುಗಿ ಸಾವಿರಾರು ಜನ ಪ್ರಾಣ ಕಳೆದುಕೊಳ್ಳಲು ಹಡಗಿನಲ್ಲಿ ಲೈಫ್ ಜಾಕೆಟ್‌ಗಳ ಕೊರತೆ ಹಾಗೂ ರಕ್ಷಣಾ ದೋಣಿ ವ್ಯವಸ್ಥೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದು ಕಾರಣವಾಗಿತ್ತು.



Click it and Unblock the Notifications
