Latest Updates
-
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್ -
ಶಾರುಖ್-ಕರೀನಾ 'ಡ್ಯಾಡಿ ಕೂಲ್' ಹಾಡು ರಿಲೀಸ್: ರೀಲ್ಸ್ ಮಾಡಲು ರೆಡಿಯಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿಯಲ್ಲಿ ಚಳಿ, ಮಂಜಿನ ಆರ್ಭಟ: ಮನೆಯಲ್ಲೇ ಫಿಟ್ ಆಗಿರಲು ಸರಳ ವ್ಯಾಯಾಮಗಳು -
ಬ್ಲ್ಯಾಕ್ ಫ್ರೈಡೇ ಸೇಲ್: ಜಗಳವಿಲ್ಲದೆ ಶಾಪಿಂಗ್ ಮಾಡಲು ದಂಪತಿಗಳಿಗೆ ಇಲ್ಲಿದೆ 5 ಸಿಂಪಲ್ ಟಿಪ್ಸ್ -
ರಕ್ತಹೀನತೆ ಬಗ್ಗೆ ಆತಂಕ ಬೇಡ: ICMR SAMPADA ವರದಿಯ ಹೊಸ ಸತ್ಯಾಂಶ ಮತ್ತು ನಿಮ್ಮ ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು
ಮೂತ್ರದಲ್ಲಿ ಬೇಯಿಸಿದ ಮೊಟ್ಟೆ ಇಲ್ಲಿನ ರುಚಿಕರ ಆಹಾರ..! ಯಾಕೆ ಗೊತ್ತ?
ನೀವು ಚೈನೀಸ್ ಆಹಾರ ಪ್ರಿಯರಾಗಿರಬಹುದು. ಅದರಲ್ಲೂ ನೂಡಲ್ಸ್, ಗೋಬಿ ಹೀಗೆ ಒಂದಿಷ್ಟು ಆಹಾರಗಳು ಚೀನಿಯರ ಕೊಡುಗೆ. ಅವರ ಮಸಾಲೆಯುಕ್ತ ಆಹಾರ ಅಂದ್ರೆ ಎಲ್ಲರಿಗೂ ಇಷ್ಟ. ಹಾಗೆ ಎಲ್ಲರೂ ಇಷ್ಟಪಟ್ಟು ಸವಿಯುವ ಆಹಾರ ಇದು. ಆದ್ರೆ ಇದೇ ಚೀನಿ ಮಂದಿ ಆಹಾರವಾಗಿ ಹಾವು, ಕಪ್ಪೆ, ಜಿರಳೆ ಹೀಗೆ ಸಿಕ್ಕ ಸಿಕ್ಕ ಪ್ರಾಣಿಯನ್ನ ಸೇವಿಸುಸುವುದು ಸಹ ನಾವು ನೋಡಿದ್ದೇವೆ.
ಆದ್ರೆ ಇದು ಕೆಲವೊಮ್ಮೆ ನಮಗೂ ಅಚ್ಚರಿ ಎನಿಸಿತ್ತು. ಆದರೆ ಈಗ ಇದಕ್ಕಿಂತಲೂ ಅಚ್ಚರಿ ಸಂಗತಿಯೊಂದು ಬಯಲಾಗಿದೆ. ಚೀನಾದಲ್ಲಿ ಮೂತ್ರದ ಒಳಗೆ ಮೊಟ್ಟೆಗಳನ್ನು ಶೇಖರಿಸಿ ಇಟ್ಟು ಬಳಿಕ ಅದನ್ನು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಬಹಳ ಉತ್ತಮ ಎನ್ನುವುದು ಚೀನಿ ಮಂದಿಯ ವಾದವಾಗಿದೆ. ಚೈನೀಸ್ ಆಹಾರವು ಅದರ ವಿಶಿಷ್ಟ ಸುವಾಸನೆಗಾಗಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಚೌ ಮೇನ್, ಹಾಟ್ ಪಾಟ್, ಸ್ಪ್ರಿಂಗ್ ರೋಲ್ಗಳು, ಸೂಪ್, ಡಂಪ್ಲಿಂಗ್ಗಳು ಮತ್ತು ಇತರ ಭಕ್ಷ್ಯಗಳು ಬಹುತೇಕ ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಸ್ಥಾನ ಪಡೆದಿವೆ. ಆದರೆ ಇದಕ್ಕಿಂತ ವಿಚಿತ್ರ ಖಾದ್ಯ ನೀವೆಲ್ಲೂ ನೋಡಿರುವುದಿಲ್ಲ.

ಅಂತಹ ಒಂದು ಖಾದ್ಯವೆಂದರೆ ವರ್ಜಿನ್ ಬಾಯ್ ಮೊಟ್ಟೆಗಳು, ಇದು ಚೈನೀಸ್ ಜನರು ವಸಂತಕಾಲದಲ್ಲಿ ಲಘು ಆಹಾರವಾಗಿ ಆನಂದಿಸುವ ವಿಶಿಷ್ಟವಾದ ಸವಿಯಾದ ಪದಾರ್ಥವಾಗಿದೆ. ಅವರು ಅದನ್ನು ರುಚಿಕರವಾಗಿ ಮಾತ್ರವಲ್ಲ, ಆದರೆ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಶಾಲೆಯಿಂದ ಮಕ್ಕಳ ಮೂತ್ರ ಸಂಗ್ರಹ
ಪೂರ್ವ ಚೀನಾದ ನಗರವಾದ ಡೊಂಗ್ಯಾಂಗ್ನಲ್ಲಿ ಪ್ರಾಥಮಿಕ ಶಾಲೆಯ ಶೌಚಾಲಯಗಳಿಂದ ಬೇಸಿನ್ಗಳು ಮತ್ತು ಮೂತ್ರದ ಬಕೆಟ್ಗಳನ್ನು ಸಂಗ್ರಹಿಸಲಾಗುತ್ತದೆ, ಇದು ಈ ವಿಶಿಷ್ಟ ಭಕ್ಷ್ಯದ ಪ್ರಮುಖ ಅಂಶವಾಗಿದೆ. ಇದು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರ ಮೂತ್ರದಲ್ಲಿ ಮೊಟ್ಟೆಗಳನ್ನು ನೆನೆಸಿ ಮತ್ತು ಬೇಯಿಸುವ ಸ್ಥಳೀಯ ಸಂಪ್ರದಾಯವಾಗಿದೆ. ಮಕ್ಕಳ ಮೂತ್ರವನ್ನು ಒಂದು ದೊಡ್ಡ ಬಕೆಟ್ಗೆ ಹಾಕಿ ಶೇಖರಿಸಲಾಗುತ್ತದೆ. ಬಳಿಕ ಬೇಯಿಸಿದ ಮೊಟ್ಟೆಯನ್ನು ಈ ಮೂತ್ರದಲ್ಲಿ ನೆನೆಸಿಡಲಾಗುತ್ತದೆ. ಈ ಕ್ರಮವನ್ನು ಅವರು ವರ್ಜಿನ್ ಬಾಯ್ ಎಗ್ ಎಂದು ಕರೆಯುತ್ತಾರೆ.
ಇದು ಚಿಕ್ಕ ಹುಡುಗನ ಮೂತ್ರವಾಗಿರಬೇಕೆಂಬುದರ ಹಿಂದೆ ಯಾವುದೇ ಕಾರಣವಿಲ್ಲದಿದ್ದರೂ, ವರ್ಜಿನ್ ಬಾಯ್ ಮೊಟ್ಟೆಗಳನ್ನು ಮೂತ್ರದ ಪಾತ್ರೆಗಳಲ್ಲಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ, ಇದು ತಯಾರಿಸಲು ಇಡೀ ದಿನವನ್ನು ತೆಗೆದುಕೊಳ್ಳುತ್ತದೆ. ಅವರು ಸ್ಪಷ್ಟವಾಗಿ ಮೊಟ್ಟೆಗಳನ್ನು ನೆನೆಸಿ ನಂತರ ಮೂತ್ರದ ಪಾತ್ರೆಯಲ್ಲಿ ಹಸಿ ಮೊಟ್ಟೆಗಳನ್ನು ಕುದಿಸುತ್ತಾರೆ. ಕೆಲವೊಮ್ಮೆ ಈಗಾಗಲೇ ಕುದಿಸಿ ಬೇಯಿಸಿರುವ ಮೊಟ್ಟಯನ್ನು ಮೂತ್ರದಲ್ಲಿ ನನೆಸಿಡುತ್ತಾರೆ.
ವರ್ಜಿನ್ ಬಾಯ್ ಮೊಟ್ಟೆಗಳನ್ನು ಮಾರಾಟ ಮಾಡುವ ಸ್ಥಳೀಯ ಮಾರಾಟಗಾರರ ಪ್ರಕಾರ, ಈ ಮೊಟ್ಟೆಯು ಕೀಲು ನೋವುಗಳನ್ನು ತೊಡೆದುಹಾಕುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಮೊಟ್ಟೆ ಸೇವನೆಯು ತೂಕ ಹೆಚ್ಚಳ, ಮಾಂಸ ಖಂಡ ಬಲವಾಗುವುದು, ಮೂಳೆಗಳ ಬಲವಾಗುವುದು ಸೇರಿ ಹಲವು ರೀತಿಯ ಉಪಯೋಗ ಹೊಂದಿದೆ.
ಈ ಮೊಟ್ಟೆಗಳು ಮಾರುಕಟ್ಟೆಯ ಅತ್ಯಂತ ಬೇಗ ಮಾರಾಟವಾಗುತ್ತದೆ. ಅಲ್ಲದೆ ಶಾಲೆಗಳಲ್ಲಿ ಮಕ್ಕಳ ಮೂತ್ರ ವ್ಯರ್ಥವಾಗಂತೆ ನೋಡಿಕೊಳ್ಳಲಾಗುತ್ತದೆ. ಮಕ್ಕಳಿಗೂ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತದೆ. ಅವರು ಕೂಡ ಈ ಮೊಟ್ಟೆಗಳ ಸೇವೆನೆಗೆ ಪ್ರೇರೇಪಿಸಲಾಗುತ್ತದೆ. ಈ ಮೊಟ್ಟೆಗಳನ್ನು ಹಲವು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಅಲ್ಲಿನ ಜನ ಇದನ್ನು ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದ ಜೊತೆಗೆ ಸವಿಯುತ್ತಾರೆ, ಇನ್ನು ಯಾರಾದರು ಕಾಯಿಲೆಗೆ ಒಳಗಾದಾಗಲು ಇದೇ ಅವರ ಪ್ರಮುಖ ಆಹಾರವಾಗಿರುತ್ತದೆ.



Click it and Unblock the Notifications
