Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿಶ್ವದ ಶ್ರೀಮಂತ ವ್ಯಕ್ತಿ ಮಸ್ಕ್, ಅಂಬಾನಿ ಅಲ್ಲವೇ ಅಲ್ಲ..! ಈ ಮಹಿಳೆ ಆಸ್ತಿ ಬಗ್ಗೆ ಕೇಳಿದ್ದೀರಾ..!?
ವಿಶ್ವದ ಶ್ರೀಮಂತ ವ್ಯಕ್ತಿ ಯಾರು ಅಂತ ಕೇಳಿದ್ರೆ ಥಟ್ ಅಂತ ನಾವು ಹೇಳೋದು ಎಲೋನ್ ಮಸ್ಕ್, ಲೂಯಿ ವಿಟಾನ್ ಮಾಲೀಕ ಅರ್ನಾಲ್ಡ್ ಬರ್ನಾಲ್ಟ್, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಹೆಸರನ್ನ. ಜನರಿಗೂ ಇವರನ್ನು ಹೊರತುಪಡಿಸಿ ಮತ್ತೊಂದಿಷ್ಟು ಹೆಸರುಗಳ ಪರಿಚಯ ಇರುತ್ತೆ ಅಷ್ಟೇ.
ಆದ್ರೆ ನಿಮಗೆ ಗೊತ್ತಾ ವಿಶ್ವದ ಶ್ರೀಮಂತ ವ್ಯಕ್ತಿ ಇವರು ಯಾರು ಅಲ್ವಂತೆ. ವಿಶ್ವದ ಶ್ರೀಮಂತ ಮಹಿಳೆ ಚೀನಾದಲ್ಲಿ ಬದುಕಿದ್ದಳಂತೆ. ಹೌದು ಇದೇನು ಇತಿಹಾಸದಲ್ಲಿ ಬರದಿರುವ ಕಥೆ ಅಲ್ಲ. ಆಕೆ ಚೀನಾದ ರಾಜ ವಂಶಸ್ಥೆ ವೂ ಜೆಟೈನ್. ಈಕೆ ಹೆಸರನ್ನು ನೀವು ಕೇಳಿರಲು ಸಹ ಸಾಧ್ಯವಿಲ್ಲ. ಏಕಂದ್ರೆ ಈ ರಾಜವಂಶ ಈಗ ಅಧಿಕಾರದಲ್ಲೂ ಇಲ್ಲ. ಅವರ ಬಗ್ಗೆ ನೀವು ಕೇಳಿರಲು ಸಾಧ್ಯವೂ ಇಲ್ಲ.
ಹಾಗಾದ್ರೆ ಆಕೆಯ ಸಂಪತ್ತು ಎಷ್ಟಿತ್ತು.? ವಿಶ್ವದ ಶ್ರೀಮಂತರನ್ನೇ ಮೀರಿಸುವ ಆಸ್ತಿ ಏನಾಯ್ತು? ಇದೆಲ್ಲ ಪ್ರಶ್ನೆಗಳಿಗೂ ಇಲ್ಲಿದೆ ನೋಡಿ ಉತ್ತರ.
ವರದಿಯ ಪ್ರಕಾರ, ವೂ ತನ್ನ ಕಾಲದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಬಿರುದನ್ನು ಹೊಂದಿದ್ದಳು, ಕೆಲವು ಇತಿಹಾಸಕಾರರು ಅವರು ಭೂಮಿಯ ಮೇಲೆ ವಾಸಿಸಿದ ಅತ್ಯಂತ ಶ್ರೀಮಂತ ಮಹಿಳೆ ಎಂದು ಪ್ರತಿಪಾದಿಸಿದ್ದಾರೆ. ಆಕೆಯ ಅಂದಾಜು ನಿವ್ವಳ ಮೌಲ್ಯ ಎಷ್ಟು ಅಂತ ತಿಳಿದರೆ ನೀವು ದಂಗಾಗುತ್ತೀರಿ.16 ಟ್ರಿಲಿಯನ್ ಅಮೆರಿಕನ್ ಡಾಲರ್ ಆಕೆಯ ಒಟ್ಟು ಆಸ್ತಿಯಾಗಿತ್ತು. ಇದು ಎಲಾನ್ ಮಸ್ಕ್, ಮುಖೇಶ್ ಅಂಬಾನಿ, ಜೆಫ್ ಬೆಜೋಸ್, ಅದಾನಿ ಆಸ್ತಿಯನ್ನೂ ಸೇರಿಸಿದ್ರು ಇಷ್ಟು ಆಸ್ತಿ ಆಗುವುದಿಲ್ಲ.

ಟ್ಯಾಂಗ್ ರಾಜವಂಶಕ್ಕೆ ಸೇರಿದ ವೂ ಅವರ ಸಂಪತ್ತು ಊಹಿಸಲು ಸಾಧ್ಯವಿಲ್ಲವಂತೆ. ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯ ಸುಮಾರು 229 ಶತಕೋಟಿ ಅಮೆರಿಕನ್ ಡಾಲರ್, ಜೆಫ್ ಬೆಜೋಸ್ USD 174 ಶತಕೋಟಿ, ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ, USD 106.2 ಶತಕೋಟಿ ನಿವ್ವಳ ಮೌಲ್ಯವನ್ನೂ ಮೀರಿಸಿದೆ.
ಇತಿಹಾಸಕಾರರು ವೂ ಅವರನ್ನು ಅತ್ಯಂತ ಚಾಣಾಕ್ಷ ರಾಜಮಾತೆ ಎಂದು ಕರೆದಿದ್ದಾರೆ. ಆಕೆ ಅಧಿಕಾರಕ್ಕಾಗಿ ತನ್ನ ಚಿಕ್ಕ ಮಗನನ್ನೇ ಕೊಲೆ ಮಾಡಿದ್ದಳು ಎಂಬ ಉಲ್ಲೇಖವಿದೆ. ಮಗ ಬೆಳೆದು ದೊಡ್ಡವನಾದರೆ ಆತ ಅಧಿಕಾರ ಕೇಳುತ್ತಾನೆ ಎಂದು ಆಕೆ ಈ ಕೃತ್ಯ ಮಾಡಿದ್ದಳು ಎನ್ನಲಾಗಿದೆ. ಅಲ್ಲದೆ ಆಕೆ ಸರ್ವಾಧಿಕಾರಿಯಾಗಿ ಇಡೀ ಚೀನಾವನ್ನ ಮುನ್ನಡೆಸಿದ್ದಳಂತೆ.
ಆಕೆಯ ಬಗ್ಗೆ ಕೆದಕಿದಷ್ಟೂ ಸಿಗಲಿದೆ ಅಚ್ಚರಿ
ವೂ ಮೂಲತಃ ಶಾಂಕ್ಸಿ ಪ್ರಾಂತ್ಯ, ಸಿಚುವಾನ್ ಅಥವಾ ಶಾಂಕ್ಸಿಯಲ್ಲಿ 17 ಫೆಬ್ರವರಿ ಕ್ರಿ.ಶ 624ರಲ್ಲಿ ಜನಿಸಿರಬಹುದು ಎಂದು ಸೂಚಿಸುತ್ತವೆ. ಆಕೆ ಚೆನ್ನಾಗಿ ಓದಿಕೊಂಡಿದ್ದರಿಂದ 14ನೇ ವಯಸ್ಸಿನಲ್ಲಿ ಟ್ಯಾಂಗ್ ಚಕ್ರವರ್ತಿ ತೈಜಾಂಗ್‌ನ ಸಾಮ್ರಾಜ್ಯಶಾಹಿಯ ಎರಡನೇ ಪತ್ನಿಯಾದಳು. ಅರಮನೆಯಲ್ಲಿ ಅವಳು ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಳು, ಇದು ಓದುವುದನ್ನು ಮುಂದುವರಿಸಲು ಮತ್ತು ಅವಳ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು.
ಚಕ್ರವರ್ತಿ ತೈಜಾಂಗ್ 649 ರಲ್ಲಿ ನಿಧನರಾದರು. ವೂ ಮಕ್ಕಳನ್ನು ಪಡೆದಿರಲಿಲ್ಲವಾದ್ದರಿಂದ, ಸಂಪ್ರದಾಯದ ಪ್ರಕಾರ ಅವಳು ತೈಜಾಂಗ್‌ನ ಮರಣದ ನಂತರ ಶಾಶ್ವತವಾಗಿ ಬೌದ್ಧ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಆದರೆ ಹೊಸ ಚಕ್ರವರ್ತಿಯಾಗಿದ್ದ ಗಾವೋಜಾಂಗ್ ಆಕೆಯನ್ನು ಮಠದಿಂದ ಮತ್ತೆ ಅರಮನೆಗೆ ಕರೆತಂದಿದ್ದ.
ಅರಮನೆಗೆ ಹಿಂದಿರುಗಿದ ಆಕೆ ತನ್ನ ಅಧಿಕಾರ ಚಲಾಯಿಸಲು ಮುಂದಾಗಿದ್ದಳು. ಗಾವೋಜಾಂಗ್‌ನ ಮೊದಲ ಪತ್ನಿ ವಾಂಗ್ ಏಕಾಏಕಿ ಮೃತಪಟ್ಟಳು. ಈ ಸಾವಿನ ಹಿಂದೆಯೂ ಈಕೆಯ ಕೈವಾಡವಿರಬಹುದು ಎಂದು ಶಂಕಿಸಲಾಯಿತು. ಇದಾದ ಬಳಿಕವೇ ವಾಂಗ್ ಬದಲಾಗಿ ವೂ ಆ ಸ್ಥಾನ ಅಲಂಕರಿಸಿದಳು. ಆದರೆ ರಾಜ ಗಾವೋಜಾಂಗ್ ಅನಾರೋಗ್ಯದಿಂದ ಅಧಿಕಾರವನ್ನು ಪತ್ನಿ ವೂ ಗೆ ಹಸ್ತಾಂತರಿಸಿದ. ಆದರೆ ಅಲ್ಲಿಂದ ಆಕೆಯ ಸರ್ವಾಧಿಕಾರ ಆರಂಭಗೊಂಡಿತ್ತು ಎಂದು ನಂಬಲಾಗಿದೆ.
ಆಕೆ ದೇಶದ ಎಲ್ಲಾ ಆಸ್ತಿಗಳ ಹೊಂದಿದ್ದಳು, ಇದೇ ಕಾಲದಲ್ಲಿ ಚೀನಾವು ಅತ್ಯಂತ ಶ್ರೀಮಂತ ಆರ್ಥಿಕತೆಯಾಗಿ ಬದಲಾಗಿತ್ತು. ಆಕೆ ಅದೆಷ್ಟು ಚಿನ್ನ ಧರಿಸುತ್ತಿದ್ದಳೆಂದರೆ ಆಕೆಯ ಅರಮನೆಯಲ್ಲಿ ಆಕೆ ಬಳಸುತ್ತಿದ್ದ ಎಲ್ಲಾ ವಸ್ತು ಚಿನ್ನದಿಂದ ಮಾಡಲ್ಪಟ್ಟಿತ್ತಂತೆ. ಈ ವೇಳೆ ವಿಶ್ವದ ಶೇ.23ರಷ್ಟು ಜಿಡಿಪಿ ಜೀನಾದಿಂದ ಬರುತ್ತಿತ್ತಂತೆ.
ವೂ ಕ್ರಿ.ಶ 705 ಡಿಸೆಂಬರ್ 16ರಂದು ಮೃತಪಟ್ಟಳು. ಇವಳ ಬಳಿಕ ಈ ರಾಜ ಮನೆತನ ಹಲವು ವರ್ಷ ಚೀನಾವನ್ನು ಆಳ್ವಿಕೆ ಮಾಡಿತ್ತು. ಆದ್ರೆ ಈ ರಾಜಮನೆತನದ ಆಸ್ತಿ ಕರಗುತ್ತಾ ಸಾಗಿತ್ತು. ಅಂತಿಮವಾಗಿ ರಾಜ ಮನೆತನ ದಾಳಿಗೆ ಸಿಲುಕಿ ಸಂಪತ್ತು ಲೂಟಿಯಾಗಿತ್ತು ಎಂದು ನಂಬಲಾಗಿದೆ.



Click it and Unblock the Notifications
