Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಭಾರತದ ಬಳಿಯೇ ಇದೆ ವಿಮಾನಗಳಿಗೆ ಅಪಾಯಕಾರಿ ಜಾಗ.! ಇಲ್ಲಿ ವಿಮಾನ ಹಾರಾಟ ಸಾವಿನ ಜೊತೆ ಸರಸ..!
ವಿಶ್ವದಾದ್ಯಂತ ಅತ್ಯಂತ ವೇಗವಾಗಿ ನಾವು ತಲುಪಬೇಕಾದರೆ ನಮಗಿರೋದು ವಾಯು ಮಾರ್ಗಮಾತ್ರವೇ ಆಗಿದೆ. ಹೀಗಾಗಿ ವಿಶ್ವದ ಬಹುತೇಕ ಭಾಗಕ್ಕೆ ವಿಮಾನಯಾನ ಸೇವೆ ಲಭ್ಯವಿದೆ. ಕೆಲವೊಂದು ಕಡೆಗಳಿಗೆ ನಾವು ನಿಮಿಷಗಳಲ್ಲೂ ಪ್ರಯಾಣಿಸಬಹುದು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಗಂಟೆಗಳ ಲೆಕ್ಕದಲ್ಲೂ ಪ್ರಯಾಣಿಸಬಹುದು. ಮತ್ತೆ ಕೆಲವು ಪ್ರಯಾಣ ದಿನಗಳೇ ಹಿಡಿಯುತ್ತೆ. ಆದರೆ ಈಗ ಹಲವು ದೇಶಗಳಿಗೆ ಈ ವಿಮಾನಸೇವೆ ಪಸರಿಸುತ್ತಾ ಇದೆ.
s
ಸದ್ಯ ವಿಮಾನ ಏರಿ ಕುಳಿತರೆ ನಾವು ಎಲ್ಲಿ ಪ್ರಯಾಣಿಸುತ್ತಿದ್ದೇ? ಯಾವ ಪ್ರದೇಶದಲ್ಲಿ ವಿಮಾನ ಹಾರಾಡುತ್ತಿದೆ ಎಂಬುದು ನಮಗೆ ತಿಳಿಯೋದಿಲ್ಲ. ಕೆಲವರಿಗೆ ವಿಮಾನ ಪ್ರಯಾಣವೆಂದರೆ ಮೂಗು ಮುರಿಯುತ್ತಾರೆ. ವಿಮಾನಯಾನದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಯಾವಾಗ ಏನಾಗುತ್ತೋ ಎಂಬ ಭಯವಂತೂ ಇದ್ದೇ ಇರುತ್ತದೆ.

ವಿಮಾನದಲ್ಲಿ ಹಾರಾಟ ನಡೆಸುವಾಗ ಟರ್ಬುಲೆನ್ಸ್ ಉಂಟಾಗುವುದು ಸಾಮಾನ್ಯ, ವಿಮಾನ ಏಕಾಏಕಿ ಕೆಳಗೆ ಕುಸಿಯುವುದು, ಮೇಲೇರುವುದು ನಡೆಯುತ್ತಲೇ ಇರುತ್ತದೆ. ಇದು ಪ್ರಯಾಣಿಕರಲ್ಲಿ ಭಯಕ್ಕೆ ಕಾರಣವಾಗುತ್ತೆ. ಕೆಲವು ಬಾರೀ ಟರ್ಬುಲೆನ್ಸ್ ಹಾಗೂ ಹವಾಮಾನ ವೈಪರಿತ್ಯದಿಂದ ವಿಮಾನ ಹಾರಾಟ ಅರ್ಧದಲ್ಲೇ ಮೊಡಕುಗೊಳಿಸಿ ವಾಪಾಸು ನಿಲ್ದಾಣಕ್ಕೆ ಬರುವ ಅದೇಷ್ಟೋ ಘಟನೆ ನಡೆಯುತ್ತಲೇ ಇರುತ್ತದೆ.
ಇನ್ನು ಕೆಲವು ಬಾರಿ ವಿಮಾನ ಅಪಘಾತಗಳಿಗೂ ಈ ಹವಾಮಾನದ ಕಾರಣ ಇರುತ್ತದೆ. ನಾವು ಮೊದಲೇ ಹೇಳಿದಂತೆ ವಿಶ್ವದ ಬಹುತೇಕ ಕಡೆಗೆ ಇಂದು ವಿಮಾನಯಾನ ಸೇವೆ ಇದೆ. ಲಘು ವಿಮಾನಗಳು ಈಗ ಕೈಲಾಸದಂತಹ ಕಠಿಣ ಪ್ರದೇಶಗಳಿಗೂ ತಲುಪುತ್ತಿವೆ. ಆದ್ರೆ ಭೂಮಿ ಮೇಲಿನ ಈ ಒಂದು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಅತ್ಯಂತ ಅಪಾಯಕಾರಿ ಸ್ಥಳವೆಂದು ಗುರುತಿಸಲಾಗಿದೆ.
ನಾವೆಲ್ಲಾ ಈ ಬರ್ಮುಡಾ ಟ್ರೈ ಆಂಗಲ್ ಎಂಬ ಪ್ರದೇಶದ ಬಗ್ಗೆ ಕೇಳಿದ್ದೆವು. ಅಲ್ಲಿ ಸಿಲುಕುವ ಹಡಗು, ವಿಮಾನಗಳು ಆಪತ್ತಿಗೆ ತುತ್ತಾಗುತ್ತವೆ ಎಂದು ಕೇಳಿದ್ದೆವು ಜೊತೆಗೆ ಹಾಲಿವುಡ್ ಸಿನಿಮಾದಲ್ಲೂ ನೋಡಿದ್ದೆವು. ಆದ್ರೆ ಅದಕ್ಕಿಂತಲೂ ಅಪಾಯಕಾರಿಯಾದ ಸ್ಥಳವೊಂದಿದೆ. ಈ ಜಾಗದ ಮೇಲೆ ವಿಮಾನ ಹಾರಾಟ ಒಂದು ರೀತಿ ಸಾವಿನ ಜೊತೆಗಿನ ಸರಸವಾಗಿದೆ. ಈ ಸ್ಥಳ ಭಾರತದ ನೆತ್ತಿಯಲ್ಲಿದೆ.
ಹೌದು ಭಾರತಕ್ಕೆ ಹತ್ತಿರವಾಗಿರುವ ಟಿಬೆಟಿಯನ್ ಪ್ರಸ್ತಭೂಮಿ, ಇದು ಉತ್ತರದಿಂದ ದಕ್ಷಿಣಕ್ಕೆ ಸರಿಸುಮಾರು 1,000 ಕಿಲೋಮೀಟರ್ ಮತ್ತು ಪೂರ್ವದಿಂದ ಪಶ್ಚಿಮಕ್ಕೆ 2,500 ಕಿಲೋಮೀಟರ್ ವ್ಯಾಪಿಸಿದೆ. ಇದು ಸಮುದ್ರ ಮಟ್ಟದಿಂದ ವಿಶ್ವದ ಅತಿ ಎತ್ತರದ ಮತ್ತು ದೊಡ್ಡ ಪ್ರಸ್ಥಭೂಮಿಯಾಗಿದೆ. ನೇಪಾಳ, ಟಿಬೇಟ್, ಚೀನಾದ ಪ್ರದೇಶಗಳೂ ಇದರಲ್ಲಿ ಸೇರಲಿದೆ.
ಈ ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಸಮಸ್ಯೆ!
ಈ ಟಿಬೆಟ್ ಪ್ರಸ್ತಭೂಮಿಯಲ್ಲಿ ವಿಶ್ವದ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಸಹ ಬರಲಿದೆ. ನಾಗರೀಕ ವಿಮಾನಗಳು 31 ಸಾವಿರ ಅಡಿಗಳಿಂದ ಹಿಡಿದು 42 ಸಾವಿರ ಅಡಿಗಳವರೆಗಿನ ಅಂತರದಲ್ಲೂ ಹಾರಾಟ ನಡೆಲಿದೆ. ಆದರೆ ಈ ಪ್ರದೇಶದಲ್ಲಿ ಸರಾಸರಿ ಎತ್ತರ ಎಂದು ತೆಗೆದುಕೊಂಡರೆ ಸುಮಾರು 14 ಸಾವಿರ ಅಡಿಗಳಷ್ಟು ಜಾಗ ಸಿಗಬಹುದು. ಮೌಂಟ್ ಎವರೆಸ್ಟ್‌ನ ಎತ್ತರವು ಸುಮಾರು 29 ಸಾವಿರ ಅಡಿ ಆಗಿದೆ.
ಒಂದು ವೇಳೆ ವಿಮಾನದಲ್ಲಿ ಏರುಪೇರು ಸಂಭವಿಸಿ, ಟರ್ಬುಲೆನ್ಸ್ ಉಂಟಾದರೆ ಅದು ತನ್ನ ಹಾರಾಟದ ಎತ್ತರವನ್ನು ಕಡಿಮೆ ಮಾಡಬೇಕಾಗುತ್ತದೆ. ಒಂದು ವೇಳೆ ವಿಮಾನ ತುರ್ತು ಪರಿಸ್ಥಿತಿಯಲ್ಲಿ ಕಡಿಮೆ ಎತ್ತರದಲ್ಲಿ ಹಾರಾಡಬೇಕಾದರೆ ಪರ್ವತ ಪ್ರದೇಶದಲ್ಲಿ ಇದು ಅಸಾಧ್ಯವಾಗಿದೆ. ಒಂದಲ್ಲಾ ಒಂದು ಪರ್ವತಕ್ಕೆ ವಿಮಾನ ಡಿಕ್ಕಿಯಾಗುವ ಸಂಭವವೇ ಹೆಚ್ಚಾಗುತ್ತದೆ. ಇದು ಸಹ ಒಂದು ಕಾರಣ
ಇನ್ನೊಂದೆಡೆ ಈ ಟಿಬೆಟಿಯನ್ ಪ್ರಸ್ತಭೂಮಿಯಲ್ಲಿ ಹವಾಮಾನ ಕ್ಷಣದಲ್ಲಿ ಬದಲಾಗುತ್ತದೆ. ವಿಪರೀತ ಗಾಳಿ, ಮಂಜು ಯಾವಾಗ ಬೇಕಾದರೂ ಸಂಭವಿಸಲಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಈ ಪ್ರದೇಶದಲ್ಲಿ ಹಾರಾಟ ನಡೆಸಲು ಹಿಂದೇಟು ಹಾಕುತ್ತವೆ.
ಇನ್ನೊಂದು ಕಡೆ ತುರ್ತು ಪರಿಸ್ಥಿತಿಯಲ್ಲಿ ವಿಮಾನಗಳು ಇಳಿಯಲು ನಿಲ್ದಾಣಗಳೇ ಇಲ್ಲದಿರುವುದು ಸಹ ಇದನ್ನು ಅಪಾಯಕಾರಿ ಸ್ಥಳ ಎಂಬುದನ್ನು ಎತ್ತಿ ಹಿಡಿಯುತ್ತದೆ. ಟಿಬೆಟ್‌ನಲ್ಲಿ ಕೇವಲ 5 ವಿಮಾನ ನಿಲ್ದಾಣಗಳಿಂದ್ದು ಅವೆಲ್ಲವೂ ದಕ್ಷಿಣ ಭಾಗದಲ್ಲಿವೆ. ಹೀಗಾಗಿ ಈ ಪ್ರದೇಶದಲ್ಲಿ ವಿಮಾನ ಹಾರಾಡುವಾಗ ತುರ್ತು ಪರಿಸ್ಥಿತಿ ಎದುರಾಗಿ ಲ್ಯಾಂಡ್ ಮಾಡಬೇಕಾದರೆ ನಿಲ್ದಾಣಗಳ ಕೊರತೆ ಎದುರಾಗುವ ಹಿನ್ನೆಲೆ ಈ ಪ್ರದೇಶ ವಿಮಾನ ಹಾರಾಟಕ್ಕೆ ಇಂದಿಗೂ ಅಪಾಯಕಾರಿ ಎಂಬ ಪಟ್ಟಿ ಇಟ್ಟುಕೊಂಡಿದೆ.



Click it and Unblock the Notifications