Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಜಗತ್ತಿನಲ್ಲಿದೆ ಈ ಚಿತ್ರ-ವಿಚಿತ್ರ ಟ್ಯಾಕ್ಸ್: ಇದರ ಬಗ್ಗೆ ಕೇಳಿದ್ದೀರಾ?
2025ರ ಬಜೆಟ್ ಅನ್ನು ಜನ ಸಾಮಾನ್ಯರು ತುಂಬಾನೇ ಕುತೂಹಲದಿಂದ ನೋಡುತ್ತಿದ್ದಾರೆ ಅದರಲ್ಲಿಯೂ ಜನರು ತುಂಬಾ ಕುತೂಹಲದಿಂದ ಎದುರು ನೋಡುತ್ತಿರುವುದು ಏನಾದರು ತೆರಿಗೆ ವಿನಾಯಿತಿಯಲ್ಲಿ ವ್ಯತ್ಯಾಸ ಉಂಟಾಗಬಹುದೇ? ಯಾವೆಲ್ಲಾ ವಸ್ತುಗಳು ತುಟ್ಟಿಯಾಗಲಿದೆ, ಈ ಬಾರಿಯ ಬಜೆಟ್ ಜನ ಸಾಮಾನ್ಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ ಎಂಬ ಊಹಾ ಲೆಕ್ಕಾಚಾರಗಳು ಕೇಳಿ ಬರುತ್ತಿವೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ 8ನೇ ಬಜೆಟ್ ಇದಾಗಿದೆ.
ಈ ತೆರಿಗೆ ಎಂಬುವುದು ಎಲ್ಲಾ ದೇಶಗಳಲ್ಲಿ ಒಂದೇ ಇರಲ್ಲ, ಉದಾಹರಣೆಗೆ ನಮ್ಮಲ್ಲಿ ಪ್ರತಿವರ್ಷವೂ ಸಿಗರೇಟ್ ತೆರಿಗೆ ಹೆಚ್ಚಾಗುವುದು, ಅದೇ ಚೀನಾದಲ್ಲಿ ಸಿಗರೇಟ್‌ಗೆ ತೆರಿಗೆ ರಿಯಾಯತಿ ನೀಡಲಾಗಿದೆ. ಇನ್ನು ಕೆಲವು ಕಡೆ ಕೆಲ ವಿಚಿತ್ರ ತೆರಿಗೆಗಳಿವೆ, ಅದನ್ನು ಕೇಳಿದಾಗ ನಿಮಗೆ ಖಂಡಿತ ಹೀಗೂ ಉಂಟೇ ಎಂದನಿಸದೆ ಇರಲ್ಲ:

ಜನರು ದಪ್ಪಗಾಗುವುದಕ್ಕೆ ಫ್ಯಾಟ್ ಟ್ಯಾಕ್ಸ್
ಇದು ಡೆನ್ಮಾರ್ಕ್‌ನಲ್ಲಿದೆ, ಇಲ್ಲಿ ಜನರ ಆರೋಗ್ಯಕ್ಕೆ ಒತ್ತು ನೀಡಿ ಇಂಥ ಟ್ಯಾಕ್ಸ್ ವಿಧಿಸಲಾಗಿದೆ, ಸ್ಯಾಚುರೇಟಡ್ ಫ್ಯಾಟ್ ಆಹಾರ ಉತ್ಪನ್ನಗಳಿಗೆ ದುಬಾರಿ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ನಿಯಮ ಅಲ್ಲಿ ಅಕ್ಟೋಬರ್ 2011ರಿಂದ ಬಂದಿದೆ.
ಮೂತ್ರಕ್ಕೂ ಟ್ಯಾಕ್ಸ್
ಹೌದು ನೀವು ಓದುತ್ತಿರುವುದು ಸರಿಯಾಗಿಯೇ ಇದೆ , ರೋಮ್‌ನಲ್ಲಿ ಇಂಥ ತೆರಿಗೆ ಜಾರಿಯಲ್ಲಿತ್ತು. ಮೂತ್ರದಲ್ಲಿ ಅಮೋನಿಯಾವಿರುತ್ತೆ, ಇದನ್ನು ಅನೇಕ ಕೈಗಾರಿಕಾ ಕಂಪನಿಗಳಲ್ಲಿ ಬಳಸಲಾಗುತ್ತಿತ್ತು. ಮೂತ್ರ ಸಂಗ್ರಹಿಸಿ ಕೈಗಾರಿಕಾ ಇಂಡಸ್ಟ್ರಿಗಳಿಗೆ ನೀಡಲಾಗುತ್ತಿತ್ತು, ಇದಕ್ಕೂ ಟ್ಯಾಕ್ಸ್ ವಿಧಿಸಲಾಗಿತ್ತು, ಇದನ್ನು ಯೂರಿನ್ ಟ್ಯಾಕ್ಸ್ ವ್ಹೀಲ್ ಎಂದು ಕರೆಯಲಾಗುತ್ತಿತ್ತು.
ಗಡ್ಡಕ್ಕೆ ಟ್ಯಾಕ್ಸ್
ರಷ್ಯಾದಲ್ಲಿ 1682 ರಿಂದ 1725ರವರಗೆ ಗಡ್ಡಕ್ಕೆ ಟ್ಯಾಕ್ಸ್ ಇತ್ತು, ಪೀಟರ್ ಯುರೋಪ್ ಇಡೀ ಸುತ್ತಿ ಅಲ್ಲಿಯ ಸಂಪತ್ತು ವಶಪಡಿಸಿಕೊಂಡಿದ್ದ, ಅವನು ರಷ್ಯಾಗೆ ಹಿಂತಿರುಗಿ ಬಂದಾಗ ರಷ್ಯಾನ್ ಪುರುಷರು ಗಡ್ಡ ಬೋಳಿಸಿದ ಲುಕ್‌ನಲ್ಲಿ ಇರಬೇಕೆಂದು ಬಯಸುತ್ತಾನೆ, ಮೊದಲಿಗೆ ಯಾವ ರಷ್ಯಾನ್ ಪುರುಷರು ಗಡ್ಡ ಬಿಡಬಾರದು ಎಂಬ ನಿಯಮ ತರುತ್ತಾನೆ, ನಂತರ ಆತನಿಗೆ ಗಡ್ಡದಿಂದಲೂ ಹಣ ಮಾಡಬಹುದು ಎಂದನಿಸಿ ಗಡ್ಡಕ್ಕೆ ಟ್ಯಾಕ್ಸ್ ವಿಧಿಸುತ್ತಾನೆ. ಅದರಲ್ಲಿಯೂ ಅಂತಸ್ತಿಗೆ ತಕ್ಕ ಹಾಗೆ ಟ್ಯಾಕ್ಸ್ ಹಾಕುತ್ತಾನೆ, ಶ್ರೀಮಂತನಾದರೆ ಗಡ್ಡ ಬಿಟ್ಟರೆ ಹೆಚ್ಚು ಟ್ಯಾಕ್ಸ್ ಕಟ್ಟಬೇಕಾಗುತ್ತದೆ, ಅದೇ ಬಡವನಾದರೆ ತೆರಿಗೆ ಕಡಿಮೆ ಇತ್ತು.
ಗೂಗಲ್ ಟ್ಯಾಕ್ಸ್
ದೊಡ್ಡ-ದೊಡ್ಡ ಇಂಟರ್‌ನೆಟ್ ಕಂಪನಿಗಳಿಗೆ ಗೂಗಲ್ ಟ್ಯಾಕ್ಸ್ ಎಂದು ಫ್ರಾನ್ಸ್‌ನಲ್ಲಿ ಹಾಕಲಾಗಿದೆ. ಇದಕ್ಕೆ ಮೊದಲು ಸ್ಮಾರ್ಟ್ ಪೋನ್, ಗೂಗಲ್ ಟ್ಯಾಬ್ಲೆಟ್‌ಗಳಿಗೆ ಕಲ್ಚರಲ್ ಟ್ಯಾಕ್ಸ್ ಎಂದು ಹಾಕಲಾಗಿತ್ತು.
ದನದ ಹೂಸು
ದೊಡ್ಡ-ದೊಡ್ಡ ಇಂಡಸ್ಟ್ರಿಗಳು ಗ್ರೀನ್‌ಹೌಸ್ ಗ್ಯಾಸ್ ಉತ್ಪತ್ತಿ ಮಾಡುತ್ತದೆ ಅಂದುಕೊಳ್ಳುತ್ತೇವೆ, ಆದರೆ ದನದ ಹೂಸು ಕೂಡ ಗ್ರೀನ್‌ಹೌಸ್ ಉತ್ಪತ್ತ ಮಾಡುತ್ತದೆ. ಆದರೆ ಈ ಗ್ಯಾಸ್ ಟ್ಯಾಕ್ಸ್ ಮಾತ್ರ ಪ್ರಾಕ್ಟಿಕಲ್ ಆಗಿ ಕಷ್ಟ, ಆದರೆ ಇಲ್ಲಿ ಪ್ರತಿ ಹಸುವಿಗೆ $110 ಟ್ಯಾಕ್ಸ್ ಪಾವತಿಸಬೇಕು.



Click it and Unblock the Notifications
