Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮಹಿಳೆಯರ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ..! ಹಣ ಮಾಡೋದು ಕೂಡ ಅವರೇ..!
ನಮ್ಮ ದೇಹದಲ್ಲಿ ಹಲವು ರೀತಿಯ ಲಕ್ಷಣಗಳು ನಮ್ಮ ಗುಣ ಲಕ್ಷಣಗಳ ಹೇಳುತ್ತವೆ ಎಂಬುದನ್ನು ನಾವು ತಿಳಿದಿದ್ದೇವೆ. ಅದರಲ್ಲೂ ನಮ್ಮ ಮೈ ಮೇಲಿರುವ ಮಚ್ಚೆಗಳು ಹಲವು ರೀತಿಯ ಸೂಚನೆಗಳು, ಆರ್ಥಿಕ ಹಾಗೂ ಕೌಟುಂಬಿಕ ಲಾಭಗಳಿಗೆ ಕಾರಣವಾಗುತ್ತವೆ ಎಂಬುದನ್ನು ನೀವು ತಿಳಿದಿದ್ದೀರಾ?
ಹೌದು ನಮ್ಮ ಮೈಮೇಲಿನ ಹಲವು ಕಪ್ಪು ಮಚ್ಚೆಗಳು ಒಂದಿಷ್ಟು ಲಾಭ ನಷ್ಟಕ್ಕೆ ಕಾರಣವಾಗುತ್ತವೆ. ಹುಟ್ಟಿನಿಂದಲೇ ಈ ಮಚ್ಚೆಗಳು ಕೂಡ ನಮ್ಮ ಜೀವನದ ಜೊತೆಗಿರುವ ಕಾರಣ ಇದು ನಮಗೆ ಹಲವು ರೀತಿ ಅನುಕೂಲ ಹಾಘೂ ಅನಾನುಕೂಲಕ್ಕೆ ಕಾರಣವಾಗುತ್ತವೆ. ಅದರಲ್ಲೂ ಮಹಿಳೆಯರಲ್ಲಿನ ಈ ಮಚ್ಚೆಗಳ ಹಿಂದಿರುವ ಗೌಪ್ಯ ಲಾಭದ ವಿಚಾರ ನೀವು ತಿಳಿಯಲೇಬೇಕಿದೆ.

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮಹಿಳೆಯರ ಕೆಲವು ಭಾಗದಲ್ಲಿ ಮಚ್ಚೆಗಳಿರುವುದು ವಿಶೇಷ ಮತ್ತು ಅದೃಷ್ಟ ತರಲಿದೆ ಎಂದು ಹೇಳಲಾಗಿದೆ. ಮಹಿಳೆಯರ ದೇಹದ ವಿವಿಧ ಸ್ಥಳಗಳಲ್ಲಿ ಮಚ್ಚೆ ಇದ್ದರೆ ಏನರ್ಥ ಯಾವ ಅದೃಷ್ಟ ನಿಮ್ಮದಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಾಲುಗಳು ಮತ್ತು ಕೈಗಳ ಮೇಲಿನ ಮಚ್ಚೆಗಳು
ಮಹಿಳೆಯ ಬಲಗಾಲಿನ ಮೇಲೆ ಮಚ್ಚೆ ಇದ್ದರೆ ಆಕೆ ಸಾಹಸಮಯ ವ್ಯಕ್ತಿತ್ವ ಹೊಂದಿರುತ್ತಾಳೆ. ಹಾಗೆ ಎಡಗಾಲಿನ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಲಿದ್ದಾಳೆ ಆದ್ರೆ ಇದೆಲ್ಲ ಸಮಸ್ಯೆಗಳನ್ನು ಆಕೆ ಸುಲಭವಾಗಿ ನಿಭಾಯಿಸಲಿದ್ದಾಳೆ.
ಕತ್ತಿನ ಮೇಲೆ ಮಚ್ಚೆ
ಕುತ್ತಿಗೆಯ ಮೇಲೆ ಮಚ್ಚೆಯು ತುಂಬಾ ಆಕರ್ಷಕವಾಗಿ ಕಾಣಿಸಬಹುದು, ಆದರೆ ಈ ಮಚ್ಚೆ ಸಂತೋಷದ ವೈವಾಹಿಕ ಜೀವನದ ಗುರುತು ಎಂದು ವಿವರಿಸಲಾಗುತ್ತದೆ. ಈ ರೀತಿಯ ಮಚ್ಚೆ ಇದ್ದರೆ ನಿಮ್ಮ ಸಂತೋಷಕ್ಕೆ ಕಾರಣವಾಗಲಿದೆ. ಹಾಗೆ ಈ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗಿರಲಿದೆ. ಅವರು ಯಾವುದೇ ಕೆಲಸವನ್ನಾದರು ಸುಲಭವಾಗಿ ಮಾಡಿ ಮುಗಿಸುವವರು. ಹಾಗೆ ಎಲ್ಲ ವಿಚಾರದಲ್ಲು ಶಿಸ್ತು ಕಾಪಾಡಿಕೊಳ್ಳುವವರು.
ಮುಖದ ಮೇಲೆ ಮಚ್ಚೆ
ಹಲವು ಮಹಿಳೆಯರಲ್ಲಿ ಮುಖದ ಮೇಲೆ ಮಚ್ಚೆ ಇರುವುದನ್ನು ನಾವು ನೋಡಿರುತ್ತೇವೆ. ಹಣೆಯ ಮೇಲೆ, ಕೆನ್ನೆಯ ಮೇಲೆ, ಗಲ್ಲ, ಮೂಗು ಹೀಗೆ ಮುಖದ ಭಾಗದಲ್ಲಿರುವ ಮಚ್ಚೆ ಅದೃಷ್ಟವಂತೆ. ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ, ಅವರು ಐಷಾರಾಮಿ ಮತ್ತು ಶಾಂತ ಜೀವನಶೈಲಿಯನ್ನು ನಡೆಸುತ್ತಾರೆ. ಆದರೆ ಹುಬ್ಬುಗಳ ಮೇಲಿನ ಮಚ್ಚೆ ನೀವು ಹಣಕಾಸು ವ್ಯವಹಾರದಲ್ಲಿ ಬುದ್ದಿವಂತರು ಎಂಬುದನ್ನು ಹೇಳುತ್ತದೆ.
ಹಾಗೆ ಮಹಿಳೆಯರ ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅವರು ತುಂಬಾ ಭಾವುಕ ಜೀವಿಗಳಂತೆ. ಹಾಗೆ ಬಲತುಟಿಯ ಮೇಲೆ ಮಚ್ಚೆ ಇದ್ದರೆ ಮಾತಿನಿಂದ ನಿಮಗೆ ಕಷ್ಟಗಳು ಬರಬಹುದು ಎಂಬ ಮನ್ಸೂಚನೆಯಂತೆ.
ಬೆನ್ನ ಮೇಲಿನ ಮಚ್ಚೆ
ಮಹಿಳೆಯರಲ್ಲಿ ಬೆನ್ನಿನ ಮೇಲೆ ಮಚ್ಚೆ ಇದ್ದರೆ ಅವರು ಹೆಚ್ಚು ಶ್ರಮ ಜೀವಿಗಳಂತೆ. ಹಾಗೆ ತಮ್ಮನ್ನು ನಂಬಿರುವವರನ್ನು ಅವರು ಎಂದಿಗೂ ಕೈ ಬಿಡದೆ ಅವರ ಪರವಾಗಿ ನಿಲ್ಲುವವರು. ಅವಳು ಕಲಾತ್ಮಕ ಮತ್ತು ಸೃಜನಶೀಲಳು. ಹಾಗೆ ನೀವು ಶೈಕ್ಷಣಿಕವಾಗಿ ಹೆಚ್ಚು ಬುದ್ದಿವಂತರು. ಎಲ್ಲಾ ವಿಚಾರಗಳನ್ನು ಮತ್ತೆ ಮತ್ತೆ ದೃಢಪಡಿಸಿಕೊಳ್ಳುವವರು. ಖರ್ಚು, ಕುಟುಂಬ, ಕೆಲಸ ಎಲ್ಲವನ್ನೂ ಸುಲಭವಾಗಿ ನಿಭಾಯಿಸುವವರು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications