Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಸ್ ಸ್ಕೇಟಿಂಗ್ ಹಾಕಿ: ವಿಂಟರ್ ಸ್ಪೋರ್ಟ್ಸ್‌ನಲ್ಲಿ ಸದ್ದು ಮಾಡುತ್ತಿರುವ ಡ್ಯಾನ್ಸ್ ಸ್ಕೂಲ್ ಮಕ್ಕಳು
ನಾವು ಏನಾದರು ಸಾಧಿಸಬೇಕೆಂದು ಬಯಸಿ ಹೊರಟರೆ ಖಂಡಿತ ಅವಕಾಶಗಳ ಬಾಗಿಲು ನಮಗಾಗಿ ತೆರೆಯುತ್ತದೆ ಎಂಬುವುದಕ್ಕೆ ಉದಾಹರಣೆ ಈ ತಂಡ. ಸ್ಕೇಟಿಂಗ್ ಡ್ಯಾನ್ಸ್‌ನಲ್ಲಿ ಸಾಧನೆ ಮಾಡಲು ಹೊರಟ ತಂಡ ಇಂದು ಸ್ಕೇಟಿಂಗ್ ಹಾಕಿಯಲ್ಲಿ ಸಾಧನೆ ಮಾಡುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಆಡಲಿದ್ದಾರೆ, ಯಾರೂ ಸಾಗಿರದ ಹಾದಿಯಲ್ಲಿ ಸಾಗುವ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಕೊಡಗಿನ ಏಂಜಲ್ ವಿಂಗ್ಸ್‌ನ ಮಕ್ಕಳು.

ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ? ಎಂಬಂತೆ ಕೊಡಗಿನ ಡ್ಯಾನ್ಸ್ ಶಾಲೆಯ ಮಕ್ಕಳು ಇದೀಗ ಕ್ರೀಡಾ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ, ಅಷ್ಟು ಮಾತ್ರವಲ್ಲ 2028ರ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆದುಕೊಳ್ಳುವ ಭರವಸೆಯನ್ನೂ ಮೂಡಿಸಿದ್ದಾರೆ. ಏನಿದು ಹಾಕಿ ಸ್ಕೇಟಿಂಗ್, ಈ ಹಾಕಿ ಸ್ಕೇಟಿಂಗ್‌ನಲ್ಲಿ ಸಿಗುವ ಅವಕಾಶಗಳೇನು, ಈ ಕ್ರೀಡಾ ಕ್ಷೇತ್ರದಲ್ಲಿ ಯಾವೆಲ್ಲಾ ಅವಕಾಶಗಳಿವೆ ಇವೆಲ್ಲದರ ಬಗ್ಗೆ ಕರ್ನಾಟಕ ಐಸ್ ಸ್ಕೇಟಿಂಗ್ ಟೀಂನ ಕೋಚ್ ಆಗಿರುವ ಅನೂಪ್ ಡಿಸೋಜಾ ಅವರು ಹಲವಾರು ಉಪಯಯುಕ್ತ ಮಾಹಿತಿ ನಮ್ಮೊಂದಿಗೆ ಹಂಚಿಕೊಂಡಿದ್ದು ಸ್ಕೇಟಿಂಗ್‌ನಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಈ ಮಾಹಿತಿಗಳು ಹೆಚ್ಚು ಸಹಕಾರಿಯಾಗಲಿದೆ....
ಏನಿದು ಸ್ಕೇಟಿಂಗ್ ಹಾಕಿ?
ಹಾಕಿ ಕ್ರೀಡೆ ಬಗ್ಗೆ ಎಲ್ಲರಿಗೆ ಗೊತ್ತಿರುತ್ತೆ, ಏಕೆಂದರೆ ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ, ಆದರೆ ಈ ಸ್ಕೇಟಿಂಗ್ ಹಾಕಿ, ಐಸ್ ಸ್ಕೇಟಿಂಗ್ ಹಾಕಿ ಇದರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ, ಆದರೆ ಇತರ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ದೊರೆಯುವ ಅದ್ಭುತ ಅವಕಾಶಗಳಂತೆಯೇ ಈ ಸ್ಕೇಟಿಂಗ್ ಹಾಕಿಯಲ್ಲಿ ಸಾಧನೆ ಮಾಡಿದರೂ ಅತ್ಯುತ್ತಮವಾದ ಅವಕಾಶವಿದೆ. ಸ್ಕೇಟಿಂಗ್ ಹಾಕಿಯಲ್ಲಿ ಐಸ್ ಸ್ಕೇಟಿಂಗ್ ಹಾಕಿ ವಿಂಟರ್ ಗೇಮ್‌ನಲ್ಲಿ ಪ್ರಮುಖ ಗೇಮ್‌ಆಗಿದೆ.
ಯಾರೂ ಸಾಗಿರದ ಹೊಸ ಹಾದಿಯಲ್ಲಿ ಕರ್ನಾಟಕ ಟೀಂ
ಕರ್ನಾಟಕ ಟೀಂ ಇದುವರೆಗೆ ಬ್ಯಾಂಡಿ ಗೇಮ್‌ನಲ್ಲಿ ಆಡಿಲ್ಲ. ಬ್ಯಾಂಡಿ ಗೇಮ್ ಎಂದರೆ ವಿಂಟರ್‌ಗೇಮ್ ಆಗಿದೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2025ರಲ್ಲಿ ಐಸ್ ಸ್ಕೇಟಿಂಗ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹೋಗುತ್ತಿರುವ ಹೆಣ್ಮಕ್ಕಳ ಮೊದಲ ತಂಡ ಇದಾಗಿದೆ. ಈ ತಂಡ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ನಡೆದ ಕ್ವಾಲಿಫೈಯರ್ ಮ್ಯಾಚ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರು, ಅದಾದ ಬಳಿಕ ಗೋವಾದಲ್ಲಿ ನಡೆದ ಮ್ಯಾಚ್‌ನಲ್ಲಿ ಕಾಲಿಫೈಯರ್ ಆಗಿ ಹೊರ ಹೊಮ್ಮಿದ್ದಾರೆ. ಐಸ್ ಸ್ಕೇಟಿಂಗ್ ತರಭೇತಿಯನ್ನು ಥೈಲ್ಯಾಂಡ್‌ನಲ್ಲಿ ಪಡೆದು ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಐಸ್ ಸ್ಕೇಟಿಂಗ್ ಆಡಲು ಸಿದ್ಧವಾಗುತ್ತಿದೆ ಈ ತಂಡ.
ಬ್ಯಾಂಡಿ ಟೀಂನಲ್ಲಿ ಗುರುತಿಸಿಕೊಂಡ ಕರ್ನಾಟಕ
ಬ್ಯಾಂಡಿ ಅಸೋಷಿಯೇಷನ್ ಆಫ್ ಇಂಡಿಯಾ ವಿಂಟರ್ ಸ್ಪೋರ್ಟ್ಸ್ ಆಡಿಸುವ ಸ್ಪೋರ್ಟ್ಸ್ ಯೂನಿವರ್ಸ್ ಆಗಿದೆ, ಈ ವಿಂಟರ್ ಸ್ಪೋರ್ಟ್ಸ್‌ನಲ್ಲಿ 25 ದೇಶಗಳು ಭಾಗಿಯಾಗುತ್ತವೆ, ಇದನ್ನು ಮೂರು ಖಂಡಗಳಲ್ಲಿ ನಡೆಸಲಾಗುವುದು. ಈ ಐಸ್ ಸ್ಕೇಟಿಂಗ್‌ನಲ್ಲಿ ಭಾರತವು ಇನ್ನೂ ಒಲಿಂಪಿಕ್ಸ್‌ನಲ್ಲಿ ಆಡಿಲ್ಲ, ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತತಂಡ ಹಾಕಿ ಸ್ಕೇಟಿಂಗ್‌ನಲ್ಲಿ ಭಾಗವಹಿಸಲು ಸಿದ್ಧತೆ ಮಾಡಲಾಗುತ್ತಿದೆ.
ಸ್ಕೇಟಿಂಗ್ ಡ್ಯಾನ್ಸ್‌ನಿಂದ ಐಸ್ ಸ್ಕೇಟಿಂಗ್‌ನತ್ತ ಮಕ್ಕಳ ಹೆಜ್ಜೆ
ಸ್ಕೇಟಿಂಗ್ ಡ್ಯಾನ್ಸ್‌ನಲ್ಲಿ ಸಾಧನೆಗೆ ಪ್ರಯತ್ನ ಹಾಕುತ್ತಿದ್ದ ತಂಡಕ್ಕೆ ಸ್ಕೇಟಿಂಗ್ ಅವಕಾಶ ಸಿಕ್ಕಿದಾಗ ತಮ್ಮಲ್ಲಿನ ಪ್ರತಿಭೆ ಹೊರಹಾಕಲು ಅತ್ಯುತ್ತಮವಾದ ಅವಕಾಶ ಸಿದ್ಧವಾಯ್ತು, ಮೊಟ್ಟ ಮೊದಲಿಗೆ ಕೊಚ್ಚಿಯಲ್ಲಿ ಕ್ವಾಲಿಫೈಯರ್ ಮ್ಯಾಚ್ ಅನ್ನು ಕರ್ನಾಟಕವನ್ನು ಪ್ರತಿನಿಧಿಸಿ ಆಡಿ ಕಂಚಿನ ಪದಕ ಗೆದ್ದಾಗ ಆತ್ಮವಿಶ್ವಾಸ ಹೆಚ್ಚಾಯ್ತು, ಜೊತೆಗೆ ಏನಾದರು ಆಗಲಿ ಬ್ಯಾಂಡಿ ವಿಂಟರ್ ಗೇಮ್‌ನಲ್ಲಿ ಆಡಿಯೇ ಆಡುತ್ತೇವೆ ಎಂಬ ಛಲವೂ ಮೂಡಿತು. ಕೋಚ್ ಅನೂಪ್ ಡಿಸೋಜಾ ಹಾಗೂ ಸ್ಯಾವಿಯೋ ಅವರ ಗರಡಿಯಲ್ಲಿ ಮಕ್ಕಳು ವಿಂಟರ್ ಗೇಮ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಈ ತಂಡಕ್ಕೆ ಗೆಲುವು ದೊರೆಯುವಂತಾಗಲಿ ಎಂಬುವುದೇ ಕನ್ನಡಿಗರ ಹಾರೈಕೆ....



Click it and Unblock the Notifications
