Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
1582ರ ಅಕ್ಟೋಬರ್‌ನಲ್ಲಿ 10 ದಿನ ಮಿಸ್ಸಿಂಗ್.! ಮೊಬೈಲ್‌ನಲ್ಲಿ ನೀವೆ ಚೆಕ್ ಮಾಡಿ..! ಹೀಗಾಗಿದ್ಯಾಕೆ ಗೊತ್ತಾ?
ನಾವು ದಿನ, ವಾರ, ರಜೆ, ನಕ್ಷತ್ರ, ಅಮಾವಾಸ್ಯೆ, ಹುಣ್ಣಿಮೆ ಸೇರಿ ಹಬ್ಬಗಳ ತಿಳಿದುಕೊಳ್ಳಲು ಕ್ಯಾಲೆಂಡರ್ ನೋಡುತ್ತೇವೆ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯ ಕ್ಯಾಲೆಂಡರ್ ಇರುವುದು ಸಾಮಾನ್ಯ. ಆದ್ರೆ ಎಲ್ಲರದಲ್ಲೂ ಒಂದೇ ರೀತಿಯ ಮಾಹಿತಿ ಇರಲಿದೆ. ಆದ್ರೆ ಯಾವುದಾದ್ರು ಕ್ಯಾಲೆಂಡರ್‌ನಲ್ಲಿ ಕೆಲವೊಮ್ಮ ಮುದ್ರಣ ಸಮಸ್ಯೆಯಿಂದ ದಿನಗಳಲ್ಲಿ ಹೆಚ್ಚು ಕಡಿಮೆಯಾಗಿರುವುದನ್ನು ನಾವು ಗಮನಿಸಿರಬಹುದು.
ಆದ್ರೆ ನಾವಿಂದು ನೋಡುತ್ತಿರುವ ಕ್ಯಾಲೆಂಡರ್ ತಪ್ಪು ಎಂಬುದು ನಿಮಗೆ ಗೊತ್ತಾ? ಹೌದು ಇದು ಅಚ್ಚರಿ ಎನಿಸಬಹುದು. ನಾವಿಂದು ನೋಡುತ್ತಿರುವ ಕ್ಯಾಲೆಂಡರ್‌ಗಳು 10 ದಿನಗಳನ್ನು ತಪ್ಪಾಗಿ ತೋರಿಸುತ್ತಿವೆಯಂತೆ. ಇದಕ್ಕೆ ಸಾಕ್ಷಿಯೂ ಇದೆ. ಅದೇನಂದರೆ 1582 ಅಕ್ಟೋಬರ್ ತಿಂಗಳಲ್ಲಿ 10 ದಿನಗಳ ಮುದ್ರಣವೇ ಇಲ್ಲವಂತೆ.

ಈ ರೀತಿಯ ವಿಚಾರವೊಂದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. 1582ರಲ್ಲಿ 10 ದಿನಗಳ ಮುದ್ರಣವೇ ಇರಲಿಲ್ಲ. ಅಕ್ಟೋಬರ್ ತಿಂಗಳಲ್ಲಿ 5ನೇ ತಾರಿಖು ಮುಗಿದ ಬಳಿಕ 15ನೇ ದಿನ ಮುದ್ರಣವಾಗುತ್ತದೆ. ಈ ನಡುವಿನ 10 ದಿನಗಳು ಇಲ್ಲವೇ ಇಲ್ಲ ಎಂದು ಹೇಳಲಾಗಿದೆ. ಇದನ್ನು ನೀವು ಸಹ ನಿಮ್ಮ ಮೊಬೈಲ್ ಬಳಸಿ ಪರೀಕ್ಷಿಸಬಹುದಂತೆ.
ನಿಮ್ಮ ಮೊಬೈಲ್‌ನಲ್ಲಿರುವ ಕ್ಯಾಲೆಂಡರ್ ತೆರೆದು 1582ರ ಅಕ್ಟೋಬರ್ ತಿಂಗಳು ತೆರೆದರೆ ಅಲ್ಲಿ ಕೇವಲ 21 ದಿನಗಳು ಮಾತ್ರ ಇವೆಯಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೆ ನಾವು ದಿನಗಳನ್ನು ತಪ್ಪಾಗಿ ಲೆಕ್ಕ ಹಾಕಿದ್ದೇವೆ ಎಂದು ವರದಿಯಾಗಿದೆ. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಹೀಗೆ 10 ದಿನಗಳು ತಪ್ಪಾಗಿ ನಾವು ಲೆಕ್ಕ ಹಾಕುತ್ತಿರುವುದೇಕೆ ಎಂಬ ಕುತೂಹಲವು ಮೂಡಿದೆ.
ಹಾಗಾದ್ರೆ ಕ್ಯಾಲೆಂಡರ್‌ನಲ್ಲಿ ಈ ತಪ್ಪು ಆಗಿರೋದು ಯಾಕೆ? 1582ರಲ್ಲಿ ಆ 10 ದಿನಗಳು ಎಲ್ಲಿ ಹೋದವು? ಈ ಕುರಿತ ಅಚ್ಚರಿಯ ಮಾಹಿತಿಯನ್ನು ನಾವಿಂದು ಹೇಳುತ್ತೇವೆ ಕೇಳಿ.
1582ರ ಅಕ್ಟೋಬರ್‌ನಲ್ಲಿ 10 ದಿನಗಳು ಕಡಿಮೆ ಇರಲು ಯಾವುದೇ ಮುದ್ರಣದ ಕಾರಣ ಅಥವಾ ಕಣ್ತಪ್ಪಿನಿಂದ ಉಂಟಾದ ತಪ್ಪಲ್ಲ. ಬದಲಿಗೆ, ಅಧಿಕ ವರ್ಷದ ದಿನಗಳನ್ನು ಸರಿದೂಗಿಸಲು ಆ ವರ್ಷ ಮಾಡಿರುವ ಒಂದು ತಂತ್ರವಾಗಿದೆ. ಹೇಗೆ ಎಂಬುದನ್ನು ವಿವರಿಸುತ್ತೇವೆ ನೋಡಿ. 1582 ರ ಹೊತ್ತಿಗೆ ಜೂಲಿಯನ್ ಕ್ಯಾಲೆಂಡರ್, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ ಬರುವುದನ್ನು ಲೆಕ್ಕ ಹಾಕುತ್ತಿರಲಿಲ್ಲ. ಈಗಿನಂತೆ ಫೆಬ್ರವರಿಯಲ್ಲಿ 29 ದಿನಗಳು ಇರಲಿಲ್ಲ. ಆದ್ರೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೇಗೆ ಲೆಕ್ಕ ಹಾಕಿದರೂ ದಿನಗಳು ಹೆಚ್ಚಿಗೆ ಬರುತ್ತಿದ್ದವು. ಇದು ಕ್ಯಾಲೆಂಡರ್ ರಚನೆಯಲ್ಲಿ ಹಾಗೂ ದಿನಗಳ ಲೆಕ್ಕ ಹಾಕಲು ಸಮಸ್ಯೆ ತಂದೊಡ್ಡಿತ್ತು.
ಹೀಗಾಗಿ 1582ರ ಅಕ್ಟೋಬರ್‌ನಲ್ಲಿ ಎಲ್ಲಾ ಅಧಿಕ ವರ್ಷಗಳ ದಿನಗಳನ್ನು ಕಳೆಯಲು ನಿರ್ಧರಿಸಲಾಗಿತ್ತು. ಅಂದರೆ ಎಲ್ಲಾ ಅಧಿಕ ವರ್ಷದಿಂದ ಒಂದೊಂದು ದಿನ ತೆಗೆದು ಒಟ್ಟು 10 ದಿನಗಳನ್ನು ಒಂದೇ ತಿಂಗಳಿನಲ್ಲಿ ಅಳಿಸಲಾಗಿತ್ತು. ಹೀಗಾಗಿ ಅಕ್ಟೋಬರ್‌ನಲ್ಲಿ ಕೇವಲ 21 ದಿನಗಳು ಮಾತ್ರ ಇದ್ದವು. ಆದ್ರೆ ಈ ರೀತಿ ಮಾಡಿದ್ದು ಸಹ ಮುಂದೆ ಸಮಸ್ಯೆಯ ಗೂಡಾಯಿತು. ಒಂದೇ ವರ್ಷದಲ್ಲಿ ಅದ್ರಲ್ಲೂ ಒಂದೇ ತಿಂಗಳಲ್ಲಿ ಕಡಿಮೆ ದಿನಗಳು ಬಂದ ಕಾರಣ ಹೊಸ ಸಮಸ್ಯೆ ಎದುರಾಗಿತ್ತು, ಮತ್ತೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಅಧಿಕ ವರ್ಷದ ಫೆಬ್ರವರಿಯಲ್ಲಿ ಹೆಚ್ಚುವರಿಯಾಗಿ 1 ದಿನ ಸೇರಿಸಿ ನಾಲ್ಕು ವರ್ಷಕ್ಕೊಮ್ಮೆ 29ನೇ ದಿನ ಬರುವಂತೆ ಮಾಡಲಾಗಿತ್ತು.
ಆದ್ರೆ ಈ ವಿದ್ಯಮಾನ ತಿಳಿಯದೆ ಮಂದಿ ಸಾಮಾಜಿಕ ಜಾಲತಾಣದಲ್ಲಿ 1582ರಲ್ಲಿ 10 ದಿನ ಕಡಿಮೆ ಮಾಡಲಾಗಿದೆ. ಹೀಗಾಗಿ ನಾವು ತಪ್ಪಾದ ದಿನಾಂಕ ಲೆಕ್ಕೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ ತಾಂತ್ರಿಕವಾಗಿ ನಾವು ಸರಿಯಾದ ದಿನಾಂಕ ಲೆಕ್ಕ ಮಾಡುತ್ತೇವೆ. ಅಂದು 10 ದಿನ ಕಳೆಯದಿದ್ದರೆ ನಾವು ತಪ್ಪು ದಿನಾಂಕದಲ್ಲಿರಬೇಕಾಗುತ್ತಿತ್ತು.



Click it and Unblock the Notifications