Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
'ಹಾವು ಮುಕ್ತ' ಎಂದು ಘೋಷಿಸಿಕೊಂಡ ದೇಶ.! ಅಲ್ಲಿನ ಝೂನಲ್ಲೂ ಹಾವುಗಳಿಲ್ಲ..! ಏಕೆ.?
ಈ ಭೂಮಿ ಮೇಲೆ ಇರುವ ಪ್ರತಿಯೊಂದು ಜೀವ ರಾಶಿಗೂ ಬದುಕುವ ಹಕ್ಕಿದೆ. ಹಾಗೆ ಎಲ್ಲಾ ಪ್ರಾಣಿ, ಪಕ್ಷಿಗಳು ಈ ಜೀವ ವೈವಿಧ್ಯತೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ಆಹಾರ ಸರಪಳಿಯಲ್ಲಿ ಒಂದು ಏರಳಿತವಾದರೂ ಭೂಮಿ ಮೇಲಿನ ಪರಿಸರ ವ್ಯವಸ್ಥೆಗೆ ಪೆಟ್ಟು ಬೀಳಲಿದೆ. ಈ ಸರಳಪಳಿಯಲ್ಲಿ ಸರಸೃಪಗಳ ಪಾತ್ರವೂ ಇದೆ. ಜೊತೆಗೆ ಕೀಟಗಳ ಕೊಡುಗೆಯೂ ಇದೆ.
ಇನ್ನು ಹಾವುಗಳ ವಿಚಾರದಲ್ಲಿ ಅವು ಮಾನವ ಸ್ನೇಹಿಗಳಾಗಿವೆ. ಹಾವುಗಳಿಂದ ಮಾನವ ಸಾವಿಗೀಡಾಗುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಇವು ರೈತರಿಗೆ ಹಾಗೂ ಪರಿಸರಕ್ಕೆ ಅತ್ಯುತ್ತಮ ಸ್ನೇಹಿಗಳು. ಹಾವುಗಳು ಒಂದು ವೇಳೆ ಪರಿಸರದಿಂದ ಕಣ್ಮರೆಯಾದರೆ ಹತ್ತು ಹಲವು ಸಮಸ್ಯೆಯ ಜೊತೆಗೆ ಪರಿಸರ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಆಗಬಹುದು.

(ಫೋಟೋ ಕೃಪೆ-Freepik)
ಹಾವುಗಳಿಂದ ಪರಿಸರ ವ್ಯವಸ್ಥೆಯಲ್ಲಿ ಸಮತೋಲನ ಸಾಧ್ಯವಾಗಿದೆ. ಅವು ಇಲಿ, ಕಪ್ಪೆಯಂತಹ ರೈತರಿಗೆ ಸಮಸ್ಯೆ ತಂದೊಡ್ಡುವ ಕೆಲ ಕೀಟನಾಶಕವಾಗಿ ವೈವಿಧ್ಯಮಯ ಜೀವ ಸಂಕುಲದ ಪೂರಕ ಪ್ರಾಣಿಗಳಾಗಿ ವರ್ತಿಸುತ್ತವೆ.
ಹಾವುಗಳನ್ನು ನಮ್ಮ ಗ್ರಹದಲ್ಲಿ ಕಂಡುಬರುವ ಅತ್ಯಂತ ಅಪಾಯಕಾರಿ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಭೂಮಿಯ ಎಂತಹ ಕಠಿಣ ಪರಿಸ್ಥಿತಿಯಲ್ಲು ಹಾವುಗಳು ಕಂಡುಬರುತ್ತವೆ. ಅದು ಮಳೆ ಬೀಳುವ ಕಾಡಿನಿಂದ ಹಿಡಿದು ಹಿಮ, ಮರುಭೂಮಿಯಲ್ಲೂ ಹಾವುಗಳ ನಾವು ನೋಡಬಹುದು.
ಆದರೆ ಭೂಮಿ ಮೇಲೆ ಒಂದೇ ಒಂದು ದೇಶದಲ್ಲಿ ಹಾವುಗಳೇ ಇಲ್ಲ. ಆ ದೇಶ ಹಾವು ಮುಕ್ತ ಎಂದು ಘೋಷಿಸಿಕೊಂಡಿದೆ. ಹೌದು ಪುಟ್ಟ ರಾಷ್ಟ್ರ ನ್ಯೂಜಿಲೆಂಡ್ ಹಾವು ಮುಕ್ತ ದೇಶ ಎಂದು ಘೋಷಿಸಿಕೊಂಡಿದೆ. ಈ ರೀತಿ ಘೋಷಿಸಿಕೊಂಡ ವಿಶ್ವದ ಮೊದಲ ರಾಷ್ಟ್ರ ಇದಾಗಿದೆ. ಹಾಗಾದ್ರೆ ನ್ಯೂಜಿಲೆಂಡ್‌ನಲ್ಲಿ ಹಾವುಗಳೇಕೆ ಇಲ್ಲ.? ಅಲ್ಲಿರುವ ಹಾವುಗಳು ಏನಾದವು.?
ನ್ಯೂಜಿಲೆಂಡ್ ದೇಶವನ್ನು ಹೊರತುಪಡಿಸಿ ವಿಶ್ವದ ಎಲ್ಲೆಡೆ ಹಾವುಗಳು ಕಂಡುಬರುತ್ತವೆ. ದಕ್ಷಿಣ ಧ್ರುವದ ಬಳಿ ಇರುವ ಈ ದೇಶದಲ್ಲಿ ಸರೀಸೃಪಗಳಿಗೆ ಕೊರತೆಯಿಲ್ಲ, ಆದರೆ ಹಾವುಗಳ ಕೊರತೆಯಿದೆ. ಕುತೂಹಲಕಾರಿಯಾಗಿ, ಹಾವುಗಳು ದೇಶದ ಭೂಪ್ರದೇಶದ ಸುತ್ತಲೂ ಕಂಡುಬರುತ್ತವೆ, ಅದು ಅದರ ಸುತ್ತಲಿನ ಸಮುದ್ರದಲ್ಲಿದೆ, ಆದರೆ ದೇಶದೊಳಗೆ ಎಲ್ಲಿಯೂ ಹಾವು ನೋಡಲು ಸಾಧ್ಯವಿಲ್ಲ.
ಅಚ್ಚರಿ ಏನೆಂದರೆ ಈ ದೇಶದಲ್ಲಿರುವ ಪ್ರಾಣಿ ಸಂಗ್ರಹಾಲಯದಲ್ಲೂ ನೀವು ಹಾವುಗಳ ನೋಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಹಾವುಗಳ ಸಾಕುವುದು, ವಿದೇಶದಿಂದ ಹಾವು ತರುವುದು ಸಹ ನಿಷೇಧವಾಗಿದೆ. ನ್ಯೂಜಿಲೆಂಡ್‌ನಲ್ಲಿ ಪ್ರತಿಯೊಂದು ಪ್ರಾಣಿ, ಪಕ್ಷಿಗಳನ್ನು ರಕ್ಷಿಸಲಾಗುತ್ತದೆ. ಅಲ್ಲಿ ಪ್ರಾಣಿಗಳ ಸಂರಕ್ಷಣೆಗೆಂದೇ ಪ್ರತ್ಯೇಕ ಕಾನೂನುಗಳಿವೆ.
ನ್ಯೂಜಿಲೆಂಡ್‌ನಲ್ಲಿ ಹಾವುಗಳು ಏಕಿಲ್ಲ?
ಇನ್ನು ನ್ಯೂಜಿಲೆಂಡ್ ದ್ವೀಪ ರಾಷ್ಟ್ರವಾಗಿದೆ. ಈ ದೇಶದ ಸುತ್ತ ಸಮುದ್ರವಿದ್ದು, ಅಲ್ಲಲ್ಲಿ ಸಣ್ಣ ಸಣ್ಣ ದ್ವೀಪಗಳು ಸುತ್ತುವರೆದಿವೆ. ಹೀಗಾಗಿ ಈ ದೇಶಕ್ಕೆ ಬೇರೆ ಕಡೆಗಳಿಂದ ಹಾವುಗಳ ಬರಲು ಸಾಧ್ಯವಾಗಿಲ್ಲ. ಅಲ್ಲದೆ ಈ ದೇಶದಲ್ಲಿ ಹಾವಿನ ಸಂತತಿ ಬದುಕಿರಲಿಲ್ಲ. ಹೀಗಾಗಿ ಹಾವುಗಳು ಈ ದ್ವೀಪ ತಲುಪಲು ಸಾಧ್ಯವಾಗಲೇ ಇಲ್ಲ.
ಜೊತೆಗೆ ಹಾವುಗಳು ಪರವಾಲಂಭಿಗಳು. ಬೇರೆ ಪ್ರಾಣಿಗಳ ತಿಂದು ಜೀವನ ಮಾಡುತ್ತವೆ, ಹೀಗಾಗಿ ಅಲ್ಲಿ ಹಾವುಗಳ ಸಾಕುವುದು, ತರುವುದು ನಿಷೇಧವಾಗಿದೆ.
ಅತೀ ಹೆಚ್ಚು ಹಾವುಗಳು ಎಲ್ಲಿವೆ.?
ನ್ಯೂಜಿಲೆಂಡ್‌ನಲ್ಲಿ ಹಾವುಗಳು ನೋಡಲು ಸಿಗುವುದಿಲ್ಲ, ಇನ್ನೊಂದು ಕಡೆ ಐರ್ಲೆಂಡ್‌ನಲ್ಲೂ ಹಾವುಗಳು ಸಿಗುವುದಿಲ್ಲ. ಆದರೆ ಬ್ರೆಜಿಲ್‌ನಲ್ಲಿ ವಿಶ್ವದಲ್ಲೇ ಬೇರೆಲ್ಲೂ ಕಾಣದಷ್ಟು ಹಾವುಗಳಿವೆ. ವರದಿಗಳ ಪ್ರಕಾರ, ಸುಮಾರು 400ಕ್ಕೂ ಅಧಿಕ ಜಾತಿಯ ಹಾವುಗಳು ಬ್ರೆಜಿಲ್‌ನಲ್ಲಿ ಕಾಣಸಿಗುತ್ತವೆ. ಅದರಲ್ಲೂ ಅತ್ಯಂತ ವಿಷಕಾರಿ ಹಾವುಗಳಿರುವುದು ಬ್ರೆಜಿಲ್‌ನಲ್ಲಿಯೇ. ಅಲ್ಲದೆ ಅತ್ಯಂತ ದೊಡ್ಡ ಹಾವು ಬ್ರೆಜಿಲಿಯನ್ ಅನಾಕೊಂಡ ಸಹ ಇಲ್ಲಿ ಕಂಡುಬರುತ್ತದೆ.



Click it and Unblock the Notifications
