Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಜ್ಯೋತಿಷ್ಯ ಶಾಸ್ತ್ರ : ನಮ್ಮ ರಾಶಿ ಪ್ರಕಾರ ನಾವು ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ!
ನಾವು ಧರಿಸುವ ಬಟ್ಟೆಯ ಮೇಲೆ ನಮಗೆ ಹೆಚ್ಚಿನ ಗಮನವಿರುತ್ತೆ. ಇತ್ತೀಚಿನ ದಿನಗಳಲ್ಲಿ ನಾವು ಸ್ಟೈಲ್ ಗೆ ಮಾರು ಹೋಗುತ್ತೇವೆಯೇ ಹೊರತು ಇದೇ ದಿನ ಇಂತಹದ್ದೇ ಬಟ್ಟೆ ಹಾಕುತ್ತೇವೆ ಅಂತ ನಿರ್ಧರಿಸೋದಿಲ್ಲ. ಜ್ಯೋತಿಷ್ಯದ ಪ್ರಕಾರ ನಾವು ನಮ್ಮ ರಾಶಿಯ ಪ್ರಕಾರ ಬಟ್ಟೆಗಳನ್ನು ಹಾಕಿದ್ರೆ ಒಳ್ಳೆಯದಂತೆ. ಇದರಿಂದ ಧನಾತ್ಮಕ ಶಕ್ತಿಯು ಯಶಸ್ಸನ್ನು ಆಕರ್ಷಿಸುತ್ತಂತೆ. ಜೊತೆಗೆ ಮನೆಯಲ್ಲಿ ಸಮೃದ್ಧಿಯೂ ತುಂಬಿರುತ್ತಂತೆ. ಅಷ್ಟಕ್ಕು ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ಫ್ಯಾಷನ್ ಜಗತ್ತಿನಲ್ಲಿ ನಂಬರ್ ಒನ್ ಆಗಬೇಕೆಂದು ಬಯಸುತ್ತಾರೆ. ಆದ್ದರಿಂದ ಇವರು ಫ್ಯಾಶನ್ ಪ್ರಕಾರ ನಡೆದುಕೊಳ್ಳಲು ವಿಶೇಷ ಆಸಕ್ತಿ ಹೊಂದಿರುತ್ತಾರೆ. ಮೇಷ ರಾಶಿಯು ಮಂಗಳನಿಂದ ಆಳಲ್ಪಡುತ್ತದೆ. ಮಂಗಳನ ಪ್ರಭಾವದಿಂದಾಗಿ ಮೇಷ ರಾಶಿಯವರು ಗುಲಾಬಿ, ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದಾಗುತ್ತಂತೆ. ಹಾಗೂ ಅವರಿಗೆ ಯಶಸ್ಸು ಒಲಿದು ಬರುತ್ತಂತೆ.

ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರನನ್ನು ಫ್ಯಾಶನ್ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯವರು ಬಟ್ಟೆ ಆಯ್ಕೆಯಲ್ಲಿ ಶೈಲಿ ಮತ್ತು ಬಣ್ಣಕ್ಕೆ ಆದ್ಯತೆ ನೀಡುತ್ತಾರೆ. ವೃಷಭ ರಾಶಿಯವರಿಗೆ ಬೆಳ್ಳಿ, ಬಿಳಿ ಬಣ್ಣದ ಬಟ್ಟೆಗಳು ಲಾಭದಾಯಕವಾಗಿದ್ದು, ಅವರ ವ್ಯಕ್ತಿತ್ವದ ಜೊತೆಗೆ ಅವರ ಅದೃಷ್ಟವನ್ನು ಹೆಚ್ಚಿಸುತ್ತಂತೆ.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧಗ್ರಹ. ಹೀಗಾಗಿ ಅವರ ವ್ಯಕ್ತಿತ್ವದಲ್ಲಿ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ರಾಶಿಯವರು ಬಗೆಬಗೆಯ ಬಟ್ಟೆಗಳನ್ನು ಕೊಳ್ಳುವ ಹವ್ಯಾಸದ ಜೊತೆಗೆ ಬಜೆಟ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಈ ರಾಶಿಯವರು ಹಸಿರು ಮತ್ತು ನೈಸರ್ಗಿಕ ಬಣ್ಣಗಳನ್ನು ಆರಿಸಬೇಕು ಇದರಿಂದ ಅವರ ದಿನನಿತ್ಯದ ಜೀವನದಲ್ಲಿ ಶುಭವಾಗುತ್ತಂತೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಬಟ್ಟೆಗಳೊಂದಿಗೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾರೆ. ಚಂದ್ರನು ಕರ್ಕಾಟಕ ರಾಶಿಯ ಅಧಿಪತಿಯಾಗಿರೋದ್ರಿಂದ ಚಂದ್ರನು ಕರ್ಕಾಟಕ ರಾಶಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತಾನೆ. ಜೀವನದಲ್ಲಿ ಶಾಂತಿಯನ್ನು ಹೊಂದಲು ಈ ರಾಶಿಯವರು ಬಿಳಿ, ಪೀಚ್, ಕೆನೆ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರ ಜೊತೆಗೆ ರೇಷ್ಮೆ, ಹತ್ತಿಯ ಸರಳ ವಿನ್ಯಾಸದ ಬಟ್ಟೆಗಳು ಕರ್ಕಾಟಕ ರಾಶಿಯವರಿಗೆ ಅನುಕೂಲಕರವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಸಿಂಹ ರಾಶಿಯವರು ರಾಜರ ಉಡುಪುಗಳು ಮತ್ತು ಕಲಾತ್ಮಕ ವೇಷಭೂಷಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಸಿಂಹ ರಾಶಿಯವರು ಫ್ಯಾಷನ್ ಪ್ರೀಯರು. ಇವರು ಬ್ರಾಂಡ್ ಮತ್ತು ಡಿಸೈನರ್ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಾರೆ. ಖ್ಯಾತಿ ಮತ್ತು ಗೌರವವನ್ನು ಪಡೆಯಲು ಸಿಂಹ ರಾಶಿಯವರು ಗುಲಾಬಿ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಅದು ನಿಮ್ಮನ್ನು ಸೂರ್ಯನಂತೆ ಪ್ರಕಾಶಮಾನವಾಗಿ ಮಾಡುತ್ತದೆ ಮತ್ತು ಆರ್ಥಿಕ ಲಾಭವನ್ನು ನೀಡುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಫ್ಯಾಶನ್ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಈ ರಾಶಿಯವರು ಭಾರತೀಯ ಮತ್ತು ಪಾಶ್ಚಿಮಾತ್ಯ ಉಡುಪುಗಳಂತಹ ವಿಭಿನ್ನ ಸಂಯೋಜನೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಈ ರಾಶಿಯ ಅಧಿಪತಿ ಬುಧ, ಆದ್ದರಿಂದ ಈ ರಾಶಿಯ ಜನರ ಬೌದ್ಧಿಕ ಸಾಮರ್ಥ್ಯವು ತುಂಬಾ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಕನ್ಯಾ ರಾಶಿಯವರು ಕಾಮನ ಬಿಲ್ಲಿನ ಬಣ್ಣವಿರುವ ಎಲ್ಲಾ ಬಟ್ಟೆಗಳನ್ನು ಧರಿಸಬೇಕು.
ತುಲಾ ರಾಶಿ
ತುಲಾ ರಾಶಿಯವರು ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ. ದುಬಾರಿ ಮತ್ತು ವಿನ್ಯಾಸಕ ಮತ್ತು ಫಿಟ್ ಬಟ್ಟೆಗಳನ್ನೇ ಇವರು ಧರಿಸುತ್ತಾರೆ. ತುಲಾ ರಾಶಿಯವರಿಗೆ ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆಗಳು ಉತ್ತಮ. ಈ ಬಣ್ಣಗಳ ಪ್ರಭಾವದಿಂದ ತುಲಾ ರಾಶಿಯವರು ಶುಕ್ರನ ಹೊಂದಾಣಿಕೆಯಿಂದ ಐಶ್ವರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಫ್ಯಾಷನ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹಳೆಯ ವಸ್ತುಗಳನ್ನು ಅಥವಾ ಬಟ್ಟೆಗಳನ್ನು ಹೊಸ ರೀತಿಯಲ್ಲಿ ಧರಿಸುವುದು ವೃಶ್ಚಿಕ ರಾಶಿಯ ಜನರ ಮುಖ್ಯ ಗುಣವಾಗಿದೆ. ವೃಶ್ಚಿಕ ರಾಶಿಯವರು ಕೆಂಪು ಮತ್ತು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ನಿಮ್ಮ ರಾಶಿಯ ಅಧಿಪತಿ ಮಂಗಳನ ಧನಾತ್ಮಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಧನು ರಾಶಿಯವರು ಸಮಾಜದಲ್ಲಿ ಅವರ ಚಿತ್ರಣ ಮತ್ತು ಸ್ಥಾನ-ಮಾನಕ್ಕೆ ಅನುಗುಣವಾಗಿ ತಮ್ಮ ಬಟ್ಟೆಗಳನ್ನು ಆರಿಸಿಕೊಳ್ಳುತ್ತಾರೆ. ಸರಳ ಮತ್ತು ಯೋಗ್ಯವಾದ ಫ್ಯಾಶನ್ ಬಟ್ಟೆಗಳನ್ನು ಮಾತ್ರ ಇವರು ಇಷ್ಟಪಡುತ್ತಾರೆ. ಗುರುಗ್ರಹದ ಶುಭ ಫಲವನ್ನು ಪಡೆಯಲು ಧನು ರಾಶಿಯವರು ಹಳದಿ ಸೆಳವು ಹೊಂದಿರುವ ಬಟ್ಟೆಗಳಿಗೆ ಪ್ರಾಮುಖ್ಯತೆ ನೀಡಬೇಕು.
ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿದೇವ. ಈ ರಾಶಿಯವರು ತಮ್ಮ ಬಟ್ಟೆಗಳಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಇಷ್ಟಪಡುವುದಿಲ್ಲ. ಮಕರ ರಾಶಿಯವರು ಕಪ್ಪು ಮತ್ತು ನೀಲಿ ಬಟ್ಟೆಗಳನ್ನು ಧರಿಸಬೇಕು. ಇದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳಿಂದ ಸಹ ತಪ್ಪಿಸಿಕೊಳ್ಳಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಆರಾಮದಾಯಕವಾದ ಉಡುಗೆಗಳನ್ನು ಮತ್ತು ಇತ್ತೀಚಿನ ಶೈಲಿಗಳಿಗೆ ಆದ್ಯತೆ ನೀಡುತ್ತಾರೆ. ಕುಂಭ ರಾಶಿಯು ಶನಿದೇವನ ಒಡೆತನದಲ್ಲಿದೆ. ಆದ್ದರಿಂದ ಶನಿದೇವನನ್ನು ಮೆಚ್ಚಿಸಲು ಕಪ್ಪು, ಕಂದು, ಕಡುಬಣ್ಣದ ಬಟ್ಟೆಗಳನ್ನು ಧರಿಸುವುದು ಕುಂಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ.
ಮೀನ ರಾಶಿ
ಪ್ರತಿದಿನ ವಿವಿಧ ಶೈಲಿಗಳು ಮತ್ತು ವಿವಿಧ ರೀತಿಯ ಬಟ್ಟೆಗಳನ್ನು ಧರಿಸಲು ಮೀನ ರಾಶಿಯವರು ಇಷ್ಟ ಪಡುತ್ತಾರೆ. ಈ ರಾಶಿಯ ಅಧಿಪತಿ ಗುರು ಆದ್ದರಿಂದ ಮೀನ ರಾಶಿಯವರು ಹಳದಿ, ಕೇಸರಿ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ.
ರಾಶಿ ಮತ್ತು ಗ್ರಹ ನಕ್ಷತ್ರಗಳ ಪ್ರಕಾರ ಬಟ್ಟೆಗಳ ಆಯ್ಕೆಯು ಆತ್ಮವಿಶ್ವಾಸದ ಹೆಚ್ಚಳದ ಜೊತೆಗೆ ಸಂಪತ್ತು-ಸಮೃದ್ಧಿಯ ಸೂಚಕವಾಗಿದೆ.



Click it and Unblock the Notifications











