Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮೇಕ್‌ಅಪ್ ಹುಟ್ಟಿಕೊಂಡಿದ್ದು ಎಲ್ಲಿ..? ಮೊದಲು ಬಳಸಿದ್ದು ಯಾರು? ಈ ಮಾಹಿತಿ ನಿಮಗೆ ಗೊತ್ತಾ?
ಮೇಕ್ ಅಪ್ ಅಂದ ಕೂಡಲೆ ನಿಮಗೆ ಮಹಿಳೆಯರು ನೆನಪಾಗಬಹುದು. ಯುವತಿಯರು ಮೇಕ್ ಅಪ್ ಇಲ್ಲದೆ ಮನೆಯಿಂದ ಹೊರಬರುವುದಿಲ್ಲ. ಸಿಂಪಲ್ ಮೇಕ್ ಅಪ್‌ನಿಂದ ಹಿಡಿದು ಗಂಟೆಗಳ ಕಾಲ ಕನ್ನಡಿ ಮುಂದೆ ಕುಳಿತು ಮೇಕ್ ಅಪ್ ಮಾಡಿಕೊಳ್ಳುವುದು ನೋಡಬಹುದು. ಬಹುತೇಕ ಎಲ್ಲರ ಮನೆಯಲ್ಲೂ ಮೇಕ್ ಅಪ್ ಕಿಟ್‌ಗಳು ಇರುವುದು ಸಹಜ. ಕಡಿಮೆ ಮೊತ್ತದ ಕಿಟ್‌ನಿಂದ ದುಬಾರಿ ಮೊತ್ತದ ಮೇಕ್ ಅಪ್ ಕಿಟ್‌ಗಳು ಈಗ ಮಾರುಕಟ್ಟೆಯಲ್ಲಿ ಸಿಗುತ್ತವೆ.
ಮೇಕ್ ಅಪ್ ಬಳಸದೆ ಮಹಿಳೆಯರು ಇರಲು ಸಾಧ್ಯವಿಲ್ಲ. ಹಾಗೆ ನಿತ್ಯ ಅವರು ಹೊಸ ಹೊಸ ವಿಧಾನದ ಮೇಕ್ ಅಪ್ ಬಳಸುವುದು ನೋಡಬಹುದು. ಹಾಗೆ ಕನ್ನಡಿ ಮುಂದೆ ನಿಂತು ಗಂಟೆಗಳ ಕಾಲ ತಾಳ್ಮೆಯಿಂದ ಅವರು ಮೇಕ್ ಅಪ್ ಮಾಡಿಕೊಳ್ಳುತ್ತಾರೆ. ಹಾಗೆ ಪುರುಷರು ಕೂಡ ಇದಕ್ಕೆ ಕಡಿಮೆ ಇಲ್ಲ, ಅವರು ಕೂಡ ಸಾಮಾನ್ಯವಾಗಿ ಮುಖದ ಸೌಂದರ್ಯದ ಕಡೆ ಬಹಳ ಗಮನವಿಡುತ್ತಾರೆ.

ಮಹಿಳೆಯರು ತುಸು ಹೆಚ್ಚಾಗಿಯೇ ತಮ್ಮ ಸೌಂದರ್ಯದ ಕಡೆಗೆ ಒಲುವು ಹೊಂದಿರುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಸೌಂದರ್ಯ ವರ್ಧಕ ಕ್ರೀಮ್‌ಗಳ ಬಳಸುವುದು ನೋಡಬಹುದು. ಇನ್ನು ಈಗ ಈ ಬ್ಯೂಟಿ ಕ್ಷೇತ್ರವು ಸಾವಿರಾರು ಕೋಟಿ ರೂಪಾಯಿಯ ವ್ಯವಹಾರದ ಉದ್ಯಮವಾಗಿ ಬೆಳೆದಿದೆ. ಹತ್ತಾರು ಕಂಪನಿಗಳು ಈಗ ಕಾಸ್ಮೆಟಿಕ್ ಮಾರಾಟ ಮಾಡಿ ಬಹುದೊಡ್ಡ ಕಂಪನಿಗಳಾಗಿಯೂ ಬೆಳೆದಿದೆ.
ಆದ್ರೆ ಮೊದಲ ಬಾರಿಗೆ ಈ ಮೇಕ್ ಅಪ್ ಬಳಸಿದ್ದು ಯಾರು ಎಂಬುದು ನಿಮಗೆ ಗೊತ್ತಾ? ಹೌದು ಇತಿಹಾಸದಲ್ಲಿ ಮೊದಲ ಬಾರಿಗೆ ಈ ಮೇಕ್ ಅಪ್ ಕುರಿತು ಎಲ್ಲಿ ಉಲ್ಲೇಖವಿದೆ? ಎಂಬುದು ನಿಮಗೆ ಗೊತ್ತಾ? ಮಹಿಳೆಯರು ಸೌಂದರ್ಯಕ್ಕೆ ಈಗ ಇಷ್ಟೊಂದು ಒತ್ತು ನೀಡುತ್ತಿರುವುದರ ಹಿಂದೆ ಪುರಾತನ ಇತಿಹಾಸವು ಕಾರಣವಾಗಿದೆ.
ಆದ್ರೆ ಈ ಹಿಂದೆ ಮೇಕ್ ಅಪ್ ಆಗಿ ಫೌಂಡೇಷನ್ ಕ್ರೀಮ್‌ಗಳು, ದುಬಾರಿ ಕ್ರೀಮ್‌ಗಳು, ಲೈನರ್‌ಗಳು, ಪೌಡರ್ ಬಳಸುತ್ತಿರಲಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ನೈಸರ್ಗಿಕವಾಗಿ ಸಿಗುವಂತಹ ವಸ್ತುಗಳೇ ಆಗ ಸೌಂದರ್ಯ ವರ್ಧಕವಾಗಿದ್ದವು. ಹಾಗಾದ್ರೆ ಮೊದಲು ಈ ವಸ್ತುಗಳ ಬಳಸಿದ್ದು ಯಾರು?
ಮೊದಲು ಮೇಕ್ ಅಪ್ ಬಳಸಿದ್ದು ಯಾರು ಎಂಬುದನ್ನು ಹುಡುಕುತ್ತಾ ಹೊರಟಾಗ ಈ ಕಾಲ ಪ್ರಾಚೀನ ಈಜಿಪ್ಟ್‌ಗೆ ಕರೆದೊಯ್ಯುತ್ತದೆ. ಆದ್ರೆ ಈಜಿಪ್ಟ್ ಕಾಲದಲ್ಲಿ ಮೇಕ್ ಅಪ್ ಕಂಡುಹಿಡಿದಿರುವುದಲ್ಲ ಬದಲಿಗೆ ಈಜಿಪ್ಟ್‌ನವರು ಮೇಕ್ ಅನ್ನು ಕರಗತ ಮಾಡಿಕೊಂಡರು ಎಂಬುದು ತಿಳಿಯುತ್ತದೆ. ಅವರು ಕಣ್ಣುಗಳ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು ಎಂದು ತಿಳಿದುಬರುತ್ತದೆ. ಇದಕ್ಕಾಗಿ ಕಣ್ಣಗಳ ಸುತ್ತ ನೈಸರ್ಗಿಕವಾಗಿ ಅವರು ಮಾಡುತ್ತಿದ್ದ ಕಪ್ಪು ಬಳಸುತ್ತಿದ್ದರು. ಹಸಿರು ಮಲಾಕೈಟ್ ಐಶ್ಯಾಡೋಗಳನ್ನು ಕೂಡ ಅವರು ಬಳಸಿದ್ದರು ಎನ್ನಲಾಗುತ್ತದೆ.
ಹಾಗೆ ಅವರು ಸೂರ್ಯನಿಂದ ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ನೈಸರ್ಗಿಕವಾಗಿ ರಚಿಸಲಾಗಿದ್ದ ದ್ರಾವಣ ಬಳಸುತ್ತಿದ್ದರು. ಹಾಗೆ ಪುಡಿ ಮಾಡಿದ ತಾಮ್ರದ ಹೊಟ್ಟು, ಐಶ್ಯಾಡೋ, ದೇವರ ಮುಂದೆ ಹಚ್ಚುತ್ತಿದ್ದ ದೀಪದಿಂದ ಪಡೆದ ಕರಿಯನ್ನು ಕೂಡ ಸೌಂದರ್ಯದ ಕಾರಣಕ್ಕೆ ಅವರು ಬಳಸಿದ್ದರಂತೆ. ತಾಮ್ರದ ಪುಡಿಗಳನ್ನು ಮುಖಕ್ಕೆ ಹಚ್ಚುವುದು ಹೊಳಪು ನೀಡುತ್ತಿತ್ತು ಎಂದು ಹೇಳಲಾಗಿದೆ.
ಹಾಗೆ ಅವರ ಹಲವು ಆಚರಣೆಗಳು, ಸಂಪ್ರದಾಯದಲ್ಲಿ ಸೌಂದರ್ಯ ವರ್ಧಕಗಳ ಬಳಕೆ ಹೆಚ್ಚಾಗಿರುತ್ತಿತ್ತು. ಅವರು ಜೇನು ತುಪ್ಪ ಬಳಸಿ ನೈಸರ್ಗಿಕವಾಗಿ ತ್ವಜೆಯ ಸೌಂದರ್ಯ ಹೆಚ್ಚಿಸಿಕೊಳ್ಳಲು ದ್ರಾವಣ ರೆಡಿ ಮಾಡಿದ್ದರು, ಇದರಿಂದ ಸೂರ್ಯನ ಕಿರಣಗಳ ಪರಿಣಾಮಕಾರಿ ಹಾನಿ ತಡೆಯುವಲ್ಲಿ ಸಹಕಾರಿಯಾಗಿತ್ತು. ಹಾಗೆ ಹಲವು ಕೀಟಗಳ ಬಳಸಿ ಅವರು ಲಿಪ್‌ಸ್ಟಿಕ್ ಬಳಸಿದ್ದರು ಕೆಂಪು ಜೀರುಂಡೆ ಹಾಗೂ ಮರದಲ್ಲಿ ಸಿಗುತ್ತಿದ್ದ ಅಂಟು ಬಳಸಿ ಅವರು ಲಿಪ್‌ಸ್ಟಿಕ್ ಕಂಡುಕೊಂಡರು.



Click it and Unblock the Notifications