Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಭಾರತದಲ್ಲಿ ಬ್ಯಾನ್ ಆಗುತ್ತಾ ಟೆಲಿಗ್ರಾಮ್..! ತನಿಖೆ ಆರಂಭಿಸಿದ ಕೇಂದ್ರ ಸಚಿವಾಲಯ!
ಇತ್ತೀಚಿನ ದಿನಗಳಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರನ್ನ ರಷ್ಯಾದಲ್ಲಿ ಬಂಧಸಲಾಗಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅಪ್ಲಿಕೇಶನ್‌ನಲ್ಲಿ ಮಾಡರೇಟರ್‌ಗಳ ನಿಗ್ರಹಿಸುವಲ್ಲಿ ವಿಫಲವಾಗಿದೆ ಎಂಬ ಕಾರಣಕ್ಕೆ ಅವರನ್ಉ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳಾಗಿವೆ.
ಪ್ರಪಂಚದಾದ್ಯಂತ ಮಿಲಿಯನ್‌ಗಟ್ಟಲೆ ಜನರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಇನ್ನು ರಷ್ಯಾದಲ್ಲಿ ಈ ಟೆಲಿಗ್ರಾಮ್ ಎರಡನೇ ಫೇಸ್‌ಬುಕ್ ರೀತಿ ಬಳಕೆಯಲ್ಲಿದೆ. ಆದರೆ ಈಗ ಹಲವು ಆರೋಪದ ಅಡಿಯಲ್ಲಿ ಸಿಇಒ ಬಂಧನವಾಗಿರುವುದು ಈಗ ಅಪ್ಲಿಕೇಶನ್ ಕುರಿತ ಬಳಕೆದಾರರ ಭಯಕ್ಕೆ ಕಾರಣವಾಗಿದೆ.

ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಮಾಡರೇಟರ್‌ಗಳ ಮೇಲೆ ಹೆಚ್ಚು ಗಮನಹರಿಸಿಲ್ಲ ಎಂದು ಅವರನ್ನು ಬಂಧಿಸಲಾಗಿದೆ. ಮಾಡರೇಟರ್‌ಗಳು ಎಂದರೆ ಆ ಆಪ್ ಅನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳುವುದು. ಒಂದು ರೀತಿಯ ಹ್ಯಾಕಿಂಗ್ ಎನ್ನಬಹುದು. ಆದ್ರೆ ಈಗ ಭಾರತದಲ್ಲಿ ಬ್ಯಾನ್ ಆಗುವ ಆತಂಕಕ್ಕೆ ಒಳಗಾಗಿದೆ. ಭಾರತದಲ್ಲಿ ಸುಮಾರು 5 ಮಿಲಿಯನ್ ಬಳಕೆದಾರರಿದ್ದಾರೆ. ಆದರೆ ಈಗ ಬ್ಯಾನ್ ಆಗುವ ನಿರೀಕ್ಷೆ ಇದೆ.
ಭಾರತದಲ್ಲಿ ಮೆಸೇಜಿಂಗ್ ಅಪ್ಲಿಕೇಶನ್‌ನ ಭವಿಷ್ಯವು ತನಿಖೆಯ ಆಧಾರದ ಮೇಲೆ ನಿಂತಿದೆ. ಸಿಇಒ ಬಂಧನವಾಗುತ್ತಿದ್ದಂತೆ ಭಾರತದಲ್ಲಿ ಅಪ್ಲಿಕೇಶನ್ ಈಗ ತನಿಖೆಯ ಹಂತಕ್ಕೆ ತಲುಪಿದೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಕಂಪನಿಯ P2P ಸಂವಹನಗಳನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗುತ್ತಿದೆ.
ಜೂಜು ಮತ್ತು ಸುಲಿಗೆಯಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಟೆಲಿಗ್ರಾಮ್ ಭಾಗಿಯಾಗಿರುವುದನ್ನು ಸಚಿವಾಲಯಗಳು ನಿರ್ದಿಷ್ಟವಾಗಿ ಪರಿಶೀಲಿಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಈ ಅಪ್ಲಿಕೇಶನ್ ಮೂಲಕ ಇಂತಹ ಕೃತ್ಯ ನಡೆದಿರುವುದು ಬಯಲಾದರೆ ಖಂಡಿತ ಭಾರತಲ್ಲಿ ಬ್ಯಾನ್ ಭೀತಿ ಎದುರಿಸಬೇಕಾಗುತ್ತದೆ.
ಭಾರತವು ಕಂಪನಿಯ ಬಗ್ಗೆ ತನಿಖೆ ನಡೆಸುತ್ತಿರುವಾಗ, ಅದರ ಮುಖ್ಯಸ್ಥ ಪಾವೆಲ್ ಡುರೊವ್ ಅನ್ನು ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಬಂಧಿಸಲಾಯಿತು. ಟೆಲಿಗ್ರಾಮ್ ಸಂಸ್ಥಾಪಕನನ್ನು ಮಾಡರೇಶನ್ ನೀತಿಗಳ ಮೇಲೆ ಬಂಧಿಸಲಾಗಿದೆ ಎಂದು ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಟೆಲಿಗ್ರಾಮ್ ವಿರುದ್ಧ ಈ ಹಿಂದೆ ದಾಖಲಾಗಿರುವ ದೂರುಗಳನ್ನು ಸಹ ಸಚಿವಾಲಯ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ.
ಐಟಿ ಸಚಿವಾಲಯವು ಈ ವಿಷಯದಲ್ಲಿ ತನಿಖಾ ಸಂಸ್ಥೆಯಾಗಿಲ್ಲ ಮತ್ತು ಸಚಿವಾಲಯದ ಅಡಿಯಲ್ಲಿ ಸಿಇಆರ್‌ಟಿ-ಇನ್ ಸಹ ಸೈಬರ್ ಕ್ರೈಂಗಳ ಮೇಲೆ ಸೈಬರ್ ಕ್ರೈಂಗಳ ಮೂಲಕ ಪರಿಶೀಲನೆ ಹಾಗೂ ತನಿಖೆಗೆ ಮುಂದಾಗಿದೆ. ಆದ್ರೆ ಭಾರತದ ಬಳಕೆದಾರರು ಯಾವ ರೀತಿಯ ಸಮಸ್ಯೆ ಎದುರಿಸಿದ್ದಾರೆ. ಹಾಗೂ ಇಲ್ಲಿನ ಐಟಿ ನಿಯಮಗಳನ್ನು ಟೆಲಿಗ್ರಾಮ್ ಉಲ್ಲಂಘಿಸಿದೆಯೇ ಎಂಬುದನ್ನು ಪತ್ತೆ ಮಾಡಬೇಕಿದೆ. ಇಂದು ವೇಳೆ ಈ ರೀತಿ ನಿಯಮಗಳನ್ನು ಉಲ್ಲಂಘಿಸಿದ್ದರೆ ಖಂಡಿತ ಭಾರತದಿಂದ ಬ್ಯಾನ್ ಆಗುವ ಸಾಧ್ಯತೆ ಅಧಿಕವಾಗಿದೆ.
ಯಾರು ಈ ಸಿಇಒ ಪಾವೆಲ್ ಡುರೊವ್
39 ವರ್ಷ ವಯಸ್ಸಿನ ರಷ್ಯಾ ಮೂಲದ ಬಿಲಿಯನೇರ್ ಅವರು ಟೆಲಿಗ್ರಾಮ್‌ನ ಸ್ಥಾಪಕ ಮತ್ತು CEO ಆಗಿದ್ದು, ಅಂದಾಜು $15.5 ಶತಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2014ರಲ್ಲಿ ಸರ್ಕಾರ ಹಾಗೂ ಅವರ ಆಪ್ ನಡುವಿನ ತಿಕ್ಕಾಟದಲ್ಲಿ ರಷ್ಯಾ ಬಿಟ್ಟು ಹೊರಟರು. ಇದಾದ ಬಳಿಕ ಅವರು ಟೆಲಿಗ್ರಾಮ್ ಆರಂಭಿಸಿದರು. 2013ರಲ್ಲಿ ಟೆಲಿಗ್ರಾಮ್ ಆಪ್ ಅನ್ನು ಆರಂಭಿಸಿದರು. ಒಂದು ಕಾಲದಲ್ಲಿ ಟೆಲಿಗ್ರಾಮ್ ಎಂಬುದು ಭಾರತೀಯ ಸಂಸ್ಥೆ ಎಂದು ಸುದ್ದಿ ಹಬ್ಬಿತ್ತು. ಅಪ್ಲಿಕೇಶನ್ ಈಗಾಗಲೇ ವಿಶ್ವಾದ್ಯಂತ ನೂರಾರು ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಮುಂಬರುವ ವರ್ಷದಲ್ಲಿ ಒಂದು ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ತಲುಪುವ ಸಾಧ್ಯತೆಯಿದೆ.



Click it and Unblock the Notifications
