Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಟೆಲಿಗ್ರಾಮ್ ಸಂಸ್ಥಾಪಕ ಅರೆಸ್ಟ್..! ಏಕೆ ಗೊತ್ತಾ? ಯಾರು ಈ ಶ್ರೀಮಂತ?
ಟೆಲಿಗ್ರಾಮ್ ಆಪ್ ಕುರಿತು ನೀವೆಲ್ಲಾ ಕೇಳಿರುತ್ತೀರಿ, ಬಳಸಿರುತ್ತೀರಿ ಕೂಡ. ಒಂದು ಕಾಲದಲ್ಲಿ ವಾಟ್ಸಾಪ್ ನಂತರ ಈ ಟೆಲಿಗ್ರಾಮ್ ಬಳಸುವವರು ಹೆಚ್ಚಾಗಿದ್ದರು. ಟೆಲಿಗ್ರಾಮ್‌ನಲ್ಲಿ ಯಾವುದೇ ಫೈಲ್ ಅನ್ನು ಎಷ್ಟು ದೊಡ್ಡದಾಗಿದ್ದರು ಶೇರ್ ಮಾಡಬಹುದಿತ್ತು. ಹೀಗಾಗಿ ಈ ಆಪ್ ಬಹಳ ಬೇಗೆ ಫೇಮಸ್ ಆಗಿಬಿಟ್ಟಿತ್ತು.
ಟೆಲಿಗ್ರಾಮ್ ಸಹ ಸಂಸ್ಥಾಪಕ ಮತ್ತು ಸಿಇಓ ಪಾವೆಲ್ ಡುರೊವ್ ಕುರಿತು ನೀವು ಕೇಳಿರಬಹುದು. ಇತ್ತೀಚಿಗೆ ಮಕ್ಕಳ ವಿಚಾರವಾಗಿ ಸುದ್ದಿಯಾಗಿದ್ದರು. ಜಗತ್ತಿನ ಹಲವು ಕಡೆಗಳಲ್ಲಿ ನನಗೆ 100ಕ್ಕೂ ಹೆಚ್ಚು ಮಕ್ಕಳಿದ್ದಾರೆ ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಅಂದರೆ ಬಯೋಲಾಜಿಕಲ್ ತಂದೆಯಾಗಿರುವ ಕುರಿತು ಅವರು ಹಂಚಿಕೊಂಡಿದ್ದರು.

ಸ್ಮರ್ಮ್ ದಾನ ಮಾಡುವ ಮೂಲಕ ಮಕ್ಕಳ ಹುಟ್ಟಿಗೆ ಕಾರಣವಾಗುವ ಒಂದು ವೈಜ್ಞಾನಿಕ ವಿಧಾನ ಇದಾಗಿದೆ. ಈ ಮೂಲಕ ಅವರು 12 ದೇಶದಲ್ಲಿ ಬರೋಬ್ಬರಿ 100ಕ್ಕೂ ಹೆಚ್ಚು ಮಕ್ಕಳ ಪಡೆದಿರುವುದಾಗಿ ಹೇಳಿದ್ದರು. ಆದ್ರೆ ಈಗ ಅವರ ಬಂಧನವಾಗಿದೆ ಎಂದು ವರದಿಯಾಗಿದೆ. ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡ್ಯುರೊವ್ ಅವರನ್ನು ಶನಿವಾರ ರಾತ್ರಿ ಫ್ರಾನ್ಸ್‌ನಲ್ಲಿ ಬಂಧಿಸಲಾಗಿದೆ.
ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಮಾಡರೇಟರ್‌ಗಳ ಮೇಲೆ ಹೆಚ್ಚು ಗಮನ ಹರಿಸಿಲ್ಲ ಎಂದು ಅವರನ್ನು ಬಂಧಿಸಲಾಗಿದೆ. ಮಾಡರೇಟರ್‌ಗಳು ಎಂದರೆ ಆ ಆಪ್ ಅನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳುವುದು. ಒಂದು ರೀತಿಯ ಹ್ಯಾಕಿಂಗ್ ಎನ್ನಬಹುದು. ಒಂದು ಆಪ್ ಹೊರಬಂದರೆ ವಿಶ್ವದ ಯಾವುದೇ ಮೂಲೆಯಲ್ಲಿ ಅದರ ಬಳಕೆಯಾಗುತ್ತಿದ್ದರೆ ಎಲ್ಲರಿಗೂ ಒಂದೇ ರೀತಿಯಲ್ಲಿ ಬಳಕೆಗೆ ಸಿಗಬೇಕು. ಅಥವಾ ಅದನ್ನು ಬಳಸುವವರಿಗೆ ಒಂದೇ ರೀತಿ ವೈಶಿಷ್ಟ್ಯ ಸಿಗಬೇಕು. ಆದರೆ ಮಾಡರೇಟರ್‌ಗಳು ಈ ಆಪ್‌ಗಳನ್ನು ತಮ್ಮ ಇಷ್ಟದಂತೆ ಬಳಸುವುದು. ಅದಕ್ಕೆ ತಾವಾಗಿಯೇ ಪ್ರೋಗ್ರಾಮಿಂಗ್ ಮಾಡಿಕೊಳ್ಳುವುದು ನಡೆಸುತ್ತಾರೆ.
ಈ ಮಾಡರೇಟ್‌ರ್‌ಗಳ ಮೇಲೆ ಆಪ್ ಗಮನವಿಟ್ಟಿಲ್ಲ. ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ ಎಂಢದು ಟೆಲಿಗ್ರಾಮ್ ಸಿಇಒ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ ಬಂಧನ ವಿರುದ್ಧ ಆಕ್ರೋಶ ಕೇಳಿಬಂದಿದ್ದು, ಎಲಾನ್ ಮಸ್ಕ್ ತಿರುಗೇಟು ನೀಡಿದ್ದಾರೆ. ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಬಂಧಿಸದೆ ಅವರನ್ನು ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
39 ವರ್ಷ ವಯಸ್ಸಿನ ರಷ್ಯಾ ಮೂಲದ ಬಿಲಿಯನೇರ್ ಅವರು ಟೆಲಿಗ್ರಾಮ್‌ನ ಸ್ಥಾಪಕ ಮತ್ತು CEO ಆಗಿದ್ದು, ಅಂದಾಜು $15.5 ಶತಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಪಾವೆಲ್ ಡುರೊವ್ 2006 ರಲ್ಲಿ VKontakte ಎಂಬ ಆಪ್ ಹೊರತಂದರು. ಇದ್ಉ ರಷ್ಯಾದಲ್ಲಿ ಫೇಸ್‌ಬುಕ್‌ನಂತೆ ಫೇಮಸ್ ಆಗಿತ್ತು. ಈಗಲೂ ರಷ್ಯಾದಲ್ಲಿ ಫೇಮಸ್ ಸಾಮಾಜಿಕ ಜಾಲತಾಣವಾಗಿದೆ. ಆದರೆ 2014ರಲ್ಲಿ ಸರ್ಕಾರ ಹಾಗೂ ಅವರ ಆಪ್ ನಡುವಿನ ತಿಕ್ಕಾಟದಲ್ಲಿ ರಷ್ಯಾ ಬಿಟ್ಟು ಹೊರಟರು.
ಈ ವೇಳೆ ತಮ್ಮ ಕಂಪನಿಯ ಶೇರುಗಳನ್ನು ಮಾರಾಟ ಮಾಡಿದರು. ಇದಾಗಿ 2013ರಲ್ಲಿ ಟೆಲಿಗ್ರಾಮ್ ಆಪ್ ಅನ್ನು ಆರಂಭಿಸಿದರು. ಒಂದು ಕಾಲದಲ್ಲಿ ಟೆಲಿಗ್ರಾಮ್ ಎಂಬುದು ಭಾರತೀಯ ಸಂಸ್ಥೆ ಎಂದು ಸುದ್ದಿ ಹಬ್ಬಿತ್ತು. ಹೀಗಾಗಿ ಭಾರತದಲ್ಲಿ ಫೇಮಸ್ ಆಯಿತು. ಅಪ್ಲಿಕೇಶನ್ ಈಗಾಗಲೇ ವಿಶ್ವಾದ್ಯಂತ ನೂರಾರು ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಮುಂಬರುವ ವರ್ಷದಲ್ಲಿ ಒಂದು ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ತಲುಪುವ ಸಾಧ್ಯತೆಯಿದೆ. ಸದ್ಯ ಟೆಲಿಗ್ರಾಮ್ ದುಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ.



Click it and Unblock the Notifications