Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು ತಮ್ಮ ವೈಯಕ್ತಿಕ ಜೀವನದಲ್ಲಿ ಯಾರಿಗೂ ಜಾಗ ಕೊಡೋದಿಲ್ಲ!
ಹದಿ ಹರೆಯದ ವಯಸ್ಸಿನಲ್ಲಿ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಪೋಷಕರಿಗೆ ಮಕ್ಕಳನ್ನು ಈ ವಯಸ್ಸಿನಲ್ಲೇ ನಿಭಾಯಿಸುವುದೇ ಕಷ್ಟ ಎಂದೆನಿಸ ಬಿಡುತ್ತದೆ. ಯಾಕಂದ್ರೆ ಈ ಸಮಯದಲ್ಲಿ ಅವರ ಮನಸ್ಸು ಆಗಾಗ್ಗೆ ಬದಲಾಗುತ್ತಾ ಇರುತ್ತದೆ. ಅವರು ಹೊಸತನ್ನು ಹುಡುಕುವ ಪ್ರಯತ್ನದಲ್ಲಿ ಇರುತ್ತಾರೆ. ಇನ್ನೂ ಈ ವಯಸ್ಸಿನಲ್ಲಿ ಅವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಕೂಡ ಇರುತ್ತದೆ. ಇಂತಹ ಸಂದರ್ಭದಲ್ಲಿ ತುಂಬಾ ಜನ ಹದಿಹರೆಯದ ಮಕ್ಕಳಿಗೆ ಪೋಷಕರು ಅವರ ವೈಯಕ್ತಿಕ ಜೀವನವನ್ನು ಪ್ರವೇಶಿಸೋದನ್ನು ಇಷ್ಟ ಪಡೋದಿಲ್ಲ.
ಆದರೆ ಹದಿ ಹರೆಯದ ಮಕ್ಕಳೆಂದರೆ ಈ ವಯಸ್ಸಿನಲ್ಲಿ ಪೋಷಕರು ಒಂದು ಕಣ್ಣು ಇಟ್ಟಿರುತ್ತಾರೆ. ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಖಂಡಿತ ಪ್ರಶ್ನೆ ಮಾಡುತ್ತಾರೆ. ಆದರೆ ತುಂಬಾ ಜನ ಮಕ್ಕಳಿಗೆ ಇದು ಇಷ್ಟ ಆಗೋದಿಲ್ಲ. ಅದ್ರಲ್ಲೂ ಈ ರಾಶಿಯವರು ಪೋಷಕರು ತಮ್ಮ ವೈಯಕ್ತಿಕ ಜೀವನದಲ್ಲಿ ಆಸಕ್ತಿ ತೋರಿಸೋದನ್ನು ಖಂಡಿತ ಇಷ್ಟ ಪಡೋದಿಲ್ಲ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ಏಕಾಂಗಿಯಾಗಿ ಇರೋದಕ್ಕೆ ಇಷ್ಟ ಪಡುತ್ತಾರೆ. ಅವರ ಸುತ್ತ ಇರುವ ವಿಚಾರಗಳನ್ನು ಅವರಾಗಿಯೇ ಅರ್ಥ ಮಾಡಿಕೊಳ್ಳೋದಕ್ಕೆ ಇಷ್ಟ ಪಡುತ್ತಾರೆ. ಈ ಮಧ್ಯೆ ಮೂರನೇಯವರು ಮೂಗು ತೂರಿಸೋದು ಅವರಿಗೆ ಇಷ್ಟ ಆಗೋದಿಲ್ಲ. ಅದು ಪೋಷಕರಾದರೂ ಸರಿ, ಬೇರ್ಯಾರೇ ಆದರೂ ಸರಿ. ಹೀಗಾಗಿ ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಇದು ಅವರಲ್ಲಿ ತಾಳ್ಮೆಯನ್ನು ಹೆಚ್ಚಿಸೋದಕ್ಕೆ ಸಹಾಯ ಮಾಡುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಅವರ ಆಲೋಚನೆ ಮತ್ತು ಕೆಲಸವನ್ನು ನಂಬುವ ತರ್ಕಬದ್ಧ ವ್ಯಕ್ತಿಗಳು. ಇವರು ಯಾವುದೇ ವಿಚಾರವಾದರೂ ಸರಿ ಅದರ ಬಗ್ಗೆ ಸಾಕಷ್ಟು ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತಾರೆ. ಇದರಿಂದಾಗಿ ಇವರಿಗೆ ತಮ್ಮದೇ ಆದ ಸಮಯ ಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಪೋಷಕರು ಮಧ್ಯ ಹೋದರೆ ಇವರು ಇಷ್ಟ ಪಡೋದಿಲ್ಲ. ತಮಗಾಗಿ ಸ್ಥಳವಾಕಾಶ ಬೇಕೆಂದು ಬಯಸುತ್ತಾರೆ.
ವೃಶ್ಚಿಕ
ವೃಶ್ಚಿಕ ರಾಶಿಯವರು ಪ್ರತ್ಯೇಕವಾಗಿರೋದಕ್ಕೆ ಇಷ್ಟ ಪಡುತ್ತಾರೆ. ಯಾವುದೇ ವಿಚಾರವಿರಲಿ, ಭಾವನೆಗಳಿರಲಿ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇವರಿಗೆ ಸಾಕಷ್ಟು ಸಮಯ ಬೇಕಾಗಿರುತ್ತದೆ. ಇನ್ನೂ ಹದಿಹರೆಯದ ವಯಸ್ಸಿನಲ್ಲಿ ತಮ್ಮದೇ ಆದ ವೈಯಕ್ತಿಕ ಸಮಯ ಬೇಕೆಂದು ಇವರಿಗೆ ಅನಿಸುತ್ತದೆ. ಹೀಗಾಗಿ ಬೇರೆಯರಿಗೂ ಇವರು ತಮ್ಮ ವೈಯಕ್ತಿಕ ಜೀವನದೊಳಗಡೆ ಬಿಟ್ಟುಕೊಳ್ಳೋದಿಲ್ಲ.
ಕುಂಭ ರಾಶಿ
ಕುಂಭ ರಾಶಿಯವರು ಒಂದೇ ವಿಚಾರದ ಬಗ್ಗೆ ವಿಭಿನ್ನ ದೃಷ್ಟಿ ಕೋನವನ್ನು ಹೊಂದಿದ್ದಾರೆ. ಈ ಎಲ್ಲಾ ದೃಷ್ಟಿಕೋನಗಳು ಮತ್ತು ಅವರ ಸುತ್ತ ನಡೆಯುವ ಸಂಭಾಷಣೆಗಳನ್ನು ಮತ್ತು ಅವರ ಸಾಮಾಜಿಕವಾಗಿ ನಡೆಯುತ್ತಿರುವ ಜೀವನವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕಾಲಾವಕಾಶ ಬೇಕಾಗುತ್ತದೆ. ಇವರು ಚಿಂತಕರಾಗಿದ್ದು, ಎಲ್ಲಾ ವಿಚಾರದಲ್ಲೂ ಶಾಂತಿಯನ್ನು ಬಯಸುತ್ತಾರೆ.
ಮೀನ ರಾಶಿ
ಈ ರಾಶಿಯವರು ಹೆಚ್ಚು ಆಧ್ಯಾತ್ಮಿಕ, ಆಳವಾದ ಚಿಂತಕರು ಮತ್ತು ಅಂತರ್ಮುಖಿಗಳು. ಇವರು ಕೆಲವೇ ಕೆಲವು ಜನರ ಜೊತೆಗೆ ಮಾತ್ರ ಆತ್ಮೀಯರಾಗಿರುತ್ತಾರೆ. ಇವರು ಹೆಚ್ಚು ಜನರೊಂದಿಗೆ ಸೇರೋದಕ್ಕೆ ಇಷ್ಟ ಪಡೋದಿಲ್ಲ. ಇವರ ಭಾವನೆಗಳನ್ನು ಬೇರೆಯವರಿಗೆ ಅರ್ಥ ಮಾಡಿಕೊಳ್ಳೋದೇ ಕಷ್ಟ. ಇವರು ಯಾರ ಬಳಿಯೂ ತಮ್ಮ ವಿಚಾರಗಳನ್ನು ಹಂಚಿಕೊಳ್ಳೋದಿಲ್ಲ.



Click it and Unblock the Notifications