Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಳ್ಳ ಕುಳ್ಳ ಎಂದು ಗೇಲಿ ಮಾಡಿದರು..! ಆತ ಈಗ ಹಾಲಿವುಡ್ ಸೂಪರ್ ಸ್ಟಾರ್ ಆದ ಕಥೆ ಇದು..!!
ಕೆಲವರ ದೈಹಿಕ ಅಕಾರದ ಬಗ್ಗೆ ಆಡಿಕೊಂಡು ನಗುವವರು ಇದ್ದೇ ಇರುತ್ತಾರೆ. ಕಪ್ಪಾಗಿದ್ದರೆ, ಕುಳ್ಳಗಿದ್ದರೆ, ತೆಳ್ಳಗಿದ್ದರೆ ಅಥವಾ ದಪ್ಪ ಇದ್ದರೆ ಒಂದಲ್ಲಾ ಒಂದು ರೀತಿ ಅಪಹಾಸ್ಯ ಮಾಡಿ ನಗುವುದು ಮಾಡುತ್ತಾರೆ. ಇದೆಲ್ಲಾ ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಅದರಲ್ಲೂ ಶಾಲಾ ಕಾಲೇಜು ಮಟ್ಟದಲ್ಲೂ ಈ ರೀತಿ ವರ್ತನೆಯನ್ನು ನಾವು ನೋಡಬಹುದು. ಆದ್ರೆ ಇಲ್ಲೊಬ್ಬ ಬಾಲಕ ತುಂಬಾನೆ ಕುಳ್ಳಗಿದ್ದ ಕಾರಣ ಆತನನ್ನು ಎಲ್ಲರು ಆಡಿಕೊಳ್ಳುತ್ತಿದ್ದರು, ಗೇಲಿ ಮಾಡುತ್ತಿದ್ದರು. ಆದರೆ ಈಗ ಆತ ಎಲ್ಲರು ನಿಬ್ಬೆರಗಿನಿಂದ ನೋಡುವಂತಹ ಸಾಧನೆ ಮಾಡಿದ್ದಾನೆ. ಎಲ್ಲರಿಗೂ ಆತ ನಿಜವಾದ ಹೀರೋ ಆಗಿದ್ದಾನೆ.

13 ವರ್ಷದ ಕ್ವಾಡೆನ್ ಬೇಲ್ಸ್ ಎಂಬಾತ ಅತ್ಯಂತ ಕುಳ್ಳಗಿನ ಮೈಕಟ್ಟು ಹೊಂದಿದ್ದ, ಈ ಕಾರಣದಿಂದಲೇ ಆತ ಎತ್ತರ ನೋಡಿ ಆಡಿಕೊಳ್ಳುತ್ತಿದ್ದರು. ಆದರೆ ಅದು ಆತನ ಅಂಗವೈಕಲ್ಯವಾಗಿತ್ತು. ವರ್ಷ ಕಳೆದರು ಆತ ಎತ್ತವಾಗವಾಗಲಿಲ್ಲ. ಆಧರೆ ಈಗ ಹಾಲಿವುಡ್ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಗಿಟ್ಟಿಸಿ ನಟಿಸಿಯೂ ಆಗಿದೆ. ಹೀಗಾಗಿ ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದಾನೆ.
2020 ರಲ್ಲಿ, ಕ್ವಾಡೆನ್ ಬೇಲ್ಸ್ ಎಂಬ 13 ವರ್ಷದ ಹುಡುಗನ ಹೃದಯವಿದ್ರಾವಕ ಕಥೆಯನ್ನು ಜಗತ್ತಿಗೆ ಪರಿಚಯಿಸಲಾಯಿತು, ಅವನು ತನ್ನ ಕುಬ್ಜ ಮೈಕಟ್ಟಿನ ಕಾರಣ ಶಾಲೆಯಲ್ಲಿ ಗೇಲಿ ಅನುಭವಿಸಬೇಕಾಯಿತು. ಅದೇಷ್ಟೋ ಅವಮಾನ ಎದುರಿಸಿದನು. ಒಂದು ವೈರಲ್ ವೀಡಿಯೊ ಕ್ವಾಡೆನ್ ಕಣ್ಣೀರಿನಲ್ಲಿ ತೋರಿಸಿದೆ, ಅವನು ಅನುಭವಿಸಿದ ಹಿಂಸೆಯಿಂದಾಗಿ ಯಾರನ್ನಾದರು "ಕೊಲೆ" ಮಾಡುವಷ್ಟು ಆತ ಕೋಪ ವ್ಯಕ್ತಪಡಿಸುತ್ತಾನೆ.
ಕ್ವಾಡೆನ್‌ನ ತಾಯಿ ಗೇಲಿ ಮಾಡುವ ಹಾಗೂ ಅದರ ತೀವ್ರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ವಿಶೇಷವಾಗಿ ವಿಕಲಾಂಗತೆ ಅಥವಾ ದೈಹಿಕವಾಗಿ ವೈಕಲ್ಯ ಅನುಭವಿಸುವ ಮಕ್ಕಳ ಮೇಲೆ ಈ ಗೇಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಆಕೆ ವಿಡಿಯೋದಲ್ಲಿ ವಿವರಿಸಿದ್ದರು. ಈ ವಿಡಿಯೋ ಶೀಘ್ರ ವ್ಯಾಪಕ ಗಮನವನ್ನು ಗಳಿಸಿತು, ಹಾಲಿವುಡ್ ಸೆಲೆಬ್ರಿಟಿಗಳನ್ನು ತಲುಪಿತು. ಈ ಹಾಲಿವುಡ್ ಮಂದಿ ಆತನ ಬೆಂಬಲಿಸಿ ಮೆರವಣಿಗೆ ಮಾಡಿದ್ದರು. ಈ ವಿಡಿಯೋಗೆ ಲಕ್ಷ ಲಕ್ಷ ಮೆಚ್ಚುಗೆ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿತು.
ಆತನ ಪರವಾಗಿ ಹಾಲಿವುಡ್‌ನ ಖ್ಯಾತ ಕಮಿಡಿಯನ್ ಬ್ರಾಡ್ ವಿಲಿಯಮ್ಸ್ ಅವರು GoFundMe ಅಭಿಯಾನವನ್ನು ಪ್ರಾರಂಭಿಸಿದರು, ಅವರು ಮತ್ತು ಅವರ ತಾಯಿಯನ್ನು ಕ್ಯಾಲಿಫೋರ್ನಿಯಾದ ಪ್ರಸಿದ್ಧ ಡಿಸ್ನಿ ಲ್ಯಾಂಡ್‌ಗೆ ಕಳುಹಿಸಲು $10,000 ಸಂಗ್ರಹಿಸುವ ಆರಂಭಿಕ ಗುರಿ ಹೊಂದಿದರು.
ಈ ಪ್ರಚಾರವು ನಿರೀಕ್ಷೆಗಳನ್ನು ಮೀರಿ ದೇಣಿಗೆ ಸಂಗ್ರಹಕ್ಕೆ ಕಾರಣವಾಯಿತು. ಈ ಅಭಿಯಾನದಿಂದ ಬರೋಬ್ಬರಿ $470,000 ಸಂಗ್ರಹಿಸಲಾಯಿತು. ಆದರೆ ಕುಟುಂಬವು ಹೆಚ್ಚುವರಿಯಾಗಿ ದೇಣಿಗೆ ಬಂದ ಹಣವನ್ನು ದಾನ ಮಾಡಲು ನಿರ್ಧರಿಸಿತು. 2022 ರ ಚಲನಚಿತ್ರ "ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್" ನಲ್ಲಿ ಕ್ವಾಡೆನ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ.
ನಿರ್ಮಾಪಕ ಜಾರ್ಜ್ ಮಿಲ್ಲರ್ ಅವರ ಗಮನವನ್ನು ಈ ವಿಡಿಯೋ ಸೆಳೆಯಿತು. ಈಗ ಕ್ವಾಡೆನ್ ಮುಂಬರುವ ಚಲನಚಿತ್ರ "ಫ್ಯೂರಿಯೋಸಾ" ನಲ್ಲಿ ಪಾತ್ರವೊಂದನ್ನು ನಿರ್ವಹಿಸಲಿದ್ದು, ಹಾಲಿವುಡ್‌ನಲ್ಲಿ ಆತ ಎಲ್ಲರ ಗಮನ ಸೆಳೆದಿದ್ದಾಗಿದೆ. ಆತನ ಸಾಹಸಮಯ ಯಾತ್ರೆ ಈಗ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದೆ. ಜೊತೆಗೆ ಆತ ಹಲವಾರು ಮಕ್ಕಳ ಆತ್ಮಸ್ಥೈರ್ಯದ ದಾರಿಯಾಗಿದ್ದಾನೆ.
ಆತನನ್ನು ಶಾಲೆಯಲ್ಲಿ ಗೇಲಿ ಮಾಡಿದವರು ಸಹ ಈಗ ಆತನನ್ನು ದೊಡ್ಡ ಪರದೆಯಲ್ಲಿ ಕಂಡು ಸೆಲ್ಯೂಟ್ ಮಾಡುವಂತೆ ಮಾಡಿದ್ದಾನೆ. ಆತನ ದೈಹಿಕ ಸ್ಥಿತಿ ಆತನ ಕುಗ್ಗದಂತೆ ಮಾಡಲಿಲ್ಲ ಬದಲಿಗೆ ಅದು ಆತನ ಬದುಕನ್ನೇ ಅರಳಿಸಿತು. ದೈಹಿಕವಾಗಿ ಯಾರು ಹೇಗಿದ್ದರೇನು ನಮ್ಮ ಕಾರ್ಯದಲ್ಲಿ ಒಳ್ಳೆಯ ಉದ್ದೇಶವಿದ್ದರೆ ಯಶಸ್ಸು ನಮ್ಮನ್ನು ಹುಡುಕಿ ಬರಲಿದೆ ಎಂಬುದಕ್ಕ ಆತ ಸಾಕ್ಷಿಯಾಗಿದ್ದ.



Click it and Unblock the Notifications