Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪ್ರಾಮಾಣಿಕ ಉದ್ಯೋಗಿಗಳಿಗೆ 25 ಕಾರು ಗಿಫ್ಟ್ ನೀಡಿದ ಕಂಪನಿ: ಸಿಇಒ ಹೇಳಿದ್ದೇನು?
ಒಂದು ಕಂಪನಿಯಲ್ಲಿ ಕೆಲಸ ಮಾಡೋದು ಅಂದ್ರೆ ಅಲ್ಲಿ ಹಲವು ಸಮಸ್ಯೆಗಳು, ಸವಾಲುಗಳ ಎದುರಿಸೋದು ಎಂಬರ್ಥ ಮಾತ್ರವಲ್ಲ ಕಂಪನಿಗಾಗಿ ತನ್ನ ಇಡೀ ಜೀವನ ಮುಡಿಪಿಡೋದು. ಹಾಗೆ ಹಲವು ಕಂಪನಿಗಳ ಆರಂಭದಿಂದ ಅದು ಯಶಸ್ಸು ಕಾಣುವವರೆಗೂ ಅದರಲ್ಲಿ ಕೆಲಸ ಮಾಡುವುದು ಅಂದ್ರೆ ಅದು ಸುಲಭದ ಮಾತಲ್ಲ. ಇಂದಿಗೂ ಹಲವು ಉದ್ಯೋಗಿಗಳು 10 ವರ್ಷ 20 ವರ್ಷ ಅಷ್ಟೆ ಏಕೆ ಒಂದೇ ಕಂಪನಿಯಲ್ಲಿ ಸೇರಿ ಅಲ್ಲಿಯೇ ನಿವೃತ್ತಿ ಪಡೆದಿರುವವರು ಕೂಡ ಇದ್ದಾರೆ.
ಈಗ ಇಂತಹ ನಿಷ್ಠಾವಂತ ಉದ್ಯೋಗಿಗಳಿಗೆ ಚೆನ್ನೈನ ಕಂಪನಿಯೊಂದು ಅಚ್ಚರಿಯ ಉಡುಗೊರೆ ನೀಡಿ ಗೌರವಿಸಿದೆ. ಉದ್ಯೋಗಿಗಳು ಕನಸಿನಲ್ಲೂ ಊಹಿಸಿರದ ರೀತಿಯಲ್ಲಿ ಉಡುಗೊರೆಗಳ ನೀಡಿದೆ. ಚೆನ್ನೈ ಮೂಲಕ ಟೆಕ್ ಸ್ಟಾರ್ಟ್‌ಅಪ್ ಅಜಿಲಿಸಿಯಮ್ ತನ್ನ 10ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಿರಿಯ ಹಾಗೂ ದೀರ್ಘಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಕಾರುನ್ನು ಉಡುಗೊರೆ ನೀಡಿದೆ.

ಇತ್ತೀಚಿಗೆ ಕಂಪನಿಗಳಲ್ಲಿ ಅಧಿಕ ಒತ್ತಡ, ಬಿಡುವಿಲ್ಲದ ಕೆಲಸದ ಸಮಯಗಳು, ಲೇ ಆಫ್ ನಂತಹ ಸುದ್ದಿಗಳ ನಡುವೆಯೂ ಇಂತಹ ಕೆಲಸ ನಡೆದಿರುವುದಕ್ಕೆ ಕಂಪನಿ ಕುರಿತು ಮೆಚ್ಚುಗೆ ಕೇಳಿಬಂದಿದೆ. ಚೆನ್ನೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿರುವ ಕಂಪನಿಯ ಕಚೇರಿಯಲ್ಲಿ 10ನೇ ವಾರ್ಷಿಕೋತ್ಸವ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕಂಪನಿಯ ಸಿಇಒ 25 ನಿಷ್ಠಾವಂತ ಹಾಗೆ ದೀರ್ಘಕಾಲದ ಉದ್ಯೋಗಿಗಳಿಗೆ 25 ಎಸ್‌ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
'ನಾವು ನಮ್ಮ 10 ನೇ ವಾರ್ಷಿಕೋತ್ಸವದ ಮುನ್ನುಡಿ ಕಾರ್ಯಕ್ರಮವನ್ನು ಉತ್ಸಾಹದಿಂದ ಪ್ರಾರಂಭಿಸಿದ್ದೇವೆ - ಇದು ನಮ್ಮ ಪ್ರಯಾಣವನ್ನು ಗೌರವಿಸಲು ಮತ್ತು ಮುಖ್ಯ ಆಚರಣೆಯನ್ನು ನಿರೀಕ್ಷಿಸಲು ಮೀಸಲಾಗಿರುವ ಕ್ಷಣ. ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳನ್ನು SUV ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಿದ್ದೇವೆ ಎಂದು ಕಂಪನಿಯು ತನ್ನ ಲಿಂಕ್ಡ್ ಇನ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಸಿಇಒ ಹೇಳಿದ್ದೇನು?
ನಮ್ಮ ಯಶಸ್ಸಿನ ಕಥೆ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಸೇರಿದೆ. ನಿಮ್ಮ ಬದ್ಧತೆ ಇಲ್ಲದಿದ್ದರೆ, ನಾವು ಇಲ್ಲಿ ಇರುತ್ತಿರಲಿಲ್ಲ. ಹೀಗಾಗಿ ನಮ್ಮೊಂದಿಗೆ ನಿಂತವರಿಗೆ ಎಸ್‌ಯುವಿ ಕಾರುಗಳನ್ನು ಉಡುಗೊರೆಯಾಗಿ ನೀಡಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನು ಕಾರುಗಳ ಉಡುಗೊರೆಯಾಗಿ ನೀಡುವ ಜೊತೆಗೆ ಹಂತ ಹಂತವಾಗಿ ವೇತನ ಹೆಚ್ಚಳ ಕೂಡ ಮಾಡಲಾಗಿದೆ. ಕಾರು ಉಡುಗೊರೆಗಳ ಜೊತೆಗೆ, ಕಂಪನಿಯು ಎಲ್ಲಾ ಹಂತಗಳಲ್ಲಿ ಕಾರ್ಯಕ್ಷಮತೆ ಆಧಾರಿತ ವೇತನ ಹೆಚ್ಚಳವನ್ನು ಸಹ ಹೊರಡಿಸಿದೆ. ಈ ಉದ್ಯೋಗಿಗಳಿಗೆ ಹುಂಡೈ ಕ್ರೆಟಾ ಕಾರು ನೀಡಲಾಗಿದ್ದು, ಇದರ ಆರಂಭಿಕ ಬೆಲೆ 11.11 ಲಕ್ಷದಿಂದ ಆರಂಭಗೊಂಡು 21 ಲಕ್ಷದವರೆಗೂ ಇದೆ.
ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಂಪನಿಯ ಈ ಕಾರ್ಯ ಕಂಡು ಎಲ್ಲರು ಅಚ್ಚರಿ ಹೊರಹಾಕಿದ್ದಾರೆ. ಎಲ್ಲಾ ಕಂಪನಿಗಳು ಕೂಡ ಈ ರೀತಿಯಾಗಿ ಆಲೋಚಿಸುವುದು ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಅಜಿಲಿಸಿಯಂ ಕಂಪನಿಯ ಕಾರ್ಯ ನಿಜಕ್ಕೂ ಶ್ಲಾಘನೀಯ, ವೇತನ ಹೆಚ್ಚಳಕ್ಕೆ ಇಂದು ಹತ್ತಾರು ಬಾರಿ ಆಲೋಚಿಸುವ ಕಂಪನಿಗಳ ನಡುವೆ ನಿಮ್ಮ ನಡೆ ನಿಜಕ್ಕೂ ಆದರ್ಶದಾಯಕ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಯಾವುದೇ ವ್ಯವಹಾರವಾಗಿದ್ದರೂ, ಕಾರ್ಮಿಕರು ಉತ್ತಮವಾಗಿದ್ದರೆ ಮಾತ್ರ ವ್ಯವಹಾರವು ಉತ್ತಮವಾಗಿರುತ್ತದೆ. ನಿಮ್ಮ ಈ ನಡೆ ಬೇರೆಯವರಿಗೂ ಮಾದರಿಯಾಗಲಿ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇನ್ನು ಕಾರು ಉಡುಗೊರೆಯಾಗಿ ಪಡೆದ ಉದ್ಯೋಗಿಗಳು ಸಂತಸ ಹಂಚಿಕೊಂಡಿದ್ದು, ತಮ್ಮ ಶ್ರಮವನ್ನು ಗುರುತಿಸಿ ಉಡುಗೊರೆ ನೀಡಿದ ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ.



Click it and Unblock the Notifications

