Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆನೆ ಪ್ರೀತಿ ನೋಡಿದ್ರೆ ಕಣ್ಣೀರು ಬರುತ್ತೆ..! ಮರಿ ಏಳದೇ ಇದ್ರು ಎಬ್ಬಿಸಲು ಯತ್ನಿಸುವ ತಾಯಿ!!
ತಾಯಿಯ ಪ್ರೀತಿಗೆ ಸರಿಸಾಟಿ ಅನ್ನೋದೆ ಇರಲ್ಲ. ಇದು ಯಾವಾಗಲು ಸಾಬೀತು ಆಗುತ್ತಲೇ ಇರುತ್ತೆ. ಮತ್ತೆ ಮತ್ತೆ ತಾಯಿಯ ಮಮತೆ, ಆಕೆಯ ಪ್ರೀತಿ ನಾವು ನೋಡುವಂತಹ ಹಲವು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ. ಆಕೆ ತಮ್ಮ ಮಕ್ಕಳಿಗಾಗಿ ಏನು ಬೇಕಾದರು ಮಾಡುತ್ತಾಳೆ. ಇದು ಪ್ರಾಣಿಗಳ ಪಾಲಿಗೂ ಅನ್ವಯವಾಗುತ್ತೆ. ಪ್ರಾಣಿಗಳಲ್ಲೂ ಕೂಡ ಈ ಮಮತೆ ಅನ್ನೋದನ್ನು ನಾವು ನೋಡಬಹುದು.
ಅದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ ಕೂಡ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಕೂಡ ತಾಯಿಯ ಪ್ರೀತಿಯನ್ನು ಮತ್ತೆ ಮತ್ತೆ ದೃಢಪಡಿಸುವಂತಿದೆ. ಪ್ರಾಣಿಗಳು ಮಾತನಾಡದಿದ್ದರೂ ಕಂದಮ್ಮಗಳ ಮೇಲಿನ ಅವುಗಳ ಪ್ರೀತಿ ಕೆಲವೊಮ್ಮೆ ಮನುಷ್ಯರನ್ನೇ ನಾಚಿಸುವಂತೆ ಮಾಡುತ್ತೆ. ಇಲ್ಲೊಂದು ವಿಡಿಯೋ ಕೂಡ ಇದಕ್ಕೆ ಸಾಕ್ಷಿ ಎನ್ನಬಹುದು.

ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿ ಆನೆಯೊಂದು ಸಾವನಪ್ಪಿದ ತನ್ನ ಮರಿಯನ್ನು ಮತ್ತೆ ಎಬ್ಬಿಸಲು ಯತ್ನಿಸುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾಯಿ ಆನೆ ತನ್ನ ಮರಿ ಸತ್ತಿರುವುದನ್ನು ಒಪ್ಪಿಕೊಳ್ಳದೆ ಅದನ್ನು ತನ್ನೊಡದೆ ಕರೆದೊಯ್ಯುತ್ತಿದೆ.
ಈ ವಿಡಿಯೋ ನೋಡಿದ ಮಂದಿ ಭಾವುಕರಾಗಿದ್ದಾರೆ. ಆನೆಗಳು ಭಾವ ಜೀವಿಗಳು, ಹಾಗೆ ಗುಂಪಿನಲ್ಲಿ ಬದುಕುತ್ತವೆ. ಇಲ್ಲಿ ತಾಯಿ ಆನೆ ತನ್ನ ಕರುವನ್ನು ಎಚ್ಚರಗೊಳಿಸಲು ಯತ್ನಿಸುತ್ತಿರುವುದು ನೋಡಬಹುದು. ಆನೆಗಳು ಸಾಮಾನ್ಯವಾಗು ತನ್ನ ಗುಂಪಿನ ಯಾವುದೇ ಸದಸ್ಯ ಮರಣ ಹೊಂದಿದರೆ ಆ ಜಾಗ ಬಿಟ್ಟು ಅಲುಗಾಡುವುದಿಲ್ಲ. ಹಾಗೆ ಆ ಜಾಗಕ್ಕೆ ಮತ್ತೆ ಮತ್ತೆ ಬಂದು ಪರಿಶೀಲಿಸುತ್ತವೆ.
ಹಾಗೆ ಆನೆ ಮರಣ ಹೊಂದಿದರೆ ಅವು ಭಾವನೆ ಹೊರಹಾಕುತ್ತವೆ, ಸಂತಾಪ ಕೂಡ ಸಲ್ಲಿಸುತ್ತವೆ. ಇಲ್ಲಿಯೂ ಕೂಡ ಆ ತಾಯಿ ಆನೆ ಸತ್ತಿರುವ ತನ್ನ ಕಂದಮ್ಮನ ಎಬ್ಬಿಸಲು ಯತ್ನಿಸಿದೆ. ಆದ್ರೆ ಮರಿ ಆನೆ ಪ್ರಾಣ ಕಳೆದುಕೊಂಡಿದೆ. ಆದ್ರೆ ಅದನ್ನು ಬಿಟ್ಟು ತೆರಳದ ತಾಯಿ ಆನೆ ತನ್ನ ಸೊಂಡಿಲು ಬಳಸಿ ಎತ್ತಿಕೊಂಡು ಹೋಗುತ್ತಿದೆ. ಇದು ತಾಯಿಯ ಪ್ರೀತಿಗೆ ಹಿಡಿದ ಕೈ ಗನ್ನಡಿಯಂತಿದೆ.
ಇದು ಕೆಲ ಸಮಯದವರೆಗೆ ಅಥವಾ ಕೆಲ ದಿನಗಳ ವರೆಗೆ ತಾಯಿ ಆನೆ ಮರಿಯನ್ನು ಈ ರೀತಿ ಹೋದಲೆಲ್ಲಾ ಎತ್ತಿಕೊಂಡು ಹೋಗುತ್ತದೆ. ಬಳಿಕ ಎಲ್ಲಾದರು ಅದನ್ನು ಬಿಟ್ಟು ತೆರಳುತ್ತದೆ, ಪ್ರಾಣಿಗಳು ನಮ್ಮಂತೆಯೇ ಎಂದು ಅವರು ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಭಾವುಕರಾಗಿದ್ದಾರೆ. ತಾಯಿ ಆನೆಯ ಪ್ರೀತಿಕೆ ಮರುಗಿದ್ದಾರೆ, ಪ್ರಾಣಿಗಳಿಗೆ ಮಾತು ಬಾರದಿದ್ದರೂ ಅವುಗಳು ಕೂಡ ತಮ್ಮ ಭಾವನೆ ಹೊರಹಾಕುತ್ತವೆ. ಈ ವಿಡಿಯೋದಲ್ಲಿ ಇದು ಸಾಬೀತಾಗುತ್ತೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಈ ದೃಶ್ಯ ನೋಡಿದರೆ ಕಣ್ಣು ಒದ್ದೆಯಾಗುತ್ತದೆ. ತಾಯಿ ಆನೆಗೆ ಯಾರಾದರು ಸಹಾಯ ಮಾಡಿದ್ದರೆ ಕೊನೆಯವರೆಗೂ ಅದು ನೆನಪಿಡುತ್ತಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ. ಸದ್ಯ ಈ ವಿಡಿಯೋ ನೋಡಿರುವ ಮಂದಿ ಆನೆಯ ಪ್ರೀತಿಗೆ ಕರಗಿದ್ದಾರೆ.



Click it and Unblock the Notifications
