Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Teachers Day 2025: ಇತಿಹಾಸದಿಂದ ಸಂಭ್ರಮದವರೆಗೂ.. ರಾಧಾಕೃಷ್ಣನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳಿವು
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು (Teachers Day 2025) ಆಚರಿಸಲಾಗುತ್ತದೆ. ಈ ದಿನವು ಕೇವಲ ಹಬ್ಬವಲ್ಲ, ಬದಲಾಗಿ ವಿದ್ಯಾರ್ಥಿಗಳು ಮತ್ತು ಸಮಾಜವು ಶಿಕ್ಷಕರಿಗೆ ತೋರಿಸುವ ಕೃತಜ್ಞತೆಯ ಸಂಕೇತವಾಗಿದೆ. ಈ ದಿನವನ್ನು ಖ್ಯಾತ ವಿದ್ವಾಂಸ, ತತ್ವಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr Sarvepalli Radhakrishnan) ಅವರ ಜನ್ಮದಿನದ ಗೌರವಾರ್ಥವಾಗಿ ಮೀಸಲಿಡಲಾಗಿದೆ. ಶಿಕ್ಷಕರು ದೇಶದ ನಿರ್ಮಾಣದಲ್ಲಿ ವಹಿಸುವ ನಿರ್ಣಾಯಕ ಪಾತ್ರಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಇದು ವಿಶೇಷ ಸಂದರ್ಭವಾಗಿದೆ.
ಕೇವಲ ಪಠ್ಯ ಪುಸ್ತಕದ ಪಾಠಗಳನ್ನು ಕಲಿಸುವುದರ ಜೊತೆಗೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಮೌಲ್ಯಗಳನ್ನು ಕಲಿಸುತ್ತಾರೆ. ಇದು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿನ ಅತ್ಯಂತ ರೋಮಾಂಚಕಾರಿ ಘಟನೆಗಳಲ್ಲಿ ಒಂದಾಗಿದ್ದು, ಶಿಕ್ಷಕರಿಗೆ ಗೌರವ ಮತ್ತು ಕೃತಜ್ಞತೆಯಿಂದ ತುಂಬಿದ ದಿನವಾಗಿದೆ. ಶಿಕ್ಷಕರ ದಿನಾಚರಣೆಯ ಇತಿಹಾಸ (Teachers Day History), ಮಹತ್ವ ಮತ್ತು ಆಚರಣೆಗಳ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.

ಶಿಕ್ಷಕರ ದಿನಾಚರಣೆ ಇತಿಹಾಸ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ 1888 ರಲ್ಲಿ ಜನಿಸಿದರು. ಇವರು ವಿಶಿಷ್ಟ ಶಿಕ್ಷಣ ತಜ್ಞರಾಗಿದ್ದು, 1962 ರಿಂದ 1967 ರವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಒಮ್ಮೆ ಅವರ ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ಮುಂದಾದಾಗ, ಅವರು ತಮ್ಮ ಜನ್ಮದಿನವನ್ನು ಎಲ್ಲಾ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಾಗಿ ಆಚರಿಸಲು ಸಲಹೆ ನೀಡಿದರು. ಅಂದಿನಿಂದ, ಅಂದರೆ 1962 ರಿಂದ, ಸೆಪ್ಟೆಂಬರ್ 5 ಅನ್ನು ಭಾರತದಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನವು ಶಿಕ್ಷಣ ಕ್ಷೇತ್ರಕ್ಕೆ ಡಾ. ರಾಧಾಕೃಷ್ಣನ್ ಅವರ ಕೊಡುಗೆಯನ್ನು ಸ್ಮರಿಸುತ್ತದೆ ಮತ್ತು ಶಿಕ್ಷಕರ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಶಿಕ್ಷಕರ ದಿನಾಚರಣೆ ಮಹತ್ವ
'ಶಿಕ್ಷಕರು ರಾಷ್ಟ್ರ ನಿರ್ಮಾತೃಗಳು' ಎಂಬ ಮಾತು ಕೇವಲ ನುಡಿಯಲ್ಲ. ಇದು ಸಮಂಜಸವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಗಳಿಸಲು ಸಹಾಯ ಮಾಡುತ್ತಾರೆ. ಆದರೆ, ಅವರ ನೈಜ ಕೊಡುಗೆ ತರಗತಿಯ ಗೋಡೆಗಳನ್ನು ಮೀರಿರುತ್ತದೆ. ಶಿಕ್ಷಕರು ಶಿಕ್ಷಣದ ಮೌಲ್ಯಗಳನ್ನು ತುಂಬಿ, ಮಕ್ಕಳಲ್ಲಿ ಅಡಗಿರುವ ಸಾಮರ್ಥ್ಯವನ್ನು ಹೊರತರಲು ನೆರವಾಗುತ್ತಾರೆ. ಶೈಕ್ಷಣಿಕವಾಗಿ ಮತ್ತು ವೈಯಕ್ತಿಕವಾಗಿ ಜೀವನದ ಸವಾಲುಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕರ ದಿನವು ಈ ಅನನ್ಯ ಪಾತ್ರವನ್ನು ನೆನಪಿಸುತ್ತದೆ. ಜೊತೆಗೆ ಶಿಕ್ಷಕರನ್ನು ಗೌರವಿಸುವುದು ಮತ್ತು ಮೆಚ್ಚುವುದು ಎಷ್ಟು ಮುಖ್ಯ ಎಂದು ತಿಳಿಸುತ್ತದೆ.
ಇಂದು ಡಿಜಿಟಲ್ ಶಿಕ್ಷಣ, ಆಧುನಿಕ ಪಾಠ ವಿಧಾನಗಳು ಬೆಳೆಯುತ್ತಿದ್ದರೂ, ಭಾರತದ ಗುರುಕುಲ ಸಂಪ್ರದಾಯದ ಪಾಠಗಳು ಇನ್ನೂ ಸಮಾನವಾಗಿ ಪ್ರಸ್ತುತವಾಗಿವೆ. 2025ರ ಶಿಕ್ಷಕರ ದಿನದ ಮಹತ್ವವೇನೆಂದರೆ, ನವೀಕೃತ ತಂತ್ರಜ್ಞಾನವನ್ನು ಅಳವಡಿಸಿಕೊಂಡರೂ ಶಿಕ್ಷಕರ ವ್ಯಕ್ತಿತ್ವ ರೂಪಿಸುವ ಶಕ್ತಿ ಸದಾ ಅಪ್ರತಿಮ. ಭಾರತವು ತನ್ನ ಶ್ರೀಮಂತ ಸಂಪ್ರದಾಯಗಳಲ್ಲಿ ಬೇರೂರಿ, ಡಿಜಿಟಲ್ ಶಿಕ್ಷಣ ಮತ್ತು ಆಧುನಿಕ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸುವುದರಿಂದ ಈ ದಿನದ ಮಹತ್ವ ಹೆಚ್ಚಾಗಿದೆ.
ಶಿಕ್ಷಕರ ದಿನದ ಆಚರಣೆಗಳು
ಶಾಲೆಗಳು ಮತ್ತು ಕಾಲೇಜುಗಳಲ್ಲಿ ಈ ದಿನವನ್ನು ಹರ್ಷೋತ್ಸಾಹದಿಂದ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಭಾಷಣಗಳು, ಗೀತೆಗಳು, ಹಸ್ತಕಲೆಯ ಕಾರ್ಡ್‌ಗಳನ್ನು ಮಾಡುತ್ತಾರೆ. ಜೊತೆಗೆ ತಮ್ಮ ಶಿಕ್ಷಕರಿಗಾಗಿ ಆಟೋಪಾಟಗಳಿಂದ ಆಯೋಜಿಸುತ್ತಾರೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ಒಂದು ದಿನ ಶಿಕ್ಷಕರ ಪಾತ್ರವನ್ನು ವಹಿಸಿ ತರಗತಿಗಳನ್ನು ನಿರ್ವಹಿಸುವ ಪದ್ಧತಿಯೂ ಇದೆ. ಇದು ಶಿಕ್ಷಕರ ಜವಾಬ್ದಾರಿಯನ್ನು ತಿಳಿಯಲು ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸಲು ವಿನೂತನ ಮಾರ್ಗವಾಗಿದೆ. ಅದೇ ರೀತಿ ಶಾಲೆಗಳು ಪ್ರಶಸ್ತಿ ಸಮಾರಂಭಗಳು, ಸನ್ಮಾನಗಳು ಹಾಗೂ ಪುಷ್ಪ, ಉಡುಗೊರೆಗಳು ನೀಡುವ ಮೂಲಕ ಶಿಕ್ಷಕರನ್ನು ಗೌರವಿಸುತ್ತವೆ.
ಈ ರೀರಿ ಶಿಕ್ಷಕರ ದಿನವನ್ನು ವಿಶೇಷಗೊಳಿಸಿ
• ಹೃದಯಸ್ಪರ್ಶಿ ನೋಟು ಬರೆಯಿರಿ: ನಿಮ್ಮ ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸುವ ಚಿಕ್ಕ ಪತ್ರ ಅಥವಾ ಕಾರ್ಡ್ ನೀಡಿ.
• ಸರ್ಪ್ರೈಸ್ ಯೋಜಿಸಿ: ಸಹಪಾಠಿಗಳೊಂದಿಗೆ ಚಿಕ್ಕ ಸಮಾರಂಭ, ವೀಡಿಯೋ ಮೊಂಡೇಜ್ ಅಥವಾ ಉಡುಗೊರೆಗಳನ್ನು ಸಿದ್ಧಪಡಿಸಿ.
• ಶಿಕ್ಷಣದ ಬೆಂಬಲ: ಗ್ರಾಮೀಣ ಶಿಕ್ಷಕರಿಗೆ ತರಬೇತಿ, ಸಂಪನ್ಮೂಲ ಒದಗಿಸುವ ಸಂಸ್ಥೆಗಳಿಗೆ ದೇಣಿಗೆ ನೀಡಿ.
• ಮರು ಸಂಪರ್ಕ: ನಿಮ್ಮ ಹಳೆಯ ಗುರುಗಳಿಗೆ ಕರೆ, ಸಂದೇಶ ಅಥವಾ ಭೇಟಿ ನೀಡಿ ಕೃತಜ್ಞತೆ ತೋರಿಸಬಹುದು.
ಶಿಕ್ಷಕರ ದಿನ 2025 ಕೇವಲ ಒಂದು ಆಚರಣೆ ಮಾತ್ರವಲ್ಲ, ಅದು ನಮ್ಮ ಜೀವನವನ್ನು ದಾರಿ ತೋರಿಸಿದ ಎಲ್ಲ ಶಿಕ್ಷಕರಿಗೆ ಕೃತಜ್ಞತೆಯ ಹಬ್ಬ. ಶಿಕ್ಷಕರ ದಿನವು ಶಿಕ್ಷಕರ ನಿಸ್ವಾರ್ಥ ಸೇವೆ ಮತ್ತು ಅವರು ಸಮಾಜಕ್ಕೆ ನೀಡುವ ಅಮೂಲ್ಯ ಕೊಡುಗೆಯನ್ನು ಗುರುತಿಸುವ ಒಂದು ಸುಂದರ ಸಂದರ್ಭ. ಎಲ್ಲರೂ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.



Click it and Unblock the Notifications












