Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
4ನೇ ಬಾರಿ ಗ್ರ್ಯಾಮಿ ಗೆದ್ದ ಟೇಲರ್ ಸ್ವಿಫ್ಟ್.! ಯಾರು ಈ ಪಾಪ್ ಲೋಕದ ರಾಣಿ! ಆಕೆಯ ಆಸ್ತಿ ಎಷ್ಟಿದೆ ಗೊತ್ತಾ?
ನೀವೆನಾದ್ರು ಇಂಗ್ಲೀಷ್ ಪಾಪ್ ಕಲ್ಚರ್ ಫಾಲೋ ಮಾಡೋರಾಗಿದ್ದರೆ, ಆ ಬಗ್ಗೆ ಕೇಳಿದ್ದರೆ ಇಲ್ಲವೆ ಇಂಗ್ಲೀಷ್ ಹಾಡುಗಳನ್ನು ಕೇಳುವವರಾಗಿದ್ದರೆ ನಿಮಗೆ ಹಲವರ ಹೆಸರು ಚಿರಪರಿಚಿತವಾಗಿರುತ್ತೆ. ಇಂಗ್ಲೀಷ್ ಪಾಪ್ ಲೋಕದಲ್ಲಿ ನೂರಾರು ಮಂದಿ ಹೆಸರು ಮಾಡಿದ್ದಾರೆ. ಆದ್ರೆ ಕೆಲವರು ಇಡೀ ಪಾಪ್ ಲೋಕ ಆಳುತ್ತಿದ್ದಾರೆ.
ಹೌದು ಇಂಗ್ಲೀಷ್ ಪಾಪ್ ಜಗತ್ತಿನಲ್ಲಿ ಕಳೆದ ಕೆಲ ವರ್ಷದಿಂದ ಆಳುತ್ತಿರೋದು ಟೇಲರ್ ಸ್ವಿಫ್ಟ್. ಈಕೆಯ ಹೆಸರು ನೀವು ಕೇಳಿರ್ತೀರಿ. ಆಕೆಯ ಹಾಡುಗಳನಂತೂ ನೀವು ಕೇಳದೆ ಇರಲು ಸಾಧ್ಯವಿಲ್ಲ. ಈಗ ಮತ್ತೊಂದು ಗ್ರ್ಯಾಮಿ ಅವಾರ್ಡ್ ಪಡೆದು ಪಾಪ್ ಲೋಕದಲ್ಲಿ ಯಾರು ಮಾಡಿರದ ದಾಖಲೆ ಬರೆದಿದ್ದಾಳೆ.

ಸತತ 4ನೇ ಬಾರಿ ಮಿಡ್‌ನೈಟ್ಸ್ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. 34 ವರ್ಷದ ಟೇಲರ್ ಸ್ವಿಫ್ಟ್, ಪಾಪ್ ಸಂಗೀತದ ಐಕಾನ್‌ಗಳಾದ ಫ್ರಾಂಕ್ ಸಿನಾತ್ರಾ, ಪಾಲ್ ಸೈಮನ್ ಮತ್ತು ಸ್ಟೀವಿ ವಂಡರ್ ಅವರ ಗ್ರ್ಯಾಮಿ ಪ್ರಶಸ್ತಿ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.
ಯಾರು ಈ ಟೇಲರ್ ಸ್ವಿಫ್ಟ್..?
ಅಮೆರಿಕದಲ್ಲಿ 1989 ಡಿಸೆಂಬರ್ 13ರಂದು ಆಕೆ ಜನಿಸಿದಳು. ಕೇವಲ 20 ವರ್ಷವಿರುವಾಗಲೇ ಸಂಗೀತ ಲೋಕಕ್ಕೆ ಎಂಟ್ರಿ ಕೊಟ್ಟ ಆಕೆ, ಎಲ್ಲರ ಹುಬ್ಬೇರುವಂತೆ ಮಾಡಿದಳು. ಪಾಪ್ ಲೋಕದಲ್ಲಿ ಆಗ ದೊಡ್ಡ ದೊಡ್ಡ ಕಲಾವಿದರು ಆಳುತ್ತಿದ್ದ ಕಾಲವದು. ಆರಂಭದಲ್ಲಿ ಸಣ್ಣ ಪುಟ್ಟ ಆಲ್ಬಂ ಹಾಡುಗಳಿಗೆ ಧ್ವನಿಯಾಗಿದ್ದ ಆಕೆ ಬಳಿಕ ತನ್ನದೇ ಹಾಡು ನಿರ್ಮಿಸಲು ಮುಂದಾದಳು, ಬರುಬರುತ್ತಾ ಆಕೆಯ ಹಾಡುಗಳು ಫೇಮಸ್ ಆದವು, ಬಳಿಕ ತನ್ನದೇ ಆದ ಮ್ಯೂಸಿಕ್ ಬಾಂಡ್ ಕಟ್ಟಿಕೊಂಡಳು. ಈಗ ಆಕೆಯ ಸಂಗೀತ ಎಂದರೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ.
ಆಕೆಯ ಆಸ್ತಿ ಎಷ್ಟಿದೆ ಗೊತ್ತಾ?
ಆಕೆ ಎರಡು ಕಡೆಗಳಲ್ಲಿ ಬೃಹತ್ ನಿವಾಸ ಹೊಂದಿದ್ದಾಳೆ ಎಂದು ತಿಳಿದುಬಂದಿದೆ. ಮೊದಲನೆಯದು ಅಡೆಲಿಸಿಯಾದ ಐಷಾರಾಮಿ ವಸತಿ ಸಂಕೀರ್ಣದಲ್ಲಿದೆ, ಸುಮಾರು 2 ಮಿಲಿಯನ್ ಡಾಲರ್ ಮೌಲ್ಯದ ಬೃಹತ್ ನಿವಾಸವಿದೆ. ಆಕೆಯ ಎರಡನೇ ಟೆನ್ನೆಸ್ಸೀ ಆಸ್ತಿಯು ಫಾರೆಸ್ಟ್ ಹಿಲ್ಸ್ ಉಪನಗರದಲ್ಲಿರುವ ಗ್ರೀಕ್ ಶೈಲಿಯ ಭವ್ಯವಾದ ಬಂಗಲೆಯಾಗಿದೆ. ಇದು ಅತ್ಯಂತ ವಿಶಾಲ ಜಾಗದಲ್ಲಿ ಹರಡಿಕೊಂಡಿದ್ದು, ಸ್ವಿಮ್ಮಿಂಗ್ ಪೂಲ್‌ನಿಂದ ಹಿಡಿದು ಒಳಗೆ ಬಾರ್ ಸಹ ಇದೆ.
ಲಾಸ್ ಏಂಜಲೀಸ್‌ನಲ್ಲಿರುವ ಗೋಲ್ಡ್‌ವಿನ್‌ಗಾಗಿ ಆಕೆ ಬರೋಬ್ಬರಿ 25 ಮಿಲಿಯನ್ ಡಾಲರ್ ನೀಡಿ ಖರೀದಿಸಿದಳು. ಇದು 7 ಬೆಡ್‌ರೂಮ್‌ನ 10 ಬಾತ್‌ರೂಮ್ ಹೊಂದಿರುವ ಅತ್ಯಂತ ಐಷಾರಾಮಿ ನಿವಾಸವಾಗಿದೆ. ನ್ಯೂಯಾರ್ಕ್‌ನ ಟ್ರಿಬೆಕಾದಲ್ಲಿ ಎರಡು ಪೆಂಟ್‌ಹೌಸ್‌ಗಳನ್ನು ಖರೀದಿಸಿದಳು. ಅದರಲ್ಲಿ 10 ಬೆಡ್‌ರೂಮ್, 10 ಬಾತ್‌ರೂಮ್, ಬಿಲಿಯರ್ಡ್ಸ್ ಕೋಣೆ ಮತ್ತು ವಿಶಾಲವಾದ ಡ್ಯುಪ್ಲೆಕ್ಸ್ ಮನೆಯಾಗಿತ್ತು. ಹೀಗೆ ಆಕೆ ಅಮೆರಿಕದಲ್ಲಿ ಹತ್ತಾರು ಮನೆಗಳ ಹೊಂದಿದ್ದಳು.
ಕೋಟಿ ಕೋಟಿ ಬೆಲೆಯ ಕಾರುಗಳು
ಟೇಲರ್ ಸ್ವಿಫ್ಟ್ ಹಿಂದೊಮ್ಮೆ ಅತ್ಯಂತ ದುಬಾರಿ ಕಾರು ಖರೀದಿಸಿಯೂ ಸುದ್ದಿಯಾಗಿದ್ದರು. ಆಕೆಯ ಬಳಿ ಕೋಟಿ ಕೋಟಿ ರೂಪಾಯಿಯ ಕಾರುಗಳಿವೆ, ವಿಶ್ವದ ಅತ್ಯಂತ ಐಷಾರಾಮಿ ಕಾರುಗಳ ಓಡಿ ಆಕೆಯಾಗಿದ್ದು.
ಫೆರಾರಿ 458 ಇಟಾಲಿಯಾ
ಫೆರಾರಿ ಕಾರಿನಲ್ಲಿ ಇದು ಅತ್ಯಂತ ದುಬಾರಿ ಕಾರಾಗಿತ್ತು. ಇದರ ಬೆಲೆ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 4.80 ಕೋಟಿ ರೂಪಾಯಿಯಾಗುತ್ತದೆ. ಈ ಕಾರನ್ನು ಸ್ವಿಫ್ಟ್ ಬಳಸುತ್ತಿದ್ದಳು, ಇದರ ಜೊತೆ
- 3.50 ಕೋಟಿಯ ಪೋರ್ಷೆ 911 ಟರ್ಬೊ
- 2.30 ಕೋಟಿಯ ಆಡಿ ಆರ್ 8, 1 ಕೋಟಿಯ ಮರ್ಸಿಡೀಸ್ ಬೆನ್ಜ್ ವೈನೋ
- 1.30 ಕೋಟಿಯ ಕ್ಯಾಡಿಲಾಕ್ ಎಸ್ಕಲೇಡ್
- 70 ಲಕ್ಷದ ಟೊಯೋಟಾ ಸಿಕ್ವೊಯಾ
- 2.45 ಕೋಟಿಯ ಮರ್ಸಿಡೀಸ್ ಬೆನ್ಜ್ G63 AMG
- 40 ಲಕ್ಷದ ನಿಸ್ಸಾನ್ ಕಶ್ಕ್
- 3.5 ಕೋಟಿಯ ಮರ್ಸಿಡೀಸ್ ಮೇಬ್ಯಾಕ್ ಎಸ್ 650
ಅಂದರೆ ಭಾರತದ ರೂಪಾಯಿಯಲ್ಲಿ ಆಕೆಯ ಬಳಿ ಬರೋಬ್ಬರಿ 20 ಕೋಟಿಗೂ ಅಧಿಕ ಹಣದ ಕಾರುಗಳಿದ್ದವು. ಆಕೆಯ ಒಟ್ಟು ಆಸ್ತಿ ಬರೋಬ್ಬರಿ 110 ಕೋಟಿ ಯುಎಸ್ ಡಾಲರ್ ಅಂದರೆ ಸರಿ ಸುಮಾರು 11 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆಕೆಗಿನ್ನೂ 34 ವರ್ಷವಷ್ಟೇ..!



Click it and Unblock the Notifications

