Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
300 ಲೀಟರ್ ಎದೆಹಾಲು ದಾನ! ದಾಖಲೆ ಬರೆದ ಸೆಲ್ವಾ ಬೃಂದಾ.. ಯಾರು ಈ ಮಹಾಮಾತೆ?
ಸೆಲ್ಯೂಟ್.. 2 ವರ್ಷಗಳು, ಬರೋಬ್ಬರಿ 300 ಲೀಟರ್ ಎದೆಹಾಲು ದಾನ! ಸಾವಿರಾರು ಮಕ್ಕಳಿಗೆ ಜೀವ ಕೊಟ್ಟ ಮಹಾಮಾತೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ತಮಿಳುನಾಡಿನ 'ಅಮ್ಮ'. ಹೌದು, ತಿರುಚಿರಾಪಳ್ಳಿ ಜಿಲ್ಲೆಯ ಸೆಲ್ವಾ ಬೃಂದಾ (Selva Brindha) ಅವರೇ 300 ಲೀಟರ್‌ಗೂ ಹೆಚ್ಚು ಎದೆಹಾಲು ದಾನ (Breast Milk Donation) ಮಾಡಿರುವ ಮಹಾ ಮಾತೃಹೃದಯಿ. ಈ ಮೂಲಕ ಸಾವಿರಾರು ಅಕಾಲಿಕ ಹಾಗೂ ಗಂಭೀರ ಸ್ಥಿತಿಯ ನವಜಾತ ಶಿಶುಗಳ ಜೀವ ಉಳಿಸಲು ನೆರವಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ಸೆಲ್ವಾ ಬೃಂದಾ ಅವರು ವಿಶ್ವ ದಾಖಲೆ ಗಿಟ್ಟಿಸಿಕೊಂಡಿದ್ದಾರೆ. ಈಕೆಯ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ!
ಸ್ತನ್ಯಪಾನದ ಮಹತ್ವವನ್ನು ಸಾರುವ 'ವಿಶ್ವ ಸ್ತನ್ಯಪಾನ ಸಪ್ತಾಹ'ದ ಸಮಾರೋಪ ಸಮಾರಂಭದಲ್ಲಿ ತಮಿಳುನಾಡಿನ ಸೆಲ್ವಾ ಬೃಂದಾ ಅವರನ್ನು ಸನ್ಮಾನಿಸಲಾಗಿದೆ. ನವಜಾತ ಶಿಶುಗಳಿಗೆ ಜೀವ ತುಂಬಿದ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಸೆಲ್ವಾ ಬೃಂದಾ ಅವರು ತಮಿಳುನಾಡಿನ ತಿರುಚಿರಾಪಳ್ಳಿಯವರು. ಇವರು 22 ತಿಂಗಳಲ್ಲಿ ಒಟ್ಟು 300.17 ಲೀಟರ್ ಎದೆಹಾಲನ್ನು ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆ (MGMGH) ಹಾಲು ಬ್ಯಾಂಕ್‌ಗೆ ದಾನ ಮಾಡಿದ್ದಾರೆ. ಈ ಅವಧಿಯು ಏಪ್ರಿಲ್ 2023 ರಿಂದ ಫೆಬ್ರವರಿ 2025 ರವರೆಗೆ ಇದೆ. ಅಂದರೆ 22 ತಿಂಗಳುಗಳ ಅವಧಿಯಲ್ಲಿ ಅವರು ಈ ಮಹತ್ತರ ಸಾಧನೆ ಮಾಡಿದ್ದಾರೆ.

ಸಾವಿರಾರು ಶಿಶುಗಳಿಗೆ ಜೀವ
ಆಸ್ಪತ್ರೆಯ ಅಧಿಕಾರಿಯೊಬ್ಬರ ಪ್ರಕಾರ, 2023-24ರ ಅವಧಿಯಲ್ಲಿ ಹಾಲು ಬ್ಯಾಂಕ್ ಸಂಗ್ರಹಿಸಿದ ಒಟ್ಟು ಎದೆ ಹಾಲಿನಲ್ಲಿ ಬೃಂದಾ ಅವರ ಕೊಡುಗೆ ಸುಮಾರು ಅರ್ಧದಷ್ಟಿದೆ. ಅವರ ಈ ಕಾರ್ಯವು ಸಾವಿರಾರು ಶಿಶುಗಳಿಗೆ ಜೀವ ತುಂಬಿದೆ. ಒಂದು ಸರ್ಕಾರೇತರ ಸಂಸ್ಥೆಯ ಪ್ರೇರಣೆಯಿಂದ, ಬೃಂದಾ ಅವರ ನಿರಂತರ ಸೇವೆಯನ್ನು 'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' ಮತ್ತು 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಎರಡರಲ್ಲೂ ಗುರುತಿಸಲಾಗಿದೆ. ಈ ಸಾಧನೆ ಅವರಿಗೆ ಈ ಎರಡೂ ದಾಖಲೆ ಪುಸ್ತಕಗಳಲ್ಲಿ ಸ್ಥಾನ ತಂದುಕೊಟ್ಟಿದೆ. ಆಸ್ಪತ್ರೆ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ಎರಡನೇ ಮಗುವಿಗೆ ಕಾಮಾಲೆ ಇತ್ತು
ಈ ಕುರಿತು ಪ್ರತಿಕ್ರಿಯಿಸಿರುವ ಸೆಲ್ವಾ ಬೃಂದಾ, ನಾನು 300 ಲೀಟರ್ ಎದೆ ಹಾಲು ದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ, ಎದೆಹಾಲು ದಾನ ಮಾಡಿರುವುದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ಧಾರೆ. ತಮ್ಮ ಎರಡನೇ ಮಗುವಿಗೆ ಜನನದ ನಂತರ ಮೂರು-ನಾಲ್ಕು ದಿನಗಳ ಕಾಲ ಕಾಮಾಲೆ ಇತ್ತು. ಮಗು ಎನ್‌ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆ ಸಮಯದಲ್ಲಿ ವೈದ್ಯರು ತಾಯಿಯ ಎದೆ ಹಾಲನ್ನು (mother milk) ಸಂಗ್ರಹಿಸಿ ಮಗುವಿಗೆ ನೀಡಲು ಸೂಚಿಸಿದ್ದರು. ಮಗುವಿಗೆ ಹಾಲು ನೀಡಿದ ನಂತರ ಉಳಿದ ಹಾಲನ್ನು ಇತರ ನವಜಾತ ಶಿಶುಗಳ ತೀವ್ರ ನಿಗಾ ಘಟಕದ ಮಕ್ಕಳಿಗೆ (NICL) ನೀಡುವಂತೆ ವೈದ್ಯರು ಕೇಳಿಕೊಂಡರು. ನಂತರ ತಾಯಿಯ ಅನುಮತಿ ಪಡೆದು, ಉಳಿದ ಹಾಲನ್ನು ಅವಶ್ಯಕತೆ ಇದ್ದ ಇತರ ಮಕ್ಕಳಿಗೆ ನೀಡಲಾಯಿತು ಎಂದು ಹೇಳಿದ್ದಾರೆ.
ಎದೆ ಹಾಲುದಾನ ಮಾಡಲು ಮುಂದೆ ಬರಬೇಕು
ಅಮೃತಂ ಫೌಂಡೇಶನ್‌ನ ನೆರವಿನೊಂದಿಗೆ ಸ್ತನ್ಯಪಾನ ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡೆ. ಅವರ ಬೆಂಬಲದಿಂದ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅವಧಿಪೂರ್ವ ಜನಿಸಿದ ಶಿಶುಗಳಿಗೆ ಎದೆಹಾಲು ದಾನದ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ. ಏಕೆಂದರೆ, ಈ ಶಿಶುಗಳು ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳಿಂದಾಗಿ ಎನ್‌ಐಸಿಎಲ್‌ಗೆ ದಾಖಲಾಗುತ್ತಾರೆ. ಈ ನಿಟ್ಟಿನಲ್ಲಿ, ಎಲ್ಲಾ ತಾಯಂದಿರು ಎದೆಹಾಲು ದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದ್ದಾರೆ. ಇದು ವಿಶೇಷವಾಗಿ ನವಜಾತ ಶಿಶುಗಳ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಸೆಲ್ವಾ ಬೃಂದಾ ಅವರ ಈ ಕಾರ್ಯ ನಿಸ್ವಾರ್ಥ ಸೇವೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, 2023-24ನೇ ಸಾಲಿನಲ್ಲಿ ಬ್ಯಾಂಕ್ ಸಂಗ್ರಹಿಸಿದ ಒಟ್ಟು ಎದೆ ಹಾಲಿನ ಅರ್ಧಕ್ಕಿಂತ ಹೆಚ್ಚು ಬೃಂದಾ ಅವರ ಕೊಡುಗೆಯಾಗಿದೆ. ಹೆಚ್ಚು ಎದೆ ಹಾಲು ದಾನ ಮಾಡಿದ ಕಾರಣ, 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಹಾಗೂ 'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' ಎರಡರಲ್ಲೂ ಈ ತಾಯಿ ಸ್ಥಾನ ಪಡೆದಿದ್ದಾರೆ. ಈ ಮಹತ್ತರ ಕಾರ್ಯಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ. ಆಗಸ್ಟ್ 7 ರಂದು ನಡೆದ 'ವಿಶ್ವ ಸ್ತನ್ಯಪಾನ ಸಪ್ತಾಹ'ದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗಿದೆ.



Click it and Unblock the Notifications
