Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಎಐ ಶೃಂಗಸಭೆಯಲ್ಲಿ ಗಮನಸೆಳೆದ ಪ್ರಧಾನಿ ಮೋದಿ ಧರಿಸಿದ ವಾಚ್: 55 ಸಾವಿರದ ದೇಶೀಯ ರೋಮನ್ ಬಾಗ್
ದೆಹಲಿಯಲ್ಲಿ ನಡೆದ ಎಐ ಸಮ್ಮಿಟ್ ತಂತ್ರಜ್ಞಾನದ ಕಾರಣದಿಂದ ಹಾಗೆ ಕೆಲವು ವಿವಾದದ ಕಾರಣದಿಂದ ಗಮನ ಸೆಳೆದಿತ್ತು. ಹಾಗೆ ಈಗ ನರೇಂದ್ರ ಮೋದಿ ಅವರ ವಾಚ್ ಹಾಗೂ ಅವರ ಬಟ್ಟೆಯ ಕಾರಣಕ್ಕೂ ಸುದ್ದಿಯಾಗುತ್ತಿದೆ. ಅದ್ರಲ್ಲೂ ನರೇಂದ್ರ ಮೋದಿ ಅವರು ಧರಿಸಿದ್ದ ವಾಚ್ ಬಹಳ ಜನರ ಗಮನ ಸೆಳೆದಿದೆ. ಅವರು ಭಾರತದ ನೆಲದಲ್ಲಿಯೇ ತಯಾರಾದ ವಾಚ್ ಧರಿಸಿ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕಾಣಿಸಿಕೊಂಡರು. ಹೀಗಾಗಿ ಈ ವಾಚ್ ಯಾವುದು? ಅದರ ಬೆಲೆ ಎಷ್ಟು ಎಲ್ಲರು ಮಾತನಾಡುವಂತಾಗಿದೆ.
ಪ್ರಧಾನಿ ಮೋದಿ ಅವರು ತಮ್ಮ ಔಟ್‌ಲುಕ್ ಬಗ್ಗೆ ಬಹಳ ಗಮನ ಹರಿಸುತ್ತಾರೆ. ಅದ್ರಲ್ಲೂ ದೇಶಿ ನಿರ್ಮಿತ ಬಟ್ಟೆಗಳಿಂದ ಹಿಡಿದು ದುಬಾರಿ ವಸ್ತುಗಳ ಧರಿಸಿ ಕೂಡ ಅವರು ಸುದ್ದಿಯಾಗುವುದು ಹೊಸತೇನಲ್ಲ. ಹಾಗೆ ಈಗ ಅವರು ಧರಿಸಿದ್ದ ವಾಚ್ ಮೂಲಕ ಸುದ್ದಿಯಾಗಿದ್ದಾರೆ. ಅವರು ಧರಿಸಿದ್ದ ಭಾರತದಲ್ಲೇ ತಯಾರಾದ ಐಷಾರಾಮಿ ವಾಚ್ ಇದಾಗಿದೆ. ಜೈಪುರ್ ವಾಚ್ ಕಂಪನಿಯ ವಿಶಿಷ್ಟ ವಾಚ್ ಇದು.

ಪ್ರಧಾನಿ ಮೋದಿ ಅವರು ಜೈಪುರ ವಾಚ್ ಕಂಪನಿಯ ಮೂಲಕ ಸ್ವದೇಶಿ ಕರಕುಶಲತೆ ಹಾಗೆ ವೋಕಲ್ ಫಾರ್ ಲೋಕಲ್ ಎಂಬ ನೀತಿಯ ಪ್ರತಿಪಾದಿಸಿದರು. ಈ ವಾಚ್ ಜೈಪುರ್ ವಾಚ್ ಕಂಪನಿಯ ರೋಮನ್ ಬಾಗ್ ಸರಣಿಯ ವಾಚ್ ಆಗಿದೆ ಇದರ ಬೆಲೆ ಸುಮಾರು 55 ಸಾವಿರ ರೂಪಾಯಿ ಎನ್ನಲಾಗಿದೆ.
ಈ ವಾಚ್‌ನ ವಿಶೇಷವೇನು?
ಈ ವಾಚ್ ವಿಶೇಷ ವಿನ್ಯಾಸದಿಂದ ಹೆಸರು ಮಾಡಿದೆ. ಈ ವಾಚ್ 1947ರ ಒಂದು ರೂಪಾಯಿ ನಾಣ್ಯವನ್ನು ಒಳಗೊಂಡಿದೆ. ಇದು ಭಾರತದ ಸ್ವಾತಂತ್ರ್ಯದ ಮೊದಲು ಬ್ರಿಟಿಷ್ ಆಳ್ವಿಕೆಯಲ್ಲಿ ಮುದ್ರಿಸಲಾದ ಕೊನೆಯ ನಾಣ್ಯವಾಗಿದೆ. 43 ಎಂಎಂ ಸ್ಟೇನ್‌ಲೆಸ್ ಸ್ಟೀಲ್ ಗಡಿಯಾರವು ವಾಕಿಂಗ್ ಟೈಗರ್ ಮೋಟಿಫ್ ಅನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆ.
ಇದು ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಶಕ್ತಿಯ ಸಂಕೇತವಾಗಿದೆ. ವಿಶ್ವಾಸಾರ್ಹ ಜಪಾನೀಸ್ ಮಿಯೋಟಾ ಚಳುವಳಿಯಿಂದ ನಡೆಸಲ್ಪಡುತ್ತಿದೆ ಮತ್ತು ನೀಲಮಣಿ ಸ್ಫಟಿಕದಿಂದ ರಕ್ಷಿಸಲ್ಪಟ್ಟಿದೆ. ಹಾಗೆ ಇದು ವೀಗನ್ ಲೆದರ್ ಹೊಂದಿದೆ. ಜೈಪುರ ವಾಚ್ ಕಂಪನಿಯ ಸಂಸ್ಥಾಪಕ ಗೌರವ್ ಮೆಹ್ತಾ ಪ್ರಕಾರ, ಪ್ರಧಾನಿಯವರ ಆಯ್ಕೆಯು ಭಾರತೀಯ ನಿರ್ಮಿತ ಉನ್ನತ-ಮಟ್ಟದ ಸರಕುಗಳಲ್ಲಿ ಭಾರಿ ಆಸಕ್ತಿಯ ಅಲೆಯನ್ನು ಹುಟ್ಟುಹಾಕಿತು.
ಜೈಪುರ್ ವಾಚ್ ಕಂಪನಿ ಹುಟ್ಟಿಕೊಂಡಿದ್ದು ಹೇಗೆ?
2013ರಲ್ಲಿ ಗೌರವ್ ಮೆಹ್ತಾ ಈ ಕಂಪನಿಯನ್ನು ಆರಂಭಿಸಿದರು. ಅದ್ರಲ್ಲೂ ಈ ವಾಚ್ ಕಂಪನಿ ವಿಶೇಷ ವಿನ್ಯಾಸದ ಕಾರಣಕ್ಕೆ ಹೆಸರಾಯಿತು. ಅದ್ರಲ್ಲೂ ಈ ವಾಚ್ ವಿಶೇಷ ನಾಣ್ಯಗಳು, ಹಳೆಯ ಭಾರತೀಯ ಅಂಚೆ ಚೀಟಿಗಳು, ಮುದ್ರಿಕೆಗಳ ಮೂಲಕ ವಾಚ್ ತಯಾರಿಸಿತ್ತು. ಆರಂಭದಿಂದಲೂ ಇಂತಹ ವಿಶೇಷ ವಿನ್ಯಾಸದಿಂದಲೇ ಹೆಸರಾಗಿತ್ತು.
ದೇಶದ ಮೊದಲ ಮೈಕ್ರೋ-ಐಷಾರಾಮಿ ಗಡಿಯಾರ ಬ್ರ್ಯಾಂಡ್ ಆಗಿರುವ ಜೈಪುರ ವಾಚ್ ಕಂಪನಿಯು ತನ್ನ ವಿನ್ಯಾಸದ ಮೂಲದಲ್ಲಿ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಅಂಶಗಳನ್ನು ಬಳಸುತ್ತದೆ. ಪ್ರಾಚೀನ ಬ್ರಿಟಿಷ್ ಇಂಡಿಯಾ ನಾಣ್ಯಗಳು, ವರ್ಣಚಿತ್ರಗಳು, ನವಿಲು ಗರಿಗಳು, ಕಾಗದದ ಅಂಚೆಚೀಟಿಗಳು, ಅಮೂಲ್ಯ ರತ್ನಗಳಿಂದ ಹಿಡಿದು ಪುರಾತನ ವಸ್ತುಗಳ ಭಾಗವು ಸೇರಿ ಹಲವು ವಸ್ತುಗಳನ್ನು ತನ್ನ ವಿಶಿಷ್ಟ ವಿನ್ಯಾಸಗಳಿಗೆ ಬಳಸಿಕೊಳ್ಳುತ್ತಾ ಬಂದಿದೆ.
ಬ್ರಾಂಡ್ ಕೈಗಡಿಯಾರಗಳನ್ನು ಪ್ರಧಾನಿ ನರೇಂದ್ರ ಮೋದಿ, ನಟರಾದ ಅಮಿತಾಬ್ ಬಚ್ಚನ್, ವಿದ್ಯಾ ಬಾಲನ್, ರಾಜ್‌ಕುಮಾರ್ ರಾವ್, ರಾಣಾ ದಗ್ಗುಬಾಟಿ ಮತ್ತು ನವಾಜುದ್ದೀನ್ ಸಿದ್ದಿಕಿ ಮತ್ತು ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಮತ್ತು ಕೆಎಲ್ ರಾಹುಲ್ ಕೂಡ ಧರಿಸಿವಿರುವುದು ವರದಿಯಗಿದೆ.



Click it and Unblock the Notifications
