Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಚಿವೆಗೆ ಬನಾನಾ ಫೋಬಿಯಾ..! ಆಕೆ ಇದ್ದಲ್ಲಿ ಬಾಳೆಹಣ್ಣು ನಿಷೇಧ ಆದೇಶ..!
ಕೆಲವರಿಗೆ ಕೆಲವೊಂದು ವಸ್ತುಗಳ ಕಂಡರೆ ಅದೇನೋ ಭಯವಾಗುವುದು, ಅದರಿಂದ ದೂರ ಇರುವುದು ನಾವು ನೋಡಿರುತ್ತೇವೆ. ಕೆಲವರಿಗೆ ಹಾವು, ಜಿರಳೆ, ಇಲಿ, ಹಲ್ಲಿ ಹೀಗೆ ಕೆಲವೊಂದು ವಸ್ತು ನೋಡಿದಾಗ ಭಯ ಬೀಳುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಅಂತಹ ವಸ್ತುಗಳಿರುವ ಕಡೆ ಅವರು ಸುಳಿದಾಡುವುದೇ ಇಲ್ಲ. ಹಾಗೆ ಕೆಲವರು ಇಂತಹ ವಸ್ತುಗಳ ಬಳಕೆ, ನೋಡುವುದನ್ನೇ ಬಿಟ್ಟು ಬಿಡುತ್ತಾರೆ. ಇದರಿಂದ ಅವರ ಭಯ ದೂರಾಗುತ್ತದೆ.
ಇನ್ನು ಕೆಲವರು ಇದನ್ನು ಎಲ್ಲರ ಮೇಲೂ ಒತ್ತಾಯವಾಗಿ ಹೇರುತ್ತಾರೆ. ಅಂದ್ರೆ ನಿಮಗೆ ಆ ಒಂದು ವಸ್ತುವಿನಿಂದ ಭಯ ಇದ್ದರೆ ಅದನ್ನು ಯಾರು ಮನೆಗೆ ತರದಂತೆ ಮುಟ್ಟದಂತೆ ಒತ್ತಾಯ ಮಾಡುವುದು. ಇಂತಹದೊಂದು ವಿಚಿತ್ರ ಘಟನೆ ಈಗ ನಡೆದಿದೆ. ಸ್ವೀಡನ್ ದೇಶದಲ್ಲಿ ಲಿಂಗ ಸಮಾನತೆ ಸಚಿವೆ ಪೌಲಿಶಾ ಬ್ರಾಂಡ್‌ಬರ್ಗ್ ಬಾಳೆಹಣ್ಣನ್ನು ಕಂಡು ಭಯ ಬೀಳುತ್ತಾರೆ.

ಆಕೆ ಬನಾನಾ ಫೋಬಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಅವರ ಒಂದು ನಿರ್ಧಾರ ಎಲ್ಲರಿಗೂ ಶಾಕ್ ನೀಡಿದೆ. ಅವರ ಅಧಿಕೃತ ಭೇಟಿಯ ಸಮಯದಲ್ಲಿ ಎಲ್ಲಿಯೂ ಬಾಳೆಹಣ್ಣು ಬಳಸದಿರುವಂತೆ ಸೂಚನೆ ನೀಡಲಾಗಿದೆ. ಹಾಗೆ ಕಚೇರಿಯಲ್ಲಿ ಬಾಳೆಹಣ್ಣು ಬಳಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಸೋರಿಕೆಯಾಗಿರುವ ಈ ಮೇಲ್‌ನಲ್ಲಿ ಈ ರೀತಿಯಾದ ಪ್ರೋಟೋಕಾಲ್ ಬಳಸಲು ಅವರು ಸೂಚಿಸಿದ್ದಾರೆ. ಬ್ರಾಂಡ್ ಬರ್ಗ್ ಬಾಳೆಹಣ್ಣು ಸೇವಿಸಿದಾಗ ಅವರಲ್ಲಿ ಅಲರ್ಜಿಯಂತಹ ಲಕ್ಷಣಗಳು ಕಾಣಿಸುತ್ತಿದ್ದವಂತೆ. ಹೀಗಾಗಿ ಅವರಿಗೆ ಬಾಳೆಹಣ್ಣು ಕಂಡರೆ ಭಯವಾಗುತ್ತಿತ್ತು, ಮುಂದೆ ಇದೊಂದು ಫೋಬಿಯಾ ಆಗಿ ಬದಲಾಗಿದೆ ಎಂದು ಹೇಳಲಾಗಿದೆ.
ಬ್ರಾಂಡ್‌ಬರ್ಗ್ ಒಂದು ಸಂದರ್ಶನದ ವೇಳೆಯಲ್ಲೂ ಈ ಕುರಿತಂತೆ ಹೇಳಿಕೊಂಡಿದ್ದರು. ನನಗೆ ಬಾಳೆಹಣ್ಣು ಅಂದ್ರೆ ಇಷ್ಟ ಇಲ್ಲ ಎನ್ನುವ ಅರ್ಥವಲ್ಲ ಆದ್ರೆ ನನಗೆ ಬಾಳೆಹಣ್ಣಿನ ಫೋಬಿಯಾ ಇದೆ. ಆದ್ರೆ ಬಾಳೆಹಣ್ಣು ನೋಡಿದಾಗ ನನಗೆ ಅಲರ್ಜಿಯ ನೆನಪಾಗುತ್ತದೆ. ಇದರಿಂದ ನಾನು ವಿಚಲಿತಳಾಗುತ್ತೇನೆ. ಹೀಗಾಗಿ ನಾನು ಎಂದಿಗೂ ಬಾಳೆಹಣ್ಣು ಸವಿಯಲು ಮುಂದಾಗುವುದಿಲ್ಲ. ಇದು ನನ್ನ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ ಎಂದು ಅವರು ಹೇಳಿಕೊಂಡಿದ್ದಾರೆ.
2020 ರಲ್ಲಿ ಬ್ರಾಂಡ್‌ಬರ್ಗ್ ಎಕ್ಸ್ ಖಾತೆಯಲ್ಲಿ ಅವರಿಗಿದ್ದ ಬಾಳೆಹಣ್ಣಿನ ಫೋಬಿಯಾ ಕುರಿತು ಹೇಳಿಕೊಂಡಿದ್ದರು. ಬನನ ಫೋಬಿಯಾ ವಿಶ್ವದ ಅತ್ಯಂತ ವಿಲಕ್ಷಣ ಫೋಬಿಯಾ ಎಂದಿದ್ದರು. ಆದ್ರೆ ಈ ಪೋಸ್ಟ್ ಅನ್ನು ಅವರು ಅಳಿಸಿಹಾಕಿದ್ದರು, ಈ ಬಾಳೆಹಣ್ಣಿನ ಫೋಬಿಯಾ ಅತ್ಯಂತ ಕಡಿಮೆ ಜನರಿಗೆ ಕಾಡುವಂತಹ ಸಮಸ್ಯೆಯಂತೆ, ಇದು ಬಾಳೆಹಣ್ಣು ನೋಡಿದಾಗ ವಾಕರಿಕೆ ಬರುವುದು, ಅಲರ್ಜಿ ಉಂಟು ಮಾಡುವ ಲಕ್ಷಣ ಹೊಂದಿದೆ.
ಆಹಾರಗಳಿಗೆ ಸಂಬಂಧಿಸಿದ ಫೋಬಿಯಾಗಳಿಗೆ ಒಳಗಾಗುವುದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿದೆ, ಇದು ಸಂಪೂರ್ಣ ದೈಹಿಕ ಸಮಸ್ಯೆಯಾಗಿರುವುದಿಲ್ಲ ಮನಸ್ಸಿಗೂ ಸಂಬಂಧಿಸಿದ ಸಮಸ್ಯೆಯಾಗಿರಲಿದೆ. ಹೀಗಾಗಿ ಇದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವೂ ಇದೆ. ಇದು ಅಪಾಯಕಾರಿಯಾಗುವ ಕೆಲವು ಹಂತಗಳು ಕೂಡ ಇವೆ. ಯಾರಿಗಾದರು ಅನ್ನದ ಮೇಲೆ ಇಂತಹ ಫೋಬಿಯಾ ಉಂಟಾದರೆ ಅವರು ಊಟ ಮಾಡಲು ಹಿಂದೇಟು ಹಾಕಬಹುದು. ಹಾಗೆ ಇದು ಅವರ ಜೀವಕ್ಕೆ ಅಪಾಯ ಸಹ ತರಬಹುದು. ಹೀಗಾಗಿ ಇಂತಹ ಫೋಬಿಯಾಗಳು ಅಪಾಯಕಾರಿ ಎನ್ನಲಾಗುತ್ತದೆ. ಈ ರೀತಿ ಫೋಬಿಯಾಗಳಲ್ಲಿ ನೂರಾರು ವಿಧಗಳಿವೆ. ಕೆಲವರಿಗೆ ಪ್ರಾಣಿಗಳ ಭಯ, ಎತ್ತರದ ಜಾಗ ಕಂಡರೆ ಭಯ, ಲಿಫ್ಟ್ ಬಳಸುವಾಗ, ಒಬ್ಬರೆ ಇರಲು ಭಯ, ನೀರು ಕಂಡರೆ ಭಯ, ರಕ್ತ ನೋಡಿದಾಗ ಕುಸಿದು ಬೀಳುವುದು ಈ ರೀತಿಯ ಕೆಲವು ಫೋಬಿಯಾಗಳು ಅತ್ಯಂತ ಅಪಾಯಕಾರಿಯಾಗಬಹುದು.



Click it and Unblock the Notifications