Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ರೈಲಿಗೆ ಅಡ್ಡಬಂದರೂ ಹಂಸವನ್ನು ಮುಟ್ಟುವುದಿಲ್ಲ ಮಂದಿ..! ಹೀಗ್ಯಾಕೆ ಗೊತ್ತಾ..?
ಸಿಗ್ನಲಿಂಗ್ ನಿಂದಾಗಿಯೋ ಇಲ್ಲವೆ ಮಂಜು, ಮಳೆಯಿಂದಾಗಿಯೋ ರೈಲಿನ ಓಡಾಟದಲ್ಲಿ ಏರುಪೇರಾಗುವುದನ್ನು ನೀವು ಕೇಳಿರುತ್ತೀರಿ. ಅಷ್ಟೇ ಏಕೆ ಹಸುಗಳು, ಇಲ್ಲಿವೆ ಅಪಘಾತಗಳು ಸಹ ರೈಲು ಸಂಚಾರದ ವ್ಯತ್ಯಯಕ್ಕೆ ಕಾರಣವಾಗಿರುತ್ತದೆ. ಆದರೆ ಹಂಸದಿಂದ ರೈಲು ಸಂಚಾರಕ್ಕೆ ತಡೆಯೊಡ್ಡಿರುವ ಘಟನೆ ಎಂದಾದರು ಕೇಳಿದ್ದೀರಾ..?
ಹೌದು ಇಂಗ್ಲೆಂಡ್‌ನಲ್ಲಿ ಇಂತಹದೊಂದು ಘಟನೆ ನಡೆದಿದೆ. ಹಂಸವೊಂದು ರೈಲ್ವೆ ಹಳಿಯ ಮೇಲೆ ನಿಂತಿದ್ದರಿಂದ ಬರೋಬ್ಬರಿ 15 ನಿಮಿಷಗಳ ಕಾಲ ರೈಲು ಸಂಚಾರ ತಡೆಯಲಾಗಿತ್ತು. ಇದು ಇಡೀ ದಿನದ ರೈಲು ಸಂಚಾರದ ವ್ಯತ್ಯಯಕ್ಕೂ ಕಾರಣವಾಗಿತ್ತು. ಆದರೆ ಹಂಸವನ್ನು ಅಲ್ಲಿಂದ ಓಡಿಸಿ ರೈಲು ಸಂಚಾರ ಪ್ರಾರಂಭಿಸಬಹುದಿತ್ತು. ಆದರೆ ಯಾವ ಸಿಬ್ಬಂದಿಯೂ ಆ ರೀತಿ ಮಾಡಲಿಲ್ಲ. ಇದರ ಹಿಂದೆ ಕಾರಣವೂ ಇದೆ.
ಇಂಗ್ಲೆಂಡ್‌ನಲ್ಲಿ ಹಂಸಗಳನ್ನು ಸಂರಕ್ಷಿಸಲ್ಪಟ್ಟ ಪಕ್ಷಿಯಾಗಿ ಗುರುತಿಸಲಾಗಿದೆ. ಬೇರೆಲ್ಲಾ ಪ್ರಾಣಿ ಪಕ್ಷಿಗಳಿಗಿಂತ ಹಂಸಕ್ಕೆ ಅಲ್ಲಿ ತುಂಬಾನೆ ಮಹತ್ವವಿದೆ. ಏಕೆಂದರೆ ದೇಶದಲ್ಲಿರುವ ಎಲ್ಲಾ ಹಂಸಗಳ ಮಾಲೀಕ ಒಬ್ಬನೇ ಆಗಿದ್ದಾನೆ. ನಿಮಗೆ ಅಚ್ಚರಿಯಾಗಬಹುದು ದೇಶದಲ್ಲಿರುವ ಎಲ್ಲಾ ಹಂಸಗಳು ರಾಜನೇ ಮಾಲಿಕನಾಗಿದ್ದಾನೆ. 12ನೇ ಶತಮಾನದಲ್ಲಿ ಬ್ರಿಟಿಷ್ ರಾಜ ಎಲ್ಲಾ ಹಂಸಗಳು ತನ್ನ ಆಸ್ತಿ ಎಂದು ಘೋಷಿಸಿಕೊಂಡಿದ್ದ.

ಹಂಸಗಳೇಕೆ ರಾಜನ ಆಸ್ತಿಯಾದವು..!
ಇಂಗ್ಲೆಂಡ್‌ನಲ್ಲಿ ಎಷ್ಟೆಲ್ಲಾ ಸಂಪತ್ತಿದ್ದರೂ ರಾಜ ಹಂಸದ ಹಿಂದೆ ಬಿದ್ದಿದ್ದೇಕೆ ಎಂಬ ಅನುಮಾನ ನಿಮಗೆ ಬರಬಹುದು. ಆದರೆ ಇಂಗ್ಲೆಂಡ್‌ನಲ್ಲಿ ಹಂಸಗಳನ್ನು ಆಹಾರಕ್ಕಾಗಿ ಬಳಸಲಾಗುತ್ತಿತ್ತು. ಎಷ್ಟೆಂದರೆ ದೇಶದಲ್ಲಿ ಹಂಸಗಳ ಸಂಖ್ಯೆ ತೀರ ಕೆಳಮಟ್ಟಕ್ಕೆ ಇಳಿದುಬಿಟ್ಟಿತ್ತು. ಇದು ಇಡೀ ಪಕ್ಷಿ ಸಂಕುಲಕ್ಕೆ ಸಂಚಕಾರ ತಂದಿತ್ತು. ಹೀಗಾಗಿ ರಾಜ ಹಂಸಗಳು ಇನ್ನು ಮುಂದೆ ನನ್ನ ಆಸ್ತಿ ಎಂದು ಘೋಷಿಸಿಕೊಂಡ, ಜೊತೆಗೆ ಹಂಸಗಳ ಸೇವನೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಅಲ್ಲದೆ ಯಾರಾದರು ಹಂಸಗಳ ಎತ್ತಿಕೊಂಡು ಹೋಗುವುದು ಕಂಡರೆ ಅವರ ಮೇಲೆ ಕಳ್ಳತನದ ಕೇಸ್ ಹಾಕಲಾಗುತ್ತಿತ್ತು.
ದೇಶದಲ್ಲಿ ಹಂಸಗಳ ರಕ್ಷಣೆಗಾಗಿ ಈ ನಿಯಮ ಜಾರಿ ಮಾಡಲಾಗಿತ್ತು. ಈ ನಿಯಮ ಇಂದಿಗೂ ನಡೆದುಕೊಂಡು ಬಂದಿದೆ. ಎಲ್ಲಿಯೇ ಹಂಸ ಕಂಡರೂ ಜನ ಅದರ ತಂಟೆಗೂ ಹೋಗುವುದಿಲ್ಲ. ಅಲ್ಲದೆ ಅವುಗಳನ್ನು ಮನೆಯಲ್ಲೂ ಸಾಕಿರುತ್ತಾರೆ. ಹೀಗಿದ್ದಾಗ ರೈಲ್ವೆ ಹಳಿ ಮೇಲೆ ಬಂದು ನಿಂತಿದ್ದ ಹಂಸವನ್ನು ಯಾರು ತಾನೆ ಎತ್ತಿಕೊಳ್ಳುತ್ತಾರೆ ಹೇಳಿ.
ಹಂಸಗಳಿಗೆ ಸಿಕ್ಕ ಗೌರವದಿಂದಾಗಿ ರೈಲು ಸಂಚಾರ ತಡವಾಗಿತ್ತು. ಆದರೆ ಇಡೀ ಪಕ್ಷಿ ಸಂಕುಲ ಉಳಿಸಲು ರಾಜ ಅಂದು ತೆಗೆದುಕೊಂಡಿದ್ದ ನಿರ್ಧಾರ ಇಂದಿಗೂ ಜನರು ಪಾಲಿಸುತ್ತಿರುವುದು ಅಚ್ಚರಿ ಹುಟ್ಟಿಸುತ್ತೆ.
ರಾಜಮನೆತನಕ್ಕೆ ಮಾತ್ರ ಸೇವಿಸಲು ಅನುಮತಿ
ಇಂದಿಗೂ ಇಂಗ್ಲೆಂಡ್‌ನಲ್ಲಿ ಹಂಸ ಮಾಂಸವನ್ನು ರಾಜ ಮನೆತನ ಮಾತ್ರ ಸೇವಿಸಲು ಅನುಮತಿ ಇದೆ. ಆದರೆ ರಾಜಮನೆತನ ಅರಮನೆಯಿಂದ ಹೊರಗಡೆ ಎಲ್ಲಿಯೂ ಸೇವಿಸುವಂತಿಲ್ಲ. ಅಂದರೆ ಅವರು ಅರಮನೆ ಬಿಟ್ಟು ಹೊರಗಡೆ ಹೋದಾಗ ಇಲ್ಲವೆ ಬೇರೆ ಸ್ಥಳದಲ್ಲಿ ಔತಣಕೂಟವಿದ್ದಾಗ ಅಲ್ಲಿ ಇದನ್ನು ಸೇವಿಸುವಂತಿಲ್ಲ ಎಂಬ ನಿಯಮವಿದೆ. ಈ ಎಲ್ಲಾ ನಿಯಮದಿಂದಾಗಿ ಇಂಗ್ಲೆಂಡ್‌ನಲ್ಲೀಗ ಎಲ್ಲಿ ನೋಡಿದರು ಹಂಸಗಳು ಕಂಡುಬರುತ್ತವೆ. ಆದರೆ ಯಾರು ಸಹ ಅದನ್ನು ಮುಟ್ಟುವ ಧೈರ್ಯ ಮಾಡುವುದಿಲ್ಲ.



Click it and Unblock the Notifications











