Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
2050ರ ವರೆಗೆ ಬದುಕಿದ್ರೆ ನಿಮಗೆ ಮರಣವೇ ಬರಲ್ಲ..! ಹೇಗೆ ಗೊತ್ತಾ?
ವೈದ್ಯಕೀಯ ರಂಗ ಎಷ್ಟು ಮುಂದುವರೆದಿದೆ ಅನ್ನೋದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಈಗ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಸಿಗುತ್ತಿದೆ, ಹಾಗೆ ದೇಹದ ಪ್ರತಿಯೊಂದು ಅಂಗವನ್ನು ಕೂಡ ಬದಲಾಯಿಸುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಹಾಗೆ ಈಗ ಬೇಗ ಸಾಯಲು ಯಾರಿಗೂ ಇಷ್ಟವಿಲ್ಲ. ಬೇಗ ವಯಸ್ಸಾಗುವಿಕೆಯನ್ನು ತಡೆಯಲು ಕೂಡ ಹಲವು ಚಿಕಿತ್ಸೆ ಹಾಗೆ ಹಲವರು ರೀತಿ ಔಷಧಿಗಳು ಈಗ ವೈದ್ಯಕೀಯ ರಂಗದಲ್ಲಿ ಸಿಗುತ್ತಿವೆ.
ಅದರಲ್ಲೂ ವೈದ್ಯಕೀಯ ಕ್ಷೇತ್ರವೀಗ ನಂಬಲು ಸಾಧ್ಯವಿಲ್ಲದನ್ನು ಮಾಡಿ ತೋರಿಸುತ್ತಿದೆ. ಹಾಗೆ ಮಾನವರು ಯಾವುದನ್ನು ಮಾಡಿ ತೋರಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದರೋ ಅಂತಹ ಕೆಲಸಗಳನ್ನ ಮಾಡಿ ತೋರಿಸುತ್ತಿದ್ದಾರೆ. ಆದ್ರೆ ಈಗೊಂದು ಹೊಸ ಆವಿಷ್ಕಾರವು ನಿಮ್ಮನ್ನು ಅಚ್ಚರಿಗೆ ತಳ್ಳಲಿದೆ. ಹೌದು ನೀವು ಶಾಶ್ವತವಾಗಿ ಬದುಕಬಹುದಾದ ಅತ್ಯಂತ ದೊಡ್ಡ ವಿಚಾರವೊಂದು ಈಗ ಹೊರಬಿದ್ದಿದೆ.

ನೀವು 2050ರ ವರೆಗೆ ಬದುಕಿದರೆ ಸಾಕಂತೆ ನೀವು ಶಾಶ್ವತವಾಗಿ ಭೂಮಿ ಮೇಲೆ ಬದುಕಬಹುದು ಎಂಬ ಅಚ್ಚರಿಯ ಹಾಗೆ ವಿಶೇಷ ಆವಿಷ್ಕಾರವನ್ನು ವೈದ್ಯಕೀಯ ಕ್ಷೇತ್ರವು ಮಾಡಿ ತೋರಿಸಲಿದೆ. ಹೌದು ಕ್ರಯೋಫ್ರೀಜಿಂಗ್ ಮೂಲಕ ಸತ್ತವರನ್ನು ಕೂಡ ಜೀವಂತಗೊಳಿಸುವ ಸಂಶೋಧನೆ ನಡೆಯುತ್ತಿದೆ.
ಖ್ಯಾತ ವೈದ್ಯಕೀಯ ತಜ್ಞ ಡಾ. ಇಯಾನ್ ಪಿಯರ್ಸನ್ ಹೇಳುವಂತೆ, ನೀವು ಇಂದು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಭವಿಷ್ಯದ ವೈದ್ಯಕೀಯ ಪ್ರಗತಿಯಿಂದಾಗಿ ನೀವು ಎಂದಿಗೂ ನೈಸರ್ಗಿಕ ಕಾರಣಗಳಿಂದ ಸಾಯುವುದಿಲ್ಲ. ಅಂದರೆ ಭೂಮಿಯ ಮೇಲೆ ಶಾಶ್ವತವಾಗಿ ಬದುಕಬಹುದಂತೆ. ಇದಕ್ಕೆ ಮುಖ್ಯ ಕಾರಣ ದೇಹದ ಭಾಗಗಳ ನವೀಕರಣ ಮಾಡುವುದು ಅಥವಾ ಬದಲಿ ಮಾಡುವ ವಿಧಾನವಂತೆ.
ಜೀವಕೋಶಗಳ ವಯಸ್ಸಾಗುವಿಕೆಯನ್ನು ನಿಲ್ಲಿಸಲು ಅಥವಾ ವಯಸ್ಸಾಗುವಿಕೆಯಿಂದ ಕಾಪಾಡಲು ಜೆನೆಟಿಕ್ ಇಂಜಿನಿಯರ್‌ನಂತಹ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದರಲ್ಲಿ ಸವೆದುಹೋಗಿರುವ ದೇಹದ ಭಾಗಗಳನ್ನು ಬದಲಾಯಿಸಬಹುದು. ದೇಹದ ಯವ್ವನವನ್ನು ಹಾಗೆಯೇ ಉಳಿಸುವ 3D ತಂತ್ರಜ್ಞಾನದ ಮೂಲಕ ಅಂಗಗಳ ಬದಲಾಯಿಸುವ ಕುರಿತು ಸಂಶೋಧನೆ ನಡೆಯುತ್ತಿದೆ. ಅಂದರೆ ನಿಮ್ಮ ದೇಹದ ಯಾವುದೇ ಭಾಗವು ಹಾಳಾಗದಂತೆ ಹಾಗೆ ಕ್ಷೀಣಿಸುವುದರಿಂದ ಕಾಪಾಡುವ ಜೊತೆಗೆ ಅದನ್ನು ಬದಲಾಯಿಸಬಹುದು. ಹೀಗಾಗಿ ನೀವು ಶಾಶ್ವತವಾಗಿ ಬದುಕುಳಿಯಬಹುದು.
ಈ ತಂತ್ರಜ್ಞಾನಗಳ ಪ್ರಯೋಜನ ಪಡೆಯಲು ನಾವು 2050 ರ ವರೆಗೆ ಕಾಯಬೇಕಾಗುತ್ತದೆ. ಆರಂಭದಲ್ಲಿ ಈ ಚಿಕಿತ್ಸೆಗಳು ಶ್ರೀಮಂತರಿಗೆ ಮಾತ್ರ ಲಭ್ಯವಿರಬಹುದು, ಆದರೆ 2060ರ ಹೊತ್ತಿಗೆ ಅವು ಹೆಚ್ಚಿನ ಜನರಿಗೆ ಲಭ್ಯವಾಗಬಹುದು ಎಂದು ತಜ್ಞರು ಹೇಳುತ್ತಾರೆ. ನೀವಿನ್ನು 40 ವರ್ಷದೊಳಗಿನವರಾಗಿದ್ದರೆ ಈ ಸೌಲಭ್ಯ ಪಡೆಯುವವರನ್ನು ನೋಡಬಹುದು. ಅಥವಾ ನೀವು ಕೂಡ ಇದರ ಲಾಭ ಪಡೆದುಕೊಳ್ಳಬಹುದು.
ಇದರ ಚಿಕಿತ್ಸೆ ಹೇಗೆ?
ಅಂಗಾಂಗ ಕಸಿ ಮಾಡುವುದರ ಜೊತೆಗೆ ನಿಮ್ಮ ಆಯಸ್ಸು ವೃದ್ಧಿಗೆ ಸಂಶೋಧಕರು ಹಲವು ಮಾರ್ಗಗಳ ಪತ್ತೆ ಮಾಡಿದ್ದಾರೆ. ಇತ್ತೀಚಿಗೆ ಜೀನ್ ಹಾಗೂ ಡಿಎನ್‌ಎ ಚಿಕಿತ್ಸೆ, ಕೋಶ ಚಿಕಿತ್ಸೆ, ನ್ಯಾನೊ ಮೆಡಿಸಿನ್, ಅಂಗಾಂಗ ಕಸಿ, ಕೋಶಗಳ ಪ್ರೋಗ್ರಾಮಿಂಗ್ ಹೀಗೆ ಹತ್ತು ಹಲವು ಹೊಸ ತಂತ್ರಜ್ಞಾನದ ಚಿಕಿತ್ಸೆಗಳ ನೋಡಬಹುದು.
ಆದ್ರೆ ಇದರಿಂದ ಇಂದಿಷ್ಟು ಹಾನಿಯನ್ನು ಕೂಡ ನೋಡಬಹುದು. ಮನುಷ್ಯ ಸಾವಿಲ್ಲದೆ ಬದುಕುವುದು ಅಂದರೆ ಭೂಮಿ ಮೇಲಿನ ಹೊರೆ ಹೆಚ್ಚಾದಂತೆ ಲೆಕ್ಕ. ಜನಸಂಖ್ಯಾ ಏರಿಕೆ ಕ್ಷಿಪ್ರಮಟ್ಟಕ್ಕೆ ತಲುಪುವ ಅಪಾಯವೂ ಇರಬಹುದು. ಹಾಗೆ ಇದೊಂದು ವೈದ್ಯಕೀಯ ಮಾಫಿಯಾಗು ಕಾರಣವಾಗಬಹುದು. ಹೀಗಾಗಿ ಈ ಸಂಶೋಧನೆಯ ಕುರಿತು ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಆದ್ರೆ 2050ರ ಹೊತ್ತಿಗೆ ಈ ಸಂಶೋಧನೆ ಎಷ್ಟರ ಮಟ್ಟಿಗೆ ಫಲ ನೀಡಲಿದೆ. ಸಂಶೋಧಕರು ಅಂದುಕೊಂಡಂತೆಯೇ ಎಲ್ಲವು ನಡೆಯಲಿದ್ಯಾ ಎಂಬ ಅನುಮಾನವೂ ಇದೆ.



Click it and Unblock the Notifications