Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮನೆ ಬಳಿ ಬಂದು ಚಪ್ಪಲಿ ಹೊತ್ತೊಯ್ದ ಹಾವು..! ವಿಡಿಯೋ ವೈರಲ್
ಆನ್‌ಲೈನ್‌ನಲ್ಲಿ ಎಂತಹ ವಿಚಿತ್ರ ವಿಡಿಯೋಗಳು ಕೆಲವೊಮ್ಮೆ ಹರಿದಾಡುತ್ತವೆ ಅಂದರೆ ನಾವದನ್ನ ನಂಬಲು ಸಾಧ್ಯವಾಗುವುದಿಲ್ಲ. ಕೆಲವೊಂದು ನಮ್ಮ ಊಹೆಗೆ ಮೀರಿರುವುದನ್ನು ನಾವು ನೋಡಬಹುದು. ಮತ್ತೆ ಕೆಲವು ಹೀಗೂ ಸಾಧ್ಯವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿಸುತ್ತವೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹಾವಿನ ವಿಡಿಯೋ ಸಹ ಇದೇ ರೀತಿ ಅಚ್ಚರಿ ಮೂಡಿಸಿದೆ.
ವಿಡಿಯೋದಲ್ಲಿ ಹಾವೊಂದು ಚಪ್ಪಲಿಯನ್ನು ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಜಾಲತಾಣದಲ್ಲಿ ಹಾವಿನ ನೂರಾರು ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುವ ಹಾವುಗಳು, ವಿಚಿತ್ರ ರೀತಿಯ ಹಾವುಗಳು ಹಾಗೆ ಚಿತ್ರ ವಿಚಿತ್ರ ಆಕಾರದಲ್ಲಿರುವ ಹಾವುಗಳ ವಿಡಯೋಗಳ ನೋಡಿರಬಹುದು.

ಆದರೆ ಇಲ್ಲೊಂದು ವಿಡಿಯೋದಲ್ಲಿ ಹಾವೊಂದು ವಿಚಿತ್ರವಾಗಿ ವರ್ತಿಸಿದೆ. ಅದು ಮನೆ ಬಳಿ ಬಂದು ಒಂದು ಚಪ್ಪಲಿಯನ್ನು ಹೊತ್ತೊಯ್ದಿದೆ. ಹಾವು ವಿಡಿಯೋ ಮಾಡುತ್ತಿದ್ದ ಮಹಿಳೆಯ ಕಡೆಗೆ ಬರುವಾಗ ಆಕೆ ಕೂಗುತ್ತಿದ್ದಾಳೆ. ಕೂಡಲೆ ಹಿಂತಿರುಗಿದ ಹಾವು ಬಾಯಿಯಲ್ಲಿ ಒಂದು ಚಪ್ಪಲಿಯನ್ನು ಎತ್ತಿಕೊಂಡು ವೇಗವಾಗಿ ಚಲಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಹಾವು ಮನೆಯೊಳಗೆ ನುಗ್ಗಲು ಯತ್ನಿಸುವಾಗ ಅಲ್ಲಿದ್ದವರ ದೃಷ್ಟಿಗೆ ಬಿದ್ದಿದೆ. ಕೂಡಲೆ ಅವರೆಲ್ಲ ಒಟ್ಟಾಗಿ ಹಾವನ್ನು ಓಡಿಸಲು ಮುಂದಾಗಿದ್ದಾರೆ. ಜೊತೆಗೆ ಹಾವು ಮನೆ ಒಳಗೆ ಬಾರದಂತೆ ಮಾಡಲು ಕೂಗಿದ್ದಾರೆ. ಆದರೆ ಈ ವೇಳೆ ಹಾವು ವಾಪಾಸು ತಿರುಗಿ ಒಂದು ಚಪ್ಪಲಿ ಹೊತ್ತೊಯ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ಶಾಕ್ ಆಗಿದ್ದಾರೆ.
ಆರಂಭದಲ್ಲಿ ಚಪ್ಪಲಿ ಅದರ ಕುತ್ತಿಗೆಗೆ ಸಿಲುಕಿರಬಹುದು ಎನಿಸುತ್ತದೆ. ಆದರೆ ಅಚ್ಚರಿ ಎಂದರೆ ಹಾವು ತನ್ನ ಬಾಯಿಯಲ್ಲಿ ಚಪ್ಪಲಿ ಕಚ್ಚಿಕೊಂಡು ಹೋಗುತ್ತಿದೆ. ಚಪ್ಪಲಿ ಹಿಡಿದ ಹಾವು ಕಣ್ಣು ಮಿಟುಕಿಸುವ ವೇಳೆಗೆ ದೃಷ್ಟಿಯಿಂದ ಮರೆಯಾಗಿದೆ. ಚಪ್ಪಲಿಯನ್ನ ಅದು ಎಲ್ಲಿಗೆ ಕೊಂಡೊಯ್ದಿದೆ ಎಂಬುದು ಮಾತ್ರ ಪತ್ತೆಯಾಗಿಲ್ಲ.
ವಿಡಿಯೋದಲ್ಲಿ ಮಹಿಳೆಯೊಬ್ಬರು ಚಪ್ಪಲಿ ಕದ್ದು ಹಾವು ಓಡುತ್ತಿದೆ ಎಂದು ಕೂಗಿಕೊಳ್ಳುತ್ತಿರುವುದನ್ನು ನಾವು ಕೇಳಬಹುದು. ಈ ವಿಡಿಯೋ ನೋಡಿದ ಮಂದಿಗೆ ಅಚ್ಚರಿ ಜೊತೆ ಕುತೂಹಲಕ್ಕೂ ಕಾರಣವಾಗಿದೆ. ಚಪ್ಪಲಿ ಕದಿಯುವ ಹಾವು ಎಂಬ ಬರಹದಡಿ ಈ ವಿಡಿಯೋ ಹರಿಬಿಡಲಾಗಿದ್ದು, ಸಿಕ್ಕಾಪಟ್ಟೆ ಕಮೆಂಟ್‌ಗಳ ಪಡೆದುಕೊಂಡಿದೆ.
ಈ ಹಾವಿಗೆ ಕುಟುಂಬ ನಿರ್ವಹಣೆಗಾಗಿ ಕಳ್ಳತನಕ್ಕೆ ಇಳಿದಿದೆ. ಖಂಡಿತ ನಿಮ್ಮ ಚಪ್ಪಲಿ ದೆಹಲಿ ಚೋರ್ ಬಜಾರ್‌ನಲ್ಲಿ ಹೋಗಿ ನೋಡಿ ಸಿಗುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ಹಾವು ಒಂದು ಚಪ್ಪಲಿ ಕೊಂಡೊಯ್ದಿದೆ ಆದ್ರೆ ಮತ್ತೊಂದು ಚಪ್ಪಲಿಗೆ ಮತ್ತೆ ಬಂದೇ ಬರುತ್ತದೆ ಅಲ್ಲಿಯೇ ಕಾಯುತ್ತಿರಿ ಎಂದು ಮತ್ತೊಬ್ಬ ಬಳಕೆದಾರರು ತಮಾಷೆಯ ಕಮೆಂಟ್‌ಗಳ ಮಾಡಿದ್ದಾರೆ.
ಈ ವಿಡಿಯೋದ ಜೊತೆಗೆ ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಮುಂಗುಸಿಗಳು ಷ ಸರ್ಪದ ಜೊತೆ ಕಾಳಗ ನಡೆಸುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ. ಹಾವು ಮತ್ತು ಮುಂಗುಸಿ ಶತ್ರುಗಳು ಎಂಬುದು ಗೊತ್ತಿರುವ ವಿಚಾರ, ಇಲ್ಲಿ ಎರಡು ಪ್ರಾಣಿಗಳ ನಡುವಿನ ಕಿತ್ತಾಟ ರೋಮಾಂಚನಕಾರಿಯಾಗಿದೆ. ವೈರಲ್ ವಿಡಿಯೋದಲ್ಲಿ ಹಾವಿನ ಮೇಲೆ ಮೂರು ಮುಂಗುಸಿಗಳು ಅಟ್ಯಾಕ್ ಮಾಡುವುದನ್ನು ಕಾಣಬಹುದು. ಪಾಟ್ನಾ ಏರ್‌ಪೋರ್ಟ್ ರನ್‌ವೇಯಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಹಾವಿನ ಮೇಲೆ ಈ ಮುಂಗುಸಿಗಳು ಒಟ್ಟಾಗಿ ದಾಳಿ ಮಾಡಿವೆ. ಈ ದಾಳಿಗೆ ಹೆದರದ ಹಾವು ಏಕಾಂಗಿಯಾಗಿ ಅವುಗಳ ಮೇಲೆ ಪ್ರತಿದಾಳಿ ಮಾಡುತ್ತಿದೆ.
ಸದ್ಯ ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದುಮ, ಜನರು ಹುಬ್ಬೇರಿಸುವಂತೆ ಮಾಡಿವೆ.



Click it and Unblock the Notifications
