Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
SuperMoon: ನವೆಂಬರ್‌ನಲ್ಲಿ ಸೂಪರ್‌ಮೂನ್: ಯಾವಾಗ ನೋಡಬಹುದು ಗೊತ್ತಾ?
ಆಗಸದಲ್ಲಿ ನೀವು ನೋಡಿದಷ್ಟು ಕೌತುಕಗಳು ಹುಟ್ಟಿಕೊಳ್ಳುತ್ತಲೇ ಇರಲಿವೆ. ಅದ್ರಲ್ಲೂ ಆಕಾಶ ಕಾಯಗಳು, ಗ್ರಹಗಳು, ಚಂದ್ರ, ಸೂರ್ಯ, ಧೂಮಕೇತುಗಳು, ಕ್ಷುದ್ರಗ್ರಹಗಳು ಹೀಗೆ ಹತ್ತಾರು ವಿಚಾರಗಳಲ್ಲಿ ನಿಮಗೆ ಕುತೂಹಲಗಳು ಇರಬಹುದು. ಹಾಗೆ ಆಗಾಗ ಸಂಭವಿಸುವ ಗ್ರಹಣಗಳು, ಹುಣ್ಣಿಮೆ, ಅಮಾವಾಸ್ಯೆಗಳು, ಹಾಗೆ ಸೂಪರ್ ಮೂನ್‌ಗಳು ಎಲ್ಲರಲ್ಲು ಅಚ್ಚರಿ ಮೂಡಿಸುವುದು ಸಾಮಾನ್ಯ.
ಹುಣ್ಣಿಮೆಯ ದಿನ ಸಂಭವಿಸುವಂತಹ ಸೂಪರ್ ಮೂನ್ ವಿದ್ಯಮಾನ ಇಂದಿಗೂ ಬಹಳ ಅಚ್ಚರಿಯ ವಿಚಾರವಾಗಿದೆ. ಸದ್ಯ ಈಗ ಮತ್ತೊಂದು ಸೂಪರ್ ಮೂನ್ ಸಂಭವಿಸುತ್ತಿದೆ. ಇದೇ ನವೆಂಬರ್ 5ರಂದು ಹುಣ್ಣಿಮೆಯ ದಿನದಂದು ಸೂಪರ್ ಮೂನ್ ವಿದ್ಯಮಾನ ಸಂಭವಿಸುತ್ತಿದೆ. ಚಂದ್ರನು ಭೂಮಿಗೆ ಹತ್ತಿರವಾಗಿರುವುದರಿಂದ ಸಾಮಾನ್ಯಕ್ಕಿಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.

ಅಕ್ಟೋಬರ್‌ನಲ್ಲಿ ಕಾಣಿಸಿಕೊಂಡ ಸೂಪರ್ ಮೂನ್ ಬಳಿಕ ಇದು 2ನೇ ಸೂಪರ್ ಮೂನ್ ಆಗಿರಲಿದೆ. ಈ ಸೂಪರ್‌ಮೂನ್ ಭೂಮಿಯಿಂದ ಸರಿಸುಮಾರು 221,816 ಮೈಲುಗಳು (356,980 ಕಿಲೋ ಮೀಟರ್) ದೂರದಲ್ಲಿದೆ. ಆದ್ರೆ ಇದು ವರ್ಷದ ಅತ್ಯಂತ ಹತ್ತಿರದ ಹುಣ್ಣಿಮೆ. ಹೀಗಾಗಿ ಚಂದ್ರನು ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾಗಿ ಕಾಣಿಸಲಿದ್ದಾನೆ.
ನವೆಂಬರ್‌ನಲ್ಲಿ ಬರುವ ಪೂರ್ಣ ಹುಣ್ಣಿಮೆಗಳಿಗೆ ಬೀವರ್‌ಗಳ ಹೆಸರಿಡಲಾಗಿದೆ ಎಂದು ನಾಸಾ ಒಮ್ಮೆ ವಿವರಿಸಿದೆ. ಈ ಪದವು ಸ್ಥಳೀಯ ಅಮೆರಿಕನ್ ಮತ್ತು ಯುರೋಪಿಯನ್ ಸಂಸ್ಕೃತಿಗಳಲ್ಲಿ ವಿವಿಧ ಸಂಪ್ರದಾಯಗಳು ಮತ್ತು ಜಾನಪದ ಕಥೆಗಳಲ್ಲಿ ಹುಟ್ಟಿಕೊಂಡಿದೆ. ಹನ್ನೊಂದನೇ ತಿಂಗಳು ಬೀವರ್‌ಗಳು ಅಣೆಕಟ್ಟುಗಳನ್ನು ಬಲಪಡಿಸುವ ಮೂಲಕ ಮತ್ತು ತಮ್ಮ ಆಹಾರ ಪೂರೈಕೆಯನ್ನು ಸಂಗ್ರಹಿಸುವ ಮೂಲಕ ಚಳಿಗಾಲಕ್ಕಾಗಿ ತಯಾರಿ ನಡೆಸುವ ಸಮಯ.
ಬೀವರ್‌ರ್‌ಗಳೆಂದರೆ ನೀರು ನಾಯಿಗಳಂತೆ ಕಂಡುಬರುವ ಒಂದು ಪ್ರಾಣಿಯಾಗಿದೆ, ಇದು ಅಮೆರಿಕದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಇವು ಚಳಿಗಾಲದಲ್ಲಿ ಹೊರಬಾರದೆ ಗೂಡಿನೊಳಗೆ ಇರಲಿವೆ. ಹಾಗೆ ಬೆಚ್ಚಗಿನ ಬಟ್ಟೆಗಳಿಗಾಗಿ ಬಳಸಲು ದಪ್ಪ, ಚಳಿಗಾಲಕ್ಕೆ ಸಿದ್ಧವಾದ ಚರ್ಮಕ್ಕಾಗಿ ಬೀವರ್‌ಗಳನ್ನು ಬಲೆಗೆ ಬೀಳಿಸುವ ಸಮಯವೂ ನವೆಂಬರ್ ಆಗಿತ್ತು. ಹೀಗಾಗಿ ನವೆಂಬರ್ ಹುಣ್ಣಿಮೆಯನ್ನು ಬೀವರ್‌ಗಳ ಹುಣ್ಣಿಮೆ ಎಂದು ಕರೆಯಲಾಗಿದೆ.
ಇನ್ನು ನವೆಂಬರ್ ತಿಂಗಳ ಹುಣ್ಣಿಮೆಯನ್ನು ಫ್ರಾಸ್ಟ್ ಮೂನ್, ಫ್ರೀಜಿಂಗ್ ಮೂನ್, ಟ್ರೇಡಿಂಗ್ ಮೂನ್ ಮತ್ತು ಸ್ನೋ ಮೂನ್ ಎಂದು ಕೂಡ ಕರೆಯುವುದುಂಟು. ಬೀವರ್ ಚಂದ್ರನು ನವೆಂಬರ್ 5, 2025 ರಂದು ಬೆಳಿಗ್ಗೆ 8:19 EST ಕ್ಕೆ ತನ್ನ ಉತ್ತುಂಗವನ್ನು ತಲುಪುತ್ತದೆ. ಆದಾಗ್ಯೂ, ಇದು ನವೆಂಬರ್ 4 ಮತ್ತು 5 ರ ಸಂಜೆ ರಾತ್ರಿ ಆಕಾಶದಲ್ಲಿ ಗೋಚರಿಸುತ್ತದೆ. ಯುಕೆಯಲ್ಲಿ ನವೆಂಬರ್ 5 ರಂದು ಮಧ್ಯಾಹ್ನ 1:19 ಕ್ಕೆ ದೊಡ್ಡದಾಗಿ ಗೋಚರಿಸುತ್ತಾನೆ.
ನೀವು ಕೂಡ ನವೆಂಬರ್ 4 ಮತ್ತು 5ರಂದು ಎರಡು ದಿನಗಳ ಕಾಲ ಚಂದ್ರನ ಗಾತ್ರದಲ್ಲಿ ಬದಲಾಣೆಯಾಗಿರುವುದು ಗಮನಿಸಬಹುದು. ಹಾಗೆ ಈ ಸೂಪರ್ ಮೂನ್ ಹೊರತು ಪಡಿಸಿದರೆ ಮುಂದಿನ ವರ್ಷ 2026ರ ಡಿಸೆಂಬರ್ 23ರಂದು ಮತ್ತೆ ಸೂಪರ್‌ಮೂನ್ ಸಂಭವಿಸಲಿದೆ. ಈ ಸಮಯದಲ್ಲಿ ಚಂದ್ರನು ಭೂಮಿಯಿಂದ 221,667 ಮೈಲಿ ದೂರ (356,740 ಕಿ. ಮೀ) ಇರಲಿದ್ದಾನೆ.
ಹಾಗೆ ಜನವರಿಲ್ಲಿಯೂ ಈ ರೀತಿ ಚಂದ್ರನು ದೊಡ್ಡದಾಗಿ ಕಾಣಿಸಲಿದ್ದಾನೆ ಆದ್ರೆ ಇದನ್ನು ಸೂಪರ್ ಮೂನ್ ಎಂದು ಪರಿಗಣಿಸಲಾಗಿಲ್ಲ.



Click it and Unblock the Notifications
