Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾಳೆ ಭೂಮಿಗೆ ಬರಲಿದ್ದಾರೆ ಸುನಿತಾ ವಿಲಿಯಮ್ಸ್! 9 ತಿಂಗಳ ಬಳಿಕ ರಿಟರ್ನ್!!
ಸುನಿತಾ ವಿಲಿಯಮ್ಸ್ ಭಾರತೀಯ ಮೂಲದ ಅಮೆರಿಕಾ ಬಾಹ್ಯಾಕಾಶ ವಿಜ್ಞಾನಿ. ಕಲ್ಪನಾ ಚಾವ್ಲಾ ಬಳಿಕ ಕೇಳಿ ಬರುವ ಮತ್ತೋರ್ವ ಮಹಿಳಾ ಗಗನಯಾತ್ರಿಗಳಲ್ಲಿ ಆಕೆಯ ಹೆಸರು ಕೂಡ ಒಂದಾಗಿದೆ. ಸದ್ಯ ಆಕೆ ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದ್ದಾರೆ. ಕಳೆದ 9 ತಿಂಗಳಿಗೂ ಹೆಚ್ಚು ಕಾಲ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕಿದ್ದಾರೆ. ಅವರನ್ನು ವಾಪಾಸು ಭುಮಿಗೆ ಕರೆತರುವ ಸಾಹಸ ನಿರಂತರವಾಗಿ ನಡೆಯುತ್ತಲೇ ಇತ್ತು, ಇದಕ್ಕಾಗಿ ಹಲವು ಬಾರಿ ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು.
ಆದರೆ ಈಗ ಕೊನೆಗೂ ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಖಚಿತವಾಗಿದ್ದು ನಾಸಾ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಅದರಲ್ಲೂ ಅವರು ನಾಳೆ ಅಂದರೆ ಮಾರ್ಚ್ 18ರಂದು ಭೂಮಿಗೆ ಮರಳುತ್ತಿದ್ದಾರೆ. ಮಾರ್ಚ್ 16 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಡಾಕ್ ಮಾಡಿದ ನಂತರ ಸುನಿತಾ ವಿಲಿಯಮ್ಸ್ ಮತ್ತು ಇತರ ಗಗನಯಾತ್ರಿಗಳು ಪರಸ್ಪರ ಶುಭಾಶಯ ಕೋರುತ್ತಿರುವ ವಿಡಿಯೋವನ್ನು ನಾಸಾ ಹಂಚಿಕೊಂಡಿದೆ.

ಸುಮಾರು 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ನಾಳೆ ಸಂಜೆ ಸುಮಾರಿಗೆ ಭೂಮಿಗೆ ಕರೆತರಲಾಗುವುದು ಎಂದು ನಾಸಾ ವಿವರಿಸಿದೆ. ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಯೊಂದಿಗೆ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ರಾಫ್ಟ್‌ನಲ್ಲಿ ಭೂಮಿಗೆ ಕರೆತರಲಾಗುತ್ತಿದೆ.
ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆ ಅನುಭವಿಸಿದ್ದ ಕಾರಣದಿಂದಾಗಿ ಭೂಮಿಗೆ ಗಗನಯಾತ್ರಿಗಳ ಕರೆತರುವುದು ತಡವಾಗಿತ್ತು. ಹೀಗಾಗಿ ಕಳೆದ ವರ್ಷ ಜೂನ್‌ನಿಂದಲೂ ಇಬ್ಬರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಹಾಗೆ ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಇದೆ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ, ಸೋಮವಾರ ಸಂಜೆಯಿಂದಲೇ ಅವರ ವಾಪಾಸಾತಿ ಪ್ರಕ್ರಿಯೆಗಳನ್ನು ನೇರ ಪ್ರಸಾರದಲ್ಲಿಯೂ ವೀಕ್ಷಿಸಬಹುದು.
ಕಳೆದ 2024ರ ಜೂನ್ 14ರಂದು ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಬೇಕಿತ್ತು, ಆದ್ರೆ ಅವರನ್ನು ಕರೆತರಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಪ್ರೊಪೆಲರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು, ಬಳಿಕ ಈ ನೌಕೆಯು ಪ್ರಯಾಣಕ್ಕೆ ಅನುಕೂಲಕರವಲ್ಲ ಎಂದು ತೀರ್ಮಾನಿಸಲಾಗಿತ್ತು. ಹೀಗಾಗಿ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಅವರು ಕೇವಲ 10 ದಿನಗಳ ಕಾಲ ಮಾತ್ರವೇ ಬಾಹ್ಯಾಕಾಶದಲ್ಲಿ ಉಳಿಯಬೇಕಿತ್ತು. ಆದ್ರೆ ಈಗ 9 ತಿಂಗಳಿಗೂ ಹೆಚ್ಚು ಕಾಲ ಸಿಲುಕಿ ಹಲವು ಸಮಸ್ಯೆ ಎದುರಿಸಬೇಕಾಯಿತು.
ಸುನಿತಾ ವಿಲಿಯಮ್ಸ್ ಮೊಟ್ಟ ಮೊದಲ ಬಾರಿಗೆ ಡಿಸೆಂಬರ್ 9, 2006ರಲ್ಲಿ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ನಾಸಾದ ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಹಾಗೆ ಅವರು ಬ್ಯಾಹ್ಯಾಕಾಶ ನಡಿಗೆ ಮಾಡಿಯೂ ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಾಸು ಕರೆತರುವುದು ಸವಾಲಿನ ಕೆಲಸವಾಗಿ ಪರಿಣಮಿಸಿತ್ತು.
ಸದ್ಯ ಈಗ ಬಾಹ್ಯಾಕಾಶದಿಂದ ಭೂಮಿಗೆ ಮರಳುತ್ತಿರುವ ಗಗನಯಾತ್ರಿಗಳು ಸಾಮಾನ್ಯವಾಗಿ ನಡೆದಾಡಲು ಕಷ್ಟಪಡುತ್ತಾರೆ. ದೃಷ್ಟಿ ದೋಷ, ತಲೆ ಸುತ್ತು, ಮತ್ತು ಬೇಬಿ ಫೀಟ್ ಎಂದು ಕರೆಯಲ್ಪಡುವ ಸಮಸ್ಯೆಗಳ ಎದುರಿಸುತ್ತಾರೆ. ಏಕೆಂದರೆ ನೆಲದ ಮೇಲೆ ಕಾಲುಗಳನ್ನೇ ಇಡದೆ ಇರುವುದರಿಂದ ಹಿಮ್ಮಡಿ ಭಾಗ ಮೃದುವಾಗುತ್ತದೆ. ಹಾಗೆ ಭೂಮಿಯ ಸಂಪರ್ಕಕ್ಕೆ ಬಾರದಿರುವುದು ಮಕ್ಕಳ ಕಾಲಿನಂತಾಗುತ್ತದೆ, ಹೀಗಾಗಿ ನಡೆದಾಡುವುದು ಕಷ್ಟವಾಗುತ್ತದೆ.
ಹೊಸದಾಗಿ ಬಾಹ್ಯಾಕಾಶ ನಿಲ್ದಾಣ ಸೇರಿದ ನಾಲ್ವರು ಹೊಸ ಗಗನಯಾತ್ರಿಗಳು
ಸದ್ಯ ಸುನಿತಾ ವಿಲಿಯಮ್ಸ್ ಸೇರಿ ಒಟ್ಟು ನಾಲ್ವರು ಭೂಮಿಗೆ ವಾಪಾಸಾಗುತ್ತಿದ್ದರೆ ಇನ್ನೊಂದೆಡೆ ಮತ್ತೆ ನಾಲ್ವರು ಬಾಹ್ಯಾಕಾಶ ನಿಲ್ದಾಣ ಸೇರಿಕೊಂಡಿದ್ದಾರೆ. ಜಾಕ್ಸಾದ ಟಕುಯಾ ಒನಿಶಿ, ನಾಸಾದ ಗಗನಯಾತ್ರಿಗಳಾದ ಆ್ಯನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಆಯರ್ಸ್, ರಷ್ಯಾದ ಬಾಹ್ಯಾಕಾಶ ಸಂಸ್ಥೆಯಾದ ರಾಸ್‌ಕಾಸ್ಮೋಸ್‌ನ ಕಿರಿಲ್ ಪೆಸ್ಕೋವ್ ಹೊಸದಾಗಿ ಪ್ರಯಾಣ ಬೆಳೆಸಿರುವ ಯಾತ್ರಿಗಳಾಗಿದ್ದಾರೆ.



Click it and Unblock the Notifications
