Latest Updates
-
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ!
3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ ಹೆಸರು ಯಾರು ತಾನೆ ಕೇಳಿಲ್ಲ ಹೇಳಿ. ಆಕೆ ಇಡೀ ಮಹಿಳಾ ಸಮಾಜದ ಸ್ಪೂರ್ತಿಯಾಗಿ ಗಗನಯಾತ್ರೆ ಕೈಗೊಂಡ ಮಹಿಳೆಯಾಗಿದ್ದಾರೆ. ಆಕೆಯ ಜೀವನ ಲಕ್ಷಾಂತರ ಮಹಿಳೆಯರಿಗೆ ಮಾದರಿಯಾಗಿದೆ. ಸುನೀತಾ ವಿಲಿಯಮ್ಸ್ ಡಿಸೆಂಬರ್ 9, 2006 ರಂದು ಡಿಸ್ಕವರಿ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಿದ ಸಾಧನೆ ಮಾಡಿದ್ದಾರೆ.
ಇದುವರೆಗೆ ಅತೀ ಹೆಚ್ಚು ಬಾಹ್ಯಾಕಾಶ ಯಾತ್ರೆ ಮುಗಿಸಿರುವ ಏಕೈಕಾ ಮಹಿಳೆ ಅವರಾಗಿದ್ದು, ಈಗ ಮತ್ತೊಂದು ಬಾಹ್ಯಾಕಾಶ ಪ್ರಯಾಣಕ್ಕೆ ಅವರು ಸಿದ್ಧವಾಗುತ್ತಿದ್ದಾರೆ. ಅವರು ಸದ್ಯದಲ್ಲೇ ನಾಸಾದ ಗಗನಯಾತ್ರಿಗಳ ಸೇರಿಕೊಳ್ಳಲು ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ಗೆ ಪ್ರಯಾಣಿಸಲಿದ್ದಾರೆ ಎಂದು ನಾಸಾ ತಿಳಿಸಿದೆ.

ಪ್ರಸ್ತುತ ಅವರು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ. ಇದು ಅವರ 3ನೇ ಬಾರಿಯ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಪ್ರಯಾಣವಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದರು.
ಮೇ 6ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶ ಉಡಾವಣಾ ಕೇಂದ್ರ- 41 ರಿಂದ ಸುನೀತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ತಲುಪಲಿದ್ದಾರೆ ಎಂದು ನಾಸಾ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ವಿಲಿಯಮ್ಸ್ ಈ ಐಎಸ್‌ಎಸ್‌ನಲ್ಲಿ ಸುಮಾರು 1 ವಾರಗಳ ಕಾಲ ಉಳಿಯಲಿದ್ದಾರೆ.
ಅಲ್ಲದೆ ಈಗಾಗಲೇ ಐಎಸ್‌ಎಸ್‌ನಲ್ಲಿರುವ ಅಮೆರಿಕದ ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಕಕ್ಷೆಯ ಪ್ರಯೋಗಾಲಯದಲ್ಲಿ ಡಾಕ್ ಮಾಡಲಿದ್ದಾರೆ ಎಂದು ತಿಳಿಸಿದೆ.
ಸುನಿತಾ ವಿಲಿಯಮ್ಸ್ ಮೊಟ್ಟ ಮೊದಲ ಬಾರಿಗೆ ಡಿಸೆಂಬರ್ 9, 2006ರಲ್ಲಿ ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದರು. ನಾಸಾದ ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಒಟ್ಟು ಅವರು 29 ಗಂಟೆ 17 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿರುವ ಏಕೈಕ ಮಹಿಳೆಯಾಗಿದ್ದಾರೆ. 2006ರಲ್ಲಿ ತೆರಳಿದ್ದ ಅವರು ಜೂನ್ 2007ರಲ್ಲಿ ಭೂಮಿಗೆ ವಾಪಸಾಗಿದ್ದರು.
ಜುಲೈ 14 ರಿಂದ ನವೆಂಬರ್ 18, 2012ರ ವರೆಗೆ ಅವರ ಎರಡನೇ ಬಾಹ್ಯಾಕಾಶ ಯಾನ ನಡೆಸಿದ್ದರು. ರಷ್ಯಾದ ಸೋಯುಜ್ ಕಮಾಂಡರ್ ಯೂರಿ ಮಾಲೆನ್‌ಚೆಂಕೊ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಫ್ಲೈಟ್ ಇಂಜಿನಿಯರ್ ಅಕಿಹಿಕೊ ಹೊಶೈಡ್ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಬಾಹ್ಯಾಕಾಶಕ್ಕೆ ಹಾರಿದ್ದರು. ಅಲ್ಲಿಯೇ ಸುಮಾರು 4 ತಿಂಗಳ ಕಾಲ ಕಳೆದಿದ್ದರು.
ಯಾರು ಈ ಗಗನಯಾತ್ರಿ ಸುನೀತಾ ವಿಲಿಯಮ್ಸ್?
ಸುನೀತಾ ವಿಲಿಯಮ್ಸ್ ಭಾರತದಲ್ಲಿ ಜನಿಸಿದವರು ಆದರೆ ಅಮೆರಿಕದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. ಗುಜರಾತ್‌ನ ದೀಪಕ್ ಮತ್ತು ಸ್ಲೋವೇನಿಯಾದ ಬೋನಿ ಪಾಂಡ್ಯ ದಂಪತಿಗೆ ಜನಿಸಿದವರು. 1983ರಲ್ಲಿ ನೀತಮ್ ಹೈಸ್ಕೂಲ್‌ನಿಂದ ಪದವಿ ಪಡೆದಿದ್ದು, 1987 ರಲ್ಲಿ ಅಮೆರಿಕನ್ ನೇವಿ ಅಕಾಡೆಮಿಯಿಂದ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
993 ರಲ್ಲಿ ಅವರು ಟೆಸ್ಟ್ ಫ್ಲೈಟ್ ಸ್ಕೂಲ್‌ನಿಂದ ಪದವಿ ಪಡೆದು, 1995 ರಲ್ಲಿ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದರು. ಸುನೀತಾ ವಿಲಿಯಮ್ಸ್ ಅವರನ್ನು ನಂತರ 1998 ರಲ್ಲಿ ನಾಸಾ ತನ್ನ ಸಂಸ್ಥೆಗೆ ಆಯ್ಕೆ ಮಾಡಿಕೊಂಡಿತು. ಇದಾದ ಬಳಿಕ ಅವರು ಹಲವು ಬಾರಿ ಗಗನಯಾನ ಸೇರಿದಂತೆ ಸ್ಪೇಸ್ ಮಿಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.



Click it and Unblock the Notifications
