Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಭೂಮಿಗೆ ಬಂದಿಳಿದ ಸುನಿತಾ ವಿಲಿಯಮ್ಸ್ ವೇತನ ಎಷ್ಟು..? ಹೆಚ್ಚುವರಿ ಕೆಲಸಕ್ಕೆ ವೇತನ ನೀಡಲ್ವಾ?
ಕೇವಲ 1 ವಾರದ ಬಾಹ್ಯಾಕಾಶ ಪ್ರಯಾಣಕ್ಕಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಸುನಿತಾ ವಿಲಿಯಮ್ಸ್ 9 ತಿಂಗಳ ಕಾಲ ಅಲ್ಲಿಯೇ ಉಳಿದು ಈಗ ಭೂಮಿಗೆ ಮರಳಿದ್ದಾರೆ. ಫ್ಲೋರಿಡಾದ ಸಾಗರದಲ್ಲಿ ಸೇಫ್ ಆಗಿ ಲ್ಯಾಂಡ್ ಆಗಿ ಈಗ ವೈದ್ಯರ ನಿಗಾದಲ್ಲಿದ್ದಾರೆ. ಸದ್ಯ ಅವರು ಬಾಹ್ಯಾಕಾಶದಲ್ಲಿ ಹಲವು ರೀತಿಯ ಸಮಸ್ಯೆಗಳ ಅನುಭವಿಸಿ ಈಗ ಭೂಮಿಗೆ ಆಗಮಿಸಿದ್ದು ಇಲ್ಲಿಯೂ ಕೂಡ ಹಲವು ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆ.
ಸುಮಾರು 45 ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತಿದೆ, ಈಗಾಗಲೆ ಅವರಿಗೆ ವೈದ್ಯಕೀಯ ಪರೀಕ್ಷೆಯು ಕೂಡ ಮುಗಿದಿದೆ. ಇನ್ನು ಅವರಿಗೆ ಕಾಡಬಹುದಾದ ಹಲವು ರೀತಿಯ ದೈಹಿಕ ಸಮಸ್ಯೆಗಳನ್ನು ಎದುರಿಸಲು ವೈದ್ಯರ ತಂಡ ಕೂಡ ಸಜ್ಜಾಗಿದೆ. ಆವರೀಗ ನಡೆದಾಡಲು ಕಷ್ಟಪಡುವುದು ಹಾಗೆ ಹಲವು ಸಮಸ್ಯೆಗಳ ಎದುರಿಸುತ್ತಿದ್ದಾರೆ. ಹೀಗಾಗಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಾಗೆ ಆರಾಮವಾಗಿ ನಡೆದಾಡಲು ರೋಪ್ ಸಹಾಯ ಬಳಸಲಾಗುತ್ತಿದೆಯಂತೆ.

ಇನ್ನು ಸುನಿತಾ ವಿಲಿಯಮ್ಸ್ ಭಾರತೀಯ ಮೂಲದವರಾಗಿದ್ದು ನಾಸಾಗೆ ಕೆಲಸ ಮಾಡುತ್ತಿದ್ದಾರೆ. ಅಚ್ಚರಿ ಏನೆಂದರೆ ಅವರು ಅಮೆರಿಕದ ಪೌರತ್ವ ಪಡೆದಿದ್ದು ಈ ಬಾರಿಯ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಅವರು ಬಾಹ್ಯಾಕಾಶದಿಂದಲೇ ಮತದಾನ ಮಾಡಿದ್ದರು. ಇನ್ನು ನಾಸಾ ಅವರಿಗೆ ಎಷ್ಟು ವೇತನ ನೀಡುತ್ತೆ ಎಂಬುದು ನಿಮಗೆ ಗೊತ್ತಾ? ಹಾಗೆ 1 ವಾರಕ್ಕಾಗಿ ಅವರು ಬಾಹ್ಯಾಕಾಶಕ್ಕೆ ತೆರಳಿ 9 ತಿಂಗಳು ಅಲ್ಲಿಯೇ ಉಳಿದ ಕಾರಣ ಹೆಚ್ಚುವರಿಯಾಗಿ ಅವರಿಗೆ ಎಷ್ಟು ವೇತನ ಸಿಗಲಿದೆ ಎಂಬುದು ನಿಮಗೆ ಗೊತ್ತಾ?
ವಿಜ್ಞಾನಿಗಳು ಅತೀ ಹೆಚ್ಚಿನ ವೇತನ ಶ್ರೇಣಿ ಹೊಂದಿರುವುದು ನಾವೆಲ್ಲಾ ತಿಳಿದಿದ್ದೇವೆ. ವಿಜ್ಞಾನಿಗಳಿಗೆ ಅತೀ ಹೆಚ್ಚು ವೇತನ ನೀಡಲಾಗುತ್ತದೆ ಎಂಬುದನ್ನು ಕೂಡ ನಾವು ಕೇಳಿದ್ದೇವೆ. ಅದರಲ್ಲೂ ನಾಸಾದಂತಹ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವಿಜ್ಞಾನಿಗಳ ವೇತನ ಶ್ರೇಣಿ ಕೂಡ ಹೆಚ್ಚಾಗಿಯೇ ಇರಲಿದೆ. ಆದ್ರೆ ಎಲ್ಲಾ ಕಚೇರಿಗಳಲ್ಲಿ ಹಾಗೆ ಸರ್ಕಾರಿ ಹುದ್ದೆಗಳಲ್ಲಿಯೂ ಹೆಚ್ಚುವರಿ ಕೆಲಸವನ್ನು ಪರಿಗಣಿಸಿ ಅದಕ್ಕೆ ತಕ್ಕ ವೇತನ ನೀಡಲಾಗುತ್ತದೆ.
ಆದ್ರೆ ನಾಸಾದಲ್ಲಿ ಹೆಚ್ಚುವರಿ ಕೆಲಸ ಮಾಡುವ ಉದ್ಯೋಗಿಗಳಿಗೆ ಭತ್ಯೆ ನೀಡುವ ನಿಯಮವೇ ಇಲ್ಲ. ಈಗ ಕೇವಲ 1 ವಾರದ ಕಾಲಕ್ಕೆ ತೆರಳಿದ್ದ ಸುನಿತಾ ವಿಲಿಯಮ್ಸ್ 9 ತಿಂಗಳು ಬಾಹ್ಯಾಕಾಶದಲ್ಲಿ ಉಳಿದಿದ್ದರು ಹೀಗಾಗಿ ಅಷ್ಟೊಂದು ಮೊತ್ತ ನಾಸಾ ಪಾವತಿಸುವುದು ಅನುಮಾನ ಎನ್ನಲಾಗಿದೆ. ಬ್ಯುಸಿನೆಸ್ ಪ್ರವಾಸದಲ್ಲಿರುವ ಗಗನಯಾತ್ರಿಗಳಿಗೆ ಫೆಡರಲ್ ಉದ್ಯೋಗಿಗಳಂತೆ ವೇತನ ನೀಡಲಾಗುತ್ತದೆ. ಹಾಗೆ ಅವರು ನಿಯಮಿತ ವೇತನ ಪಡೆಯುತ್ತಾರೆ. ಅವರ ಸಾರಿಗೆ ಮತ್ತು ಆಹಾರದ ವೆಚ್ಚ ಕೂಡ ಸಂಸ್ಥೆ ಭರಿಸಲಿದೆ ಆದ್ರೆ ಓಟಿ ನೀಡುವ ನಿಯಮವಿಲ್ಲ ಎಂದು ತಿಳಿದುಬಂದಿದೆ.
ಹೀಗಾಗಿ ಸುನಿತಾ ವಿಲಿಯಮ್ಸ್ ಹೆಚ್ಚುವರಿಯಾಗಿ ಬಾಹ್ಯಾಕಾಶದಲ್ಲಿ ಕಳೆದಿರುವ ಸಮಯಕ್ಕೆ ವೇತನ ಪಡೆಯಲಿದ್ದಾರಾ ಅಥವಾ ಅವರಿಗೆ ಗೌರವಾರ್ಥವಾಗಿ ವೇತನ ನೀಡಲಾಗುತ್ತದೆಯೇ ಎಂಬುದು ತಿಳಿದುಬಂದಿಲ್ಲ. ಹಾಗೆ ಇಬ್ಬರು ಗಗನಯಾತ್ರಿಗಳು ತಮ್ಮ ನಿಗದಿಗಿಂತ ಹೆಚ್ಚುವರಿ ಸಮಯ ಬಾಹ್ಯಾಕಾಶದಲ್ಲಿ ಕಳೆದಿರುವುದರಿಂದ ಅದರ ವೆಚ್ಚ ಕೂಡ ಸಂಸ್ಥೆಯೇ ಭರಿಸಿದೆ. ಹೀಗಾಗಿ ಅವರ ವೇತನ ಕುರಿತು ಈವರೆಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಈ ಹಿಂದೆ ಕೋಲ್ಮನ್ ಎಂಬ ಗಗನಯಾತ್ರಿ 2010-11ರಲ್ಲಿ ಸುಮಾರು 159 ದಿನಗಳ ಕಾಲ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅವರಿಗೆ ಸುಮಾರು 636 ಡಾಲರ್ ವೇತನ ಪಡೆದಿದ್ದರು. ಹಾಗೆ ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ 287 ದಿನಗಳ ಬಾಹ್ಯಾಕಾಶ ವಾಸಕ್ಕಾಗಿ ತಲಾ $1,148 (ಸರಿಸುಮಾರು ₹1 ಲಕ್ಷ) ಹೆಚ್ಚುವರಿ ವೇತನ ಪಡೆದಿದ್ದರು ಎಂದು ವರದಿಗಳಿವೆ.



Click it and Unblock the Notifications
