Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್ ಓಡಾಡೋದು ಕಷ್ಟ..! 45 ದಿನ ಏನೆಲ್ಲಾ ಆಗುತ್ತೆ ಗೊತ್ತಾ?
ಭಾರತದ ಮೂಲಕ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕುರಿತಂತೆ ಇತ್ತೀಚಿಗೆ ನೀವು ಕೇಳುತ್ತಲೇ ಇರುತ್ತೀರಿ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಧ್ಯಯನಕ್ಕೆ ತೆರಳಿದ್ದ ಆಕೆ ಅಲ್ಲಿಯೇ ಸಿಲುಕಿ ಈಗ ಭೂಮಿಗೆ ವಾಪಾಸಾಗುತ್ತಿರುವ ಮಹಿಳೆ. ಆಕೆ ಕೇವಲ ಒಂದು ವಾರದ ಕಾಲಕ್ಕೆಂದು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು ಆದ್ರೆ 9 ತಿಂಗಳು ಅಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಸುನಿತಾ ವಿಲಿಯಮ್ಸ್ ಹಾಗೆ ಇನ್ನೊಬ್ಬ ಬುಚ್ ವಿಲ್ಮೋರ್ ಭೂಮಿಗೆ ಮರಳುತ್ತಿದ್ದಾರೆ. ಆದ್ರೆ ಕಳೆದ ವರ್ಷ ಅವರು ಮತ್ತೋರ್ವ ಗಗನಯಾತ್ರಿಯ ಜೊತೆಗೆ ಕೇವಲ ಒಂದು ವಾರ ಮಾತ್ರ ಬಾಹ್ಯಾಕಾಶದಲ್ಲಿ ಉಳಿಯುವ ಉದ್ದೇಶದಿಂದ ಪ್ರಯಾಣ ಬೆಳೆಸಿದ್ದರು. ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯು ಇಬ್ಬರು ಗಗನಯಾತ್ರಿಗಳನ್ನು ಮರಳಿ ಭೂಮಿಗೆ ಕರೆತರಬೇಕಿತ್ತು.

ಆದ್ರೆ ಈ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮದಿಂದಾಗಿ ಅಲ್ಲಿಯೇ ಉಳಿದು ಬಿಟ್ಟರು, ಆದ್ರೆ ಈಗ ನಾಳೆ ಭಾರತೀಯ ಕಾಲಮಾನ ರಾತ್ರಿ 3.30ರ ಸುಮಾರಿಗೆ ಭೂಮಿಗೆ ಬಂದಿಳಿಯಲಿದ್ದಾರೆ. ಈಗಾಗಲೇ ನೌಕೆಯು ಯಶಸ್ವಿಯಾಗಿ ಡಾಕಿಂಗ್ ನಡೆಸಿರುವುದಾಗಿ ನಾಸಾ ತಿಳಿಸಿದೆ. ಈ ಗಗನಯಾತ್ರಿಗಳ ಕರೆತರಲು ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ನೌಕೆಯಲ್ಲಿ ಅವರು ಭೂಮಿಗೆ ಮರಳಲಿದ್ದು, ಫ್ಲೋರಿಡಾದಲ್ಲಿ ಲ್ಯಾಂಡ್ ಆಗಿದೆ.
ಹಾಗೆ ಈಗಾಗಲೇ ಮತ್ತೆ ನಾಲ್ವರು ಬಾಹ್ಯಾಕಾಶ ನಿಲ್ದಾಣವನ್ನು ಸೇರಿಕೊಂಡಿದ್ದಾರೆ. ಆದ್ರೆ ಸುನಿತಾ ವಿಲಿಯಮ್ಸ್ ಈಗ ಭೂಮಿಗೆ ಬಂದಾಗ ಆಕೆ ಹತ್ತು ಹಲವು ರೀತಿಯ ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆಕೆ ಸಾಮಾನ್ಯರಂತೆ ಮತ್ತೆ ಭೂಮಿ ಮೇಲೆ ಇರಲು ಕಷ್ಟವಾಗುತ್ತದೆ. ಹಾಗಾದ್ರೆ ಸುನಿತಾ ವಿಲಿಯಮ್ಸ್ ಯಾವೆಲ್ಲಾ ಸಮಸ್ಯೆ ಎದುರಿಸಲಿದ್ದಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಗಗನಯಾತ್ರಿಗಳು ಭೂಮಿಗಿಳಿದ ತಕ್ಷಣ ಏನು ಮಾಡುತ್ತಾರೆ?
ಗಗನಯಾತ್ರಿಗಳು ಭೂಮಿಗೆ ಇಳಿದ ತಕ್ಷಣವೇ ಐಸೋಲೇಟ್ ಮಾಡಲಾಗುತ್ತದೆ, ಅವರನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಇಬ್ಬರನ್ನು ಹೂಸ್ಟನ್‌ನಲ್ಲಿರುವ ಬಾಹ್ಯಾಕಾಶ ಸಂಸ್ಥೆಯ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಅವರ ಸಿಬ್ಬಂದಿ ಕ್ವಾರ್ಟರ್ಸ್‌ಗೆ ಕರೆದೊಯ್ಯಲಾಗುತ್ತದೆ. ಹಾಗೆ ಈ ಕೇಂದ್ರದಲ್ಲಿ ಇಬ್ಬರು ಹಲವು ದಿನಗಳ ಕಾಲ ಉಳಿಯಬೇಕಾಗುತ್ತದೆ. ವೈದ್ಯರು ಪ್ರಮಾಣೀಕರಿಸಿ ಅವರು ಮನೆಗೆ ತೆರಳಬಹುದು ಎಂದು ಹೇಳುವವರೆಗೂ ಉಳಿಯುವುದು ಕಡ್ಡಾಯ. ಹಾಗೆ ಅವರು ಪರಿವೀಕ್ಷಣಾ ಕೇಂದ್ರದಲ್ಲಿರುವಾಗ ಕುಟುಂಬಸ್ಥರು ಸ್ನೇಹಿತರು ಅವರನ್ನು ಭೇಟಿಯಾಗಲು ಅವಕಾಶ ನೀಡುವ ಸಾಧ್ಯತೆ ಇದೆ.
ಅವರಿಗೆ ಎದುರಾಗುವ ಸವಾಲುಗಳೇನು?
ಗುರುತ್ವಾಕರ್ಷಣೆಯ ಬಲದಿಂದ ದೂರವೇ ಉಳಿದ್ದ ಈ ಗಗನಯಾತ್ರಿಗಳು ಭೂಮಿಗೆ ಬಂದಾಗ ಹಲವು ರೀತಿಯ ಸಮಸ್ಯೆ ಎದುರಿಸುತ್ತಾರೆ. ಸುಮಾರು 45 ದಿನಗಳ ಕಾಲ ಅವರು ವೀಕ್ಷಣಾ ಕೇಂದ್ರದಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಅವರು ಹಲವು ರೀತಿಯ ಅನಾರೋಗ್ಯಕ್ಕೆ ಒಳಗಾಗಬಹುದು. ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿರುವ ಕಾರಣ ಅವರಿಗೆ ನಡೆದಾಡಲು ಕಷ್ಟವಾಗುತ್ತದೆ. ತನ್ನ ಕಾಲಿನ ಶಕ್ತಿಯನ್ನೇ ಅವರು ಕಳೆದುಕೊಂಡಿರುತ್ತಾರೆ. ಮೂಳೆ ಸವೆತ, ಬೇಬಿ ಫೀಟ್‌ಗೆ ಒಳಗಾಗುತ್ತಾರೆ. ಅವರ ಹಿಮ್ಮಡಿಗಳು ಮೃದುವಾಗಿ ಹತ್ತಿಯಂತಾಗಿರುತ್ತದೆ. ಇದರಿಂದ ಅವರು ಓಡಾಡಲು ಕಷ್ಟಪಡಬೇಕಾಗುತ್ತದೆ. ಹಾಗೆ ಕ್ಯಾನ್ಸರ್ ಉಂಟು ಮಾಡುವಂತಹ ಕೋಶಗಳು ಅವರ ದೇಹ ಸೇರಿರುವ ಸಾಧ್ಯತೆಗಳು ಅಧಿಕವಾಗಿರಲಿದೆ.
ಗುರುತ್ವಾಕರ್ಷಣೆಯ ಅನುಪಸ್ಥಿತಿಯು ದೀರ್ಘಾವಧಿಯ ಬಾಹ್ಯಾಕಾಶ ಯಾನಿಗಳಿಗೆ ಹಿಂತಿರುಗಿದಾಗ ತಲೆತಿರುಗುವಿಕೆ, ವಾಕರಿಕೆ, ತಲೆನೋವಿಗೆ ಕಾರವಾಗಬಹುದು. ಹಾಗೆ ಅವರಿಗೆ ದೇಹದ ಮೇಲಿನ ನಿಯಂತ್ರಣ ಕಡಿಮೆಯಾಗಬಹುದು. ಕಿವಿಯೊಳಗಿನ ಆಳದಲ್ಲಿರುವ ವೆಸ್ಟಿಬುಲರ್ ಅಂಗವು ಭೂಮಿಯ ಮೇಲೆ ನಡೆಯುವಾಗ ಗುರುತ್ವಾಕರ್ಷಣೆಯ ಬಗ್ಗೆ ಮಾಹಿತಿಯನ್ನು ಮೆದುಳಿಗೆ ರವಾನಿಸುವ ಮೂಲಕ ತಮ್ಮ ದೇಹವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ಇಷ್ಟೊಂದು ದಿನ ಅವರು ಬಾಹ್ಯಾಕಾಶದಲ್ಲಿದ್ದ ಕಾರಣ ಈ ಪ್ರಕ್ರಿಯೆಯಲ್ಲಿ ಅಡೆತಡೆ ಉಂಟಾಗಬಹುದು.



Click it and Unblock the Notifications










