Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೃಷಭದಲ್ಲಿ ಸೂರ್ಯ ಸಂಚಾರ: ಈ 6 ರಾಶಿಯವರಿಗೆ ಅದೃಷ್ಟ ತರಲಿದೆ
ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಮೇಷದಿಂದ ವೃಷಭ ರಾಶಿಗೆ ಮೇ 15ರಂದು ಸಂಚರಿಸಲಿದೆ. ಇನ್ನೊಂದು ತಿಂಗಳು ಇದೇ ರಾಶಿಯಲ್ಲಿ ಇರಲಿದೆ. ಸೂರ್ಯ ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವ ಪ್ರತಿ ರಾಶಿಯ ಮೇಲೆ ಬೀಳುತ್ತದೆ. ವೃಷಭದಲ್ಲಿ ಸೂರ್ಯ ಸಂಚಾರ ಈ ರಾಶಿಯವರಿಗೆ ಅದೃಷ್ಟ ತರಲಿದೆ ನೋಡಿ:

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ 11ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಆಸೆಗಳು ಈಡೇರಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಮಕ್ಕಳು ಯಾವುದೇ ಕ್ಷೇತ್ರದಲ್ಲಿದ್ದರೂ ಉತ್ತಮ ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ವಾಹನ ಖರೀದಿಸಲು ಬಯಸಿದರೆ ಈ ಸಂಚಾರದ ಸಮಯದಲ್ಲಿ ಸಮಯ ಅನುಕೂಲಕರವಾಗಿದೆ. ಆರ್ಥಿಕ ದೃಷ್ಟಿಯಿಂದಲೂ ಈ ಸಮಯ ಒಳ್ಳೆಯದಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರುವುದು. ಉದ್ಯೋಗಸ್ಥರ ಆದಾಯ ಹೆಚ್ಚಾಗಲಿದೆ. ಪರಿಹಾರ: ಹೃದಯ ಆದಿತ್ಯ ಸ್ತೋತ್ರ ಪಠಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಸೂರ್ಯ 10ನೇ ಮನೆಯಲ್ಲಿ ಇರಲಿದೆ.ಈ ಅವಧಿ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಲಸದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರಲಿದೆ. . ನೀವು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ನೀವು ಖಾಸಗಿ ವಲಯದ ಕಂಪನಿಯಲ್ಲಿ ಕೆಲಸ ಮಾಡಿದರೆ, ನೀವು ದೊಡ್ಡ ಸ್ಥಾನವನ್ನು ಪಡೆಯಬಹುದು. ನಿಮ್ಮ ಕೆಲಸದ ಕಡೆ ಗಮನ ನೀಡಿದರೆ ಖ್ಯಾತಿ ಗಳಿಸಬಹುದು. ಆರೋಗ್ಯ ಸ್ಥಿತಿ ಚೆನ್ನಾಗಿರಲಿದೆ.
ಪರಿಹಾರ: ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಸೂರ್ಯ 9ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ವರ್ಗಾವಣೆ ಪಡೆಯಬಹುದು. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಅವಕಾಶಗಳು ದೊರೆಯಲಿದೆ. ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಪರಿಹಾರ: ಸೂರ್ಯ ಬೀಜಮಂತ್ರ ಪಠಿಸಿ.
ಧನು ರಾಶಿ
ಧನು ರಾಶಿಯಲ್ಲಿ ಸೂರ್ಯ 6ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ. ದೈಹಿಕ ಆರೋಗ್ಯಕ್ಕಾಗಿ ನೀವು ಯೋಗ, ಧ್ಯಾನ ಅಂತ ಗಮನಹರಿಸುತ್ತೀರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಹಣ, ಮುಂತಾದ ಅಡೆತಡೆಗಳಿಂದ ಅಪೂರ್ಣವಾಗಿದ್ದ ಕೆಲಸ ಈ ಅವಧಿಯಲ್ಲಿ ಪೂರ್ಣವಾಗಲಿದೆ. ಈ ಸಾರಿಗೆ ಅವಧಿಯು ನಿಮ್ಮ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಆರೋಗ್ಯದ ದೃಷ್ಠಿಯಿಂದ ಕೂಡ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಸೂರ್ಯ ಬೀಜ ಮಂತ್ರ ಪಠಿಸಿ
ಮಕರ ರಾಶಿ
ಈ ಸಂಚಾರದ ಸಮಯದಲ್ಲಿ ಮಕರ ರಾಶಿಯವರಲ್ಲಿ 5ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಅವಕಾಶ ದೊರೆಯಬಹುದು. ನಿರುದ್ಯೋಗಿಗಳು ಉದ್ಯೋಗ ಪಡೆಯಬಹುದು. ಈ ಅವಧಿಯಲ್ಲಿ ಮಾಡುವ ಹೂಡಿಕೆಯಿಂದ ಉತ್ತಮ ಲಾಭ ಗಳಿಸಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಕಡೆಗೆ ಗಮನಹರಿಸಿ.
ಪರಿಹಾರ: ಬ್ರಾಹ್ಮಿ ಮುಹೂರ್ತದಲ್ಲಿ ಏಳಲು ಅಭ್ಯಾಸ ಮಾಡಿ.
ಮೀನ ರಾಶಿ
ಮೀನ ರಾಶಿಯಲ್ಲಿಸೂರ್ಯ 3ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ವೃತ್ತಿ ಜೀವನಕ್ಕೆ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ವಿರುದ್ಧ ಯಾವುದೇ ಕಾನೂನು ಪ್ರಕರಣ ನಡೆಯುತ್ತಿದ್ದರೆ, ಆ ಸಮಸ್ಯೆಯಿಂದ ಮುಕ್ತರಾಗುವಿರಿ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣ ಲಾಭದಾಯಕವಾಗಿದೆ. ನೀವು ತೀರ್ಥಯಾತ್ರೆಗೆ ಹೋಗುವ ಅವಕಾಶವನ್ನು ಪಡೆಯಬಹುದು.
ಪರಿಹಾರ: ಪ್ರತಿದಿನ ಸೂರ್ಯಾಷ್ಟಕವನ್ನು ಪಠಿಸಿದರೆ ಒಳ್ಳೆಯದು.



Click it and Unblock the Notifications
