Latest Updates
-
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಜೂನ್ 15ಕ್ಕೆ ಮಿಥುನ ರಾಶಿಗೆ ಸೂರ್ಯ ಸಂಚಾರ ಈ 6 ರಾಶಿಯವರಿಗೆ ಅದೃಷ್ಟಕರ
ಸೂರ್ಯನು ಜೂನ್ 15ಕ್ಕೆ ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಈ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ಅದರಲ್ಲೂ ಈ ಅವಧಿಯಲ್ಲಿ ಈ ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ ನೋಡಿ:
ಮೇಷ ರಾಶಿ
ಈ ಸೂರ್ಯ ಸಂಚಾರ ನಿಮಗೆ ತುಂಬಾನೇ ಉತ್ತಮವಾಗಿದೆ. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣುತ್ತೀರಿನೀವು ಕ್ರೀಡಾಪಟುಗಳಾಗಿದ್ದರೆ, ಈ ಸಮಯದಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಪ್ರತಿಭೆಗೆ ಒಳ್ಳೆಯ ಅವಕಾಶ ದೊರೆಯಲಿದೆ. ಉದ್ಯೋಗಿಗಳಿಗೆ ಈ ಅವಧಿ ತುಂಬಾನೇ ಅನುಕೂಲಕರವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುತ್ತೀರಿ. ಈ ಅವಧಿಯಲ್ಲಿ ವ್ಯಾಪಾರಸ್ಥರು ಲಾಭ ಗಳಿಸುತ್ತೀರಿ. ಒಟ್ಟಿನಲ್ಲಿ ಈ ಸೂರ್ಯ ಸಂಚಾರ ನಿಮಗೆ ತುಂಬಾನೇ ಅನುಕೂಲಕರವಾಗಿದೆ.

ಕರ್ಕ ರಾಶಿ
ಕರ್ಕ ರಾಶಿಯವರು ವಿದೇಶಕ್ಕೆ ಹೋಗಲು ಕನಸು ಕಾಣುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಆಸೆ ನೆರವೇರಲಿದೆ. ನಿಮಗೆ ಉತ್ತಮ ಅವಕಾಶಗಳು ದೊರೆಯಲಿದೆ. ಆದರೆ ಈ ಅವಧಿಯಲ್ಲಿ ಖರ್ಚು ಕೂಡ ಹೆಚ್ಚಾಗಲಿದೆ, ನೀವು ಇದರತ್ತ ಗಮನಹರಿಸಿದರೆ ಒಳ್ಳೆಯದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಯಾರನ್ನೂ ಕಣ್ಮುಚ್ಚಿ ನಂಬಬೇಡಿ, ನೀವು ಮೋಸ ಹೋಗಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರು ಈ ಸಾರಿಗೆಯ ಲಾಭವನ್ನು ಪಡೆಯುತ್ತಾರೆ. ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ, ಆದೆಎ ಎಚ್ಚರವಹಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಮಿಥುನ ರಾಶಿಯಲ್ಲಿ ಸೂರ್ಯನ ಈ ಸಾಗಣೆಯು ಬಹಳ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಪ್ರಗತಿ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರೇಮಿಗಳಾಗಿದ್ದರೆ ವಿವಾಹಕ್ಕೆ ಮನೆಯವರ ಒಪ್ಪಿಗೆ ಪಡೆಯಲು ಈ ಸಮಯ ಸೂಕ್ತವಾಗಿದೆ. ಸಾಮಾಜಿಕವಾಗಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರವು ಕನ್ಯಾ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಸಾಗಣೆಯ ಕೆಲಸದಲ್ಲಿ ತುಂಬಾ ಒಳ್ಳೆಯ ಯಶಸ್ಸು ದೊರೆಯಲಿದೆ. ಹತ್ತನೇ ಮನೆಯಲ್ಲಿ ಸೂರ್ಯನ ಉಪಸ್ಥಿತಿಯು ನಿಮ್ಮ ವೃತ್ತಿಜೀವನದಲ್ಲಿ ನಿಮ್ಮನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬಹುದು. ವ್ಯಾಪಾರಿಗಳು ಒಳ್ಳೆಯ ಲಾಭ ಪಡೆಯಬಹುದು. ಅತಿಯಾದ ಆತ್ಮವಿಶ್ವಾಸ ಪ್ರದರ್ಶಿಸಲು ಹೋಗಬೇಡಿ, ಉಳಿದಂತೆ ಯಾವುದೇ ಸಮಸ್ಯೆಯಿಲ್ಲ.
ಮಕರ ರಾಶಿ
ಮಕರ ರಾಶಿಯವರು ಸೂರ್ಯನ ಈ ಸಾಗಣೆಯಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ಆರ್ಥಿಕಸ್ಥಿತಿ ಚೆನ್ನಾಗಿರಲಿದ್ದು ನೀವು ಸಾಲದಿಂದ ಮುಕ್ತರಾಗಬಹುದು. ಕೆಲಸದಲ್ಲಿ ಒಳ್ಳೆಯ ಪ್ರಗತಿಯಿದೆ. ಆರೋಗ್ಯದ ಕಡೆಗೆ ಗಮನಹರಿಸಿ. ನಿಮ್ಮ ರೋಗನಿರೋಧಕ ಶಕ್ತಿ ಚೆನ್ನಾಗಿರುವುದರಿಂದ ಆರೋಗ್ಯ ಚೆನ್ನಾಗಿರಲಿದೆ. ಈ ಹಿಂದೆ ಕೆಲವು ಸವಾಲುಗಳನ್ನು ಎದುರಿಸಿದ್ದರೆ ಅವೆಲ್ಲಾ ದೂರಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೂ ಈ ಸೂರ್ಯ ಸಂಚಾರ ಅನುಕೂಲಕರವಾಗಿದೆ. ಸಂಬಂಧ ಮತ್ತಷ್ಟು ಬಲವಾಗುವುದು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ಈ ಸಂಚಾರವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ, ವ್ಯಾಪಾರಸ್ಥರು ಒಳ್ಳೆಯ ಲಾಭ ಪಡೆಯಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು ಜಾಗರೂಕರಾಗಿರಿ.



Click it and Unblock the Notifications