Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಣ್ಣ ಪಾನ್‌ಶಾಪ್‌ನಿಂದ ಹುಟ್ಟಿತು 15 ಸಾವಿರ ಕೋಟಿ ಕಂಪನಿ! ಈ ಯಶಸ್ಸಿನ ಕಥೆ ಗೊತ್ತಾ?
ಸಣ್ಣ ವ್ಯಾಪಾರ ಆರಂಭಿಸಿ ಬಳಿಕ ದೊಡ್ಡ ಅಂಗಡಿಗಳು, ಮಳಿಗೆಗಳು ಹೀಗೆ ವ್ಯವಹಾರದಲ್ಲಿ ದೊಡ್ಡ ಲಾಭ ಮಾಡಿದವರನ್ನು ನೀವು ನೋಡಿರುತ್ತೀರಿ. ಕೆಲವೊಂದು ವ್ಯವಹಾರಗಳು ಸಣ್ಣದಾಗಿ ಆರಂಭಗೊಂಡು ಬಳಿಕ ದೊಡ್ಡ ಆಸ್ತಿಯಾಗಿ ಮಾರ್ಪಡುತ್ತವೆ. ಅಂತಹ ಕೆಲವು ವ್ಯವಹಾರದಲ್ಲಿ ನಾವಿಂದು ಕೇವಲ ಪಾನ್ ಶಾಪ್ ಇಟ್ಟುಕೊಂಡಿದ್ದ ವ್ಯಕ್ಯಿ ಇಂದು ಸಾವಿರಾರು ಕೋಟಿ ರೂಪಾಯಿ ವ್ಯವಹಾರದ ಕಂಪನಿ ಕಟ್ಟಿದ ಕಥೆ ಇದು.
ದೆಹಲಿಯಲ್ಲಿ ಸಣ್ಣ ಪಾನ್ ಶಾಪ್ ಇಟ್ಟುಕೊಂಡಿದ್ದ ವ್ಯಕ್ತಿ ಈಗ ಇಡೀ ಕುಟುಂಬದ ಆಸ್ತಿಯಾಗಿ ಬೆಳೆದ ವ್ಯವಹಾರ ಸುಮಾರು 15 ಸಾವಿರ ಕೋಟಿ ವ್ಯವಹಾರ ನಡೆಸುವ ಕಂಪನಿಯಾಗಿ ಬೆಳೆದು ನಿಂತಿದೆ. ಅವರ ಕಂಪನಿಗೆ ನಟಿ ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಕೂಡ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

ಈ ಕಥೆ ಆರಂಭವಾಗೋದು 1929ರಲ್ಲಿ, ದೆಹಲಿಯ ಬೀದಿಯೊಂದರಲ್ಲಿ ಅಂದು ಸಣ್ಣ ಪಾನ್ ಶಾಪ್ ಆರಂಭಗೊಂಡಿತ್ತು, ಇದನ್ನು ಆರಂಭಿಸಿದ್ದು ಧರಂಪಾಲ್ ಸತ್ಯಪಾಲ್. ಈ ಹೆಸರು ಕೇಳಿದ ತಕ್ಷಣ ನಿಮಗೆ ನಿಮಗೆ ಇದು ಯಾವ ಕಂಪನಿ ಎಂಬುದು ನೆನಪಾಗಬಹುದು. ಡಿಎಸ್ ಗ್ರೂಪ್ ಹೆಸರು ಕೇಳಿದ್ದೀರಾ? ಈ ಕಂಪನಿ ಆರಂಭಗೊಂಡಿತ್ತು ಸಣ್ಣ ಪಾನ್ ಶಾಪ್ ಮೂಲಕ.
ಇಂದು ನೀವು ನೋಡುತ್ತಿರುವ ರಜನಿಗಂಧ, ಪಲ್ಸ್ ಚಾಕಲೆಟ್ ಸೇರಿ ಹತ್ತಾರು ಮೌತ್ ಫ್ರೆಶ್ನರ್‌ಗಳು ಇದೇ ಕಂಪನಿಯಿಂದ ಹೊರಬಂದ ಉತ್ಪನ್ನಗಳು. ಡಿಎಸ್ ಗ್ರೂಪ್ ಈಗ ಹತ್ತಾರು ಮಸಾಲೆಗಳು, ತಂಬಾಕು ಉತ್ಪನ್ನ, ಚಾಕೊಲೆಟ್, ಪಾನಿಯ ಸೇರಿ ಹಲವು ಉತ್ಪನ್ನಗಳ ಮಾರುಕಟ್ಟೆಗೆ ತಂದಿದೆ. ಅದ್ರಲ್ಲೂ ಪರ್ಲ್ಸ್, ಪಾಸ್ ಪಾಸ್, ಪಲ್ಸ್, ರಾಜಗಂಧ, ರಜನಿಗಂಧ, ಕ್ಯಾಚ್ ಎಂಬ ಮಸಾಲೆ ಪದಾರ್ಥ ಸೇರಿ ಹಲವು ರೀತಿಯ ಉತ್ಪನ್ನಗಳನ್ನು ಹೊರತಂದಿದೆ.
ಈ ಕಂಪನಿ ಹುಟ್ಟಿದ್ದು ಹೇಗೆ?
ಧರಂಪಾಲ್ ಸುಗಂಧಿ ಪಾನ್, ಸುಗಂಧ ದ್ರವ್ಯಗಳು ಮತ್ತು ಧೂಪದ್ರವ್ಯದ ಕಡ್ಡಿಗಳನ್ನು ಮಾರಾಟ ಮಾಡುವ ಸುಗಂಧ್ ಎಂಬ ಸಣ್ಣ ಅಂಗಡಿಯನ್ನು ತೆರೆದಾಗ ಈ ಕಂಪನಿ ಹುಟ್ಟಿಕೊಂಡಿತು. 1958 ರಲ್ಲಿ ಅವರ ಮಗ ಸತ್ಯಪಾಲ್ ಸುಗಂಧಿ ಈ ವ್ಯವಹಾರವನ್ನು ಸೇರಿಕೊಂಡರು ಮತ್ತು ಶೀಘ್ರದಲ್ಲೇ ಪಾನ್‌ನಲ್ಲಿ ಬಳಸುವ ತಂಬಾಕು ತಯಾರಿಕೆಯಾದ ಬಾಬಾ ಜರ್ದಾವನ್ನು ಪ್ರಾರಂಭಿಸಿದರು.
ಬಾಬಾ ಜರ್ದಾ ಜನಪ್ರಿಯವಾಗಿತ್ತು. ಅನೇಕರು ಇದೇ ಪಾನ್ ಹೆಸರು ಕೇಳಿ ಪಡೆದು ಸವಿಯಲು ಮುಂದಾಗುತ್ತಿದ್ದರು. ಇದೇ ರೀತಿ ಮುಂದೆ ಒಂದೊಂದೇ ಉತ್ಪನ್ನ ಹೊರತರಲು ಮುಂದಾದರು. ತಂಬಾಕು ಉತ್ಪನ್ನಗಳು ಬಹುಬೇಗ ಜನರಿಗೆ ಇಷ್ಟವಾದವು. ನಂತರ ಡಿಎಸ್ ಗ್ರೂಪ್ ಸಣ್ಣ ಅಂಗಡಿಯಿಂದ ದೊಡ್ಡ ಜಾಗದಲ್ಲಿ ತಮ್ಮದೇ ಸಂಸ್ಥೆ ಕಟ್ಟಿದರು.
1979 ರಲ್ಲಿ, ಗುಂಪು ತುಳಸಿ ಪಾನ್ ಮಸಾಲವನ್ನು ಪ್ರಾರಂಭಿಸಿತು, ನಂತರ 1983 ರಲ್ಲಿ ಅವರ ಅತ್ಯಂತ ಪ್ರಸಿದ್ಧ ಉತ್ಪನ್ನವಾದ ರಜನಿಗಂಧ ಪಾನ್ ಮಸಾಲವನ್ನು ಪ್ರಾರಂಭಿಸಿತು. ಭಾರತದ ಪಾನ್ ಮಸಾಲ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕವಾಗಿದ್ದಾಗ, ರಜನಿಗಂಧ ಸಾಮೂಹಿಕ ಮಾರುಕಟ್ಟೆಗಿಂತ ಪ್ರೀಮಿಯಂ ವಿಭಾಗವನ್ನು ಗುರಿಯಾಗಿಸಿಕೊಂಡಿತು. ಬೆಳ್ಳಿ ಲೇಪಿತ ಏಲಕ್ಕಿ ಕೇಸರಿ ಬಳಸಿರುವ ಪಾನ್ ಹೀಗೆ ಹೊಸ ಹೊಸ ರೂಪ ನೀಡಲಾಗಿತ್ತು.
2023ರಲ್ಲಿ ಇದು ಸ್ವಿಸ್ ಚಾಕೊಲೇಟ್ ಬ್ರ್ಯಾಂಡ್ ಲ್ಯಾಡೆರಾಚ್ ಅನ್ನು ಭಾರತಕ್ಕೆ ಪರಿಚಯಿಸಿತು ಮತ್ತು ಭಾರತೀಯ ಮಿಠಾಯಿ ಬ್ರ್ಯಾಂಡ್ LuvIt ಅನ್ನು ಸ್ವಾಧೀನಪಡಿಸಿಕೊಂಡಿತು. ಇದರಿಂದ ಕಂಪನಿ ಮೌಲ್ಯ ಇಂದಿಗೆ 15,000 ಕೋಟಿಗೆ ಮುಟ್ಟಿದೆ. ಸದ್ಯ ಒಂದು ಸಣ್ಣ ಪಾನ್ ಶಾಪ್‌ನಿಂದ ಆರಂಭಗೊಂಡ ಉದ್ಯಮ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದುನಿಂತಿದೆ.



Click it and Unblock the Notifications
