Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೇವಿಯಲ್ಲಿ ಮಹಿಳಾ ಶಕ್ತಿ! ಆಸ್ಥಾ ಪೂನಿಯಾ ಯಾರು? ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಕಥೆ
ಭಾರತೀಯ ನೇವಿಯಲ್ಲಿ ನಾರಿಶಕ್ತಿ. ಭಾರತೀಯ ನೌಕಾಪಡೆಯ ಫೈಟರ್ ವಿಮಾನಕ್ಕೆ ಪ್ರಪ್ರಥಮ ಮಹಿಳಾ ಪೈಲಟ್. ಹೌದು, ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಹರಿಯಾಣದ ಹೆಮ್ಮೆಯ ಪುತ್ರಿ ಸಬ್ ಲೆಫ್ಟಿನೆಂಟ್ ಆಸ್ಥಾ ಪೂನಿಯಾ (Astha Poonia) ಈಗ ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್ (Indian Navy's First Woman Fighter Pilot) ಆಗಿದ್ದಾರೆ. ಅವರ ಈ ಸಾಧನೆ ಕೇವಲ ವೈಯಕ್ತಿಕ ಜೀವನದ ಗೆಲುವಲ್ಲ, ದೇಶಾದ್ಯಂತ ರಕ್ಷಣಾ ಕ್ಷೇತ್ರದಲ್ಲಿ ವೃತ್ತಿ ಜೀವನ ರೂಪಿಸಲು ಬಯಸುವ ಎಲ್ಲಾ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದೆ.
ಸಬ್ ಲೆಫ್ಟಿನೆಂಟ್ ಆಸ್ತಾ ಪೂನಿಯಾ ತಮ್ಮ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿ ಭಾರತೀಯ ನೌಕಾ ಪಡೆಯ ಮೊದಲ ಫೈಟರ್ ಪೈಲಟ್ ಆಗಿ ದೇಶದ ಮಿಲಿಟರಿ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಹಾಕ್ ಕನ್ವರ್ಶನ್ ಕೋರ್ಸ್ (Hawk conversion course) ಫೈಟರ್ ಜೆಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು 'ವಿಂಗ್ಸ್ ಆಫ್ ಗೋಲ್ಡ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದ ನಾರಿಶಕ್ತಿಗೆ ಸಾಕ್ಷಿಯಾಗಿದ್ದಾರೆ. ಈ ಕೋರ್ಸ್‌ನಲ್ಲಿ ಫೈಟರ್ ಜೆಟ್ ಹಾರಾಟದ ಮೂಲಭೂತ ತರಬೇತಿಯನ್ನು ನೀಡಲಾಗುತ್ತದೆ. ರಿಯರ್ ಅಡ್ಮಿರಲ್ ಜನಕ್ ಬೆವ್ಲಿ ಈ ಗೌರವವನ್ನು ಪ್ರದಾನ ಮಾಡಿದರು. ಆಸ್ತಾ ಇನ್ನು ಯುದ್ಧ ನೌಕೆಗಳಿಂದ ರಫೇಲ್‌ನಂಥ ಯುದ್ಧ ವಿಮಾನಗಳನ್ನು ಹಾರಿಸಲಿದ್ದಾರೆ.

ನೌಕಾಪಡೆಯಲ್ಲಿ ಮಹಿಳೆಯರಿಗೆ ಹೊಸ ಯುಗ
ಈವರೆಗೆ ನೌಕಾಪಡೆಯಲ್ಲಿ ಮಹಿಳೆಯರು ಹೆಲಿಕಾಪ್ಟರ್ ಮತ್ತು ಕಡಲ ಕಣ್ಗಾವಲು ವಿಮಾನಗಳನ್ನು ಮಾತ್ರ ಹಾರಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಮಹಿಳೆಯನ್ನು ಫ್ರಂಟ್‌ಲೈನ್ ಫೈಟರ್ ಏರ್‌ಕ್ರಾಫ್ಟ್‌ಗಾಗಿ ಆಯ್ಕೆ ಮಾಡಲಾಗಿದೆ. ನೌಕಾಪಡೆಯಲ್ಲಿ ಮಹಿಳೆಯರಿಗೆ ಯುದ್ಧ ಪಾತ್ರಗಳ ಸಾಧ್ಯತೆಗಳನ್ನು ಹೆಚ್ಚಿಸುವ ನಿರ್ಧಾರ ಇದಾಗಿದೆ. ಭಾರತೀಯ ಸೇನೆಯು ಲಿಂಗ ಆಧಾರಿತ ಗಡಿಗಳನ್ನು ಮುರಿದು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ಅವಕಾಶಗಳನ್ನು ನೀಡುತ್ತಿದೆ ಎಂಬುದನ್ನು ಈ ಬದಲಾವಣೆ ತೋರಿಸುತ್ತದೆ. ಈ ಕ್ರಮವು ಅಡೆತಡೆಗಳನ್ನು ಮುರಿದು ನೌಕಾಪಡೆಯಲ್ಲಿ ಮಹಿಳಾ ಫೈಟರ್ ಪೈಲಟ್‌ಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ.
ಸಣ್ಣ ಹಳ್ಳಿಯಿಂದ ಆಕಾಶದೆಡೆಗೆ
ಹರಿಯಾಣದ ಒಂದು ಸಣ್ಣ ಹಳ್ಳಿಯಿಂದ ಬಂದ ಆಸ್ಥಾ ಪೂನಿಯಾ ಬಾಲ್ಯದಿಂದಲೂ ಆಕಾಶದಲ್ಲಿ ಹಾರುವ ಕನಸು ಕಂಡಿದ್ದರು. ತಮ್ಮ ಕನಸುಗಳನ್ನು ನನಸಾಗಿಸಲು ಅವರು ಕಠಿಣ ಪರಿಶ್ರಮ ಪಟ್ಟರು ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್‌ಡಿಎ) ಪ್ರವೇಶ ಪಡೆದರು. ಎನ್‌ಡಿಎಯಲ್ಲಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತಮ್ಮನ್ನು ಸಿದ್ಧಪಡಿಸಿಕೊಂಡರು. ಪ್ರತಿಯೊಂದು ಸವಾಲನ್ನು ಸ್ವೀಕರಿಸುತ್ತಾ ಮುನ್ನಡೆದರು.
ಎನ್‌ಡಿಎ ತರಬೇತಿಯಲ್ಲಿ ಕಠಿಣ ಪರಿಶ್ರಮ ಮತ್ತು ಛಲ
ಎನ್‌ಡಿಎ ತರಬೇತಿ ಸುಲಭವಾಗಿರುವುದಿಲ್ಲ. ಅದರಲ್ಲೂ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆ ಇರುವ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಾಗ ಅದು ಕಠಿಣವೆನಿಸುತ್ತದೆ. ಆಸ್ಥಾ ಪೂನಿಯಾ ಪ್ರತಿಯೊಂದು ಮಾನದಂಡವನ್ನು ಮೀರಿ ಮಹಿಳೆಯರು ಯಾವುದೇ ರಂಗದಲ್ಲಿ ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಅವರು ಹಾರಾಟ ತರಬೇತಿ, ದೈಹಿಕ ಸವಾಲುಗಳು ಮತ್ತು ತಾಂತ್ರಿಕ ಜ್ಞಾನದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಇದೀಗ, ಆಸ್ಥಾ ಅವರಿಗೆ ಒಂದು ವರ್ಷದ ಮುಂದುವರಿದ ಫೈಟರ್ ತರಬೇತಿಯನ್ನು ನೀಡಲಾಗುವುದು. ಇದರ ಬಳಿಕ ಅವರು ಭಾರತೀಯ ನೌಕಾಪಡೆಯಲ್ಲಿ ಫೈಟರ್ ಜೆಟ್ ಪೈಲಟ್ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸುತ್ತಾರೆ.
ಇಡೀ ದೇಶದ ಹೆಣ್ಣುಮಕ್ಕಳಿಗೆ ಬಲವಾದ ಸಂದೇಶ
ಆಸ್ಥಾ ಪೂನಿಯಾ ಅವರ ಈ ಸಾಧನೆ ಕೇವಲ ವೈಯಕ್ತಿಕ ಯಶಸ್ಸಲ್ಲ. ಇಡೀ ದೇಶದ ಹೆಣ್ಣುಮಕ್ಕಳಿಗೆ ಇದು ಬಲವಾದ ಸಂದೇಶವಾಗಿದೆ. ಧೈರ್ಯ ಮತ್ತು ಪರಿಶ್ರಮದಿಂದ ಯಾವುದೇ ಕನಸನ್ನು ನನಸಾಗಿಸಬಹುದು. ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ಆಸ್ಥಾ ಅವರು, ಕನಸುಗಳು ಬಲವಾಗಿದ್ದರೆ ಯಾವುದೇ ಎತ್ತರವನ್ನು ತಲುಪಬಹುದು ಎಂದು ಸಾಬೀತುಪಡಿಸಿದ್ದಾರೆ. ಅವರ ಈ ಹೆಜ್ಜೆ ಲಕ್ಷಾಂತರ ಹೆಣ್ಣುಮಕ್ಕಳಿಗೆ ಭರವಸೆಯ ಕಿರಣವಾಗಿದೆ. ಒಟ್ಟಾರೆಯಾಗಿ, ಆಸ್ಥಾ ಪೂನಿಯಾ ಅವರ ಸಾಧನೆ ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರ ಪಾತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ.



Click it and Unblock the Notifications
