Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ನಾಳೆ 'ಸು ಫ್ರಮ್ ಸೋ' ಒಟಿಟಿಗೆ ಎಂಟ್ರಿ..! ಎಲ್ಲಿ ವೀಕ್ಷಿಸಬಹುದು?
ಜೆ ಪಿ ತುಮ್ಮಿನಾಡ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ಸಿನಿಮಾ 'ಸು ಫ್ರಮ್ ಸೋ' ಚಿತ್ರಮಂದಿರದಲ್ಲಿ ಭಾರಿ ಸದ್ದು ಮಾಡಿತ್ತು. ಸ್ಟಾರ್‌ಗಳಲ್ಲಿಲ್ಲದೆ ಮಲ್ಟಿ ಫ್ಲೆಕ್ಸ್‌ನಲ್ಲೂ ಭರ್ಜರಿ ಕಲೆಕ್ಷನ್ ತಂದು ಕೊಟ್ಟ ಸಿನಿಮಾ ಆಗಿ ಹೊರಹೊಮ್ಮಿತು. ಈ ವರ್ಷ ಇಲ್ಲಿಯವರೆಗೆ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಕೂಡ ಇದಾಗಿತ್ತು.
ಕೇವಲ 5 ಕೋಟಿ ರೂಪಾಯಿಯಲ್ಲಿ ತಯಾರಾದ ಸಿನಿಮಾವು ಬರೋಬ್ಬರಿ 100 ಕೋಟಿಗೂ ಅಧಿಕ ಗಳಿಕೆ ಕಂಡು ಹೊಸ ಇತಿಹಾಸ ಬರೆದಿದೆ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಸಿನಿಮಾ ಯಶಸ್ಸಿನ ಬಳಿಕ ತೆಲುಗು ಹಾಗೂ ಮಲಯಾಳಂನಲ್ಲೂ ತೆರೆಕಂಡು ಅಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಸದ್ಯ ಚಿತ್ರಮಂದಿರದಲ್ಲೂ ಇಂದಿಗು ಉತ್ತಮ ಪ್ರದರ್ಶನ ಮುಂದುವರೆಸಿದೆ. ಆದ್ರೆ ಈ ನಡುವೆ ಒಟಿಟಿಗೆ ಆಗಮಿಸುತ್ತಿದೆ.

ರಾಜ್ ಬಿ ಶೆಟ್ಟಿ ನಿರ್ಮಿಸಿ ನಟಿಸಿದ್ದ 'ಸು ಫ್ರಮ್ ಸೋ' ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಭಾಷೆಯಲ್ಲಿ ನಾಳೆ ಒಟಿಟಿ ರಿಲೀಸ್ ಆಗುತ್ತಿದೆ. ಇಷ್ಟು ದಿನ ಅಭಿಮಾನಿಗಳು ಕಾದಿದ್ದ ದಿನಕ್ಕೆ ನಾಳೆ ತೆರೆ ಬೀಳುತ್ತಿದೆ. ಜಿಯೋ ಹಾಟ್ ಸ್ಟಾರ್‌ನಲ್ಲಿ ಸು ಫ್ರಮ್ ಸೋ ತೆರೆಗೆ ಬರುತ್ತಿದೆ. ಈ ಕುರಿತು ಅಧಿಕೃತವಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾಹಿತಿ ಇದೆ.
ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಎನ್ನುವ ಭೇದಭಾವ ಇಲ್ಲದೇ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡು ದರ್ಬಾರ್ ನಡೆಸಿದ್ದ ಸಿನಿಮಾ ಯಾವಾಗ ಒಟಿಟಿ ರಿಲೀಸ್ ಆಗಲಿದೆ ಎಂಬ ಕಾತರ ಹಾಗೆಯೇ ಉಳಿದಿತ್ತು. ಹಾಗೆ ಯಾವ ಆಪ್ ಮೂಲಕ ಸಿನಿಮಾ ನೋಡಬಹುದು ಎಂಬ ಕುತೂಹಲವು ಮುಂದುವರೆದಿತ್ತು, ಆದ್ರೆ ಇದೆಲ್ಲದಕ್ಕೂ ಈಗ ತೆರೆ ಬಿದ್ದಿದೆ. ಸಿನಿಮಾ ಸೆಪ್ಟೆಂಬರ್ 9ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.
ವಾರ್-2, ಕೂಲಿ ಅಬ್ಬರದ ನಡುವೆ ಗೆದ್ದ ಸಿನಿಮಾ!
ಈ ಸಿನಿಮಾ ಪೈಡ್ ಪ್ರೀಮಿಯರ್ ಶೋ ಮೂಲಕವೇ ಸದ್ದು ಮಾಡಿತ್ತು. ಆಡಂಬರದ ಪ್ರಚಾರವೇ ಇಲ್ಲದೆ ತೆರೆ ಮೇಲೆ ಬಂದ ಸಿನಿಮಾ ತೆರೆಕಂಡ ಮೊದಲ ದಿನದಿಂದಲೇ ಹೌಸ್‌ಫುಲ್ ಪ್ರದರ್ಶನ ಕಂಡಿತು. ಹಲವು ಚಿತ್ರಮಂದಿರದಲ್ಲಿ ಆರಂಭದಿಂದ ಕೊನೆಯ ವರೆಗೂ ಅಂದರೆ 4ರಿಂದ 5 ಶೋಗಳು ಕೂಡ ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಹಾಗೆ ಇದೇ ಸಮಯದಲ್ಲಿ ಬಿಡುಗಡೆಯಾಗಿದ್ದ 'ವಾರ್ 2', 'ಕೂಲಿ 2' ಸಿನಿಮಾಗಳ ಪೈಪೋಟಿ ನಡುವೆಯೂ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ಗಡಿ ದಾಟಿತ್ತು.
ಸಿನಿ ಪಂಡಿತರು ಕೂಡ ಸಿನಿಮಾವನ್ನು ಹಾಡಿ ಹೊಗಳಿದರು, ಬಾಲಿವುಡ್ ಮಂದಿ ಕೂಡ ಸಿನಿಮಾ ಮೆಚ್ಚಿಕೊಂಡರು. ನಟ ಅಜಯ್ ದೇವ್‌ಗನ್ ಕೂಡ ಸಿನಿಮಾ ನೋಡಿ ನಿರ್ದೇಶಕ ಜೆಪಿ ತುಮ್ಮಿನಾಡ್ ಅವರನ್ನು ಕರೆಸಿಕೊಂಡು ಶುಭ ಕೋರಿದ್ದರು. ಹಾಗೆ ನಟ ಕಿಚ್ಚ ಸುದೀಪ್ ಕೂಡ ನಿರ್ದೇಶಕರ ಭೇಟಿಯಾಗಿ ಶುಭ ಕೋರಿದ್ದರು.
'ಸು ಫ್ರಮ್ ಸೋ' ಸಿನಿಮಾದಲ್ಲಿ ಜೆ.ಪಿ. ತುಮ್ಮಿನಾಡು, ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮ್ಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾದಲ್ಲಿ ಸಂಗೀತ ಕೂಡ ಸಿನಿಮಾದ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಹಾಗೆ ಸಿಂಪಲ್ ಕ್ಲೀನ್ ಕಾಮಿಡಿಗೆ ಜನ ಮನಸೋತರು. ಸದ್ಯ ನಾಳೆ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ಮಂದಿರದಲ್ಲಿ ನೋಡಲಾಗದ ಮಂದಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹಾಗೆ ಬಾಲಿವುಡ್ ಮಂದಿ ಸೇರಿದಂತೆ ಸಿನಿಮಾ ಪ್ರಿಯರು ಮತ್ತೆ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.



Click it and Unblock the Notifications

