Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಈ ವೃತ್ತಿಯವರೇ ಅಕ್ರಮ ಸಂಬಂಧದಲ್ಲಿ ನಂ.1: ಮದ್ವೆ ಆದ್ಮೇಲೂ ಇರಬೇಕು ಅಫೇರ್! ಸಮೀಕ್ಷೆಯಲ್ಲಿ ಬಹಿರಂಗ
ನಂಬಿಕೆ ಮತ್ತು ನಿಷ್ಠೆ ದಾಂಪತ್ಯ ಜೀವನಕ್ಕೆ ಅಡಿಪಾಯ. ಆದರೆ, ಇತ್ತೀಚಿನ ದಿನಗಳಲ್ಲಿ ಅಫೇರ್ (affairs) ಅಥವಾ ಅಕ್ರಮ ಸಂಬಂಧವು (Illegal relationship) ಒಂದು ಸಾಮಾನ್ಯ ಸಮಸ್ಯೆಯಾಗಿ ಉಲ್ಭಣಿಸಿದೆ. ಅನೇಕ ಸಂದರ್ಭಗಳಲ್ಲಿ, ಈ ಕಾರಣದಿಂದ ಉತ್ತಮ ಸಂಬಂಧಗಳು ಮುರಿದುಬೀಳುವುದೂ ಇದೆ. ಅಚ್ಚರಿ ಸಂಗತಿಯೆಂದರೆ, ಇತ್ತೀಚಿನ ಸಮೀಕ್ಷೆಯೊಂದು ವ್ಯಕ್ತಿಯ ವೃತ್ತಿಯು (professions) ಆತ ಅಥವಾ ಆಕೆ ವಿವಾಹೇತರ ಸಂಬಂಧ (extra marital affairs) ಹೊಂದುವ ಸಾಧ್ಯತೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಬಹಿರಂಗಪಡಿಸಿದೆ.
ವಿವಾಹಿತರಿಗಾಗಿಯೇ ಇರುವ 'ಆಶ್ಲೇ ಮ್ಯಾಡಿಸನ್' ಎಂಬ ಡೇಟಿಂಗ್ ವೆಬ್‌ಸೈಟ್ ಈ ಸಮೀಕ್ಷೆ ನಡೆಸಿದೆ. ಇದರಲ್ಲಿ 1,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಅಧ್ಯಯನದ ಫಲಿತಾಂಶಗಳ ಪ್ರಕಾರ, ಕೆಲವು ವೃತ್ತಿಗಳಲ್ಲಿ ಇರುವ ಜನರು ಇತರರಿಗಿಂತ ಹೆಚ್ಚು ಅನ್ಯ ಅಥವಾ ಅಕ್ರಮ ಸಂಬಂಧಗಳನ್ನು ಹೊಂದುತ್ತಾರೆ ಮತ್ತು ದಾಂಪತ್ಯ ದ್ರೋಹದಲ್ಲಿ (Married affairs) ತೊಡಗುತ್ತಾರೆ ಎಂಬುದು ತಿಳಿದುಬಂದಿದೆ. ಆ ವೃತ್ತಿಗಳು ಯಾವುವು? ಅವು ಏಕೆ ಈ ಪಟ್ಟಿಯಲ್ಲಿವೆ? ಎಂಬುದರ ವಿವರ ಇಲ್ಲಿದೆ.

ಕೊನೆಯ ಸ್ಥಾನ: ರಾಜಕೀಯ, ಕಲೆ & ಕಾನೂನು
ಈ ಪಟ್ಟಿಯ ರಾಜಕೀಯ ಕ್ಷೇತ್ರ ಕೊನೆಯ ಸ್ಥಾನದಲ್ಲಿದೆ. ಅಂದರೆ, ಅಕ್ರಮ ಸಂಬಂಧಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆ ಇರುವ ವೃತ್ತಿಗಳ ಪಟ್ಟಿಯಲ್ಲಿ ರಾಜಕೀಯ ಕ್ಷೇತ್ರ ಮೊದಲ ಸ್ಥಾನದಲ್ಲಿದೆ. ಆಶ್ಚರ್ಯಕರವಾಗಿ, ಈ ಸಮೀಕ್ಷೆಯಲ್ಲಿ ಕೇವಲ ಶೇ.1ರಷ್ಟು ಪುರುಷರು ಮತ್ತು ಮಹಿಳೆಯರು ರಾಜಕೀಯ ಹಿನ್ನೆಲೆಯಿಂದ ಬಂದವರಾಗಿದ್ದರು. ಇದರ ಜೊತೆಗೆ ಕೃಷಿ, ಕಲೆ, ಕಾನೂನು ಮತ್ತು ಮನರಂಜನಾ ಕ್ಷೇತ್ರಗಳಲ್ಲಿನ ಜನರು ಸಹ ಈ ಪಟ್ಟಿಯಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂದರೆ, ಈ ಕ್ಷೇತ್ರಗಳಲ್ಲಿ ಅಫೇರ್ ಪ್ರಕರಣಗಳು ಕಡಿಮೆ ಎಂದು ದಾಖಲಾಗಿದೆ.
ಮಾರ್ಕೆಟಿಂಗ್ & ಸೋಶಿಯಲ್ ವರ್ಕ್
ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಿರಂತರವಾಗಿ ಹೊಸ ಜನರನ್ನು ಭೇಟಿಯಾಗುತ್ತಾರೆ. ಇದೇ ಕಾರಣಕ್ಕೆ ಈ ಕ್ಷೇತ್ರದ ಜನರು ಸಹ ಪಟ್ಟಿಯಲ್ಲಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇ.4ರಷ್ಟು ಮಹಿಳೆಯರು ಮತ್ತು ಶೇ.8ರಷ್ಟು ಪುರುಷರು ಈ ಕ್ಷೇತ್ರದಿಂದ ಬಂದವರಾಗಿದ್ದಾರೆ. ಜೊತೆಗೆ ಸಮಾಜ ಸೇವೆ, ರಿಟೇಲ್ ಮತ್ತು ಹಾಸ್ಪಿಟಾಲಿಟಿ ಅಥವಾ ಆತಿಥ್ಯಕ್ಕೆ ಸಂಬಂಧಿಸಿದ ಜನರು ಅಕ್ರಮ ಸಂಬಂಧಗಳನ್ನು ಹೊಂದಿದವರ ಪಟ್ಟಿಯಲ್ಲಿದ್ದಾರೆ.
ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರ
ಶಿಕ್ಷಣ ಕ್ಷೇತ್ರವು ಇದರಿಂದ ಹೊರತಾಗಿಲ್ಲ. ಶಿಕ್ಷಕರು, ಉಪನ್ಯಾಸಕರು ಮತ್ತು ಆಡಳಿತಾಧಿಕಾರಿಗಳು ಸೇರಿ ಶೇ.4ರಷ್ಟು ಜನರು ಅಕ್ರಮ ಸಂಬಂಧಗಳಲ್ಲಿ ಭಾಗಿಯಾಗಿದ್ದಾರೆ. ಕೆಲಸದ ಒತ್ತಡ ಮತ್ತು ಸಂಬಂಧಗಳಿಗೆ ಕಡಿಮೆ ಸಮಯ ನೀಡುವುದು ಇದಕ್ಕೆ ಕಾರಣವಾಗಿರಬಹುದು. ಆರ್ಥಿಕ ಕ್ಷೇತ್ರವು ಸಹ ಈ ವಿಷಯದಲ್ಲಿ ಹಿಂದೆ ಉಳಿದಿಲ್ಲ. ಸುಮಾರು ಶೇ.8ರಷ್ಟು ಮಹಿಳೆಯರು ಮತ್ತು ಶೇ. 9ರಷ್ಟು ಪುರುಷರು ಈ ಕ್ಷೇತ್ರದಿಂದ ಬಂದವರಾಗಿದ್ದಾರೆ.
ಅತೀ ಹೆಚ್ಚು ಅಪಾಯದ ವೃತ್ತಿಗಳಿವು
ಸ್ವಂತ ಉದ್ಯಮ ಪ್ರಾರಂಭಿಸುವುದು ಸುಲಭದ ಕೆಲಸವಲ್ಲ. ಇದಕ್ಕೆ ನಿರಂತರ ಶ್ರಮ, ಹೊಸ ಜನರನ್ನು ಭೇಟಿಯಾಗುವುದು ಮತ್ತು ಹೆಚ್ಚು ಸಮಯವನ್ನು ಮನೆಯ ಹೊರಗೆ ಕಳೆಯುವುದು ಅನಿವಾರ್ಯ. ಇದರಿಂದ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಸಿಗದೆ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಹೀಗಾಗಿ, ಉದ್ಯಮಿಗಳು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐಟಿ ಮತ್ತು ಮೆಡಿಕಲ್
ಅತೀ ಹೆಚ್ಚು ಅಕ್ರಮ ಸಂಬಂಧಗಳಲ್ಲಿ ತೊಡಗಿರುವವರ ಪಟ್ಟಿಯಲ್ಲಿ ಐಟಿ ಮತ್ತು ವೈದ್ಯಕೀಯ ಕ್ಷೇತ್ರವೂ ಸ್ಥಾನ ಪಡೆದಿದೆ. ವೈದ್ಯಕೀಯ ಕ್ಷೇತ್ರ ಎರಡನೇ ಸ್ಥಾನದಲ್ಲಿದೆ. ವಿಶೇಷವಾಗಿ, ಮಹಿಳೆಯರಲ್ಲಿ ಈ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ವೈದ್ಯಕೀಯ ಕ್ಷೇತ್ರದಿಂದ ಶೇ. 23ರಷ್ಟು ಮಹಿಳೆಯರು ಮತ್ತು ಶೇ. 5ರಷ್ಟು ಪುರುಷರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ದೀರ್ಘ ಮತ್ತು ಅನಿಯಮಿತ ಕೆಲಸದ ಸಮಯವು ಸಂಬಂಧಗಳಲ್ಲಿ ದೂರ ಹೆಚ್ಚಿಸಲು ಕಾರಣ ಎಂದು ಹೇಳಲಾಗಿದೆ.
ಅಗ್ರಸ್ಥಾನ ಯಾರಿಗೆ?
ಸಮೀಕ್ಷೆಯ ಪ್ರಕಾರ, ಟ್ರೇಡ್ಸ್ ಕೆಲಸ ಮಾಡುವವರಲ್ಲಿ (ನಿರ್ಮಾಣ, ಪ್ಲಂಬಿಂಗ್, ವೆಲ್ಡಿಂಗ್ ಮುಂತಾದ ಕೆಲಸಗಳು) ಅಕ್ರಮ ಸಂಬಂಧ (ದಾಂಪತ್ಯ ದ್ರೋಹ) ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಈ ವೃತ್ತಿಗಳಲ್ಲಿ ಶೇ. 4ರಷ್ಟು ಮಹಿಳೆಯರು ಮತ್ತು ಶೇ. 29ರಷ್ಟು ಪುರುಷರು ಅಫೇರ್ ಮಾಡಿಕೊಳ್ಳುವವರ ಪಟ್ಟಿಯಲ್ಲಿದ್ದಾರೆ. ಅಂದರೆ, ಅಂದರೆ, ಈ ಕ್ಷೇತ್ರದ ಪುರುಷರು ಅಕ್ರಮ ಸಂಬಂಧಗಳನ್ನು ಹೊಂದಿದವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಒಟ್ಟಾರೆಯಾಗಿ, ಈ ಸಮೀಕ್ಷೆಯು ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ನೀಡುತ್ತದೆ. ಆದರೆ, ಅಕ್ರಮ ಸಂಬಂಧವು ಕೇವಲ ವೃತ್ತಿಯಿಂದ ಪ್ರಭಾವಿತವಾಗದೆ, ವೈಯಕ್ತಿಕ ಆಯ್ಕೆಗಳು ಮತ್ತು ಸಂಬಂಧದ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. 'ನಂಬಿಕೆ, ಸಮಯ ಹಂಚಿಕೊಳ್ಳುವುದು ಮತ್ತು ಸಂವಹನ' - ಇವೆಲ್ಲವೂ ವೈವಾಹಿಕ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಮುಖ ಅಂಶಗಳಾಗಿವೆ.



Click it and Unblock the Notifications












